ಜೂನ್ ನಲ್ಲಿ ತೆರೆಗೆ ಬರಲಿದೆ ಮನೋಹರ್ ನಿರ್ದೇಶನದ ‘ದರ್ಬಾರ್’


Team Udayavani, May 5, 2023, 2:48 PM IST

ಜೂನ್ ನಲ್ಲಿ ತೆರೆಗೆ ಬರಲಿದೆ ಮನೋಹರ್ ನಿರ್ದೇಶನದ ‘ದರ್ಬಾರ್’

ಸದ್ಯ ಎಲ್ಲೆಡೆ ರಾಜಕೀಯದ್ದೇ ಮಾತು ಎನ್ನುವಂತಾಗಿದೆ. ಹಾಗೆಯೇ ಕನ್ನಡ ಚಿತ್ರರಂಗದಲ್ಲಿ ಕೂಡಾ ಎಲೆಕ್ಷನ್‌, ರಾಜಕೀಯ ಕಥೆಗಳನ್ನೊಳಗೊಂಡ ಸಾಕಷ್ಟು ಚಿತ್ರಗಳು ಸಹ ತೆರೆ ಬರಲು ಸಿದ್ಧವಾಗಿದೆ. ಇದೀಗ ಆ ಸಾಲಿಗೆ “ದರ್ಬಾರ್‌’ ಚಿತ್ರ ಕೂಡಾ ಸೇರ್ಪಡೆಯಾಗಲಿದೆ. ಸಂಗೀತ ನಿರ್ದೇಶಕ ವಿ.ಮನೋಹರ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ ದರ್ಬಾರ್‌.

ಚಿತ್ರಕ್ಕೆ ಶಿಲ್ಪಾ ಬಿ.ಎನ್‌ ಬಂಡವಾಳ ಹೂಡಿದ್ದಾರೆ. ದರ್ಬಾರ್‌ ಚಿತ್ರ ಹಳ್ಳಿ ಪ್ರದೇಶದಲ್ಲಿನ ರಾಜಕೀಯ ಹಾಗೂ ಅಲ್ಲಿನ ಎಲೆಕ್ಷನ್‌, ರಾಜಕೀಯ ನಾಯಕರ ಮೇಲೆ ಬೆಳಕು ಚೆಲ್ಲುವ ಚಿತ್ರವಾಗಿದ್ದು, ಚಿತ್ರ ಮಂಡ್ಯ, ಮದ್ದೂರು, ಕೋಲಾರದಲ್ಲಿ ಚಿತ್ರೀಕರಣವಾಗಿದೆ. ವರ್ಷದಲ್ಲಿ ಪಂಚಾಯತಿ, ಕಾರ್ಪೊರೇಷನ್‌ ಅಂತಾ ಒಂದಾದರೂ ಚುನಾವಣೆ ನಡೆಯುತ್ತಲೇ ಇರುತ್ತದೆ. ಆದರೆ ಎಷ್ಟರ ಮಟ್ಟಿಗೆ ಜನ ಸರಿಯಾದ ಅಭ್ಯರ್ಥಿಯನ್ನು ಆರಿಸುತ್ತಾರೆ. ಗೆದ್ದ ರಾಜಕಾರಣಿಗಳು ಜನರನ್ನು ಹೇಗೆ ಯಾಮಾರಿಸುತ್ತಾರೆ. ಯಾವೆಲ್ಲಾ ಆಮಿಷ, ಮನೋಬಲ, ಭವನಾತ್ಮಕ ಸಂಗತಿಗಳಿಗೆ ಜನ ಮರಳಾಗುತ್ತಾರೆ ಎಂಬ ವಿಚಾರವನ್ನು ವಿಡಂಬನಾತ್ಮಕವಾಗಿ, ಹಾಸ್ಯದ ರೂಪದಲ್ಲಿ ತಿಳಿಸಲಾಗಿದೆ ಎಂಬುದು ಚಿತ್ರತಂಡದ ಮಾತು.

ನಾಯಕ ಸತೀಶ್‌ ಮಾತನಾಡಿ, “ದರ್ಬಾರ್‌ ಚಿತ್ರ ಕಥೆಗೆ ತುಂಬ ಸೂಕ್ತವಾದ ಹೆಸರು. ಅದಕ್ಕಾಗಿ ಅದನ್ನೇ ಶೀರ್ಷಿಕೆಯಾಗಿ ಇಡಲಾಗಿದೆ. ಚಿತ್ರದಲ್ಲಿ ನಾನು ಹಳ್ಳಿಯಲ್ಲಿ ದರ್ಬಾರ್‌ ನಡೆಸುವ ರೀತಿಯ, ಅಘೋಷಿತ ರಾಜ, ನೈತಿಕ ಪೊಲೀಸ್‌ ಗಿರಿ ನಡೆಸುವ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಹಳ್ಳಿಯ ಜನ ಅವನ ಉಪಟಳ ತಾಳದೆ ಚುನಾವಣೆಗೆ ನಿಲ್ಲಿಸುತ್ತಾರೆ. ನಂತರ ಏನೆಲ್ಲಾ ಕಷ್ಟ ಎದುರಾಗುತ್ತೆ ಎನ್ನುವುದೇ ಚಿತ್ರದ ಸಾರಾಂಶ. ಚಿತ್ರ ಮಂಡ್ಯ ಭಾಗದಲ್ಲಿ ನಡೆಯುವ ಕಥೆಯಾದ್ದರಿಂದ ಅಲ್ಲೇ ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ’ ಎನ್ನುತ್ತಾರೆ.

