22 ಕೋಟಿ ರೂ. ಮನೆ ಕಳೆದುಕೊಂಡ ಆಸೀಸ್ ದಂಪತಿ
Team Udayavani, May 5, 2023, 6:42 AM IST
ಕ್ಯಾನ್ಬೆರಾ: ಸ್ವಂತ ಮನೆ ಎಂಬುದು ಎಷ್ಟೋ ಜನರ ಕನಸು.. ಆ ಕನಸನ್ನು ಸಾಕಾರಗೊಳಿಸಲು, ಕಷ್ಟ ಪಟ್ಟು ದುಡಿದು, ಒಂದೊಂದು ರೂಪಾಯಿ ಕೂಡಿಟ್ಟು ಖರೀದಿಸಿದ ಮನೆಯನ್ನು ಏಕಾಏಕಿ ಯಾರೋ ನಿಮ್ಮದಲ್ಲ ಎಂದರೆ ಪರಿಸ್ಥಿತಿ ಹೇಗಿರುತ್ತದೆ ? ಅಂಥದ್ದೇ ಪರಿಸ್ಥಿತಿಯನ್ನು ಆಸ್ಟ್ರೇಲಿಯಾದ ದಂಪತಿಯೊಬ್ಬರು ಎದುರಿಸಿದ್ದು, 22 ಕೋಟಿ ರೂ. ಮೌಲ್ಯದ ಅವರ ಕನಸಿನ ಮನೆಯಿಂದ ಅವರನ್ನೇ ಹೊರಗಾಕಲಾಗಿದೆ.
ಹೌದು, ಮರ್ಮೈಡ್ ಬೀಚ್ ಎದುರಿಗಿರುವ ಮನೆಯೊಂದನ್ನು ಜೆಸ್-ಜಾಕಿ ಎನ್ನುವ ದಂಪತಿ 5 ವರ್ಷದ ಹಿಂದೆ 9.86 ಕೋಟಿ ರೂ. ನೀಡಿ ಹರಾಜಿನಲ್ಲಿ ಖರೀದಿಸಿದ್ದರು. ಕಳೆದ 5 ವರ್ಷಗಳಿಂದ ಅಲ್ಲಿಯೇ ಜೀವನ ನಡೆಸಿದ್ದರು. ಆದರೀಗ ಆ ನಿವಾಸದ ಮೌಲ್ಯ 22 ಕೋಟಿ ರೂ.ಗಳಿಗೆ ಹೆಚ್ಚಿದೆ. ಈ ವೇಳೆ ಹಿಂದ್ ಇಸ್ಸಾ ಎಂಬವರು ಈ ನಿವಾಸ ತಮ್ಮದು ಎಂದು ತಮ್ಮ ಪುತ್ರಿಯ ಮೂಲಕ ಹಕ್ಕು ಸಲ್ಲಿಸಿದ್ದಾರೆ.
ಇದರಿಂದ ಆತಂಕಕ್ಕೊಳಗಾದ ದಂಪತಿ ಕಾನೂನಿನ ಮೊರೆ ಹೋದಾಗ, ಇಸ್ಸಾ ಅವರ ಸಹಿಯನ್ನು ನಕಲು ಮಾಡಿ ಯಾರೋ ವಂಚಕರು ದಂಪತಿಗೆ ಮನೆ ಮಾರಾಟ ಮಾಡಿದ್ದಾರೆ, ವಾಸ್ತವದಲ್ಲಿ ಇಂದಿಗೂ ಮನೆಯ ವಾರಸುದಾರರು ಇಸ್ಸಾ ಎಂದೇ ನ್ಯಾಯಾಲಯ ತೀರ್ಪು ನೀಡಿದೆ. ಆದಾಗ್ಯೂ ದಂಪತಿಗೆ ಅನ್ಯಾಯವಾಗಿರುವುದನ್ನು ಪರಿಗಣಿಸಿ, ಸ್ಥಳೀಯ ಸರಕಾರಕ್ಕೆ ಪರಿಹಾರ ಒದಗಿಸುವುದಂತೆ ಸೂಚನೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.