ಹಿಂದುಗಳ ಶಕ್ತಿ ದಮನಿಸುವ ಕಾಂಗ್ರೆಸ್‌ಗೆ ತಕ್ಕ ಪಾಠ: ಮುರುಗೇಶ ನಿರಾಣಿ

ಜನರ ವಿಶ್ವಾಸ ಕಳೆದುಕೊಂಡ ಬೀಳಗಿ ಕಾಂಗ್ರೆಸ್‌ ಬಸ್‌ ಚಾಲಕ ;ಕ್ಷೇತ್ರದ ಮನೆಗೂ ಕುಡಿಯುವ ನೀರು

Team Udayavani, May 5, 2023, 12:18 PM IST

ಹಿಂದುಗಳ ಶಕ್ತಿ ದಮನಿಸುವ ಕಾಂಗ್ರೆಸ್‌ಗೆ ತಕ್ಕ ಪಾಠ: ಮುರುಗೇಶ ನಿರಾಣಿ

ಬಾಗಲಕೋಟೆ: ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಮಹತ್ವಾಕಾಂಕ್ಷೆಯ ಜಲಜೀವನ ಮಿಷನ್‌ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ
ನೀರನ್ನು ಮನೆ ಬಾಗಿಲಿಗೆ ತಲುಪಿಸಿದ ತೃಪ್ತಿ ನನಗಿದೆ ಎಂದು ಸಚಿವ, ಬೀಳಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಹೇಳಿದರು.

ಬೀಳಗಿ ಕ್ಷೇತ್ರದ ಕಂದಗಲ್‌ ಹಾಗೂ ಹೊನ್ನಿಹಾಳ ಎಲ್‌.ಟಿ.ಯಲ್ಲಿ ನಡೆದ ರೋಡ್‌ ಶೋ ಹಾಗೂ ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು. 2008-13ರಲ್ಲಿಯೇ ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದ್ದೆ. ಮೊದಲನೆಯ ಹಂತದಲ್ಲಿ ನದಿಯಿಂದ ನೀರನ್ನು ತಂದು ಗ್ರಾಮಗಳಿಗೆ ತಲುಪಿಸಿದ್ದೇವು. ಈಗ ಎರಡನೆಯ ಹಂತದಲ್ಲಿ ಜಲ-ಜೀವನ್‌ ಮಿಷನ್‌ ಯೋಜನೆಯಡಿ ಮತಕ್ಷೇತ್ರದ ಎಲ್ಲ ಗ್ರಾಮಗಳ ಪ್ರತಿ ಮನೆಯ ಬಾಗಿಲವರೆಗೂ ಪೈಪ್‌ಲೈನ್‌ ಅಳವಡಿಸಿ ನೀರು ಪೂರೈಸುವ ಎರಡನೆಯ ಹಂತದ
ಯೋಜನೆ ಜಾರಿಗೊಳಿಸಿದ್ದೇವೆ. ಇದು ಇಷ್ಟಕ್ಕೇ ನಿಲ್ಲಲಾರದು. ಮೂರನೇ ಹಂತದಲ್ಲಿ ಮತಕ್ಷೇತ್ರದ ಪ್ರತಿ ಮನೆಯ ಅಡುಗೆ ಮನೆಗೆ ಶುದ್ಧ ನೀರನ್ನು ದಿನದ 24 ಗಂಟೆ ತಲುಪಿಸುವ ಗುರಿ ಇದೆ ಎಂದರು.

ಜೆಜೆಎಂ ಅಡಿಯಲ್ಲಿ ಇಲ್ಲಿಯವರೆಗೆ 101 ಜನವಸತಿ ಸ್ಥಳಗಳಿಗೆ ಸಮರ್ಪಕ ನೀರು ಪೂರೈಕೆ ಮಾಡಲಾಗುತ್ತಿದೆ. ಕಳೆದ 5 ವರ್ಷಗಳಲ್ಲಿ ಮೇಲ್ಮಟ್ಟದ ಜಲಸಂಗ್ರಹಾಲಯ ನಿರ್ಮಾಣ, ಜಲಶುದ್ಧೀಕರಣ ಘಟಕಗಳ ನಿರ್ಮಾಣ, ಪೈಪ್‌ಲೈನ್‌ ಜೋಡಣೆ, ಶಾಲೆ-ಕಾಲೇಜು, ಅಂಗನವಾಡಿ ಇತ್ಯಾದಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ, ಬಹುಗ್ರಾಮ ಕುಡಿಯುವ ನೀರಿನ ಪೂರೈಕೆ ಹಾಗೂ ನಿರ್ವಹಣೆಗಾಗಿ ಸೇರಿ ಒಟ್ಟು 162.44 ಕೋಟಿ ಅನುದಾನವನ್ನು ವಿನಿಯೋಗಿಸಲಾಗಿದೆ ಎಂದು ಅವರು ಹೇಳಿದರು.

