ಕಾಫಿನಾಡಿನ ಬಾಂಧವ್ಯ-ರಾಹುಲ್‌ಮೆಲುಕು
Team Udayavani, May 3, 2023, 6:45 AM IST
ಚಿಕ್ಕಮಗಳೂರು: ನಾನು ಚಿಕ್ಕವನಿದ್ದಾಗ ನನ್ನ ಅಜ್ಜಿ ಇಂದಿರಾ ಗಾಂಧಿ ಚಿಕ್ಕಮಗಳೂರಿನಲ್ಲಿ 1978-79ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವಿಷಯ ಹೇಳಿದ್ದರು. ಚಿಕ್ಕಮಗಳೂರು ಪ್ರಕೃತಿ ಸೌಂದರ್ಯವನ್ನು ಹೊಂದಿದೆ ಎಂದು ತಿಳಿಸಿದ್ದರು. ಇಲ್ಲಿನ ಜನರು ತುಂಬಾ ಒಳ್ಳೆಯವರು ಎಂಬುದು ನನ್ನ ಅರಿವಿಗೆ ಬಂದಿದೆ ಎಂದು ಇಂದಿರಾ ಗಾಂಧಿ ಯವರ ಮೊಮ್ಮಗ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂ ಧಿ ಅವರು ಅಜ್ಜಿಗೆ ರಾಜಕೀಯ ಪುನರ್ಜನ್ಮ ನೀಡಿದ ಅಂದಿನ ಕ್ಷಣ ನೆನೆದರು.
ಮಂಗಳವಾರ ನಗರದ ಎಂ.ಜಿ. ರಸ್ತೆಯಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪರ ರೋಡ್ ಶೋ ನಡೆಸಿ, ಅನಂತರ ಆಜಾದ್ ಪಾರ್ಕ್ ವೃತ್ತದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವುದು ಪ್ರಧಾನಿ ಚುನಾವಣೆಯಲ್ಲ. ರೈತರ, ಶ್ರಮಿಕರ, ಮಹಿಳೆಯರ, ಕಾರ್ಮಿಕರ ಚುನಾವಣೆ. ಬಿಜೆಪಿಯವರಿಗೆ 40 ಎಂದರೇ ಬಹಳ ಇಷ್ಟ. ಅದಕ್ಕೆ ಅವರಿಗೆ ಈ ಚುನಾವಣೆಯಲ್ಲಿ 40 ಸ್ಥಾನಗಳನ್ನು ನೀಡಿ ಕಾಂಗ್ರೆಸ್ ಪಕ್ಷಕ್ಕೆ 150 ಸ್ಥಾನಗಳನ್ನು ನೀಡಿ ಬಹುಮತದ ಸರಕಾರ ರಚನೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.
ಹಾಲು ಉತ್ಪಾದಕರ ಪ್ರೋತ್ಸಾಹಧನ 5 ರೂ.ನಿಂದ 7 ರೂ.ಗೆ ಏರಿಕೆ
ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಸಣ್ಣ ಉದ್ದಿಮೆದಾರರು, ನಿರುದ್ಯೋಗ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳಿವೆ. ಕಾಂಗ್ರೆಸ್ ನಿಂದಿಸಿದೆ ಎಂದು ತಮ್ಮ ಭಾಷಣದಲ್ಲಿ ಹೇಳುವ ಬದಲು ಶೇ. 30ರಷ್ಟಾದರೂ ರಾಜ್ಯದ ಜನರ ಬಗ್ಗೆ, ತಮ್ಮ ಸರಕಾರದ ಸಾಧನೆ ಬಗ್ಗೆ, ಬಿಜೆಪಿ ಪಕ್ಷದ ಮುಂದಿನ ಯೋಜನೆ ಬಗ್ಗೆ ಹೇಳಲಿ. ಕಾಂಗ್ರೆಸ್ ಅಧಿ ಕಾರಕ್ಕೆ ಬಂದಲ್ಲಿ ಜನರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ. ಐದು ಗ್ಯಾರಂಟಿಗಳನ್ನು ನೀಡಿದೆ. ರೈತರಿಗಾಗಿ 1.50 ಲಕ್ಷ ಕೋಟಿ ಅನುದಾನ ಕೃಷಿ ಕ್ಷೇತ್ರಕ್ಕೆ ನೀಡಲಾಗುವುದು. ಅಡಿಕೆ, ತೆಂಗಿಗೆ ಕನಿಷ್ಟ ಬೆಂಬಲ ಬೆಲೆ ನೀಡಲಾಗುವುದು. ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹ ಧನ 7ರೂ.ಗೆ ಏರಿಸಲಾಗುವುದು. ಕಾಂಗ್ರೆಸ್ ಅಧಿ ಕಾರಕ್ಕೆ ಬಂದ ಮೊದಲ ಕ್ಯಾಬಿನೆಟ್‌ನಲ್ಲೇ ಜಾರಿಗೊಳಿಸಲಾಗುವುದು ಎಂದು ರಾಹುಲ್ ಹೇಳಿದರು.
ಮೋದಿಯವರೇ, ನಿಮಗೇಕೆ ಜನಸಾಮಾನ್ಯರು ಕಾಣುತ್ತಿಲ್ಲ, ಈ ಚುನಾವಣೆ ನಿಮಗಾಗಿ ನಡೆಯುತ್ತಿಲ್ಲ. ಕರ್ನಾಟಕದ ರೈತರು, ಕಾರ್ಮಿಕರು, ಯುವಕರಿಗೆ ಉತ್ತಮ ಭವಿಷ್ಯ ನಿರ್ಮಿಸಬೇಕಿದೆ. ನೀವು ಭಾಷಣದಲ್ಲಿ ನಿಮ್ಮ ಬಗ್ಗೆ ಹೇಳಿಕೊಳ್ಳಿ. ಆದರೆ ಕೊನೆ ಪಕ್ಷ 40 ಪರ್ಸೆಂಟ್‌ನಷ್ಟಾದರೂ ರಾಜ್ಯದ ಅಭಿವೃದ್ಧಿ ಬಗ್ಗೆ ಇಲ್ಲಿನ ಜನರ ಬಗ್ಗೆ ಮಾತನಾಡಿ.
– ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.