ಚಿತ್ರದಲ್ಲಿ ಹೊಸ ಪ್ರತಿಭೆ ಜಾನ್ವಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಕಾಮಿಡಿ ಕಿಲಾಡಿ ಸಂತು, ಕಾರ್ತಿಕ್‌, ಲಕ್ಷ್ಮೀ ದೇವಮ್ಮ, ಸಾಧು ಕೋಕಿಲ, ನವೀನ್‌, ಹಿರಿಯ ನಟ ಅಶೋಕ್‌, ತ್ರಿವೇಣಿ, ನೀನಾಸಂ, ರಂಗಾಯಣ, ರಂಗಭೂಮಿ ಕಲಾವಿದರ ದಂಡೇ ಚಿತ್ರದಲ್ಲಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿ.ಮನೋಹರ್‌ ಸಂಗೀತ, ಸಾಹಿತ್ಯ ಚಿತ್ರಕ್ಕಿದೆ.

ನಾಯಕ ನಟ ಸತೀಶ್‌ ಚಿತ್ರಕ್ಕೆ ಕಥೆ, ಚಿತ್ರಕಥೆ, ಜೊತೆಗೆ ಒಂದು ಹಾಡಿಗೆ ಸಾಹಿತ್ಯವನ್ನು ಬರೆದಿದ್ದಾರೆ. ಸದ್ಯ ಚಿತ್ರದ ಎಲ್ಲಾ ಕೆಲಸಗಳು ಪೂರ್ಣಗೊಂಡಿದ್ದು, ಸೆನ್ಸಾರ್‌ ಪ್ರಕಿಯೆಯಲ್ಲಿರುವ ಚಿತ್ರತಂಡ, ಮುಂದಿನ ತಿಂಗಳಿನಲ್ಲಿ ತೆರೆಗೆ ಬರುವ ಯೋಜನೆ ಹೊಂದಿದೆ.

ಟಾಪ್ ನ್ಯೂಸ್

10-ckm

Chikkamagaluru: ಪ್ರವಾಸಿಗರನ್ನು ಕರೆತಂದಿದ್ದ ಬೆಂಗಳೂರಿನ ಚಾಲಕ ಹೃದಯಾಘಾತದಿಂದ ಮೃತ್ಯು

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

9-mng-1

Mumtaz Ali ನಾಪತ್ತೆ ಪ್ರಕರಣ; ಶೋಧ ಕಾರ್ಯಾಚರಣೆಗೆ ಈಶ್ವರ ಮಲ್ಪೆ ತಂಡ ಆಗಮನ

Hubbali: ಅಪಾರ್ಟ್‌ಮೆಂಟ್ ಆವರಣದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿ ಧ್ವಂಸಗೈದ ಕಿಡಿಗೇಡಿಗಳು

Hubbali: ಅಪಾರ್ಟ್‌ಮೆಂಟ್ ಆವರಣದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿ ಧ್ವಂಸಗೈದ ಕಿಡಿಗೇಡಿಗಳು

Delhi: ರಾಮಲೀಲಾ ಪ್ರದರ್ಶನದ ವೇಳೆ ಕುಸಿದು ಬಿದ್ದು ರಾಮನ ಪಾತ್ರಧಾರಿ ಮೃತ್ಯು

Delhi: ರಾಮಲೀಲಾ ಪ್ರದರ್ಶನದ ವೇಳೆ ಕುಸಿದು ಬಿದ್ದು ರಾಮನ ಪಾತ್ರಧಾರಿ ಮೃತ್ಯು

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

1

Renukaswamy Case: ದರ್ಶನ್‌ ಪರ ವಕೀಲರ ಸುದೀರ್ಘ ವಾದ..ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ

Royal; ಟಾಂಗ್‌ ಕೊಡಲು ವಿರಾಟ್‌ ರೆಡಿ: ದಿನಕರ್‌ ನಿರ್ದೇಶನದ ಸಿನಿಮಾ

Royal; ಟಾಂಗ್‌ ಕೊಡಲು ವಿರಾಟ್‌ ರೆಡಿ: ದಿನಕರ್‌ ನಿರ್ದೇಶನದ ಸಿನಿಮಾ

Billa Ranga Baashaa: ಬಿಆರ್‌ಬಿಗೆ ಕಿಚ್ಚ ರೆಡಿ

Billa Ranga Baashaa: ಬಿಆರ್‌ಬಿಗೆ ಕಿಚ್ಚ ರೆಡಿ

Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ…

Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ…

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

6

Basroor- ಕುಂದಾಪುರ ಹೆದ್ದಾರಿ ಬದಿ ಹುಲ್ಲು ಕಟಾವು

11-Hagaribommanahalli

Hagaribommanahalli: ಆಕಳು ಮೇಯಿಸಲು ಹೋದ ಇಬ್ಬರು ಸಿಡಿಲಿಗೆ ಬಲಿ

5

Udupi: ಗ್ರಾಮ ಪಂಚಾಯತ್ ನೌಕರರ ಕಷ್ಟ ಕೇಳ್ಳೋರಿಲ್ಲ !

Alia Bhatt: ಆಕ್ಷನ್‌ ಅವತಾರದಲ್ಲಿ ಆಲಿಯಾ

Alia Bhatt: ಆಕ್ಷನ್‌ ಅವತಾರದಲ್ಲಿ ಆಲಿಯಾ

10-ckm

Chikkamagaluru: ಪ್ರವಾಸಿಗರನ್ನು ಕರೆತಂದಿದ್ದ ಬೆಂಗಳೂರಿನ ಚಾಲಕ ಹೃದಯಾಘಾತದಿಂದ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.