ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಯಾವ ವಲಯಕ್ಕೆ ಏನು ಭರವಸೆ: ಇಲ್ಲಿದೆ ಸಂಕ್ಷಿಪ್ತ ಚಿತ್ರಣ


Team Udayavani, May 3, 2023, 7:48 AM IST

CONG PRANALIKE

ಕೃಷಿ ಮತ್ತು ರೈತರ ಸ್ನೇಹಿ
 ರೈತರಿಗೆ 10 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ. ಶೇ. 3ರ ಬಡ್ಡಿದರದಲ್ಲಿ 15 ಲ. ರೂ.ವರೆಗೆ ಸಾಲ.
 ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ನೀತಿ ಜಾರಿ, ಪ್ರತಿ ಕಂದಾಯ ವಲಯಕ್ಕೊಂದು ಬೆಲೆ ಆಯೋಗ ರಚನೆ
 ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸ್ಟಾರ್ಟ್‌ ಅಪ್‌ ಆರಂಭಿಸಲು 500 ಕೋಟಿ ರೂ.
 ಗ್ರಾಮೀಣ ಮಹಿಳೆಯರ ಕೃಷಿ ಆಧಾರಿತ ಉದ್ಯಮಕ್ಕೆ 200 ಕೋಟಿ ರೂ. ಹೂಡಿಕೆ
 ಬಿಜೆಪಿ ಜಾರಿಗೆ ತಂದ ಕೃಷಿ ಕಾಯ್ದೆಗಳು ಮತ್ತು ಎಪಿಎಂಸಿ ಕಾಯ್ದೆಗಳ ರದ್ದು
 ಸಾವಯವ ಸರದಾರ ಯೋಜನೆ ಅಡಿ 2,500 ಕೋಟಿ ಹೂಡಿಕೆ ತೋಟಗಾರಿಕೆ
 ದ್ರಾಕ್ಷಿ ಬೆಳೆಗಾರರಿಗೆ ಸಬ್ಸಿಡಿಗೆ 500 ಕೋಟಿ
 ಪುಷ್ಪೋದ್ಯಮಕ್ಕೆ ವಿಶೇಷ ಪ್ಯಾಕೇಜ್‌ಗೆ 500 ಕೋಟಿ ರೂ.
 ಕಾಫಿ ಕರ್ನಾಟಕ ಬ್ರ್ಯಾಂಡ್‌ ಸೃಷ್ಟಿ
 ರೇಷ್ಮೆ ಸ್ಥಿರತೆ ನಿಧಿಗೆ ಆರಂಭಿಕ ಹಂತದಲ್ಲಿ 2 ಸಾವಿರ ಕೋಟಿ ಅನುದಾನ
 ಎಲ್ಲ ರೇಷ್ಮೆ ನೂಲು ರೀಲರ್‌ಗಳಿಗೆ 3 ಲಕ್ಷ ಬಡ್ಡಿರಹಿತ ಸಾಲ ಹೈನುಗಾರಿಕೆ
 ಎಲ್ಲ ಕುರಿ, ಮೇಕೆ ಸಾಕಣೆದಾರರ 1 ಲಕ್ಷ ರೂ.ವರೆಗಿನ ಸಾಲ ಮನ್ನಾ
