ವಿದಾಯ ಹೇಳಿದ ಸ್ಕಿವರ್ ಬ್ರಂಟ್
Team Udayavani, May 6, 2023, 8:00 AM IST
ಲಂಡನ್: ಇಂಗ್ಲೆಂಡ್ ವನಿತಾ ತಂಡದ ಹಿರಿಯ ವೇಗಿ ಕ್ಯಾಥರಿನ್ ಸ್ಕಿವರ್ ಬ್ರಂಟ್ ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು.
2004ರಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸತೊಡಗಿದ ಬ್ರಂಟ್ 267 ಅಂತಾ ರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಎಲ್ಲ ಮಾದರಿಗಳಲ್ಲಿ ಒಟ್ಟು 335 ವಿಕೆಟ್ ಉರುಳಿಸಿದ ಸಾಧನೆ ಇವರದು. ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ಅತ್ಯಧಿಕ ವಿಕೆಟ್ ಉರುಳಿಸಿದ ದಾಖಲೆ ಹೊಂದಿದ್ದಾರೆ. ಇಂಗ್ಲೆಂಡ್‌ನ 3 ವಿಶ್ವಕಪ್ ವಿಜಯಗಳಲ್ಲಿ, 4 ಆ್ಯಶಸ್ ಜಯಭೇರಿಯಲ್ಲಿ ಸ್ಕಿವರ್ ಬ್ರಂಟ್ ಕೊಡುಗೆ ಅಪಾರ.
“ಕಳೆದ 19 ವರ್ಷಗಳಿಂದ ನಾನು ಇಂಗ್ಲೆಂಡ್ ತಂಡದ ಭಾಗವಾಗಿದ್ದೆ. ಇದೊಂದು ಸುದೀರ್ಘ ಪಯಣ. ಇಷ್ಟೊಂದು ಎತ್ತರಕ್ಕೆ ಏರುವ, ಇಷ್ಟು ವರ್ಷ ಗಳ ಕಾಲ ದೇಶವನ್ನು ಪ್ರತಿನಿಧಿಸುವ ಯಾವ ನಿರೀಕ್ಷೆ ಯನ್ನೂ ನಾನು ಹೊಂದಿರಲಿಲ್ಲ. ನನ್ನ ಸಾಧನೆಯಿಂದ ಕುಟುಂಬ ವರ್ಗಕ್ಕೆ ಖುಷಿಯಾದರಷ್ಟೇ ಸಾಕು ಎಂದು ಭಾವಿಸಿದವಳು ನಾನು. ಆದರೆ ಇದು ಈ ಚೌಕಟ್ಟನ್ನೂ ಮೀರಿ ನಿಂತಿತು. ಮುಂದಿನ ದಿನಗಳನ್ನು ಕುಟುಂಬದವರೊಂದಿಗೆ ಕಳೆಯುವುದೇ ನನ್ನ ಬಯಕೆ” ಎಂಬುದಾಗಿ 37 ವರ್ಷದ ಕ್ಯಾಥರಿನ್ ಸ್ಕಿವರ್ ಬ್ರಂಟ್ ಹೇಳಿದರು.
ಮುಂಬರುವ ಪ್ರತಿಷ್ಠಿತ ಆ್ಯಶಸ್ ಸರಣಿಗೂ ಮೊದಲೇ, ಆಸ್ಟ್ರೇಲಿಯ ಕೈಯಿಂದ ಆ್ಯಶಸ್ ಮರಳಿ ಪಡೆಯುವ ಯೋಜನೆಯಲ್ಲಿರುವಾಗಲೇ ಕ್ಯಾಥರಿನ್ ಸ್ಕಿವರ್ ಬ್ರಂಟ್ ನಿವೃತ್ತಿಯ ನಿರ್ಧಾರಕ್ಕೆ ಬಂದದ್ದು ಇಂಗ್ಲೆಂಡ್‌ಗೆ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಆದರೆ “ದ ಹಂಡ್ರೆಡ್’ ಪಂದ್ಯಾವಳಿಯಲ್ಲಿ ಇನ್ನೂ ಒಂದು ಋತುವಿನಲ್ಲಿ ಆಡುವ ಯೋಜನೆ ಹಾಕಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.