ಇಂದು ವಿವಾದಿತ ದ ಕೇರಳ ಸ್ಟೋರಿ ಬಿಡುಗಡೆ
Team Udayavani, May 5, 2023, 7:00 AM IST
ಹೊಸದಿಲ್ಲಿ: ಬಿಡುಗಡೆ ಮುನ್ನವೇ ವಿವಾದಕ್ಕೆ ಈಡಾಗಿರುವ ಸುದೀಪೊ ಸೇನ್ ನಿರ್ದೇಶನದ “ದ ಕೇರಳ ಸ್ಟೋರಿ’ ಶುಕ್ರವಾರ (ಮೇ 5) ಬಿಡುಗಡೆಯಾಗಲಿದೆ. ಈ ಸಿನೆಮಾಗೆ ಸಿಬಿಎಫ್ಸಿ (ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ) ನೀಡಿರುವ ಎ ಪ್ರಮಾಣಪತ್ರವನ್ನು ವಿರೋಧಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಗುರುವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿತು.
ಈ ಕುರಿತ ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸಲು ಕೇರಳ ಉಚ್ಚ ನ್ಯಾಯಾಲಯಕ್ಕೆ ಆದೇಶಿಸಬೇಕೆಂಬ ಮನವಿಯನ್ನೂ ನಿರಾಕರಿಸಿತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ, “ಈಗಾಗಲೇ ಸಿಬಿಎಫ್ಸಿ ಪ್ರಮಾಣಪತ್ರ ನೀಡಿದೆ. ನೀವು ಸಿನೆಮಾದ ನಟ, ನಟಿಯರು, ನಿರ್ಮಾಪಕರ ಬಗ್ಗೆ ಯೋಚಿಸಬೇಕು. ಇದಕ್ಕಾಗಿ ಅವರು ತಮ್ಮ ಶ್ರಮವನ್ನು ಹಾಕಿರುತ್ತಾರೆ. ಒಂದು ಚಿತ್ರಕ್ಕೆ ತಡೆ ತರುವ ಯೋಚನೆ ಮಾಡುವ ಮುನ್ನ ನೀವು ಜಾಗರೂಕವಾಗಿ ಯೋಚಿಸಬೇಕು. ಸಿನೆಮಾ ಚೆನ್ನಾಗಿ ಇಲ್ಲದಿದ್ದರೆ ಮಾರುಕಟ್ಟೆಯೇ ಇದನ್ನು ನಿರ್ಧರಿಸುತ್ತದೆ. ನಾವು ಇದನ್ನು ನಿರ್ಧರಿಸುವುದಿಲ್ಲ,’ ಎಂದು ಹೇಳಿತು. ಜಮೀಯತ್ ಉಲೇಮಾ-ಎ-ಹಿಂದ್ ಸಹಿತ ಕೆಲವು ಸಂಘಟನೆಗಳು ಸಿನೆಮಾ ಬಿಡುಗಡೆಗೆ ತಡೆಕೋರಿ ಅರ್ಜಿ ಸಲ್ಲಿಸಿದ್ದವು.
ಹಿಂದೂ ಯುವತಿಯರನ್ನು ಗುರಿ ಯಾಗಿಸಿಕೊಂಡು ನಡೆಯುವ ಮತಾಂತರ ಮತ್ತು ಅನಂತರ ಐಸಿಸ್ ಸೇರ್ಪಡೆಗೆ ಬ್ರೇನ್ ವಾಶ್ ಮಾಡುವ ನೈಜ ಕಥೆಯನ್ನು ಆಧರಿಸಿ ಈ ಸಿನೆಮಾ ನಿರ್ಮಿಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್ ಎಂಟ್ರಿ ನೇಮಕಾತಿ
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.