 ಪ್ರತಿ ಲೀ. ಹಾಲಿನ ಸಬ್ಸಿಡಿ 7 ರೂ.ಗೆ ಹೆಚ್ಚಳ
 ಹಸು, ಎಮ್ಮೆಗಳ ಖರೀದಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂ.ವರೆಗೆ ಸಾಲ
 ಕುರಿ ಸಾಕಾಣಿಕೆಗೆ 1 ಸಾವಿರ ಕೋಟಿ ನಿಧಿ ಸ್ಥಾಪನೆ ಮೀನುಗಾರಿಕೆ
 ಮೀನುಗಾರಿಕೆ ಮಹಿಳೆಯರಿಗೆ 3 ಲಕ್ಷದವರೆಗೆ ಬಡ್ಡಿರಹಿತ ಸಾಲ
 ಮೀನುಗಾರಿಕೆ ಕ್ಷೇತ್ರ ಸುಧಾರಣೆಗೆ 5 ಸಾವಿರ ಕೋಟಿ
 ಮೀನುಗಾರಿಕೆ ಸ್ಥಗಿತಗೊಂಡ ಸಮಯದಲ್ಲಿ ತಿಂಗಳಿಗೆ 6 ಸಾವಿರ ರೂ.
 ನಾಡದೋಣಿ ಮೀನುಗಾರರಿಗೆ 10 ಸಾವಿರ ಹಣಕಾಸು ನೆರವು ನೀರಾವರಿ
 ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ,ಆಲಮಟ್ಟಿ ಎತ್ತರ, ಭದ್ರಾ ಮೇಲ್ದಂಡೆ, ವಾರಾಹಿ ಯೋಜನೆಗಳು ಐದು ವರ್ಷಗಳಲ್ಲಿ ಪೂರ್ಣ
 ಎತ್ತಿನಹೊಳೆ ಯೋಜನೆ ಎರಡು ವರ್ಷಗಳಲ್ಲೇ ಪೂರ್ಣ
 ಬಯಲುಸೀಮೆಗಳಲ್ಲಿ ಚೆಕ್‌ಡ್ಯಾಂ ಮತ್ತು ಕೃಷಿಹೊಂಡ ನಿರ್ಮಾಣ ಆಡಳಿತ ಮತ್ತು ಆಡಳಿತ ನಿರ್ವಹಣೆ
 ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗೆ ಕಠಿನ ನಿಯಮಗಳ ಜಾರಿ, ನಿಯಂತ್ರಣ ಕ್ರಮಗಳ ಪಾರದರ್ಶಕತೆ ಮತ್ತು ಲೋಕಾಯುಕ್ತ ಬಲವರ್ಧನೆ.
 ಸ್ಥಳೀಯ ಸಂಸ್ಥೆಗಳಿಗೆ ಸಕಾಲದಲ್ಲಿ ಚುನಾವಣೆ- ಸಂಬಂಧಿತ ನಿಯಮಗಳ ಕಟ್ಟುನಿಟ್ಟಿನ ಪಾಲನೆ
 ಪ್ರತಿ ಗ್ರಾಮ ಪಂಚಾಯತ್‌ಮತ್ತು ನಗರ ವಾರ್ಡ್‌ಗಳಲ್ಲಿ ಕೋಮು, ಜಾತಿ ಹೆಸರಿನಲ್ಲಿ ಪಸರಿಸುವ ದ್ವೇಷ, ಅಸಹನೆ, ವಿಭಜನೆ ತಪ್ಪಿಸಲು ಭಾರತ್‌ ಜೋಡೋ ಸಾಮಾಜಿಕ ಸೌಹಾರ್ದ ಸಮಿತಿ ರಚಿಸಿ, ಅನುದಾನ

