ಮೋದಿ ಕನಸಿನ ಭಾರತ ನಿರ್ಮಾಣಕ್ಕೆ ಯಶ್‌ಪಾಲ್ ಗೆಲುವು ಮುನ್ನುಡಿ ಬರೆಯಲಿ : ಕೋಟ
Team Udayavani, May 2, 2023, 2:46 PM IST
ಉಡುಪಿ: ಬಿಜೆಪಿ ಈ ಬಾರಿ ಉಡುಪಿ ಕ್ಷೇತ್ರದ ಅಭ್ಯರ್ಥಿಯಾಗಿ ಕ್ರಿಯಾಶೀಲ ವ್ಯಕ್ತಿತ್ವದ ಸಾಮಾನ್ಯ ಕಾರ್ಯಕರ್ತ ಯಶ್‌ಪಾಲ್ ಸುವರ್ಣ ಅವರನ್ನು ಆಯ್ಕೆ ಮಾಡಿದ್ದು, ಭಾರತವನ್ನು ವಿಶ್ವ ಗುರುವನ್ನಾಗಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಭಾರತ ನಿರ್ಮಾಣಕ್ಕೆ ಉಡುಪಿ ಕ್ಷೇತ್ರದಿಂದ ಯಶ್‌ಪಾಲ್ ಸುವರ್ಣ ಅವರ ಗೆಲುವು ಮುನ್ನುಡಿ ಬರೆಯಲಿದೆ ಎಂದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೊಕ್ಕರ್ಣೆಯಲ್ಲಿ ಆಯೋಜಿಸಿದ್ದ ಬಹಿರಂಗ ಚುನಾವಣಾ ಪ್ರಚಾರ ಸಭೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಹಿಂದೂ ಸಂಘಟನೆಯ ಕಾರ್ಯಕರ್ತನಾಗಿ, ನಗರಸಭಾ ಸದಸ್ಯರಾಗಿ, ಮೀನುಗಾರಿಕಾ ಫೆಡರೇಶನ್, ಮಹಾಲಕ್ಷ್ಮೀ ಬ್ಯಾಂಕ್‌ನ ಅಧ್ಯಕ್ಷರಾಗಿ, ಸಹಕಾರಿ ಮುಖಂಡರಾಗಿ ಗುರುತಿಸಿಕೊಂಡಿರುವ ರಾಷ್ಟ್ರೀಯವಾದಿ ಚಿಂತನೆಯ ಸಮರ್ಥ ಅಭ್ಯರ್ಥಿ ಯಶ್‌ಪಾಲ್ ಸುವರ್ಣ ಅವರನ್ನು ಗೆಲ್ಲಿಸಲು ಕ್ಷೇತ್ರದ ಮತದಾರರು, ಕಾರ್ಯಕರ್ತರು ಪಣತೊಟ್ಟಿದ್ದು, ಈ ಮೂಲಕ ಡಾ| ವಿ. ಎಸ್. ಆಚಾರ್ಯ ಅವರ ಕನಸಿನ ನವ ಉಡುಪಿ ನಿರ್ಮಾಣದ ಜತೆ ಜತೆಗೆ ಡಬಲ್ ಇಂಜಿನ್ ಸರಕಾರದ ಮೂಲಕ ಸರ್ವವ್ಯಾಪಿ ಸರ್ವ ಸ್ಪರ್ಶಿ ಆಡಳಿತಕ್ಕೆ ನಾಂದಿ ಹಾಡಲಿದೆ ಎಂದರು.
ಶಾಸಕ ರಘುಪತಿ ಭಟ್ ಮಾತನಾಡಿ, ಕಳೆದ 3 ಅವಧಿಯಲ್ಲಿ ಶಾಸಕನಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನದ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿದ ಸಂತೃಪ್ತಿ ಇದ್ದು, ಮುಂದಿನ ದಿನದಲ್ಲಿ ಯಶ್‌ಪಾಲ್ ಸುವರ್ಣ ಶಾಸಕರಾಗಿ ಈ ಅಭಿವೃದ್ಧಿ ಕಾರ್ಯಗಳಿಗೆ ಇನ್ನೂ ಹೆಚ್ಚಿನ ವೇಗ ತುಂಬುವ ಭರವಸೆ ಇದೆ ಎಂದರು.
ಸಭೆಯಲ್ಲಿ ಜಿ. ಪಂ. ಮಾಜಿ ಅಧ್ಯಕ್ಷ ಬಿ. ಎನ್. ಶಂಕರ ಪೂಜಾರಿ, ತಾ. ಪಂ. ಅಧ್ಯಕ್ಷ ಬಿ. ಎನ್. ಶಂಕರ ಪೂಜಾರಿ, ತಾ. ಪಂ. ಮಾಜಿ ಸದಸ್ಯಧನಂಜಯ ಅಮೀನ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ, ಪಕ್ಷದ ಮುಖಂಡರಾದ ಹರಿಮಕ್ಕಿ ರತ್ನಾಕರ ಶೆಟ್ಟಿ, ರಾಜೇಶ್ ಶೆಟ್ಟಿ ಬಿರ್ತಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಉಮೇಶ್ ನಾಯ್ಕ ಚೇರ್ಕಾಡಿ, ಗ್ರಾ. ಪಂ. ಅಧ್ಯಕ್ಷೆ ಲಕ್ಷ್ಮೀ ಉಪಸ್ಥಿತರಿದ್ದರು.
