![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, May 2, 2023, 7:21 AM IST
ಮೇಷ: ಅಧಿಕ ಧನ ಸಂಚಯನ ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ದೇವತಾ ಸ್ಥಳ ಸಂದರ್ಶನ. ದಂಪತಿಗಳಲ್ಲಿ ಅನುರಾಗ ವೃದ್ಧಿ ಅವಿವಾಹಿತರಿಗೆ ಯೋಗ್ಯ ಸಂಬಂಧ ಒದಗುವ ಸಮಯ.
ವೃಷಭ: ನಿರೀಕ್ಷಿತ ಸ್ಥಾನಮಾನ ಗೌರವಾದಿ ವೃದ್ಧಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಅವಿವಾಹಿತರಿಗೆ ಉತ್ತಮ ನೆಂಟಸ್ಥಿಕೆ ಒದಗುವ ಕಾಲ. ಅನಿರೀಕ್ಷಿತ ಧನಸಂಪತ್ತು ಲಭ್ಯ. ಕೆಲಸ ಕಾರ್ಯಗಳಲ್ಲಿ ಶ್ಲಾಘನೆ ಇತ್ಯಾದಿ ಫಲ.
ಮಿಥುನ: ದೂರ ಪ್ರಯಾಣ ಸಂಭವ. ಸಂಪತ್ತಿನ ಉಳಿತಾಯಕ್ಕೆ ಚಿಂತನೆ. ಮಾತೃ ಸಮಾನ ವರ್ಗದವರ ನಿಮಿತ್ತ ಖರ್ಚು. ಮಿತ್ರರೊಂದಿಗೆ ಜಾಗೃತೆಯಿಂದ ವ್ಯವಹರಿಸಿ. ಪಾಲುದಾರಿಕಾ ವ್ಯವಹಾರಗಳಲ್ಲಿ ಅಧಿಕ ಶ್ರಮದಿಂದ ಯಶಸ್ಸು ಲಭ್ಯ.
ಕರ್ಕ: ಉದ್ಯೋಗ ವ್ಯವಹಾರಗಳಲ್ಲಿ ನೇತೃತ್ವ ತಲ್ಲೀನತೆ. ನಿರೀಕ್ಷಿತ ಕೆಲಸಗಳಲ್ಲಿ ಸಫಲತೆ. ಪಿತೃ ಸಮಾನರಿಂದ ಅನುಕೂಲ. ಆರೋಗ್ಯದಲ್ಲಿ ಸುಧಾರಣೆ. ಸಾಂಸಾರಿಕ ಸುಖ ಪರಿಶ್ರಮ ಅಗತ್ಯ. ಅನಗತ್ಯ ಚರ್ಚೆಗೆ ಆಸ್ಪದ ನೀಡದಿರಿ.
ಸಿಂಹ: ವಿದ್ಯಾರ್ಥಿಗಳಿಗೆ, ಜ್ಞಾನಿಗಳಿಗೆ ಅನುಕೂಲಕರ ಪರಿಸ್ಥಿತಿ. ತಿಳಿದಂತಸ ವಿದ್ಯೆಯನ್ನು ಪರರಿಗೆ ಹಂಚಿದ ಸಂತೋಷ. ನಿರೀಕ್ಷಿತ ಸ್ಥಾನ ಗೌರವಾದಿ ಪ್ರಾಪ್ತಿ. ಹಣ ಸಂಪತ್ತಿನ ವೃದ್ಧಿ. ದೇವತಾ ಕಾರ್ಯಗಳಲ್ಲಿ ಅಡಚಣೆ ಎದುರಾದೀತು.
ಕನ್ಯಾ: ದೇವತಾ ಕಾರ್ಯಗಳಲ್ಲಿ ಭಾಗಿ, ನೇತೃತ್ವ ವಹಿಸಿದ ನೆಮ್ಮದಿ. ದೀರ್ಘ ಪ್ರಯಾಣ ಸಂಭವ. ಗುರು ಹಿರಿಯರ ಉತ್ತಮ ಮಾರ್ಗದರ್ಶನದ ಲಾಭ. ಗೃಹದಲ್ಲಿ ಸಂತಸದ ವಾತಾವರಣ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿ.
ತುಲಾ: ಗುರು ಹಿರಿಯರ ಮಾರ್ಗದರ್ಶನ ಸಹಕಾರದಿಂದ ಪ್ರಗತಿ. ಸಣ್ಣ ಪ್ರಯಾಣ ಉತ್ತಮ. ನಿರೀಕ್ಷಿತ ಧನಲಾಭ. ಅವಿವಾಹಿತರಿಗೆ ಉತ್ತಮ ನೆಂಟಸ್ತಿಕೆ ಒದಗುವ ಸಮಯ. ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ಸರಿಯಾದ ಪ್ರತಿಫಲ ಲಭಿಸಿದ ತೃಪ್ತಿ.
