![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 4, 2023, 8:41 AM IST
ಕಲಾದಗಿ: ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಸಚಿವ, ಬೀಳಗಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ| ಮುರುಗೇಶ್ ನಿರಾಣಿ ಭೇಟಿ ನೀಡಿ ಮನೆ-ಮನೆಗೆ ತೆರಳಿ ಮತಯಾಚಿಸಿದರು.
ನಂತರ ಕಾರ್ಯಕರ್ತರ ಸಭೆ ಆಯೋಜಿಸಿ ತಮ್ಮ ಅಭಿವೃದ್ಧಿ ಯೋಜನೆಗಳನ್ನು ನೋಡಿ ಮತ ನೀಡಿ ಆಶೀರ್ವದಿಸುವಂತೆ ಕೋರಿದರು.
ಸೋರಕೊಪ್ಪ, ನಕ್ಕರಗುಂದಿ, ಅಂಕಲಗಿ, ಉದಗಟ್ಟಿ, ಶಾರದಾಳ ಗ್ರಾಮಕ್ಕೆ ಭೇಟಿ ನೀಡಿ ಕಾರ್ಯಕರ್ತರ ಜೊತೆ ಮನೆ-ಮನೆಗೆ ತೆರಳಿ ಕೇಂದ್ರ-ರಾಜ್ಯ ಸರ್ಕಾರದ ವಿವಿಧ ಜನಪರ ಯೋಜನೆಗಳ ಕುರಿತು ತಿಳಿಸಿದರು.
ಬೀಳಗಿ ಕ್ಷೇತ್ರದಲ್ಲಿ ಎಲ್ಲ ಕ್ಷೇತ್ರದಲ್ಲೂ ಸರ್ವಾಂಗೀಣ ಅಭಿವೃದ್ಧಿಯಾಗಿದ್ದು, ತಮ್ಮ ಮತ ಬಿಜೆಪಿಗೆ ಹಾಕುವ ಮೂಲಕ ಆಶೀರ್ವದಿಸಬೇಕು. ಈ ಬಾರಿ 50 ಸಾವಿರ ಮತಗಳ ಅಂತರದಿಂದ ನನ್ನ ಗೆಲುವು ನಿಶ್ಚಿತ. ಬೀಳಗಿ ಮತಕ್ಷೇತ್ರ ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿಸುವ ಗುರಿ ನನ್ನದು ಎಂದರು. ಈ ವೇಳೆ ಹೂವಪ್ಪ ರಾಠೊಡ, ಬಸವರಾಜ ಖೋತ, ಕೆ.ಎಲ್. ಬಿಲಕೇರಿ, ಲಕ್ಷ್ಮಣಗೌಡ ಗೌಡರ, ಹನಮಂತ ಮರೆಮ್ಮನವರ್, ಕೆ.ಆರ್. ಶಿಲ್ಪಿ, ಬಶೆಟ್ಟಿ ಅಂಗಡಿ, ಶ್ರೀಧರ ವಾಘ್, ಗಿರೀಶ ತುಪ್ಪದ ಸೇರಿದಂತೆ ಇತರರು ಇದ್ದರು.
You seem to have an Ad Blocker on.
To continue reading, please turn it off or whitelist Udayavani.