ಹುಬ್ಬಳ್ಳಿ ಸೆಂಟ್ರಲ್‌ನಲ್ಲಿ ಶೆಟ್ಟರ್‌ಗೆ ಶಿಷ್ಯನ ಸವಾಲು
Team Udayavani, May 4, 2023, 5:22 AM IST
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ ಈಗ ರಾಷ್ಟ್ರ ಮಟ್ಟದ ಗಮನ ಸೆಳೆದಿದೆ. ರಾಜಕೀಯ ಜೀವನದುದ್ದಕ್ಕೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿ ಸ್ಪರ್ಧೆ ಗಿಳಿದಿದ್ದರೆ, ಬಿಜೆಪಿ ಹೊಸಮುಖವಾಗಿ ಪಕ್ಷದ ರಾಜ್ಯ ಪ್ರಧಾನ ಕಾರ್ಯ ದರ್ಶಿ ಮಹೇಶ ಟೆಂಗಿನಕಾಯಿ ಅವರನ್ನು ಕಣಕ್ಕಿಳಿಸಿದೆ. ಪ್ರತಿಷ್ಠೆ-ಗೆಲ್ಲಬೇಕೆಂಬ ಛಲ ಎರಡು ಕಡೆಯಿಂದಲೂ ಕಣದಲ್ಲಿ ರೋಚಕತೆ ಮೂಡಿಸಿದೆ.
ಒಂದು ಕಡೆ ರಾಜಕೀಯ ಜೀವನದಲ್ಲೇ ಬಹುದೊಡ್ಡ ರಾಜಕೀಯ ರಿಸ್ಕ್ ತೆಗೆದುಕೊಂಡ ಶೆಟ್ಟರ್ ಕ್ಷೇತ್ರದಲ್ಲಿ ಗೆಲ್ಲಲೇಬೇಕೆಂಬ ಛಲಕ್ಕೆ ಬಿದ್ದಿದ್ದರೆ, ಕಳೆದ 30 ವರ್ಷಗಳಿಂದ ಕ್ಷೇತ್ರದಲ್ಲಿ ಪಕ್ಷದ್ದೇ ಪ್ರಭುತ್ವವಿದ್ದು, ಅದನ್ನು ಮುಂದುವರಿಸ ಬೇಕು ಎಂಬ ಛಲ ಬಿಜೆಪಿಯದ್ದಾಗಿದೆ. ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ ಎಂಬ ಭಾವನೆ ಹಾಗೂ ಪಕ್ಷದಲ್ಲಿ ಮೂರ್‍ನಾಲ್ಕು ದಶಕ ಗಳಿಂದ ನಿಷ್ಠಾವಂತನಾಗಿ ದುಡಿದರೂ ಅವಮಾನಕರ ರೀತಿ ಯಲ್ಲಿ ಟಿಕೆಟ್ ನಿರಾಕರಿಸಿದ್ದು ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂಬ ಅನಿಸಿಕೆಯ ಸಂಘರ್ಷ ನಡೆದಿದೆ.
