ಮೊಹಾಲಿಯಲ್ಲಿ ಪಂಜಾಬ್‌ ಮ್ಯಾಚ್‌: ಸೇಡಿಗೆ ಕಾದಿದೆ ಮುಂಬೈ ಇಂಡಿಯನ್ಸ್‌

Team Udayavani, May 3, 2023, 8:00 AM IST

ಮೊಹಾಲಿಯಲ್ಲಿ ಪಂಜಾಬ್‌ ಮ್ಯಾಚ್‌: ಸೇಡಿಗೆ ಕಾದಿದೆ ಮುಂಬೈ ಇಂಡಿಯನ್ಸ್‌

ಮೊಹಾಲಿ: ಐದು ಬಾರಿಯ ಚಾಂಪಿಯನ್‌ ಆಗುವುದರ ಜತೆಗೆ ಕಳೆದ ಸಲ 10ನೇ ಸ್ಥಾನಕ್ಕೆ ಕುಸಿದಿದ್ದ ಮುಂಬೈ ಇಂಡಿಯನ್ಸ್‌ ಪಾಲಿಗೆ ಬುಧವಾರ ನಿರ್ಣಾಯಕ ಪಂದ್ಯವೊಂದು ಎದುರಾಗಲಿದೆ.

ಪಂಜಾಬ್‌ ಕಿಂಗ್ಸ್‌ ತಂಡವನ್ನು ಅವರದೇ ಮೊಹಾಲಿ ಅಂಗಳದಲ್ಲಿ ಎದುರಿಸಬೇಕಿದೆ. ಮುಂಬಯಿಯಲ್ಲಿ ಅನುಭವಿಸಿದ 13 ರನ್‌ ಸೋಲಿಗೆ ಸೇಡು ತೀರಿಸಿಕೊಳ್ಳಬೇಕಾದ ಒತ್ತಡ ರೋಹಿತ್‌ ಪಡೆಯ ಮೇಲಿದೆ.

ಮುಂಬೈ ಎಂಟರಲ್ಲಿ 4 ಪಂದ್ಯಗಳನ್ನು ಜಯಿಸಿದರೆ, ಪಂಜಾಬ್‌ 9 ಪಂದ್ಯಗಳಲ್ಲಿ ಐದನ್ನು ಗೆದ್ದು ಒಂದು ಮೆಟ್ಟಿಲು ಮೇಲಿದೆ. ಎ. 30ರಂದು ವಾಂಖೇಡೆ ಸ್ಟೇಡಿಯಂನಲ್ಲಿ ಐಪಿಎಲ್‌ ಇತಿಹಾ ಸದ 1,000ದ ಪಂದ್ಯದಲ್ಲಿ ಪಾಲ್ಗೊಂಡು, ರಾಜಸ್ಥಾನ್‌ ವಿರುದ್ಧ 6 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿದ ಹೆಗ್ಗಳಿಕೆ ಮುಂಬೈ ತಂಡದ್ದು, ಇಲ್ಲಿನ ಆತ್ಮವಿಶ್ವಾಸ ವನ್ನು ಅದು ಮೊಹಾಲಿಗೂ ಕೊಂಡೊಯ್ಯಬೇಕಿದೆ.

ಇನ್ನೊಂದೆಡೆ ಪಂಜಾಬ್‌ ಕೂಡ ಚೆನ್ನೈ ಅಂಗಳದಲ್ಲಿ 4 ವಿಕೆಟ್‌ಗಳ ಜಯ ಸಾಧಿಸಿದ ಉತ್ಸಾಹದಲ್ಲಿದೆ. ಇದಕ್ಕೂ ಮುನ್ನ ಪಂಜಾಬ್‌ ಪಡೆ ಮೊಹಾಲಿ ಅಂಗಳದಲ್ಲಿ ಲಕ್ನೋಗೆ 257 ರನ್‌ ಬಿಟ್ಟು ಕೊಟ್ಟು ಎಲ್ಲ ದಿಕ್ಕುಗಳಿಂದಲೂ ಟೀಕೆಗೊಳಗಾಗಿತ್ತು. ಈಗ ಮತ್ತೆ ಮೊಹಾಲಿ ಅಂಗಳದಲ್ಲಿ ಮ್ಯಾಚ್‌ ನಡೆಯುತ್ತದೆ. ಟ್ರ್ಯಾಕ್‌ ಹೇಗೆ ವರ್ತಿಸಬಹುದು ಎಂಬ ಕುತೂಹಲ ಇದ್ದೇ ಇದೆ.