ಸಾರ್ವಜನಿಕ ಸೇವೆಗಳು
 2006ರಿಂದ ನೇಮಕಗೊಂಡ ಮತ್ತು ಪಿಂಚಣಿಗೆ ಅರ್ಹತೆ ಹೊಂದಿದ ಎಲ್ಲ ಸರಕಾರಿ ಮತ್ತು ಅನುದಾನಿತ ಉದ್ಯೋಗಿಗಳನ್ನು ಹಳೆಯ ಪಿಂಚಣಿ ಯೋಜನೆ ಅಡಿ ತರಲಾಗುವುದು
 ಅತಿಥಿ ಮತ್ತು ಗುತ್ತಿಗೆ ಆಧಾರದಲ್ಲಿ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ಸರ್ಕಾರಿ ನೇಮಕಾತಿಗಳಲ್ಲಿ ಆದ್ಯತೆ ಇರುವಂತೆ ಕಾಯ್ದೆಯಲ್ಲಿ ತಿದ್ದುಪಡಿ
 ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ಹಾಗೂ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 10 ಸಾವಿರ ರೂ. ಗೌರವಧನ

ಪೊಲೀಸ್‌ ವ್ಯವಸ್ಥೆ
 ಒಟ್ಟು ಪೊಲೀಸ್‌ ಬಲದಲ್ಲಿ ಶೇ.33ರಷ್ಟು ಮಹಿಳಾ ಪೊಲೀಸ್‌ ಬಲ ಇರುವಂತೆ ನೇಮಕಾತಿ. ಇಲ್ಲಿ ಕನಿಷ್ಠ 1ರಷ್ಟು ತೃತೀಯ ಲಿಂಗಿಗಳಿಗೆ ಅವಕಾಶ
 ರಾತ್ರಿ ಪಾಳಿಯ ಸಿಬ್ಬಂದಿಗೆ 5 ಸಾವಿರ ರೂ. ವಿಶೇಷ ಮಾಸಿಕ ಭತ್ಯೆ ಮತ್ತು ಎಲ್ಲ ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳು ವೇತನ ಹೆಚ್ಚುವರಿ ಪಾವತಿ
 ಮಿಲಿಟರಿ ಕಲ್ಯಾಣ ಮಾದರಿಯಲ್ಲಿ ಪ್ರತೀ ಜಿಲ್ಲೆಯಲ್ಲಿ ಪೊಲೀಸ್‌ ಕಲ್ಯಾಣ ಕೇಂದ್ರ ಕಾನೂನು ಮತ್ತು ನ್ಯಾಯ
 ಎಲ್ಲ ನ್ಯಾಯಾಲಯಗಳ ಆಧುನೀಕರಣಕ್ಕೆ 2 ಸಾವಿರ ಕೋಟಿ ನಿಧಿ
 ಬಿಜೆಪಿ ಜಾರಿಗೆ ತಂದ ಎಲ್ಲ ಜನವಿರೋಧಿ ಕಾನೂನುಗಳು 1 ವರ್ಷದೊಳಗೆ ರದ್ದು
 ಧರ್ಮ- ಜಾತಿ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಬಿತ್ತುವ ಬಜರಂಗದಳ ಮತ್ತು ಪಿಎಫ್ಐನಂತಹ ಸಂಘಟನೆಗಳ ನಿಷೇಧಕ್ಕೆ ಕ್ರಮ ಗ್ರಾಮೀಣ ಮೂಲಸೌಲಭ್ಯ
 ಪ್ರತಿ ಗ್ರಾ.ಪಂ.ಯಲ್ಲಿ ಹೈಸ್ಪೀಡ್‌ ವೈ-ಫೈ ಹಾಟ್‌ಸ್ಪಾಟ್‌ ಸ್ಥಾಪನೆ
 ತಾ.ಪಂ., ಗ್ರಾ.ಪಂ.ಗಳಿಗೆ ಬಜೆಟ್‌ನಲ್ಲಿ ಅನುದಾನ ಹೆಚ್ಚಳ
ಎಲ್ಲ ಮನೆಗಳಿಗೆ ಕುಡಿಯುವ ನೀರು ಮತ್ತಿತರ ಯೋಜನೆಗಳಿಗೆ ಐದು ವರ್ಷಕ್ಕೆ 50 ಸಾವಿರ ಕೋಟಿ ರೂ. ಹೂಡಿಕೆ ನಗರಾಭಿವೃದ್ಧಿ
 10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಇರುವ ನಗರಗಳಲ್ಲೂ ಟೆಂಡರ್‌ಶ್ಯೂರ್‌ ಮಾದರಿ ರಸ್ತೆಗಳ ನಿರ್ಮಾಣ