ಈ ಕ್ಷೇತ್ರ ಜಗದೀಶ್ ಶೆಟ್ಟರ್ ಹಾಗೂ ಬಿಜೆಪಿಗೆ ಹೊಸದಲ್ಲ. ಆದರೆ ಎರಡು ಕಡೆಗೂ ಇದೀಗ ಆತಂಕ-ಒತ್ತಡ ಹೆಚ್ಚುವಂತೆ ಮಾಡಿದ್ದಂತೂ ನಿಜ. ಶೆಟ್ಟರ್ ಗೆಲುವಿಗಾಗಿ ಕಾಂಗ್ರೆಸ್ ಬಲದ ಜತೆಗೆ ವೈಯಕ್ತಿಕ ವರ್ಚಸ್ಸು, ಸಂಪರ್ಕವನ್ನು ಒರೆಗೆ ಹಚ್ಚಿದ್ದರೆ, ಇದಕ್ಕೆ ತೀವ್ರ ಪೈಪೋಟಿ ಎನ್ನುವಂತೆ ಬಿಜೆಪಿಯವರು ರಾಜ್ಯದ ನಾಯಕರಷ್ಟೇ ಅಲ್ಲದೇ ಕೇಂದ್ರ ನಾಯಕರನ್ನೂ ಒಳ ಗೊಂಡು ಪ್ರಚಾರ- ಕಾರ್ಯತಂತ್ರಕ್ಕಿಳಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಅಬ್ಬರದ ಪ್ರಚಾರಕ್ಕಿಳಿದಿದ್ದರೆ, ಕಾಂಗ್ರೆಸ್ ಅಬ್ಬರಕ್ಕಿಂತ ಮನೆ-ಮನೆ ಪ್ರಚಾರಕ್ಕೆ ಒತ್ತು ನೀಡಿದೆ. ಬಿಜೆಪಿಯ ಲಿಂಗಾಯತ ನಾಯಕರ ಪೈಕಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅನಂತರದಲ್ಲಿ ತಾವೇ ಹಿರಿಯ ನಾಯಕರಾಗಿದ್ದು, ಆರೆಸ್ಸೆಸ್ ಹಿನ್ನೆಲೆ ಹೊಂದಿದ್ದರೂ ಟಿಕೆಟ್ ನಿರಾಕರಿಸಿದ್ದು ಹಾಗೂ ತಮ್ಮ ಈವರೆಗಿನ ಸಾಧನೆಯನ್ನು ಶೆಟ್ಟರ್ ಪ್ರಮುಖವಾಗಿ ಪ್ರಸ್ತಾವಿಸುತ್ತಿದ್ದಾರೆ.
ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಲಿಂಗಾಯತರಿಗೇ ಟಿಕೆಟ್ ನೀಡಿರು ವುದನ್ನು ಮುಂದಿಡುತ್ತಿದೆ. ಜತೆಗೆ ಶೆಟ್ಟರ್ ಅವರಿಗೆ ಈ ಹಿಂದೆಯೇ ಎಲ್ಲ ರೀತಿಯ ಅವಕಾಶ-ಅಧಿಕಾರಗಳನ್ನು ಪಕ್ಷ ನೀಡಿತ್ತು. ಈ ಬಾರಿ ಹೊಸಬರಿಗೆ ಅವಕಾಶ ನೀಡುವ, ಕಾರ್ಯಕರ್ತರನ್ನು ಬೆಳೆಸುವ ನಿರ್ಧಾರದ ಹಿನ್ನೆಲೆಯಲ್ಲಿ ಟಿಕೆಟ್ ಬದಲಾಗಿ ರಾಜ್ಯಸಭಾ ಸದಸ್ಯತ್ವ ಇನ್ನಿತರ ಅವಕಾಶಗಳ ಬಗ್ಗೆ ಭರವಸೆ ನೀಡಿತ್ತು. ಪಕ್ಷದ ವರಿಷ್ಠರು ಮಾತನಾಡಿದರೂ ಅದಕ್ಕೂ ಸ್ಪಂದಿಸದೆ ತದ್ವಿರುದ್ಧ ಸಿದ್ಧಾಂತದ ಕಾಂಗ್ರೆಸ್ ಸೇರಿ ಪಕ್ಷ ದ್ರೋಹ ಮಾಡಿದ್ದು, ಅವರಿಗೆ ತಕ್ಕಪಾಠ ಕಲಿಸಬೇಕು ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಿಕೊಡುತ್ತಿ¤ದೆ. ಜೆಡಿಎಸ್‌ನಿಂದ ಸಿದ್ಧಲಿಂಗೇಶ್ವರಗೌಡ ಬಸನಗೌಡ ಮಹಾಂತ ಒಡೆಯರ್, ಆಪ್‌ನ ವಿಕಾಸ ಸೊಪ್ಪಿನ ಸಹಿತ 16 ಮಂದಿ ಕಣದಲ್ಲಿದ್ದರೂ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದ್ದು, ಗುರು ಶಿ ಷ್ಯರ ನಡುವೆ ಯಾರಿಗೆ ಗೆಲುವು ಎಂಬು ದನ್ನು ನೋಡಬೇಕಿದೆ.
~ ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.