ಸ್ಮಾರ್ಟ್ ಮತದಾರರ ಒಲವು ಗಳಿಸುವತ್ತ ಇಬ್ಬರೂ ಉಮೇದುವಾರರ ಚಿತ್ತ
Team Udayavani, May 5, 2023, 7:12 AM IST
ಮಂಗಳೂರು: ಸದ್ಯ ಕ್ಷೇತ್ರದಲ್ಲಿ ಸ್ಮಾರ್ಟ್ ಸಿಟಿ ಪ್ರಗತಿಯ ಸದ್ದೇ ಜೋರು. ನೇರ ಹಣಾಹಣಿಯಲ್ಲಿರುವ ಬಿಜೆಪಿ ಹಾಗೂ ಕಾಂಗ್ರೆಸ್ ನ ಅಭ್ಯರ್ಥಿ ಗಳಿಬ್ಬರೂ ಸ್ಮಾರ್ಟ್ ಸಿಟಿಯ ಮೇಲ್ಮೆಯನ್ನೇ ತಮ್ಮ ಪ್ರಚಾರದ ಪ್ರಮುಖ ದಾಳವಾ ಗಿಸಿಕೊಂಡಿದ್ದಾರೆ. ಈ ಯೋಜನೆ “ನನ್ನ ಕನಸಿನ ಕೂಸು’ ಎಂದು ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ಹೇಳುತ್ತಿದ್ದರೆ, ಈ “ಅಭಿವೃದ್ಧಿಯ ಪರ್ವ ನನ್ನ ಅವಧಿಯದ್ದು’ ಎಂಬುದು ಬಿಜೆಪಿಯ ವೇದವ್ಯಾಸ ಕಾಮತ್ ಅವರ ವಾದ.
ಎರಡನೇ ಅವಧಿಗೆ ಇಬ್ಬರೂ ಮುಖಾಮುಖೀಯಾಗುತ್ತಿದ್ದು, 2013ರ ಫಲಿತಾಂಶವನ್ನು ಮರುಕಳಿಸುವ ಯತ್ನದಲ್ಲಿ ಕಾಂಗ್ರೆಸ್ ಶ್ರಮಿಸುತ್ತಿದ್ದರೆ, 2018ರ ಫಲಿತಾಂಶಕ್ಕಿಂತ ಹೆಚ್ಚಿನ ಅಂತರದ ಗೆಲುವು ದಕ್ಕಿಸಿಕೊಳ್ಳುವ ಹುಮ್ಮ ಸ್ಸು ಬಿಜೆಪಿ ಪಾಳಯದ್ದು. ಕಳೆದ ಚು®ಾವಣೆಯಲ್ಲಿ ಅಭಿವೃದ್ಧಿ ಸಾಧನೆಗಳನ್ನು ಮೀರಿ ಭಾವನಾತ್ಮಕ ಅಂಶಗಳು ಹೆಚ್ಚು ಪರಿಣಾಮ ಬೀರಿದ್ದವು. ಹಾಗಾಗಿ ಈ ಬಾರಿಯೂ ಆ ಅಂಶಗಳು ಎಷ್ಟರಮಟ್ಟಿಗೆ ಪರಿಣಾಮ ಬೀರೀತು ಎಂಬುದೂ ಗೆಲುವು-ಸೋಲಿನ ಲೆಕ್ಕಾಚಾರಕ್ಕೂ ಪೂರಕವಾಗಬಹುದು.
ಮತಗಳ ಲೆಕ್ಕಾಚಾರ
ಕ್ಷೇತ್ರದಲ್ಲಿ ಬಿಲ್ಲವ ಹಾಗೂ ಕ್ರೈಸ್ತ ಮತದಾರರು ಅಧಿಕ. ಹಾಗಾಗಿ ಉಭಯ ಪಕ್ಷಗಳದ್ದೂ ಇವರ ಮೇಲೆಯೇ ಕಣ್ಣು. ಉಳಿದಂತೆ ಮುಸ್ಲಿಮರು, ಬಂಟರು, ಬ್ರಾಹ್ಮಣರು, ದಲಿತರು, ಮೊಗವೀರ ಮತದಾರರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಎಲ್ಲರನ್ನೂ ಒಲಿಸುವ ಪ್ರಚಾರ ಬಿರುಸಿನಿಂದ ಸಾಗಿದೆ.
ಬಿಜೆಪಿಯಿಂದ ಹಾಲಿ ಶಾಸಕ ವೇದವ್ಯಾಸ ಕಾಮತ್ ಅವರಿಗೆ ಟಿಕೆಟ್ ಎಂಬುದು ಖಾತ್ರಿಯಾಗಿದ್ದರೂ ಘೋಷಣೆ ಆದದ್ದು ತಡವಾಗಿ. ಅಷ್ಟರಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ಗಳನ್ನು ಹಿಡಿದು ಒಂದು ಸುತ್ತಿನ ಮನೆ ಭೇಟಿ ಮುಗಿಸಿದ್ದರೆ, ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿ ಅಭ್ಯರ್ಥಿ ಹಾಗೂ ಕಾರ್ಯಕರ್ತರು ತಮ್ಮ ಸಾಧನೆಯ ರಿಪೋರ್ಟ್ ಕಾರ್ಡ್ ಹಿಡಿದು ಮನೆ ಪ್ರಚಾರವನ್ನು ಬಿರುಸುಗೊಳಿಸಿದರು.