 ವಸತಿ ಸಮುತ್ಛಯಗಳು ಸಂಪೂರ್ಣ ನಿರ್ಮಾಣಗೊಂಡ ಬಳಿಕವೇ ಮಾಲಿಕರಿಗೆ ವಸತಿಗಳನ್ನು ಹಸ್ತಾಂತರ ಮಾಡುವ ಬಿಗಿ ಕಾನೂನು
 2ನೇ ಹಂತದ ನಗರಗಳಲ್ಲಿ ಉದ್ಯೋಗ ನೀಡುವ ಉದ್ಯಮಗಳಿಗೆ ಕಟ್ಟಡ ನಿರ್ಮಾಣದಲ್ಲಿ ಮಹಡಿ ಪ್ರದೇಶದ ಅನುಪಾತವನ್ನು ಎಫ್ಎಆರ್‌ 2ರಷ್ಟು ಹೆಚ್ಚಳ ಕೈಗಾರಿಕೆ ಮತ್ತು ವಾಣಿಜ್ಯ
 ಮಂಗಳೂರಿನಲ್ಲಿ ಪ್ರವಾಸೋದ್ಯಮ, ವ್ಯಾಪಾರ ಉತ್ತೇಜನಕ್ಕೆ ಚಿನ್ನ ಮತ್ತು ವಜ್ರದ ಪಾರ್ಕ್‌ ಸ್ಥಾಪನೆ
 ರೈತರಿಗೆ ಸ್ವಂತ ಜಮೀನಿನಲ್ಲಿ ಕೈಗಾರಿಕೆ ಸ್ಥಾಪಿಸಲು ಇರುವ ತೊಡಕುಗಳ ನಿವಾರಣೆ
 ಸಣ್ಣ, ಸೂಕ್ಷ್ಮ ಕೈಗಾರಿಕೆಗಳಿಗೆ ಸಾಲ ನೀಡಲು ರಾಜ್ಯಮಟ್ಟದ ಕ್ರೆಡಿಟ್‌ ಗ್ಯಾರಂಟಿ ಯೋಜನೆ ಪ್ರವಾಸೋದ್ಯಮ
 ಕರಾವಳಿಯಲ್ಲಿ ಬೋಟ್‌ಹೌಸ್‌ ಮತ್ತು ಕ್ರೂéಸ್‌ಶಿಪ್‌ ಸಂಚಾರಕ್ಕೆ ಉತ್ತೇಜನ
 ಪ್ರತಿ ಕ್ಷೇತ್ರದಲ್ಲಿ 50 ಟ್ಯಾಕ್ಸಿಗಳಿಗೆ ಪರವಾನಗಿ, ಶೇ. 5ರ ಬಡ್ಡಿದರದಲ್ಲಿ ಸಹಾಯಧನ
 20ಕ್ಕಿಂತ ಅಧಿಕ ನೌಕರರು ಇರುವ ಹೋಟೆಲ್‌ಗ‌ಳಿಗೆ ಉದ್ಯಮದ ಸ್ಥಾನಮಾನ ಇಂಧನ
 ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌
 5 ಸಾವಿರ ಮೆ.ವ್ಯಾ.ವಿದ್ಯುತ್‌ ಉತ್ಪಾದನೆಗೆ ಬೃಹತ್‌ ಸೋಲಾರ್‌ ಪಾರ್ಕ್‌ ಸ್ಥಾಪನೆ ಸಾರಿಗೆ
 ರಾಜ್ಯದ ಎಲ್ಲ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಸೇವೆ
 2ವರ್ಷಗಳಲ್ಲಿ ಒಟ್ಟು ಬಸ್‌ಗಳ ಸಂಖ್ಯೆಯಲ್ಲಿ ಶೇ. 50 ವಿದ್ಯುತ್‌ಚಾಲಿತ ಬಸ್‌ಗಳು ಇರುವಂತೆ ಯೋಜನೆ ಶಿಕ್ಷಣ
ಅವೈಜ್ಞಾನಿಕ ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪ ಡಿಸಿ ಕರ್ನಾಟಕ ಶಿಕ್ಷಣ ನೀತಿ ಅನುಷ್ಠಾನ.
 ವಿದ್ಯಾರ್ಥಿ ವೇತನ ವಿತರಿಸಲು 2 ಸಾವಿರ ಕೋಟಿ ಮೂಲನಿಧಿಯೊಂದಿಗೆ ರಾಜ್ಯ ಶೈಕ್ಷಣಿಕ ಹಣಕಾಸು ನಿಗಮ ಸ್ಥಾಪನೆ
 ಪಿಯುಸಿಯಿಂದ ಉನ್ನತ ಶಿಕ್ಷಣದವರೆಗೆ ಎಲ್ಲ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್‌ಟಾಪ್‌/ ಡಿಜಿಟಲ್‌ ನೋಟ್‌ಪ್ಯಾಡ್‌ ವಿತರಣೆ
 ವಿದ್ಯಾಸಿರಿ ಸ್ಕಾಲರ್‌ಶಿಪ್‌ 15ರಿಂದ 20 ಸಾವಿರಕ್ಕೆ ಹೆಚ್ಚಳ