ವೃಶ್ಚಿಕ: ಭೂಮ್ಯಾದಿ ಆಸ್ತಿ ವಿಚಾರದಲ್ಲಿ ಪ್ರಗತಿ. ಅಧಿಕ ಧನ ಸಂಪಾದನೆ. ಉತ್ತಮ ವಾಕ್ ಚತುರತೆ. ಮೇಲಧಿಕಾರಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಮಿತ್ರರಿಂದ ಉತ್ತಮ ಸಹಕಾರ ಲಭ್ಯ. ದಂಪತಿಗಳಲ್ಲಿ ಅನುರಾಗ ವೃದ್ದಿ.
ಧನು: ಆರೋಗ್ಯ ಗಮನಿಸಿ. ಸಣ್ಣ ಪ್ರಯಾಣ. ಹಣಕಾಸಿನ ವಿಚಾರದಲ್ಲಿ ಶಿಸ್ತು ಪಾಲಿಸುವು ದರಿಂದ ಪ್ರಗತಿ. ಮಕ್ಕಳ ವಿಚಾರದಲ್ಲಿ ಅಧಿಕ ಪರಿಶ್ರಮದಿಂದ ಪ್ರಗತಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ. ದಾಂಪತ್ಯ ತೃಪ್ತಿಕರ.
ಮಕರ: ಆರೋಗ್ಯ ಗಮನಿಸಿ. ಅನಿರೀಕ್ಷಿತ ಕಷ್ಟನಷ್ಟಗಳು ಸಂಭವ. ಎಚ್ಚರಿಕೆಯ ನಡೆ ಅಗತ್ಯ. ಹೆಚ್ಚಿದ ಜವಾಬ್ದಾರಿ. ಸರಿಯಾದ ನಿಯಮ ಪಾಲಿಸುವುದರಿಂದ ಆರ್ಥಿಕ ಲಾಭ. ಗುರು ಹಿರಿಯರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ.
ಕುಂಭ: ದೀರ್ಘ ಪ್ರಯಾಣ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಉತ್ತಮ ಧನಲಾಭ ಸಂಭವ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ ತೃಪ್ತಿ. ದಾಂಪತ್ಯ ಸುಖ ವೃದ್ಧಿ. ಅವಿವಾಹಿರಿಗೆ ಯೋಗ್ಯ ಸಂಬಂಧ ಒದಗುವ ಕಾಲ.
ಮೀನ: ಆರೋಗ್ಯ ಗಮನಿಸಿ. ದೀರ್ಘ ಪ್ರಯಾಣ. ಕೆಲಸ ಕಾರ್ಯಗಳಲ್ಲಿ ಒತ್ತಡ. ಮಕ್ಕಳಿಂದ ಸುಖ ಸಂತೋಷ ವೃದ್ಧಿ. ದೈರ್ಯದಿಂದ ಕೂಡಿದ ಕಾರ್ಯವೈಖರಿ. ಬಂಧು ಬಳಗದವರಿಂದ ಸಂತೋಷ ವೃದ್ಧಿ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ.
Daily Horoscope: ಅಜ್ಞಾನಿಗಳನ್ನು ತಿದ್ದಲು ಹೋಗಿ ಅವಮಾನಕ್ಕೆ ಗುರಿಯಾಗದಿರಿ
Horoscope: ಹೇಗಿದೆ ಇಂದಿನ ರಾಶಿಫಲ
Daily Horoscope: ನಿತ್ಯದ ವ್ಯವಹಾರಗಳಲ್ಲಿ ಯಶಸ್ಸು, ಶಾರೀರಿಕ ತೊಂದರೆಗಳಿಂದ ಮುಕ್ತಿ
Horoscope: ಸಂಸಾರ ಸುಖ ಉತ್ತಮ. ಎಂದೋ ಕೊಟ್ಟ ಸಾಲ ಅಯಾಚಿತವಾಗಿ ಕೈಸೇರಿ ಹರ್ಷ.
Horoscope: ಸಕಾರಾತ್ಮಕ ಚಿಂತನೆಯಿಂದ ಕಾರ್ಯಸಿದ್ಧಿ, ಯಂತ್ರೋಪಕರಣ ವ್ಯಾಪಾರಿಗಳಿಗೆ ಅಧಿಕ ಲಾಭ
You seem to have an Ad Blocker on.
To continue reading, please turn it off or whitelist Udayavani.