First Republic Bank; ಅಮೆರಿಕದಲ್ಲಿ ಮತ್ತೊಂದು ಬ್ಯಾಂಕ್ ಪತನ
ಜೆಪಿ ಮೋರ್ಗನ್ ಚೇಸ್ ಪಾಲಾದ ಫಸ್ಟ್ ರಿಪಬ್ಲಿಕ್ ಬ್ಯಾಂಕ್
Team Udayavani, May 2, 2023, 7:50 AM IST
ನ್ಯೂಯಾರ್ಕ್:ಅಮೆರಿಕದಲ್ಲಿ ಉಂಟಾಗುತ್ತಿರುವ ಬ್ಯಾಂಕಿಂಗ್ ಬಿಕ್ಕಟ್ಟಿಗೆ ಬ್ರೇಕ್ ಹಾಕುವ ಸಲುವಾಗಿ, ಬ್ಯಾಂಕಿಂಗ್ ನಿಯಂತ್ರಣ ಸಂಸ್ಥೆಯು ಸೋಮವಾರ, ಸಂಕಷ್ಟದಲ್ಲಿರುವ ಫಸ್ಟ್ ರಿಪಬ್ಲಿಕ್ ಬ್ಯಾಂಕ್ನ ಎಲ್ಲ ಠೇವಣಿಗಳು ಹಾಗೂ ಬಹುತೇಕ ಆಸ್ತಿಪಾಸ್ತಿಗಳನ್ನು ಜೆಪಿ ಮೋರ್ಗನ್ ಚೇಸ್ ಬ್ಯಾಂಕ್ಗೆ ಮಾರಾಟ ಮಾಡಿದೆ.
ಸ್ಯಾನ್ಫ್ರಾನ್ಸಿಸ್ಕೋ ಮೂಲದ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಅಮೆರಿಕದಲ್ಲಿ ಕೇವಲ 2 ತಿಂಗಳ ಅವಧಿಯಲ್ಲಿ ಪತನಗೊಂಡ ಮೂರನೇ ಬ್ಯಾಂಕ್ ಆಗಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ಮತ್ತು ಸಿಗ್ನೇಚರ್ ಬ್ಯಾಂಕ್ ಪತನಗೊಂಡ ಬಳಿಕ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಕೂಡ ಮುಚ್ಚುವ ಹಂತ ತಲುಪಿತ್ತು. ಅತ್ಯಧಿಕ ಮೊತ್ತದ ವಿಮಾರಹಿತ ಠೇವಣಿಗಳನ್ನು ಬ್ಯಾಂಕ್ ಹೊಂದಿರುವ ಕಾರಣ ಅದರ ಅಳಿವು-ಉಳಿವಿನ ಬಗ್ಗೆ ಠೇವಣಿದಾರರು ಆತಂಕಕ್ಕೊಳಗಾಗಿದ್ದರು.
ಈಗ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಅನ್ನು ಜೆಪಿ ಮೋರ್ಗನ್ ಚೇಸ್ ಬ್ಯಾಂಕ್ ಖರೀದಿಸಿದ ಕಾರಣ, ಹೂಡಿಕೆದಾರರು ನಿಟ್ಟುಸಿರು ಬಿಡುವಂತಾಗಿದೆ. ಅಲ್ಲದೇ, ಸೋಮವಾರದಿಂದಲೇ 8 ಪ್ರಾಂತ್ಯಗಳಲ್ಲಿರುವ ಫಸ್ಟ್ ರಿಪಬ್ಲಿಕ್ ಬ್ಯಾಂಕ್ನ 84 ಶಾಖೆಗಳು ಜೆಪಿ ಮೋರ್ಗನ್ ಚೇಸ್ ಬ್ಯಾಂಕ್ನ ಶಾಖೆಗಳಾಗಿ ಕಾರ್ಯಾರಂಭಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.