ಆರೋಗ್ಯ
 ರಾಷ್ಟ್ರೀಯ ಸ್ವಾಸ್ಥ್ಯಬಿಮಾ ಯೋಜನೆ ಮೀನುಗಾರರು, ನೇಕಾರ ಸಮುದಾಯ, ಕಟ್ಟಡ ಕಾರ್ಮಿಕರು, ಮನೆ ಕೆಲಸದವರು ಮತ್ತಿತರ ಅಸಂಘಟಿತ ಕ್ಷೇತ್ರಗಳಿಗೆ ವಿಸ್ತರಣೆ
 ಕಂದಾಯ ವಿಭಾಗಕ್ಕೊಂದು ಜಯದೇವ ಮಾದರಿ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಮಾದರಿ ಕ್ಯಾನ್ಸರ್‌ ಆಸ್ಪತ್ರೆ, ನಿಮ್ಹಾನ್ಸ್‌ ಮಾದರಿ ಮನೋರೋಗ ಚಿಕಿತ್ಸಾ ಆಸ್ಪತ್ರೆ
 ಡಾ.ಪುನೀತ್‌ ರಾಜ್‌ಕುಮಾರ್‌ ಹೃದಯ ಆರೋಗ್ಯ ಯೋಜನೆ

ವಸತಿ
 5 ವರ್ಷದಲ್ಲಿ ಚಾಲ್ತಿಯಲ್ಲಿರುವ ಯೋಜನೆ ಮೂಲಕ ಸರ್ಕಾರಿ ವಸತಿ ಸೌಲಭ್ಯ
 ಬಡವರಿಗಾಗಿ ನಿರ್ಮಿಸುವ ಯೋಜನೆಗಳಿಗೆ ಸರ್ಕಾರದಿಂದ 3.5 ಲಕ್ಷ ಸಬ್ಸಿಡಿ ಸಹಕಾರ

ಸಮಾಜ ಕಲ್ಯಾಣ
 ಹಿಂದುಳಿದ ವರ್ಗಗಳ ಜನಗಣತಿ ವರದಿ ಅನುಷ್ಠಾನ
 5 ವರ್ಷಗಳಲ್ಲಿ ಎಲ್ಲ ಪ.ಜಾತಿ ಮತ್ತು ಪಂಗಡ ಕುಟುಂಬಗಳಿಗೆ ಮನೆ
 ಮೀಸಲಾತಿ ಪ್ರಮಾಣ ಶೇ. 50ರಿಂದ ಶೇ. 75ರವರೆಗೆ ಹೆಚ್ಚಿಸಲು ಕ್ರಮ
 ಗ್ರಾಮೀಣ ಭಾಗದ ಕೌÒರಿಕ ವೃತ್ತಿ ಮಾಡುವವರಿಗೆ ವೃತ್ತಿ ಅಭಿವೃದ್ಧಿಗಾಗಿ ಒಂದು ಸಲದ ಕ್ರಮವಾಗಿ ಒಂದು ಲಕ್ಷ ರೂ. ಸಹಾಯಧನ

ಮಹಿಳಾ ಮತ್ತು ಮಕ್ಕಳ ಕಲ್ಯಾಣ
 ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ.
 ಮಹಿಳಾ ಉದ್ಯಮಶೀಲತೆಗಾಗಿ ಪ್ರತಿ ವರ್ಷ 5 ಸಾವಿರ ಮಹಿಳೆಯರಿಗೆ ಬೆಂಬಲ
 ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ದಾದಿಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಇ-ಸ್ಕೂಟರ್‌ ಖರೀದಿಗೆ ಶೇ. 50ರಷ್ಟು ಸಹಾಯಧನ

ಸಂಸ್ಕೃತಿ
 ಕೂಡಲಸಂಗಮದಲ್ಲಿ ಬಸವಪಥ ಸಂಸ್ಥೆಗೆ 100 ಕೋಟಿ
 ಕುವೆಂಪು ಕನ್ನಡ ಸಾಹಿತ್ಯ ಪುರಸ್ಕಾರ ಅಭಿಯಾನದಡಿ 500 ಯುವ ಕವಿಗಳು ಮತ್ತು ಬರಹಗಾರರಿಗೆ ತಲಾ 25 ಸಾವಿರ ಹಣಕಾಸಿನ ನೆರವು
 ಕಾಶ್ಮೀರಿ ವಲಸೆ ಪಂಡಿತರಿಗಾಗಿ ಕಾಶ್ಮೀರ ಸಂಸ್ಕೃತಿ ಕೇಂದ್ರಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಒಂದು ಬಾರಿ ಕೊಡುಗೆಯಾಗಿ 15 ಕೋಟಿ ಹಾಗೂ ವಾರ್ಷಿಕ 1 ಕೋಟಿ ಅನುದಾನ
 ಜೋಗಪ್ಪ ಸಮುದಾಯ ಮತ್ತು ತೃತೀಯ ಲಿಂಗಿಗಳ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ನೀಡಲು ಕ್ರಮ

ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ವಾರ್ಷಿಕ 500 ಕೋಟಿ ರೂ.
ಬೆಂಗಳೂರು: ಕಲ್ಯಾಣ ಕರ್ನಾಟಕ, ಮೈಸೂರು ಕರ್ನಾಟಕ, ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಘೋಷಿಸಿರುವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಕರಾವಳಿ, ಮಲೆನಾಡು ಭಾಗಕ್ಕೆ ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ವಾರ್ಷಿಕ 500 ಕೋಟಿ ರೂ.ಗಳಂತೆ 5 ವರ್ಷಕ್ಕೆ 2,500 ಕೋಟಿ ರೂ.ಗಳನ್ನು ಮೀಸಲಿಡುವುದಾಗಿ ಘೋಷಿಸಿದೆ. ಅದರ ವಿವರ ಈ ಕೆಳಗಿನಂತಿದೆ.
 ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ವಾರ್ಷಿಕ 500 ಕೋಟಿ ರೂ.ಗಳಂತೆ 5 ವರ್ಷಕ್ಕೆ 2,500 ಕೋಟಿ ರೂ.
 ಉಳ್ಳಾಲದಲ್ಲಿ ರಾಣೆ ಅಬ್ಬಕ್ಕ ದೇವಿ ಸ್ಮಾರಕ , ವಸ್ತುಸಂಗ್ರಹಾಲಯ ಸ್ಥಾಪನೆಗೆ 100 ಕೋಟಿ ಅನುದಾನ.
ಯಕ್ಷಗಾನ, ನಾಗಮಂಡಲ, ದೇವತಾರಾಧನೆಯಂತಹ ವಿಶಿಷ್ಟ ಆಚರಣೆಗಳಿಗೆ ವಿಶೇಷ ಅನುದಾನ.
ಅಡಿಕೆಗೆ ಹಳದಿ ರೋಗ , ಇತರೆ ರೋಗಗಳ ನಿಯಂತ್ರಣ, ಮಾರುಕಟ್ಟೆ, ಸಂಶೋಧನೆಗೆ ಕ್ರಮ.
ಅಮರ ಸುಳ್ಯ ರೈತ ಸ್ವಾತಂತ್ರ್ಯ ಹೋರಾಟ ಭವನ ನಿರ್ಮಾಣಕ್ಕೆ ಸ್ಥಳ, 50 ಕೋಟಿ ರೂ. ಅನುದಾನ.
 ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಸರ್ವಾಂಗೀಣ ಪ್ರವಾಸೋದ್ಯಮ ಅಭಿವೃದ್ಧಿಗೆ ಕರಾವಳಿ ಪ್ರವಾಸೋದ್ಯಮ ಪ್ರಾಧಿಕಾರ.
ಕಸ್ತೂರಿ ರಂಗನ್‌ ವರದಿಯ ಮರುಪರಿಶೀಲನೆ ಹಾಗೂ ಅರಣ್ಯ ಮತ್ತು ಪರಿಸರ ರಕ್ಷಣೆಗೆ ಪಶ್ವಿ‌ಮ ಘಟ್ಟ ನೀತಿ.
 ಮಂಗಳೂರು, ಉಡುಪಿಯಂತಹ ನಗರಗಳಿಗೆ ಪ್ರತ್ಯೇಕ ಉಪನಗರಗಳ ನಿರ್ಮಾಣ.
ಮೀನುಗಾರರಿಗೆ ವಿಮಾ ರಕ್ಷೆ, ಮಹಿಳೆಯರಿಗೆ 1 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ.
ಪ್ರತೀ ದಿನದ ಡೀಸೆಲ್‌ ಬಳಕೆ ಪ್ರಮಾಣ 500 ಲೀಟರ್‌ಗೆ ಹೆಚ್ಚಳ.
ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ, ಚಾರ್ಮಾಡಿ, ಸಂಪಾಜೆ ಘಾಟಿಗಳ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿಗಳನ್ನು ಕೇಂದ್ರದ ಸಹಯೋಗದೊಂದಿಗೆ ಸರ್ವಋತು ಷಟ³ಥ ರಸ್ತೆಯನ್ನಾಗಿ ಅಭಿವೃದ್ಧಿ.
ಕರಾವಳಿಯ 3 ಜಿಲ್ಲೆಗಳಲ್ಲಿ ತಲಾ 2 ಮೀನು ಸಂಸ್ಕರಣ ಪಾರ್ಕ್‌ ನಿರ್ಮಾಣ.

