ಬಿಜೆಪಿ ಪಕ್ಷಕ್ಕೆ ಮೋಸ ಮಾಡಿದ ಲಕ್ಷ್ಮಣ ಸವದಿಯನ್ನು ಸೋಲಿಸಿ: ಅಮಿತ್ ಶಾ
Team Udayavani, May 6, 2023, 4:07 PM IST
ಅಥಣಿ: ರಾಜ್ಯದ ಚುನಾವಣೆಯೇ ಬೇರೆ ಅಥಣಿ ಚುನಾವಣೆಯೇ ಬೇರೆಯಾಗಿದೆ, ಅಧಿಕಾರದ ಆಸೆಯಿಂದ ತನ್ನ ಸ್ವಾರ್ಥಕ್ಕಾಗಿ ಬಿಜೆಪಿ ಪಕ್ಷಕ್ಕೆ ಮೋಸ ಮಾಡಿದ ಸವದಿಯನ್ನು ಈ ಬಾರಿಯು ಸೋಲಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಕಾರ್ಯಕರ್ತರಿಗೆ ಮುಖಂಡರಿಗೆ ಕರೆ ಕೊಟ್ಟರು .
ಅಥಣಿ ಪಟ್ಟಣದ ಭೋಜರಾಜ ಕ್ರೀಡಾಂಗನದಲ್ಲಿ 2023 ರ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಮಹೇಶ ಕುಮಠಳ್ಳಿ ಅವರ ಚುನಾವಣಾ ಪ್ರಚಾರಾರ್ಥಕವಾಗಿ ಬಿಜೆಪಿ ಕರ್ನಾಟಕ ಸಾರ್ವಜನಿಕ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಸೋತವನನ್ನು ಉಪ ಮುಖ್ಯಮಂತ್ರಿ ಸ್ಥಾನ ಕೊಟ್ಟಿದ್ದೇವು, ಸವದಿಯವರೊಂದಿಗೆ ನಾನು ಖುದ್ದು ಮಾತನಾಡಿದ್ದೆ, ಕಾಂಗ್ರೆಸ್ ಪಕ್ಷ ಬಜರಂಗದಳವನ್ನು ಅವಮಾನಿಸಿದೆ. ಮುಸ್ಲಿಮರಿಗೆ 6% ಕುಡುವುದಾಗಿ ಹೇಳಿರುವ ಕಾಂಗ್ರೆಸ್ ಮುಖಂಡರು ಯಾರ ಮೀಸಲಾತಿ ಕಡಿಮೆ ಮಾಡುತ್ತಿರಿ ಲಿಂಗಾಯತ, ದಲಿತರ ಮೀಸಲಾತಿ ಕಡಿಮೇ ಮಾಡುತ್ತಿರೇನು? , ಮಹಾದಾಯಿ ನೀರನ್ನು ಮೋದಿಜಿಯವರು ಉತ್ತರ ಕರ್ನಾಟಕಕ್ಕೆ ನೀಡಿದರು, ಸಮಸ್ತ ಕಿತ್ತೂರು ಕರ್ನಾಟಕ ರೈತರಿಗೆ ಅನುಕುಲ ಮಾಡಿದ್ದಾರೆ, 10 ಸಾವಿರ ಕೋಟಿ ರೂ ಇನಕಂ ಟ್ಯಾಕ್ಸ್ ಮನ್ನಾ ಮಾಡಿದರು, ಮಹೇಶ ಕುಮಠಳ್ಳಿ ಹಾಗೂ ರಮೇಶ ಜಾರಕಿಹೊಳಿ ಅವರು ಬಿಜೆಪಿಗೆ ಬಂದಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಸರಕಾರ ಬರುವಂತಾಯಿತು. ರಾಹುಲ್ ಗಾಂಧಿ ಹೋದಲೆಲ್ಲ ಅಲ್ಲಿಯ ಕಾಂಗ್ರೆಸ್ ಪಕ್ಷ ಸೋತಿದೆ, ಮೋದಿಯವರನ್ನು ವಿಷದ ಹಾವು ಎಂದು ಖರ್ಗೆ ಹೇಳಿದ್ದಾರೆ.
