IPL 2023: ಲಕ್ನೋಗೆ ಅವಳಿ ಆಘಾತ: ರಾಹುಲ್, ಉನಾದ್ಕತ್ ಔಟ್
Team Udayavani, May 4, 2023, 7:25 AM IST
ಲಕ್ನೋ: ಉತ್ತಮ ಲಯದಲ್ಲಿ ಸಾಗುತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಏಕಕಾಲದಲ್ಲಿ ಅವಳಿ ಆಘಾತ ಎದುರಾಗಿದೆ.
ನಾಯಕ ಕೆ.ಎಲ್. ರಾಹುಲ್ ಮತ್ತು ಎಡಗೈ ವೇಗಿ ಜೈದೇವ್ ಉನಾದ್ಕತ್ ಇಬ್ಬರೂ ಗಾಯಾಳಾಗಿ ಉಳಿದ ಐಪಿಎಲ್ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ರಾಹುಲ್ ಗೈರಲ್ಲಿ ಆಲ್‌ರೌಂಡರ್ ಕೃಣಾಲ್ ಪಾಂಡ್ಯ ಲಕ್ನೋ ತಂಡವನ್ನು ಮುನ್ನಡೆಸಿದರು.
ಕೆ.ಎಲ್. ರಾಹುಲ್ ಸೋಮವಾರದ ಆರ್‌ಸಿಬಿ ಎದುರಿನ ಪಂದ್ಯದ ವೇಳೆ ಫೀಲ್ಡಿಂಗ್ ನಡೆಸುತ್ತಿದ್ದಾಗ ಬಿದ್ದು ಬಲ ತೊಡೆಗೆ ಗಂಭೀರ ಏಟು ಅನುಭವಿಸಿದ್ದರು. ಬಿಸಿಸಿಐ ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ತಂಡ ರಾಹುಲ್ ಅವರ ಸಮಸ್ಯೆ ಯನ್ನು ಗಮನಿಸುತ್ತಿದೆ.
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ರಾಹುಲ್ ಲಭ್ಯರಾಗುವರೇ ಎಂಬುದು ಮುಂದಿನ ಪ್ರಶ್ನೆ.
“ರಾಹುಲ್ ಸದ್ಯ ಲಕ್ನೋದಲ್ಲೇ ಇದ್ದಾರೆ. ಬುಧವಾರದ ಚೆನ್ನೈ ಎದುರಿನ ಪಂದ್ಯವನ್ನು ವೀಕ್ಷಿಸಿ ತಂಡವನ್ನು ತೊರೆ ಯಲಿದ್ದಾರೆ. ಮುಂಬಯಿಯಲ್ಲಿ ಸ್ಕ್ಯಾನಿಂಗ್ ನಡೆಸಲಾಗುವುದು. ಉನಾದ್ಕತ್ ಸಮಸ್ಯೆಯನ್ನೂ ಬಿಸಿಸಿಐ ನೋಡಿಕೊಳ್ಳಲಿದೆ’ ಎಂಬುದಾಗಿ ಮಂಡಳಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ರಾಹುಲ್ ಅವರ ತೊಡೆಯಲ್ಲಿ ಊತ ಕಾಣಿಸಿಕೊಂಡಿದೆ. ಇದು ಉಪಶಮನಗೊಳ್ಳಲು 24ರಿಂದ 48 ಗಂಟೆಗಳ ಅಗತ್ಯವಿದೆ. ಅನಂತರವೇ ಸ್ಕ್ಯಾನಿಂಗ್ ಮಾಡಬೇಕಾಗುತ್ತದೆ. ಆಗ ಏಟು ಹಾಗೂ ನೋವಿನ ತೀವ್ರತೆ ತಿಳಿಯುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ಜೈದೇವ್ ಉನಾದ್ಕತ್ ಅವರಿಗೆ ಭುಜದ ನೋವು ಕಾಡತೊಡಗಿದೆ. ಅವರಿಗೂ ಇನ್ನು ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗದು. ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ವೇಳೆ ಫಿಟ್‌ನೆಸ್ ಹೊಂದಲಿದ್ದಾರೆಂದು ಹೇಳಲಿಕ್ಕೂ ಧೈರ್ಯ ಸಾಲದು ಎಂಬುದಾಗಿ ಬಿಸಿಸಿಐ ಅಧಿಕಾರಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.