ಬಸ್‌ ಕಂಡಿಶನ್‌ ಹಾಗೂ ಚಾಲಕ ಚೆನ್ನಾಗಿದ್ದರೆ ಮಾತ್ರ ಜನ ಹತ್ತುತ್ತಾರೆ. ಹೀಗಾಗಿ ಬೀಳಗಿ ಕಾಂಗ್ರೆಸ್‌ ಬಸ್‌ಗೆ ಹೊಸದಾಗಿ ಜನ ಹತ್ತುವುದಿರಲಿ, ಹಳಬರು ಬಸ್‌ ಬಿಟ್ಟು ಕೆಳಗೆ ಇಳಿಯುತ್ತಿದ್ದಾರೆ. ರಾಜ್ಯ ಹಾಗೂ ದೇಶದಲ್ಲಿ
ಕಾಂಗ್ರೇಸ್‌ ಅಸ್ತಿತ್ವ ಕಳೆದುಕೊಳ್ಳುತ್ತಿರುವುದು ಹಾಗೂ ಬೀಳಗಿ ಕಾಂಗ್ರೆಸ್‌ ಬಸ್‌ ಚಾಲಕ ಜೆ.ಟಿ. ಪಾಟೀಲ ಜನರ ವಿಶ್ವಾಸವನ್ನು ಕಳೆದುಕೊಂಡಿರುವುದು ಈ ಬಾರಿ ಬೀಳಗಿಯಲ್ಲಿ ಕಾಂಗ್ರೆಸ್‌ನಿಂದ ಕಾರ್ಯಕರ್ತರು ಬಿಜೆಪಿ ಕಡೆ
ಮುಖ ಮಾಡುತ್ತಿರುವುದನ್ನು ಪ್ರತಿಬಿಂಬಿಸುತ್ತದೆ. ಯಾರೇ ಪಕ್ಷದ ಸಿದ್ಧಾಂತ ಒಪ್ಪಿ, ಅಭಿವೃದ್ಧಿ ಚಿಂತನೆಗೆ ಮಹತ್ವ ಕೊಟ್ಟು ಬಿಜೆಪಿಗೆ ತುಂಬು ಮನಸ್ಸಿನಿಂದ ಬಂದರೂ ಸ್ವಾಗತಿಸುತ್ತೇನೆ ಎಂದು ಅವರು ಹೇಳಿದರು.

ಭಜರಂಗದಳ ನಿಷೇಧ, ಅಲ್ಪಸಂಖ್ಯಾತರ ಒಲೈಕೆ, ಮೋದಿಜಿ ಕುರಿತು ಅಸೂಹೆಪಡುವುದು, ಲಿಂಗಾಯತರನ್ನು ಭ್ರಷ್ಟರು ಎನ್ನುವುದು, ಜಾತಿ-ಜಾತಿಗಳ ಮಧ್ಯ ಜಗಳ ಹಚ್ಚುವುದು ಇವು ಕಾಂಗ್ರೆಸ್‌ ಪ್ರಣಾಳಿಕೆಯ ಪ್ರಮುಖ ಅಂಶಗಳು. ಒಂದು ವೇಳೆ ಅವರು ಅಧಿಕಾರಕ್ಕೆ ಬಂದರೆ ಇದನ್ನೆ ಮಾಡುತ್ತಾರೆ. ಹೀಗಾಗಿ ಕರ್ನಾಟಕದ ಜನ ಪ್ರಜ್ಞಾವಂತರು. ಈ ಬಾರಿ ಬಹುಮತದ ಬಿಜೆಪಿ ಸರ್ಕಾರ ರಚನೆಗೆ ಆಶೀರ್ವಾದ ಮಾಡುತ್ತಾರೆ ಎಂದರು.