ಮೋದಿಗೆ ಎಷ್ಟು ಬಯುತ್ತಿರಿ ಬಯಿರಿ ಇದರಿಂದ ಕಮಲ ಹೆಚ್ಚು ಅರಳುತ್ತೆ, ಪಿ.ಎಫ್.ಐ ಸಂಘಟನೆಯನ್ನು ನಿಷೇಧಿಸಿದ್ದೇವೆ, ಬಜರಂಗಿ ಬಲಿಯನ್ನು ಅವಮಾನಿಸಿರುವ ಕಾಂಗ್ರೆಸ್ ಪಕ್ಷಕ್ಕೆ ಬುದ್ದಿ ಕಲಿಸಿ, ಪ್ರತಿ ವಾರ್ಡನಲ್ಲಿ ಅಟಲ್ ಆಹಾರ ಕೇಂದ್ರ, ಸರ್ವರಿ ಸೂರು ಯೋಜನೆ, 10ಲಕ್ಷ ಮನೆ, ಎಸ.ಸಿ ಎಸ್.ಟಿ ಮಹಿಳೆಯರಿಗೆ 10 ಸಾವಿರ ರೂ ಬೆಳಗಾವಿಯಲ್ಲಿ 25ಸಾವಿರ ಕೋಟಿ ಯೋಜನೆ ತರಲಾಗುವುದು, 250 ಕೋಟಿಯಲ್ಲಿ ಸಂಗೊಳ್ಳಿ ರಾಯಣ್ಣ ಶಾಲೆ, ಮೋದಿಯವರು ಕಷ್ಮೀರವನ್ನು ಭಾರತದ ಜೊತೆಯಲ್ಲಿ ಜೋಡಿಸುವಂತೆ ಮಾಡಿದ್ದಾರೆ, ಬರುವ ಲೋಕಸಭಾ ಚು.ನಾ.ಕೇಂದ್ರ ಸರ್ಕಾರ ಮುಂದಿನ ಎಮ್.ಎಲ್.ಎ ಮಹೇಶ ಕುಮಠಳ್ಳಿ .
ಅಥಣಿ ಮತಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಮಹೇಶ ಕುಮಠಳ್ಳಿ ಅವರಿಗೆ ಹೆಚ್ಚಿನ ಮತಗಳನ್ನು ಹಾಕುವ ಮೂಲಕ ಮಹೇಶ ಕುಮಠಳ್ಳಿ ಅವರನ್ನು ಮತ್ತೊಮ್ಮೆ ಆರಿಸಿ ತರುವುವಂತೆ ವಿನಂತಿಸಿದರು.
ಈ ವೇಳೆ ರಮೇಶ ಜಾರಕಿಹೊಳಿ ಮಾತನಾಡಿ, ಮತ್ತೆ ರಾಜ್ಯದಲ್ಲಿ ಬಿಜೆಪಿ ಸಕರಕಾರ ಅಧಿಕಾರಕ್ಕೆ ಬಂದಾಗ, ಕೃಷ್ಣಾ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಊರಾರು ಭ್ರಷ್ಟಾಚಾರವನ್ನು ಸಿ.ಬಿ.ಐ ಗೆ ಒಪ್ಪಿಸಬೇಕು, ಡಿ.ಸಿ.ಸಿ. ಬ್ಯಾಂಕ್ ಸುಪರ್ ಸಿಡ್ ಮಾಡುವಂತೆ ಅಮಿತ್ ಶಾ ರಲ್ಲಿ ವಿನಂತಿಸಿದವರು ಸೋತು ಮನೆಯಲ್ಲಿ ಬಿದ್ದ ಲಕ್ಷ್ಮಣ ಸವದಿ ಅವರನ್ನು ಉಪಮುಖ್ಯಮಂತ್ರಿಸ್ಥಾನ ಕೋಟ್ಟಿದ್ದೇವು, ವರಿಷ್ಠರ ಮಾತಿನಂತೆ 23 ರ ಚುನಾವಣೆಯಲ್ಲಿ ಮಹೇಶ ಕುಮಠಳ್ಳಿಗೆ ಮತ್ತೆ ಬಿಜೆಪಿ ಟಿಕೆಟ್ ನೀಡಲಾಯಿತು, ಮಹೇಶ ಕುಮಠಳ್ಳಿ ಸ್ನೇಹಕ್ಕೆ ನಾನು ಅಥಣಿಗೆ ಬರುತ್ತೇನೆ ಹೊರತು ಯಾವ ರಾಜಕೀಯ ಮಾಡುವುದಕ್ಕಲ್ಲ, ಅಥಣಿಗೆ ನಾನು ಬರುವುದು ತಪ್ಪಾದರೆ ನಾನು ಅಥಣಿಗೆ ಬರುವುದನ್ನೆ ಬೀಡುತ್ತೆನೆ, ಬೇಕಾದರೆ ಪಕ್ಷಕ್ಕೆ ರಾಜಿನಾಮೆ ನೀಡುವುದಾಗಿ ತಿಳಿಸಿ, ಮಹೇಶ ಕುಮಠಳ್ಳಿಗೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸುವಂತೆ ವಿನಂತಸಿ, ಸುಳ್ಳು ಪ್ರಚಾರ ಮಾಡುತ್ತಿರುವ ಕಾಂಗ್ರೇಸ ಅಭ್ಯರ್ಥಿ ಸವದಿಯವರನ್ನು ಸೋಲಿಸುವಂತೆ ಮನವಿ ಮಾಡಿದರು.
