ಉಡುಪಿಯ ಸಮಗ್ರ ಅಭಿವೃದ್ಧಿಯ ಪ್ರಣಾಳಿಕೆ: ಯಶ್‌ಪಾಲ್ ಸುವರ್ಣ
Team Udayavani, May 4, 2023, 5:38 PM IST
ಉಡುಪಿ: ಬಿಜೆಪಿ ಅಭ್ಯರ್ಥಿ ಯಶ್‌ಪಾಲ್ ಸುವರ್ಣ ಮತ್ತು ಶಾಸಕ ಕೆ. ರಘುಪತಿ ಭಟ್ ಅವರು ಉಡುಪಿ
ವಿಧಾನ ಸಭಾ ಕ್ಷೇತ್ರದ ಪ್ರಣಾಳಿಕೆಯ ಜತೆಗೆ ಮಲ್ಪೆ ಬಂದರು ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಗೆ
ಆದ್ಯತೆ ನೀಡುವ ಪ್ರತ್ಯೇಕ ಪ್ರಣಾಳಿಕೆಯನ್ನು ಬುಧವಾರ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಬಿಡುಗಡೆ ಮಾಡಿದರು.
ಉಡುಪಿ ಕ್ಷೇತ್ರದಿಂದ ಮೀನುಗಾರಿಕೆಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದ ಹೆಗ್ಗಳಿಕೆಯು ಇವರದ್ದಾಗಿದೆ.
ಅಭ್ಯರ್ಥಿ ಯಶ್‌ಪಾಲ್ ಎ.ಸುವರ್ಣ ಮಾತನಾಡಿ, ಜಿಲ್ಲೆಗೊಂದು ಸುಸಜ್ಜಿತ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ, ನಗರದಲ್ಲಿ ಬಹುಮಹಡಿ ಪಾರ್ಕಿಂಗ್ ಸಂಕೀರ್ಣ, ಕಲ್ಸಂಕ ಜಂಕ್ಷನ್‌ನಲ್ಲಿ ಸಿಗ್ನಲ್ ರಹಿತ ಮಧ್ವಾಚಾರ್ಯ ವೃತ್ತ ನಿರ್ಮಾಣ, 13 ಕಡೆ ಸ್ಮಾರ್ಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ, ನಗರದ 35 ವಾರ್ಡ್‌ಗಳಲ್ಲಿ ವೈಜ್ಞಾನಿಕ ಒಳಚರಂಡಿ ವ್ಯವಸ್ಥೆ ನಿರ್ಮಾಣ, ಬ್ರಹ್ಮಾವರದಲ್ಲಿ ಸುಸಜ್ಜಿತ ಒಳಚರಂಡಿ ವ್ಯವಸ್ಥೆ ನಿರ್ಮಾಣ, ವಾರಂಬಳ್ಳಿಯಲ್ಲಿ ಇಎಸ್‌ಐ ಆಸ್ಪತ್ರೆ ನಿರ್ಮಾಣ, ಬ್ರಹ್ಮಾವರ ಪುರಸಭೆ ರಚನೆ, ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಸ್ಥಾಪನೆ, ಮಲ್ಪೆ ಬಂದರು ಮತ್ತು ಮೀನುಗಾರಿಕೆ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ನಾವು ಈ ಹಿಂದೆ ನೀಡಿದ್ದ ಭರವಸೆಗಳಲ್ಲಿ ಶೇ.80ಕ್ಕೂ ಅಧಿಕ ಈಡೇರಿಸಿದ್ದೇವೆ. ಡಾ| ವಿ.ಎಸ್. ಆಚಾರ್ಯರ ದೂರದೃಷ್ಟಿ ಯೋಜನೆಯನ್ನು ಸಾಕಾರ ಮಾಡುವ ಕೆಲಸ ಮಾಡಿದ್ದೇವೆ. ಅದನ್ನು ಯಶ್‌ಪಾಲ್ ಸುವರ್ಣ ಅವರು ಮುಂದುವರಿಸಿಕೊಂಡು ಹೋಗಲಿದ್ದಾರೆ ಎಂದರು.
ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಗ್ರಾಮಾಂತರ ಅಧ್ಯಕ್ಷೆ ವೀಣಾ ನಾಯ್ಕ, ಜಿಲ್ಲಾ ಬಿಜೆಪಿ ವಕ್ತಾರ
ರಾಘವೇಂದ್ರ ಕಿಣಿ, ಜಿಲ್ಲಾ ಪ್ರಣಾಳಿಕೆ ಸಮಿತಿ ಸಂಚಾಲಕ ಅಂಡಾರು ದೇವಿಪ್ರಸಾದ್ ಶೆಟ್ಟಿ, ರಾಜ್ಯ ಬಿಜೆಪಿ ಎಸ್. ಸಿ
ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ನಗರ ಬಿಜೆಪಿಯ ಮಂಜುನಾಥ್ ಮಣಿಪಾಲ್, ದಿನೇಶ್ ಅಮೀನ್ ಉಪಸ್ಥಿತರಿದ್ದರು.
ಪ್ರಣಾಳಿಕೆಯ ಪ್ರಮುಖಾಂಶಗಳು
* ಬ್ರಹ್ಮಾವರದಿಂದ ಕರ್ಜೆಯವರೆಗೂ ಆಗಿರುವ ಚತುಷ್ಪಥ ರಸ್ತೆಯನ್ನು ಹೆಬ್ರಿ ವರೆಗೂ ವಿಸ್ತರಣೆ
* ಮಲ್ಪೆಯಲ್ಲಿ ಮಧ್ವಾಚಾರ್ಯ ಥೀಮ್‌ಪಾರ್ಕ್
* ಮಣಿಪಾಲದಲ್ಲಿ ವಿಶೇಷ ಆಹಾರ ವಲಯ
* ಸರ್ಣನದಿ ತೀರದ ದ್ವೀಪದಲ್ಲಿ ಅಮ್ಯೂಸೆ¾ಂಟ್ ಪಾರ್ಕ್
* ಉಡುಪಿಯಲ್ಲಿ ಡಿಜಿಟಲ್ ಇನ್‌ಫ್ರಾಸ್ಟಕ್ಚರ್ ಡೇವಲಪೆ¾ಂಟ್
* ಪರಿಸರ ಸ್ನೇಹಿ ಕೈಗಾರಿಕೆ ವಲಯ
*ಯುವಕರಿಗೆ ಉದ್ಯೋಗ ಖಾತ್ರಿ
* ಪ್ರಾಸೋದ್ಯಮಕ್ಕೆ ಉತ್ತೇಜನ
* ಉಡುಪಿ, ಬ್ರಹ್ಮಾವರದಲ್ಲಿ ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ
* ನೇಕಾರಿಕೆಗೆ ಉತ್ತೇಜನ
* ಫರ್ನಿಚರ್ ಹಬ್
* ಸಹಕಾರಿ ಸೌಧ ನಿರ್ಮಾಣ
* ಶಬರಿಮಲೆಯಲ್ಲಿ ಕನ್ನಡ ಭವನ, ವಿಶೇಷ ರೈಲು ವ್ಯವಸ್ಥೆ
* 400 ಮನೆ ನಿರ್ಮಾಣ
* ತಾಜಾ ಮೀನಿನ ಊಟದ ಮತ್ಸé ಕ್ಯಾಂಟೀನ್
* ಪೌಷ್ಠಿಕ ಆರೋಗ್ಯ ಕೇಂದ್ರ
* ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್
* ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ
* ಧಾರ್ಮಿಕ ಕೇಂದ್ರ- ಬೀಚ್ ಸಂಪರ್ಕ ಕಾರಿಡಾರ್
ಮೀನುಗಾರಿಕೆ ಅಭಿವೃದ್ಧಿಗೆ ಆದ್ಯತೆ
* ಮೀನುಗಾರರ ಸಂಘಕ್ಕೆ ಬಹು ಮಹಡಿ ಪಾರ್ಕಿಂಗ್ ವ್ಯವಸ್ಥೆ
*ಯಾಂತ್ರಿಕ ಬೋಟುಗಳಿಗೆ ದಿನಕ್ಕೆ 400 ಲೀ.ಡೀಸೆಲ್ ಸಬ್ಸಿಡಿ
*ನಾಡದೋಣಿ ಮೀನುಗಾರರಿಗೆ ನಿರಂತರವಾಗಿ ತಿಂಗಳಿಗೆ 500 ಲೀ.ಸೀಮೆ ಎಣ್ಣೆ
*ನಾಡದೋಣಿ ತಂಗುದಾಣಕ್ಕೆ 3ನೇ ಹಂತದ ಬಳಿ ಜಟ್ಟಿ ನಿರ್ಮಾಣ
*ಅಂತಾರಾಷ್ಟ್ರೀಯ ಮಟ್ಟದ ಫಿಶ್ ಅಕ್ವೇರಿಯಂ ನಿರ್ಮಾಣ
*ಮಹಿಳಾ ಮೀನುಗಾರರಿಗೆ ಮೀನು ಒಣಗಿಸುವ ಜಾಗವನ್ನು 30 ವರ್ಷ ಗುತ್ತಿಗೆ ವಿಸ್ತರಣೆ
*ಮೀನುಗಾರಿಕೆ ಬಂದರು ಸ್ವತ್ಛತೆ ನಿರ್ವಹಣೆ ಸಂಘಕ್ಕೆ ಬಿಡುವುದು
* ಕೊಚ್ಚಿನ್ ಶಿಪ್‌ಯಾರ್ಡ್‌ನ ವಿಚಾರದಲ್ಲಿ ಮೀನುಗಾರರ ಸಂಘಗಳ ನಿರ್ಣಯಕ್ಕೆ ಬದ್ಧರಾಗಿರುವುದು.
*ಮೀನುಗಾರ ಮಹಿಳೆಯರಿಗೆ ಶೂನ್ಯ ಬಡ್ಡಿಯಲ್ಲಿ 5 ಲ.ರೂ.ನಿಂದ 20 ಲ.ರೂ.ವರೆಗೆ ಗುಂಪು ಸಾಲ ಸೌಲಭ್ಯ
*ಮೀನುಗಾರರಿಗೆ ಮತ್ಸಾéಶ್ರಯ ಮನೆ ನಿರ್ಮಾಣಕ್ಕೆ ಸಹಾಯಧನ 1.2 ಲ.ರೂ.ನಿಂದ 5 ಲ.ರೂ.ಗೆ ಏರಿಕೆ
*ಮಹಿಳಾ ಮೀನುಗಾರರಿಗೆ ವಾಹನ ಸೌಲಭ್ಯ
*ಮೀನುಗಾರ ಸಹಕಾರ ಸಂಘಗಳಿಗೆ ವಿಶೇಷ ಪ್ರೋತ್ಸಾಹಧನ
* ಸೀ ಆ್ಯಂಬುಲೆನ್ಸ್ ಸೇವೆ
*ಬಂದರಿನಲ್ಲಿ ಮಹಿಳಾ ಮೀನುಗಾರರಿಗೆ ವಿಶ್ರಾಂತಿ ಕೊಠಡಿ
*ಮೀನುಗಾರಿಕಾ ವಿಶೇಷ ಕೈಗಾರಿಕಾ ವಲಯ
*ಹಳೇ ಬೋಟ್‌ಗಳ ಮರುನಿರ್ಮಾಣಕ್ಕೆ ಸಹಾಯಧನ
* ಡ್ರೆಜ್ಜಿಂಗ್ ಯಂತ್ರಗಳ ಖರೀದಿಗೆ ಸಹಾಯಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.