Kasaragod ಅಪರಾಧ ಸುದ್ದಿಗಳು: ಯುವತಿಗೆ ಕಿರುಕುಳ : ಆರೋಪಿಗೆ ನ್ಯಾಯಾಂಗ ಬಂಧನ


Team Udayavani, May 3, 2023, 6:05 AM IST

crKasaragod ಅಪರಾಧ ಸುದ್ದಿಗಳು: ಯುವತಿಗೆ ಕಿರುಕುಳ : ಆರೋಪಿಗೆ ನ್ಯಾಯಾಂಗ ಬಂಧನ

ರಿಯಾಸ್‌ ಮೌಲವಿ ಕೊಲೆ ಪ್ರಕರಣ: ಸ್ಪೆಷಲ್‌ ಪ್ರಾಸಿಕ್ಯೂಟರ್‌ ಫ್ಲಾಟ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಮೂಲತಃ ಮಡಿಕೇರಿ ನಿವಾಸಿ ಹಾಗೂ ನಗರದ ಹಳೆ ಸೂರ್ಲಿನ ಮದ್ರಸಾ ಅಧ್ಯಾಪಕ ರಿಯಾಸ್‌ ಮೌಲವಿ (28) ಅವರನ್ನು 2017 ಮಾರ್ಚ್‌ 21ರಂದು ರಾತ್ರಿ ಹಳೆ ಸೂರ್ಲಿನಲ್ಲಿರುವ ಅವರ ವಾಸ ಸ್ಥಳದಲ್ಲಿ ಇರಿದು ಕೊಲೆಗೈದ ಪ್ರಕರಣದಲ್ಲಿ ಸರಕಾರ ಪರ ವಾದಿಸುತ್ತಿರುವ ಸ್ಪೆಷಲ್‌ ಪ್ರಾಸಿಕ್ಯೂಟರ್‌, ಕಲ್ಲಿಕೋಟೆ ಐಎಂಎ ಹಾಲ್‌ ರಸ್ತೆ ನಡಕ್ಕಾವು ನಿವಾಸಿ ನ್ಯಾಯವಾದಿ ಎಂ.ಅಶೋಕನ್‌ (60) ಅವರು ಕೊಚ್ಚಿಯ ಫ್ಲ್ಯಾಟೊಂದರಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇವರು ಕೇಸೊಂದಕ್ಕೆ ಸಂಬಂಧಿಸಿ ವಾದಿಸಲು ಮಾವೇಲಿಕ್ಕರೆಗೆ ಹೋಗಿದ್ದರು. ಅಲ್ಲಿಂದ ಹಿಂದಿರುಗಿ ಬರುವ ಸಂದರ್ಭದಲ್ಲಿ ಕೊಚ್ಚಿಯ ಫ್ಲ್ಯಾಟೊಂದರಲ್ಲಿ ತಂಗಿದ್ದರು. ಅಲ್ಲಿ ಅವರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಾವಿಗೆ ಹೃದಯಾಘಾತ ಕಾರಣವಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಕೋಳಿ ಅಂಕ : ಮೂವರ ಬಂಧನ
ಉಪ್ಪಳ: ಮೀಂಜ ಬಳಿಯ ಬೆಜ್ಜದಲ್ಲಿ ಕೋಳಿ ಅಂಕದಲ್ಲಿ ನಿರತರಾಗಿದ್ದ 13 ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಇವರಲ್ಲಿ ಮೂವರನ್ನು ಬಂಧಿಸಿದ್ದಾರೆ. ಹತ್ತು ಮಂದಿ ಪರಾರಿಯಾಗಿದ್ದಾರೆ. ಐದು ಕೋಳಿ, ಮೂರು ಬಾಳು ಹಾಗೂ 6,570 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಕನಿಯಾಲ ನಿವಾಸಿ ನಾರಾಯಣ (55), ಕೂಳೂರಿನ ಮುರಳೀಧರ(45), ಕುಂಬಳೆ ಕೋಟೆಕಾರಿನ ಕೊರಗಪ್ಪ (51) ನನ್ನು ಬಂಧಿಸಲಾಗಿದೆ.

ಬಿಎಸ್‌ಎನ್‌ಎಲ್‌ನ
ಬ್ಯಾಟರಿ ಕಳವು
ಕಾಸರಗೋಡು: ಕರಂದಕ್ಕಾಡ್‌ನ‌ ಬಿಎಸ್‌ಎನ್‌ಎಲ್‌ ಕ್ವಾರ್ಟರ್ಸ್‌ನ ಕೊಠಡಿಯಲ್ಲಿ ಗುಜರಿಗೆ ನೀಡಲೆಂದು ದಾಸ್ತಾನು ಇರಿಸಲಾಗಿದ್ದ ಸುಮಾರು 24ರಷ್ಟು ಬಿಎಸ್‌ಎನ್‌ಎಲ್‌ನ ಹಳೆ ಬ್ಯಾಟರಿ ಕಳವು ಮಾಡಲಾಗಿದೆ. ಈ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಇದಕ್ಕೆ ಸುಮಾರು ಒಂದು ಲಕ್ಷ ರೂ. ಮೌಲ್ಯ ಅಂದಾಜಿಸಲಾಗಿದೆ.