ಬೌಲಿಂಗ್‌ ಸಮಸ್ಯೆ
ರಾಜಸ್ಥಾನ್‌ ಎದುರಿನ ತವರಿನ ಪಂದ್ಯದಲ್ಲಿ ಮುಂಬೈ ತಂಡದ ಬೌಲಿಂಗ್‌ ದೌರ್ಬಲ್ಯ ಎದ್ದು ಕಂಡಿತ್ತು. ಈ ಸಮಸ್ಯೆಯನ್ನು ಬ್ಯಾಟಿಂಗ್‌ ಮೂಲಕ ಹೋಗಲಾಡಿಸಿಕೊಂಡಿತು. ಆದರೆ ನಾಯಕ ರೋಹಿತ್‌ ಶರ್ಮ (3) ವಿಫ‌ಲರಾಗಿದ್ದರು. ಇಶಾನ್‌ ಕಿಶನ್‌ ಸಾಮಾನ್ಯ ಪ್ರದರ್ಶನ ನೀಡಿದ್ದರು. ಗ್ರೀನ್‌, ಸೂರ್ಯಕುಮಾರ್‌, ತಿಲಕ್‌ ವರ್ಮ, ಕೊನೆಯಲ್ಲಿ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿದ ಸಿಂಗಾಪುರ ಮೂಲದ ಆಸೀಸ್‌ ಆಟಗಾರ ಟಿಮ್‌ ಡೇವಿಡ್‌ ಸಾಹಸದಿಂದ ಮುಂಬೈಗೆ ಗೆಲುವು ಒಲಿದಿತ್ತು. ಪಂಜಾಬ್‌ ವಿರುದ್ಧವೂ ಮುಂಬೈ ಇಂಥದೇ ಬ್ಯಾಟಿಂಗ್‌ ಪ್ರದರ್ಶನ ನೀಡಬೇಕಿದೆ. ಹಾಗೆಯೇ ಮುಂಬೈ ಬೌಲಿಂಗ್‌ ಘಾತಕವಾಗಿ ಪರಿಣಮಿಸುವ ಅಗತ್ಯ ಹೆಚ್ಚಿದೆ.

ಇತ್ತಂಡಗಳ ನಡುವಿನ ಮೊದಲ ಪಂದ್ಯ ಕೂಡ ಇನ್ನೂರರಾಚೆಯ ಹೋರಾಟವಾಗಿತ್ತು. ಪಂಜಾಬ್‌ 8 ವಿಕೆಟಿಗೆ 214 ರನ್‌ ಪೇರಿಸಿದರೆ, ಮುಂಬೈ 6 ವಿಕೆಟಿಗೆ 201 ರನ್‌ ಮಾಡಿ ಸೋಲು ಕಂಡಿತ್ತು.

ಮುಂಬೈಯಂತೆ ಪಂಜಾಬ್‌ ಕೂಡ ಅನಿಶ್ಚಿತ ಫ‌ಲಿತಾಂಶ ದಾಖಲಿಸುವ ತಂಡ. ಚೆನ್ನೈ ವಿರುದ್ಧ 200 ರನ್‌ ಚೇಸ್‌ ಮಾಡುವಾಗ ಪ್ರಭ್‌ಸಿಮ್ರಾನ್‌-ಶಿಖರ್‌ ಧವನ್‌ಉತ್ತಮ ಅಡಿಪಾಯ ನಿರ್ಮಿಸಿದ್ದರು. ಅಥರ್ವ ಟೈಡೆ, ಲಿವಿಂಗ್‌ಸ್ಟೋನ್‌, ಸ್ಯಾಮ್‌ ಕರನ್‌, ಸಿಕಂದರ್‌ ರಝ, ಜಿತೇಶ್‌ ಶರ್ಮ ಅವರಿಂದ ಬ್ಯಾಟಿಂಗ್‌ ಸರದಿ ಬೆಳೆಯುತ್ತದೆ.