ಕಾಂಗ್ರೆಸ್ ಪಾಲಿಗೆ ಕ್ರೈಸ್ತ ಮೀಸಲು ಕ್ಷೇತ್ರವೆಂಬಂತೆ ಇರುವಲ್ಲಿ ಈ ಬಾರಿ ಬಿಲ್ಲವ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಲು ಸಾಕಷ್ಟುಚರ್ಚೆ ನಡೆದಿತ್ತು. ಅಂತಿಮವಾಗಿ ಜೆ.ಆರ್. ಲೋಬೋ ಅವರಿಗೇ ಅವ ಕಾಶ ಸಿಕ್ಕಿತು. ಬಿಲ್ಲವ ಸಮುದಾಯ ಮುನಿಸಿಕೊಂಡಾರೆಂಬ ದೃಷ್ಟಿಯಲ್ಲಿ ಅದೇ ಸಮು ದಾಯದ ಪದ್ಮರಾಜ್‌ಗೆ ಕೆಪಿಸಿಸಿ ಪದಾಧಿಕಾರಿ ಸ್ಥಾನ ನೀಡಲಾಯಿತು.
1957ರಿಂದ 2018ರ ವರೆಗಿನ 14 ಚುನಾವಣೆಗಳಲ್ಲಿ 8 ಬಾರಿ ಕಾಂಗ್ರೆಸ್ ಹಾಗೂ 6 ಬಾರಿ ಬಿಜೆಪಿ ಜಯಿಸಿದೆ. 1994ರಿಂದ 2008ರವರೆಗೆ ಬಿಜೆಪಿಯ ಭದ್ರಕೋಟೆ ಎಂದಾಗಿದ್ದ ಕ್ಷೇತ್ರದಲ್ಲಿ 2013ರಲ್ಲಿ 20 ವರ್ಷಗಳ ಬಳಿಕ ಕಾಂಗ್ರೆಸ್ ಬಾವುಟ ಹಾರಿತು. ಆದರೆ 2018ರಲ್ಲಿ ಮತ್ತೆ ಬಿಜೆಪಿ ಜಯವನ್ನು ಕೈಯಿಂದ ಕಸಿದುಕೊಂಡಿತು. 2013ರಲ್ಲಿ ಕಾಂಗ್ರೆಸ್‌ನ ಜೆ.ಆರ್. ಲೋಬೋ ಅವರು ಬಿಜೆಪಿಯ 4 ಅವಧಿಯ ಶಾಸಕ ರಾಗಿದ್ದ ಯೋಗೀಶ್ ಭಟ್ ಅವರಿಂದ 12275 ಮತಗಳ ಅಂತರದಿಂದ ಗೆದ್ದಿದ್ದರೆ, 2018ರಲ್ಲಿ ಬಿಜೆಪಿಯ ವೇದವ್ಯಾಸ ಕಾಮತ್ ಅವರು ಕಾಂಗ್ರೆಸ್‌ನ ಜೆ.ಆರ್. ಲೋಬೋ ಎದುರು 16075 ಮತಗಳ ಅಂತರದಿಂದ ಜಯಸಾಧಿಸಿದ್ದರು.
ಜಿಲ್ಲೆಯ ಕೇಂದ್ರಸ್ಥಾನ ಮಂಗಳೂರು ಆಗಿದ್ದರೂ, ಕಳೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ. 67.46 ಮತದಾನವಾಗಿತ್ತು. 2013ರಲ್ಲಿ ಶೇ. 64.52 ರಷ್ಟಾಗಿತ್ತು. ಹಾಗಾಗಿ ಉಭಯ ಪಕ್ಷ ಗಳೂ ಈ ಬಾರಿ ಹೆಚ್ಚಿನ ಮತದಾರರನ್ನು ಮತಗಟ್ಟೆಗೆ ಕರೆತರುವತ್ತಲೂ ಗಮನ ಹರಿಸಿವೆ.
ಕಣದಲ್ಲಿರುವ ಅಭ್ಯರ್ಥಿಗಳು 8
- ವೇದವ್ಯಾಸ್ ಕಾಮತ್ (ಬಿಜೆಪಿ)
- ಜೆ.ಆರ್. ಲೋಬೋ (ಕಾಂಗ್ರೆಸ್)
- ಸುಮತಿ ಎಸ್. ಹೆಗ್ಡೆ (ಜೆಡಿಎಸ್)
- ಸಂತೋಷ್ ಕಾಮತ್ (ಎಎಪಿ)
- ಧರ್ಮೇಂದ್ರ (ಅ.ಭಾ.ಹಿಂ.ಮಹಾಸಭಾ)
- ವಿನ್ನಿ ಪಿಂಟೋ (ಕರ್ನಾಟಕ ರಾಷ್ಟ್ರ ಸಮಿತಿ)
- ಸುಪ್ರೀತ್ ಕುಮಾರ್ ಪೂಜಾರಿ (ಜನಹಿತ ಪಕ್ಷ)
- ಕೆ.ಎಸ್. ಪೈ (ಪಕ್ಷೇತರ)
ಲೆಕ್ಕಾಚಾರ ಏನು?
ಒಂದೇ ಪಕ್ಷಕ್ಕೆ ಅಂಟಿ ಕೊಳ್ಳುವ ಧೋರಣೆ ಇಲ್ಲ. ಇದು ಕಾಂಗ್ರೆಸ್‌ಗೆ ಅನು ಕೂಲ. ಅಭಿವೃದ್ಧಿ ಮತ್ತು ಸಮು ದಾಯದಲ್ಲಿ ಯಾವುದು ಮೇಲುಗೈ ಸಾಧಿಸುತ್ತದೆ ಎಂಬುದೂ ಫಲಿತಾಂಶವನ್ನು ನಿರ್ಧರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.