ತುಂತುರು ಮಳೆ : ರಾ.ಹೆದ್ದಾರಿಯಲ್ಲಿ ಮಗುಚಿ ಬಿದ್ದ ವಾಹನಗಳು
ಉಪ್ಪಳ: ಉಪ್ಪಳ, ಕೈಕಂಬದಲ್ಲಿ ಮಂಗಳವಾರ ಬೆಳಗ್ಗೆ ತುಂತುರು ಮಳೆ ಸುರಿದಿದ್ದು, ಇದು ರಾಷ್ಟ್ರೀಯ ಹೆದ್ದಾರಿ ಯಲ್ಲಿ ವಾಹನಗಳು ನಿಯಂತ್ರಣ ತಪ್ಪಲು ಕಾರಣವಾಯಿತು. ಬೆಳಗ್ಗೆ ಸುಮಾರು 7 ಗಂಟೆಗೆ ತುಂತುರು ಮಳೆ ಸುರಿದಿದೆ.

ಇದೇ ಹೊತ್ತಿನಲ್ಲಿ ಮೂರು ವಾಹನಗಳು ನಿಯಂತ್ರಣ ತಪ್ಪಿ ಮಗುಚಿ ಬಿದ್ದಿವೆ. ಚಾಲಕರು ಸಣ್ಣಪುಟ್ಟ ಗಾಯಗೊಂಡಿದ್ದಾರೆ.

ಕಾಸರಗೋಡಿನಿಂದ ತಲಪಾಡಿ ಭಾಗಕ್ಕೆ ತೆರಳುತ್ತಿದ್ದ ಪಿಕಪ್‌ ಕೈಕಂಬದಲ್ಲಿ ನಿಯಂತ್ರಣ ತಪ್ಪಿ ಮಗುಚಿದೆ. ಉಪ್ಪಳದಲ್ಲಿ ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಮೀನು ಸಾಗಿಸುತ್ತಿದ್ದ ಟೆಂಪೋ ಹಾಗೂ ಒಂದು ಬೈಕ್‌ ಮಗುಚಿ ಬಿದ್ದಿದೆ.

ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಬೆಂಕಿ
ಮಂಜೇಶ್ವರ: ಪಂಚಾಯತ್‌ನ 5ನೇ ವಾರ್ಡ್‌ ವ್ಯಾಪ್ತಿಯ ಗೇರುಕಟ್ಟೆಯಲ್ಲಿ ಹಸುರು ಕ್ರಿಯಾ ಸೇನೆ ಕಾರ್ಯಕರ್ತೆಯರು ಸಂಗ್ರಹಿಸಿಟ್ಟಿದ್ದ ತ್ಯಾಜ್ಯಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಗಂಟೆಗಳ ಕಾಲ ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆಯಿಂದ ನಂದಿಸಲಾಗಿದೆ. ಸಂಗ್ರಹಿಸಿಟ್ಟಿದ್ದ ತ್ಯಾಜ್ಯದಲ್ಲಿ ಪ್ಲಾಸ್ಟಿಕ್‌ಗಳೇ ಅಧಿಕವಿದ್ದು, ಇದಕ್ಕೆ ಬೆಂಕಿ ಹಚ್ಚಲಾಗಿದೆ. ಇದರಿಂದ ಪರಿಸರದಲ್ಲಿ ದುರ್ವಾಸನೆಗೆ ಕಾರಣವಾಗಿದೆ.

10 ಲೋಡ್‌ ಮರಳು ಸಹಿತ ಟಿಪ್ಪರ್‌ ಲಾರಿ, ಜೆಸಿಬಿ ವಶಕ್ಕೆ
ಮಂಜೇಶ್ವರ: ಮಂಗಲ್ಪಾಡಿ ಪಂಚಾಯತ್‌ ವ್ಯಾಪ್ತಿಯ ಉಪ್ಪಳ ಹೊಳೆಯ ಕೊಡಂಗೆಯಿಂದ ಅನಧಿಕೃತವಾಗಿ ಪರಿಸರದ ಖಾಸಗಿ ಹಿತ್ತಲಿನಲ್ಲಿ ಸಂಗ್ರಹಿಸಿಡಲಾದ 10 ಲೋಡ್‌ ಮರಳು ಹಾಗು ಎರಡು ಟಿಪ್ಪರ್‌ ಲಾರಿ, ಒಂದು ಜೆಸಿಬಿಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ನೀರ್ಚಾಲು ನಿವಾಸಿ ಸುನಿಲ್‌ (26), ಬಿಹಾರ ನಿವಾಸಿ ಅರ್ಬಿಂದ್‌ (34), ಕಾಸರಗೋಡು ಪಾಡಿ ನಿವಾಸಿ ಮೊಹಮ್ಮದ್‌ ಅಶ್ರಫ್‌ (47) ಸಹಿತ 7 ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