ಮುಖಂಡರಾದ ಮಲ್ಲಿಕಾರ್ಜುನ ಅಂಗಡಿ,ರಾಮಣ್ಣ ಕಾಳಪ್ಪಗೋಳ, ಬಮ್ಮಯ್ಯ ಹಿರೇಮಠ, ಸಿದ್ದಪ್ಪ ಮಳೆನ್ನವರ, ಮಳಿಯಪ್ಪ ಮಳೆಯನ್ನವರ,ರಾಮನಗೌಡ ಪಾಟೀಲ, ದಾûಾಯಣಿ ಜಂಬಗಿ,ಸುಶೀಲಾಬಾಯಿ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆ
ಬೀಳಗಿ ಕ್ಷೇತ್ರದ ಯಂಡಿಗೇರಿ ಗ್ರಾಮದ ಎಸ್‌.ಸಿ. ಸಮುದಾಯದ ಪ್ರಮುಖ ಮುಖಂಡರಾದ ಹಣಮಂತ ಮಾದರ, ಫಕೀರಪ್ಪ ಮಾದರ, ಮುತ್ತೆಪ್ಪ ಮಾದರ, ಬಸವರಾಜ ಮಾದರ, ತಿಪ್ಪಣ್ಣ ಮಾದರ, ಯಲ್ಲಪ್ಪ ಮಾದರ, ಲಕ್ಕವ್ವ ಮಾದರ ಹಾಗೂ ಜಕನವ್ವ ಮಾದರ ಸೇರಿ ಹಲವಾರು ಕಾಂಗ್ರೆಸ್‌ ಕಾರ್ಯಕರ್ತರು ಮುರುಗೇಶ ನಿರಾಣಿಯವರ ಅಭಿವೃದ್ದಿ ಕಾರ್ಯಕ್ರಮಗಳನ್ನು ಮೆಚ್ಚಿ ಲಕ್ಷ್ಮಣ ನಿರಾಣಿ, ಕಲ್ಮೇಶ ಗೊಸಾರ, ಹೂವಪ್ಪ ರಾಠೊಡ, ಸತೀಶ ಮಾದರ ಹಾಗೂ ಮಹೇಶ ಮಾದರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು.

ನಾಳೆ ಪ್ರಧಾನಿ ಮೋದಿ
ಚುನಾವಣಾ ಪ್ರಚಾರದ ಅಂಗವಾಗಿ ಬಾದಾಮಿಯಲ್ಲಿ ನಿಗದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಬಹಿರಂಗ ಪ್ರಚಾರ ಸಭೆಯ ದಿನ ಬದಲಾವಣೆಯಾಗಿದ್ದು, ಮೇ 7ರ ಬದಲಾಗಿ ಮೇ 6ರಂದು ಆಗಮಿಸಲಿದ್ದಾರೆ. ಮೇ 6ರಂದು ಸಂಜೆ 4ಕ್ಕೆ ಬಾದಾಮಿ-ಬನಶಂಕರಿ ರಸ್ತೆಯಲ್ಲಿರುವ ಬನಶಂಕರಿ ಲೇಔಟ್‌ನಲ್ಲಿ ಬಹಿರಂಗ ಸಭೆ ನಡೆಯಲಿದೆ.

ಬಸ್‌ ಕಂಡಿಶನ್‌ ಹಾಗೂ ಚಾಲಕ ಚೆನ್ನಾಗಿದ್ದರೆ ಮಾತ್ರ ಜನ ಹತ್ತುತ್ತಾರೆ. ಹೀಗಾಗಿ ಬೀಳಗಿ ಕಾಂಗ್ರೆಸ್‌ನ ಬಸ್‌ಗೆ ಹೊಸದಾಗಿ ಜನ ಹತ್ತುವುದಿರಲಿ, ಹಳಬರು ಕೂಡ ಬಸ್‌ ಬಿಟ್ಟು ಕೆಳಗೆ ಇಳಿಯುತ್ತಿದ್ದಾರೆ. ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್‌ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಬೀಳಗಿ ಕಾಂಗ್ರೆಸ್‌ನ ಬಸ್‌ ಚಾಲಕ ಜೆ.ಟಿ. ಪಾಟೀಲರು, ಜನರ ವಿಶ್ವಾಸ
ಕಳೆದುಕೊಂಡಿದ್ದಾರೆ. ಹೀಗಾಗಿ ಈ ಬಾರಿ ಬೀಳಗಿಯಲ್ಲಿ ಕಾಂಗ್ರೆಸ್‌ನಿಂದ ಕಾರ್ಯಕರ್ತರು ಬಿಜೆಪಿ ಕಡೆ
ಮುಖ ಮಾಡುತ್ತಿರುವುದನ್ನು ಪ್ರತಿಬಿಂಬಿಸುತ್ತದೆ.
-ಮುರುಗೇಶ ನಿರಾಣಿ
ಬೀಳಗಿ ಬಿಜೆಪಿ ಅಭ್ಯರ್ಥಿ

 

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-mudhol

Mudhol: ನಾರಿಯರ ಗಸ್ತುಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

Bagalakote: ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಮಹತ್ವದ ಒಪ್ಪಂದಕ್ಕೆ ಎಂ.ಆರ್.ಎನ್ ಸಮೂಹ ಸಹಿ

11

Mudhol: ಅಂತಾರಾಜ್ಯ ಕಳ್ಳನ ಬಂಧನ; ಟ್ರ್ಯಾಕ್ಟರ್ ವಶ

4

Mudhol: ಮನೆ ಕಳ್ಳತನ; ದೂರು ದಾಖಲು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

Mudhol: ನಗರದಲ್ಲಿ ಹೆಚ್ಚಿದ ಕಳ್ಳರ ಹಾವಳಿ… ಮಹಿಳಾ‌ಮಣಿಗಳಿಂದ ರಾತ್ರಿ‌ ಗಸ್ತು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.