ಟಾಪ್ ನ್ಯೂಸ್

Air Force Chief: ವಾಯುಪಡೆ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

crime (2)

Bengaluru; ಫ್ರಿಡ್ಜ್ ನಲ್ಲಿ ಮಹಿಳೆಯ ಕೊಳೆತ ಶ*ವ!!; 30 ಕ್ಕೂ ಹೆಚ್ಚು ತುಂಡುಗಳು!!!

1-muni

BJP MLA ಮುನಿರತ್ನಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ

Ayodhya: 8 ಕಾಲುಳ್ಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು

Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು

Vijayapura: ತಿರುಪತಿ ಲಡ್ಡು ಪಾವಿತ್ರ‍್ಯತೆ ಹಾಳು ಮಾಡಿದವರನ್ನು ಗಲ್ಲಿಗೇರಿಸಬೇಕು: ಯತ್ನಾಳ್

Dandeli: ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ದ್ವಿಚಕ್ರ ವಾಹನ: ಇಬ್ಬರಿಗೆ ಗಾಯ

Dandeli: ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ದ್ವಿಚಕ್ರ ವಾಹನ: ಇಬ್ಬರಿಗೆ ಗಾಯ

ಕುಡಿದು ಆ್ಯಂಬ್ಯುಲೆನ್ಸ್‌ ಚಲಾಯಿಸಿ ಟ್ಯಾಂಕರ್‌ ಗೆ ಡಿಕ್ಕಿ; ಸ್ವಲ್ಪದರಲ್ಲಿ ತಪ್ಪಿದ ಅನಾಹುತ

ಕುಡಿದು ಆ್ಯಂಬ್ಯುಲೆನ್ಸ್‌ ಚಲಾಯಿಸಿ ಟ್ಯಾಂಕರ್‌ ಗೆ ಡಿಕ್ಕಿ; ಸ್ವಲ್ಪದರಲ್ಲಿ ತಪ್ಪಿದ ಅನಾಹುತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ಕಳಸಾ ನಾಲಾದಲ್ಲಿ ರಾಜಕೀಯ ಕೊಳಕು: ಸರ್ವ ಪಕ್ಷ ನಿಯೋಗ ಒಯ್ಯುವ ಚಕಾರವೇ ಇಲ್ಲ!

ಕಳಸಾ ನಾಲಾದಲ್ಲಿ ರಾಜಕೀಯ ಕೊಳಕು: ಸರ್ವ ಪಕ್ಷ ನಿಯೋಗ ಒಯ್ಯುವ ಚಕಾರವೇ ಇಲ್ಲ!

Air Force Chief: ವಾಯುಪಡೆ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

Air Force Chief: ವಾಯುಪಡೆಯ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

crime (2)

Bengaluru; ಫ್ರಿಡ್ಜ್ ನಲ್ಲಿ ಮಹಿಳೆಯ ಕೊಳೆತ ಶ*ವ!!; 30 ಕ್ಕೂ ಹೆಚ್ಚು ತುಂಡುಗಳು!!!

Desi Swara: ಯುಎಐಯಲ್ಲಿ “ನಮ್ಮವರು ವಿಶ್ವಕರ್ಮ ಸಮಿತಿ’ ಉದ್ಘಾಟನೆ

Desi Swara: ಯುಎಐಯಲ್ಲಿ “ನಮ್ಮವರು ವಿಶ್ವಕರ್ಮ ಸಮಿತಿ’ ಉದ್ಘಾಟನೆ

1-muni

BJP MLA ಮುನಿರತ್ನಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.