ಮಹೇಶ ಕುಮಠಳ್ಳಿ ಮಾತನಾಡಿ, ಅಥಣಿ ಮತಕ್ಷೇತ್ರಕ್ಕೆ ಗೋಕಾಕ ಸಾಹುಕರ ರಿಂದ ಬಯವಿಲ್ಲ, ಆದರೆ ಅಥಣಿ ಸಾಹುಕಾರರಿಂದ ಅಥಣಿ ಜನತೆಗೆ ಬಯವಿದೆ, ಬಜರಂಗದಳವನ್ನು ನಿಷೇಧಿಸಲು ಹೊರಟಿರುವವರಿಗೆ ಬುದ್ದಿ ಕಲಿಸಿ, ಬಿಜೆಪಿವನ್ನು ಗೆಲ್ಲಿಸಲು 1 ನಂಬರಿನಲ್ಲಿರುವ ಕಮಲ ಚಿತ್ರಕ್ಕೆ ಮತವನ್ನು ನೀಡುವಂತೆ ಮನವಿ ಮಾಡಿದರು.
ಶ್ರೀಮಂತ ಪಾಟೀಲ ಮಾತನಾಡಿ, ಅಥಣಿ ಸಿದ್ದೇಶ್ವರ ಪಾಂಡ್ರಿಯಲ್ಲಿ ಯಾರು ಸೊಕ್ಕಿನಿಂದ ಮೇರೆಯುತ್ತಾರೆ ಅವರೆಂದು ಉದ್ದಾರವಾಗುವುದಿಲ್ಲ ಪರೋಕ್ಷವಾಗಿ ಲಕ್ಷ್ಮಣ ಸವದಿಯವರ ಕುರಿತು ಟೀಕೆಯನ್ನು ಮಾಡಿದರು. ಬಿಜೆಪಿಯನ್ನು ತನ್ನ ತಾಯಿ ಎಂದು ಹೇಳಿದ ಸವದಿಯವರು ಇವತ್ತು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ, ಮೋಸ ಮಾಡುವವರಿಗೆ ಬುದ್ದಿ ಕಲಿಸಿ ಮಹೇಶ ಕುಮಠಳ್ಳಿ ಅವರನ್ನು ಆರಿಸಿ ತರುವಂತೆ ಮನವಿ ಮಾಡಿದರು.
ಅರವಿಂದರಾವ ದೇಶಪಾಂಡೆ, ಬಿ.ಎಲ್.ಪಾಟೀಲ, ರವಿ ಸಂಕ, ಅಪ್ಪಾಸಾಬ ಅವತಾಡೆ, ಸತ್ಯಾಪ್ಪ ಬಾಗೇನ್ನವರ, ದರೇಪ್ಪ ಟಕ್ಕನವರ, ಗೌತಮ್ಮ ಪರಾಂಜಪೆ, ಉಮೇಶ ಬಂಟೋಡಕರ, ವಿಜಯಕುಮಾರ, ಅನೀಲ ದೇಶಪಾಂಡೆ, ಬಸವರಾಜ ಕೊಂಪಿ, ರಾಜಕುಮಾರ ಐಹೊಳಿ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ರಾಜ್ಯೋತ್ಸವ ಮೆರವಣಿಗೆ ವೇಳೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
Belagavi: ಎಂಇಎಸ್ ಕಾರ್ಯಕರ್ತರ ಪುಂಡಾಟ
Rajyotsava Celebration: ಬೆಳಗಾವಿಯಲ್ಲಿ ವೈಭವದ ಕರ್ನಾಟಕ ರಾಜ್ಯೋತ್ಸವ
Belagavi; ಎಂಇಎಸ್ ನಿಷೇಧಕ್ಕಿಂತ ನಿರ್ಲಕ್ಷ್ಯ ಮಾಡುವುದು ಉತ್ತಮ: ಸತೀಶ್ ಜಾರಕಿಹೊಳಿ
ಬೆಳಗಾವಿ: ಆರ್ಥಿಕ ಮುಗ್ಗಟ್ಟು ಮಧ್ಯೆಯೇ ದುಂದುವೆಚ್ಚ: ಪಾಲಿಕೆಯಿಂದ ಲಕ್ಷ, ಲಕ್ಷ ವೆಚ್ಚ!
MUST WATCH
ಹೊಸ ಸೇರ್ಪಡೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Srinagar; ಉಗ್ರ ವಿರೋಧಿ ಕಾರ್ಯಾಚರಣೆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬಿಸ್ಕೆಟ್‌ಗಳು
Tollywood: ಲೋಕೇಶ್, ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್ ಗೆ ಪ್ರಭಾಸ್ ಎಂಟ್ರಿ?
UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.