ಬೌಲಿಂಗ್‌ ವಿಭಾಗದಲ್ಲಿ ಅರ್ಷ ದೀಪ್‌, ಕರನ್‌, ಚಹರ್‌ ಅವರನ್ನು ಹೆಚ್ಚು ನಂಬಿಕೊಂಡಿದೆ. ರಬಾಡ ಕ್ಲಿಕ್‌ ಆದರೆ ಪಂಜಾಬ್‌ ಬೌಲಿಂಗ್‌ ಸಮಸ್ಯೆ ಬಹುತೇಕ ಪರಿಹಾರಗೊಳ್ಳಲಿದೆ.

ಟಾಪ್ ನ್ಯೂಸ್

Air Force Chief: ವಾಯುಪಡೆ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

Air Force Chief: ವಾಯುಪಡೆ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

crime (2)

Bengaluru; ಫ್ರಿಡ್ಜ್ ನಲ್ಲಿ ಯುವತಿಯ ಕೊಳೆತ ಶ*ವ!!; 30 ಕ್ಕೂ ಹೆಚ್ಚು ತುಂಡುಗಳು!!!

1-muni

BJP MLA ಮುನಿರತ್ನಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ

Ayodhya: 8 ಕಾಲುಳ್ಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು

Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು

Vijayapura: ತಿರುಪತಿ ಲಡ್ಡು ಪಾವಿತ್ರ‍್ಯತೆ ಹಾಳು ಮಾಡಿದವರನ್ನು ಗಲ್ಲಿಗೇರಿಸಬೇಕು: ಯತ್ನಾಳ್

Dandeli: ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ದ್ವಿಚಕ್ರ ವಾಹನ: ಇಬ್ಬರಿಗೆ ಗಾಯ

Dandeli: ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ದ್ವಿಚಕ್ರ ವಾಹನ: ಇಬ್ಬರಿಗೆ ಗಾಯ

ಕುಡಿದು ಆ್ಯಂಬ್ಯುಲೆನ್ಸ್‌ ಚಲಾಯಿಸಿ ಟ್ಯಾಂಕರ್‌ ಗೆ ಡಿಕ್ಕಿ; ಸ್ವಲ್ಪದರಲ್ಲಿ ತಪ್ಪಿದ ಅನಾಹುತ

ಕುಡಿದು ಆ್ಯಂಬ್ಯುಲೆನ್ಸ್‌ ಚಲಾಯಿಸಿ ಟ್ಯಾಂಕರ್‌ ಗೆ ಡಿಕ್ಕಿ; ಸ್ವಲ್ಪದರಲ್ಲಿ ತಪ್ಪಿದ ಅನಾಹುತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

‌INDvsBAN; ಬಸವಳಿದ ಬಾಂಗ್ಲಾ ಎದುರು ಪಂತ್-ಗಿಲ್‌ ಸೂಪರ್‌ ಶತಕ; ಡಿಕ್ಲೇರ್ ಘೋಷಿಸಿದ ಭಾರತ

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

1-ashwin

147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್

IPL 2025: Vikram Rathour joined Rahul Dravid again in Rajastan Royals

IPL 2025: ಮತ್ತೆ ರಾಹುಲ್‌ ದ್ರಾವಿಡ್‌ ಜತೆ ಸೇರಿದ ವಿಕ್ರಮ್‌ ರಾಥೋರ್‌

INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್‌ ಗೆ ಆಲೌಟ್‌

INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್‌ ಗೆ ಆಲೌಟ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Air Force Chief: ವಾಯುಪಡೆ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

Air Force Chief: ವಾಯುಪಡೆ ನೂತನ ಮುಖ್ಯಸ್ಥರಾಗಿ ಏರ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ನೇಮಕ

crime (2)

Bengaluru; ಫ್ರಿಡ್ಜ್ ನಲ್ಲಿ ಯುವತಿಯ ಕೊಳೆತ ಶ*ವ!!; 30 ಕ್ಕೂ ಹೆಚ್ಚು ತುಂಡುಗಳು!!!

Desi Swara: ಯುಎಐಯಲ್ಲಿ “ನಮ್ಮವರು ವಿಶ್ವಕರ್ಮ ಸಮಿತಿ’ ಉದ್ಘಾಟನೆ

Desi Swara: ಯುಎಐಯಲ್ಲಿ “ನಮ್ಮವರು ವಿಶ್ವಕರ್ಮ ಸಮಿತಿ’ ಉದ್ಘಾಟನೆ

1-muni

BJP MLA ಮುನಿರತ್ನಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ

Ayodhya: 8 ಕಾಲುಳ್ಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು

Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.