“ಇದು ನನ್ನ ಕೊನೆಯ ದಿನ.”. ಲೈವ್ ಬಂದು ಆತ್ಮಹತ್ಯೆ ಮಾಡಿಕೊಂಡ ಜನಪ್ರಿಯ ಕೊರಿಯೊಗ್ರಾಫರ್
Team Udayavani, May 1, 2023, 11:29 AM IST
ಹೈದರಾಬಾದ್: ತೆಲುಗಿನ ಜನಪ್ರಿಯ ನೃತ್ಯ ನಿರ್ದೇಶಕ (ಕೊರಿಯೊಗ್ರಾಫರ್) ಚೈತನ್ಯ ಭಾನುವಾರ (ಎ.30 ರಂದು) ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ತೆಲುಗು ನೃತ್ಯ ಕಾರ್ಯಕ್ರಮ ʼಧೀʼ ಯಲ್ಲಿ ಕೊರಿಯೊಗ್ರಾಫರ್ ಆಗಿ ಫೇಮ್ – ನೇಮ್ ಪಡೆದುಕೊಂಡಿದ್ದ ಚೈತನ್ಯ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಟಾಲಿವುಡ್ ಟಿವಿರಂಗಕ್ಕೆ ದೊಡ್ಡ ಆಘಾತ ನೀಡಿದೆ.
ತನ್ನ ಕೊರಿಯೊಗ್ರಾಫಿ ಮೂಲಕ ಅಪಾರ ಅಭಿಮಾನಿ ಹಾಗೂ ಟಾಲಿವುಡ್ ಸಿನಿಮಾರಂಗಕ್ಕೂ ಚಿರಪರಿಚಿತರಾಗಿದ್ದ ಅವರು ಭಾನುವಾರ ನೆಲ್ಲೂರಿನ ಹೊಟೇಲ್ ವೊಂದರಲ್ಲಿ ಇದ್ದು ಇನ್ಸ್ಟಾಗ್ರಾಮ್ ಲೈವ್ ಬಂದಿದ್ದಾರೆ.
ಈ ವೇಳೆ ಅವರು ತಾವು ಕಷ್ಟದ ಬಗ್ಗೆ ಮಾತನಾಡಿದ್ದಾರೆ. “ನನ್ನ ಅಪ್ಪ, ಅಮ್ಮ, ಸಹೋದರಿ ನನಗೆ ಯಾವುದೇ ಕಷ್ಟಬಾರದಾಗೆ ನೋಡಿಕೊಂಡಿದ್ದಾರೆ. ನಾನು ನನ್ನೆಲ್ಲ ಸ್ನೇಹಿತರಲ್ಲಿ ಕ್ಷಮೆ ಕೋರುತ್ತೇನೆ. ನಾನು ಅನೇಕ ಜನರಿಗೆ ತೊಂದರೆ ನೀಡಿದ್ದೇನೆ ಮತ್ತು ಎಲ್ಲರಿಗೂ ಕ್ಷಮೆಯಾಚಿಸುತ್ತೇನೆ. ಹಣದ ವಿಷಯದಲ್ಲಿ ನಾನು ನನ್ನ ಒಳ್ಳೆಯತನವನ್ನು ಕಳೆದುಕೊಂಡೆ. ಕೇವಲ ಸಾಲ ತೆಗೆದುಕೊಳ್ಳುವುದಲ್ಲ, ಅದನ್ನು ಮರುಪಾವತಿ ಮಾಡುವ ಸಾಮರ್ಥ್ಯ ಹೊಂದಿರಬೇಕು. ಆದರೆ ನಾನು ಅದನ್ನು ಮಾಡಲು ಸಾಧ್ಯವಾಗಲಿಲ್ಲ. ನಾನೀಗ ನಲ್ಲೂರಿನಲ್ಲಿದ್ದೇನೆ. ಇದು ನನ್ನ ಕೊನೆಯ ದಿನ. ಇನ್ನು ನಾನು ನನ್ನ ಸಾಲಗಳಿಂದ ಬರುವ ಸಮಸ್ಯೆಗಳನ್ನು ಎದುರಿಸಲು ಆಗುವುದಿಲ್ಲ” ಎಂದಿದ್ದಾರೆ.
ಲೈವ್ ಮುಗಿಸಿದ ಬಳಿಕ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಎಲ್ಲದಕ್ಕೂ ಸಾವೊಂದೇ ಪರಿಹಾರ ಅಲ್ಲ, ಈ ನಿರ್ಧಾರ ಸರಿಯಲ್ಲ ಎಂದು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
This is unexpected #Chaitanya master, Suicide isn’t a solution,u are such a talented soul yet couldn’t understand how u could do this. It needs lot of guts to commit suicide,u could’ve used that courage to solve your problems,Super angry&sad on ur death#Dhee#RipChaitanyaMaster pic.twitter.com/6CpAkNvCn4
— Vamc Krishna (@lyf_a_zindagi) April 30, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Mika Singh: ಮಿಕಾ ಹಾಡಿಗೆ ಫಿದಾ..ಪಾಕ್ ಅಭಿಮಾನಿಯಿಂದ 3 ಕೋಟಿ ರೂ. ವಾಚ್, ಚಿನ್ನ ಗಿಫ್ಟ್
Actress: ಸಲ್ಮಾನ್,ಶಾರುಖ್ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50 ಲಕ್ಷ ರೂ. ಡಿಮ್ಯಾಂಡ್
Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್ʼ ಚಿತ್ರದ ಟೈಟಲ್ ಬದಲಾವಣೆ
Mumbai: ಬಾಲಿವುಡ್ ನಟ ಶಾರುಖ್ ಖಾನ್ ಗೆ ಜೀವ ಬೆದರಿಕೆ ಹಾಕಿದ ವಕೀಲ ಛತ್ತೀಸ್ ಗಢದಲ್ಲಿ ಬಂಧನ
MUST WATCH
ಹೊಸ ಸೇರ್ಪಡೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.