ಕೊಕ್ಕರ್ಣೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮನೋಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ ಕ್ಷೇತ್ರದಾದ್ಯಂತ ಮತದಾರರು ಹೊಸ ಹುರುಪಿನಿಂದ ಬಿಜೆಪಿಗೆ ವ್ಯಾಪಕ ಬೆಂಬಲ ನೀಡಿ ಪ್ರೋತ್ಸಾಹಿಸುತ್ತಿದ್ದು, ಕೊಕ್ಕರ್ಣೆಯ ಈ ಸಭೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿರುವ ಮತದಾರರೇ ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಲಿದ್ದಾರೆ.
ಯಶ್ ಪಾಲ್ ಸುವರ್ಣ, ಬಿಜೆಪಿ ಅಭ್ಯರ್ಥಿ
ಬಿಜೆಪಿ ಸರಕಾರದಿಂದ ರೈತರ ಖಾತೆಗೆ ಹಣ ನೇರ ಜಮೆಯಾಗುತ್ತಿದೆ. ಸಂಧ್ಯಾ ಸುರûಾ ಕೊಟ್ಟಿದೆ, ಭಾಗ್ಯ ಲಕ್ಷ್ಮೀ ಯೋಜನೆ ಕೊಟ್ಟಿದ್ದೇವೆ, ಇದಕ್ಕೆಲ್ಲಾ ಯಾವತ್ತೂ ಗ್ಯಾರಂಟಿ ಕಾರ್ಡ್ ನೀಡಿಲ್ಲ. ರಾಜ್ಯದ ಜನತೆಗೆ ಬಿಜೆಪಿ ಆಡಳಿತ, ನರೇಂದ್ರ ಮೋದಿಯವರ ಕಾರ್ಯ ವೈಖರಿ ಬಗ್ಗೆ ಯಾವುದೇ ಗ್ಯಾರಂಟಿ ಕಾರ್ಡ್ ಅವಶ್ಯಕತೆ ಇಲ್ಲ. ಈ ಬಾರಿ ಉಡುಪಿಯ ಜನತೆ ನಮ್ಮ ಸಮರ್ಥ ಅಭ್ಯರ್ಥಿ ಯಶ್‌ಪಾಲ್ ಸುವರ್ಣ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವ ಗ್ಯಾರಂಟಿ ನೀಡಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿ
ರಘುಪತಿ ಭಟ್ ಅವರ ನೇತೃತ್ವದಲ್ಲಿ ಗ್ರಾಮಾಂತರ ಭಾಗದಲ್ಲಿ ಈ ಭಾಗದ ನಾಗರಿಕರ ಹಲವು ದಶಕಗಳ ಬೇಡಿಕೆಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರದ ಮೂಲಕ ಅನುದಾನ ಜೋಡಿಸಿ ಈಡೇರಿಸಿ ಅಭಿವೃದ್ಧಿಯ ಹೊಸ ಶಕೆ ಆರಂಭಿಸಿದ್ದಾರೆ. ಗ್ರಾಮಾಂತರ ಭಾಗದ ಮತದಾರರು ಈ ಬಾರಿ ಮತ್ತೂಮ್ಮೆ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ. ಮುಂದಿನ ದಿನದಲ್ಲಿ ಯಶ್‌ಪಾಲ್ ಸುವರ್ಣ ಅವರು ಶಾಸಕರಾಗಿ ಕ್ಷೇತ್ರದ ಸವಾಂìಗೀಣ ಪ್ರಗತಿಗೆ ಪಣತೊಟ್ಟು ಕೆಲಸ ಮಾಡಲಿದ್ದಾರೆ.
ಪ್ರತಾಪ್ ಹೆಗ್ಡೆ ಮಾರಾಳಿ
ಹಿಂದೂ ಕಾರ್ಯಕರ್ತನಾಗಿ ಗೋರಕ್ಷಣೆ, ರಾಷ್ಟ್ರೀಯವಾದಿ ಚಿಂತನೆಯ ಮೂಲಕ ಪಕ್ಷದ ಶಿಸ್ತಿನ ಸಿಪಾಯಿಯಾಗಿ ವಿವಿಧ ಜವಾಬಾœರಿಗಳು° ನಿರ್ವಹಿಸುವ ಮೂಲಕ ತನ್ನ ಬದ್ಧತೆ ಮೆರೆದಿರುವ ಯಶ್‌ಪಾಲ್ ಸುವರ್ಣ ಪಕ್ಷದ ಸಾಮಾನ್ಯ ಕಾರ್ಯಕರ್ತರ ಪ್ರತಿನಿಧಿಯಾಗಿ ಈ ಬಾರಿ ಪಕ್ಷ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಕ್ಷೇತ್ರದ ಮತದಾರರು, ಕಾರ್ಯಕರ್ತರು ಪ್ರಚಂಡ ಬಹುಮತದಿಂದ ಗೆಲ್ಲಿಸುವ ಪಣತೊಟ್ಟು ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರವನ್ನು ಅಧಿಕಾರಕ್ಕೆ ತರಲು ಮುಂದಾಗಿದ್ದಾರೆ.
ಬೈಕಾಡಿ ಸುಪ್ರಸಾದ್ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ
Yakshadhruva Patla Foundation Trust: ನ.14ರಂದು ಉಡುಪಿ ಘಟಕದ ಮಹಿಳಾ ವಿಭಾಗ ಆರಂಭ
Parashurama Murthy Case: ಉಳಿದ ಆರೋಪಿಗಳನ್ನು ಬಂಧಿಸಲು ಆಗ್ರಹ
Udupi: ನಗರದಲ್ಲಿ ಫುಟ್‌ಪಾತ್‌ಗಳ ಅತಿಕ್ರಮಣ; ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್
Udupi: ಶ್ರೀಕೃಷ್ಣ ಮಠಕ್ಕೆ ನ.20ರಂದು ಕಾಂಚಿ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಆಗಮನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.