RCB FAN: ಮನಸ್ಸು ಮಾತ್ರವಲ್ಲ ಈತನ ಬೈಕ್ ನಲ್ಲೂ ಆರ್ ಸಿಬಿ ಅಭಿಮಾನದೇ ಹವಾ.. ವಿಡಿಯೋ
Team Udayavani, May 4, 2023, 11:02 AM IST
ಸದ್ಯ ಕ್ರಿಕೆಟ್ ಸುಗ್ಗಿ ಐಪಿಎಲ್ ನಡೆಯುತ್ತಿದೆ. 10 ತಂಡಗಳ ಟಿ-20 ರೋಚಕತೆ ರೋಮಂಚನ ಘಟ್ಟದಲ್ಲಿ ಸಾಗುತ್ತಿದೆ. ಎಲ್ಲಾ ತಂಡಗಳು ತನ್ನದೇ ಆದ ಅಭಿಮಾನಿಗಳ ವರ್ಗವನ್ನು ಹೊಂದಿದೆ. ಅದರಲ್ಲೂ ಪ್ರತಿ ಸಲವೂ ತನ್ನ ಆಟದಿಂದಲೇ ಗಮನ ಸೆಳೆಯುವ ಆರ್ ಸಿಬಿ ತಂಡ ದೊಡ್ಡ ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲೊಂದು.
ಆರ್ ಸಿಬಿ ತಂಡಕ್ಕೆ ಬೆಂಗಳೂರು ಮಾತ್ರವಲ್ಲದೆ ಎಲ್ಲೆಡೆ ಅಪಾರ ಅಭಿಮಾನಿಗಳಿದ್ದಾರೆ. ಆರ್ ಸಿಬಿಯ ಪಂದ್ಯವನ್ನು ನೋಡಲು ಜನ ದೂರದೂರಿನಿಂದ ಬರುತ್ತಾರೆ. ಸಮಯವನ್ನು ಲೆಕ್ಕಿಸದೇ ಟಿಕೆಟ್ ಗಾಗಿ ರಾತ್ರಿ ಹಗಲು ಕಾಯುವುದನ್ನು ನಾವು ನೋಡಿದ್ದೇವೆ. ಆರ್ ಸಿಬಿ ತಂಡದ ಇಂಥದ್ದೇ ಒಬ್ಬ ಅಸಲಿ ಫ್ಯಾನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾನೆ.
ಸ್ವಿಗ್ಗಿ ಡೆಲಿವರಿ ಹುಡುಗನೊಬ್ಬ ಆರ್ ಸಿಬಿ ಫ್ಯಾನ್ ಮಾತ್ರವಲ್ಲದೇ ತನ್ನ ಬೈಕ್ ನ್ನು ಕೂಡ ಆರ್ ಸಿಬಿ ಫ್ಯಾನ್ ಯನ್ನಾಗಿ ಮಾಡಿದ್ದಾನೆ.
ಇದನ್ನೂ ಓದಿ: IPL 2023 ಲಿಟ್ಟನ್ ದಾಸ್ ಬದಲಿಗೆ ವಿಂಡೀಸ್ ಸ್ಪೋಟಕ ಆಟಗಾರನ ಕರೆತಂದ ಕೋಲ್ಕತ್ತಾ
ಪುಲ್ಕಿತ್ ಎಂಬ ಟ್ವಿಟರ್ ಬಳಕೆದಾರರೊಬ್ಬರು ಆರ್ ಸಿಬಿ ಅಭಿಮಾನಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವ ಈ ಫ್ಯಾನ್ ತನ್ನ ಬೈಕ್ ನಲ್ಲಿ ಆರ್ ಸಿಬಿ ಧ್ವಜ, ವಿರಾಟ್ ಕೊಹ್ಲಿ,ಎಬಿಡಿ ಹಾಗೂ ಫಾಫ್ ಡು ಪ್ಲೆಸಿಸ್ ಅವರ ಸ್ಟಿಕರ್ ನ್ನು ಹಾಕಿಕೊಂಡಿದ್ದಾರೆ. 2008 ರಿಂದ ಆರ್ ಸಬಿ ಅಭಿಮಾನಿಯೆಂದು ಬರೆದುಕೊಂಡಿದ್ದಾನೆ.
ಪೆಟ್ರೋಲ್ ಟ್ಯಾಂಕ್ ಬಳಿ ʼಈ ಸಲ ಕಪ್ ನಮ್ದೇʼ, ʼಪ್ಲೇ ಬೋಲ್ಡ್ʼ ಎಂದು ಬರೆದ ಸ್ಟಿಕರ್ ಹಾಕಿಕೊಂಡಿದ್ದಾರೆ. ಬೈಕ್ ನ ಹಿಂದೆ ಬೇಗ ಕಪ್ ತನ್ನಿ ಎಂದು ಕೊಹ್ಲಿ ಪೋಟೋ ಹಾಕಿಕೊಂಡಿದ್ದಾರೆ. ನಾನು ಎಬಿಡಿ ಹಾಗೂ ಕೊಹ್ಲಿ ಅವರ ಅಭಿಮಾನಿ ಎಂದು ಹೇಳಿದ್ದಾನೆ.
ಸದ್ಯ ಈ ವಿಡಿಯೋ 1.2 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡು ವೈರಲ್ ಆಗಿದೆ. ನೆಟ್ಟಿಗರು ಈತನಿಗೆ ಸ್ವಿಗಿ ಅವರು ಉಚಿತ ಟಿಕೆಟ್ ಕೊಡಿಸಿ ಎಂದಿದ್ದಾರೆ. 15 ವರ್ಷದಿಂದ ಟ್ರೋಫಿ ಇಲ್ಲದಿದ್ರೂ ಈತ ಸಪೋರ್ಟ್ ಮಾಡುತ್ತಿದ್ದಾನೆ ಗ್ರೇಟ್ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಈತ ಆರ್ ಸಿಬಿ ದೊಡ್ಡ ಅಭಿಮಾನಿಯೆಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
Probably the biggest RCB fan ❤ pic.twitter.com/cqVc6jSE64
— Pulkit🇮🇳 (@pulkit5Dx) May 2, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್ ಇದ್ರು ಸಿಕ್ಕಿದ್ದು ಕೇವಲ 155 ಮತ!!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್!
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.