ಅನುಚಿತ ವರ್ತನೆ : ನಿವೃತ್ತ ಡಿವೈಎಸ್‌ಪಿ ವಿರುದ್ಧ ಕೇಸು
ಕಾಸರಗೋಡು: ಆಲ್ಬಂನಲ್ಲಿ ಅಭಿನಯಿಸಲೆಂದು ಬಂದ ಯುವತಿಯೊಬ್ಬಳೊಂದಿಗೆ ಅನುಚಿತವಾಗಿ ಸಂಭಾಷಣೆ ನಡೆಸಿದ ದೂರಿನಂತೆ ನಿವೃತ್ತ ಡಿವೈಎಸ್‌ಪಿ ಹಾಗೂ ಸಿನೆಮಾ ನಟರೂ ಆಗಿರುವ ವಿ.ಮಧುಸೂದನ್‌ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ. ಕೊಲ್ಲಂ ನಿವಾಸಿಯಾದ ಯುವತಿಯೊಬ್ಬಳೊಂದಿಗೆ ಪೆರಿಯಡ್ಕದಲ್ಲಿ ಅನುಚಿತವಾಗಿ ಸಂಭಾಷಣೆ ನಡೆಸಿದ್ದಾಗಿ ದೂರು ನೀಡಲಾಗಿತ್ತು.

ಗಾಂಜಾ ಬೀಡಿ ಸೇವನೆ : ಇಬ್ಬರ ಬಂಧನ
ಕುಂಬಳೆ: ಗಾಂಜಾ ಬೀಡಿ ಸೇದುತ್ತಿದ್ದ ಚೌಕಿ ಅಜಾದ್‌ನಗರದ ಶಿಹಾಬುದ್ದೀನ್‌ (26) ಮತ್ತು ಬಂದ್ಯೋಡ್‌ ಅಡ್ಕದ ಮುಜೀಬ್‌ ರಹಮಾನ್‌ (27)ನನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿಗೆ ಕಿರುಕುಳ : ಆರೋಪಿಗೆ ನ್ಯಾಯಾಂಗ ಬಂಧನ
ಕಾಸರಗೋಡು: ಮದುವೆಯಾಗುವುದಾಗಿ ನಂಬಿಸಿ 19ರ ಹರೆಯದ ಯುವತಿಗೆ ಕಿರುಕುಳ ನೀಡಿದ ಪ್ರಕರಣದ ಆರೋಪಿಯಾದ ಖಾಸಗಿ ಬಸ್‌ನ ಚಾಲಕ ರಾಜಪುರಂ ಕೋಳಿಚ್ಚಾಲ್‌ 18ನೇ ಮೈಲು ನಿವಾಸಿ ರೆನಿಲ್‌ ವರ್ಗೀಸ್‌ (39)ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಟಾಪ್ ನ್ಯೂಸ್

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

vidan-soudha-kannada

Golden Jubilee: ಕನ್ನಡವೇ ಅಧಿಕಾರಿಗಳ‌ ಹೃದಯದ ಭಾಷೆ ಆಗಲಿ

KSRTC

Transport: ಕೆಎಸ್ಸಾರ್ಟಿಸಿ ದಾಖಲೆ: ಒಂದೇ ದಿನ 1.23 ಕೋಟಿ ಮಂದಿ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

k

Kasaragod: ಎಡನೀರು ಶ್ರೀಗಳ ವಾಹನದ ಮೇಲೆ ದಾಳಿ: ಪ್ರತಿಭಟನೆ

2

Kasaragod: ರೈಲು ಹಳಿಯಲ್ಲಿ ಬಾಟಲಿ, ನಾಣ್ಯ ಇರಿಸಿ ದುಷ್ಕೃತ್ಯಕ್ಕೆ ಸಂಚು

kalla

Kasaragod: ಆರಾಧನಾಲಯಗಳ ಸರಣಿ ಕಳವಿನ ಹಿಂದೆ ಒಂದೇ ತಂಡ?

Court-1

Kasaragod: ಪಟಾಕಿ ದುರಂತ; ಜಾಮೀನು ರದ್ದುಗೊಳಿಸುವಂತೆ ಅರ್ಜಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.