Daily Horoscope; ಮಾತಿನಲ್ಲಿ ತಾಳ್ಮೆ ಪ್ರೀತಿ ವಹಿಸಿದಲ್ಲಿ ಯಶಸ್ಸು ನಿಮ್ಮದಾಗಲಿದೆ
Team Udayavani, May 7, 2023, 7:14 AM IST
ಮೇಷ: ದೀರ್ಘ ಪ್ರಯಾಣ. ನಷ್ಟದ್ರವ್ಯವನ್ನು ಪಡೆಯಲು ಪ್ರಯತ್ನ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ದೂರದ ವ್ಯವಹಾರಗಳಿಂದ ಧನಾಗಮನ. ಅಧ್ಯಯನ ಪ್ರವತ್ತರಿಗೆ ಪರಿಶ್ರಮದಿಂದ ನಿರೀಕ್ಷಿತ ಸ್ಥಾನ ಲಾಭ.
ವೃಷಭ: ಅನಿರೀಕ್ಷಿತ ಸ್ಥಾನ ವೃದ್ಧಿ. ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ಉತ್ತಮ ವಾಕ್ಚತುರತೆಯಿಂದ ಕೂಡಿದ ನಡೆ. ಧನ ಸಂಪತ್ತಿನ ಅಭಿವೃದ್ಧಿ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಮಾನಸಿಕ ತೃಪ್ತಿ.
ಮಿಥುನ: ಮಕ್ಕಳಿಂದ ಸಂತೋಷ ವೃದ್ಧಿ. ಅಧ್ಯಯನ ಪ್ರವೃತ್ತಿ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಬಂಧುಮಿತ್ರರ ಸಹಕಾರ. ಗುರುಹಿರಿಯರಿಂದ ಪ್ರೋತ್ಸಾಹ, ಮಾರ್ಗದರ್ಶನ. ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ.
ಕರ್ಕ: ಆರೋಗ್ಯ ಗಮನಿಸಿ. ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಿ. ಪಾಲುದಾರಿಕಾ ವ್ಯವಹಾರಗಳಲ್ಲಿ ಸ್ಪಷ್ಟತೆ ಇರಲಿ. ಆಸ್ತಿ ಕ್ರಯ-ವಿಕ್ರಯ ವಿಚಾರ ದಲ್ಲಿ ಮುನ್ನಡೆ. ಸಾಲ ನೀಡುವಾಗ ಎಚ್ಚರಿಕೆ ಯಿಂದಿರಿ. ಅನಗತ್ಯ ತೊಂದರೆಗೆ ಸಿಲುಕದಿರಿ.
ಸಿಂಹ: ಹಠಮಾರಿತನದಿಂದ ನಷ್ಟ ಸಂಭವ. ಆರ್ಥಿಕ ವಿಚಾರ ಗಳಲ್ಲಿ ಪ್ರಗತಿ. ಉದ್ಯೋಗ ವ್ಯವಹಾರಗಳಲ್ಲಿ ಪಾರದರ್ಶಕತೆಗೆ ಆದ್ಯತೆ ನೀಡಿ. ಸಾಂಸಾರಿಕ ಸುಖ ಮಧ್ಯಮ. ಆರೋಗ್ಯ ಗಮನಿಸಿ. ಚರ್ಚೆಗೆ ಅವಕಾಶ ನೀಡದಿರಿ.
ಕನ್ಯಾ: ಉತ್ತಮ ವಾಕ್ಚತುರತೆ ಪ್ರದರ್ಶನ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಗೌರವ ಸುಖಾದಿ ಲಭ್ಯ. ಉತ್ತಮ ಧನಾರ್ಜನೆ. ಅಧ್ಯಯನ ಪ್ರವೃತ್ತರಿಗೆ ಸರ್ವ ಸೌಲಭ್ಯ ಪ್ರಾಪ್ತಿ. ಸಾಂಸಾರಿಕವಾಗಿ ನೆಮ್ಮದಿಯ ದಿನ.
ತುಲಾ: ಕೆಲಸ ಕಾರ್ಯಗಳಲ್ಲಿ ತಲ್ಲೀನತೆ. ಬಹುವಿಧದ ಚಟುವಟಿಕೆಗಳಿಂದ ಕೂಡಿದ ದಿನಚರಿ. ಹೆಚ್ಚಿದ ಧನ ಸಂಪತ್ತು. ಮಿತ್ರರ ಸಹಕಾರ. ಮಾನ್ಯತೆ ಲಭ್ಯ. ಅಧ್ಯಯನ ಆಕಾಂಕ್ಷಿಗಳಿಗೆ ಹೆಚ್ಚಿದ ಅವಕಾಶ ಸವಲತ್ತು. ಗೃಹ ಉಪಯೋಗಿ ವಸ್ತುಗಳ ಸಂಗ್ರಹ.
ವೃಶ್ಚಿಕ: ಧೈರ್ಯ, ಶೌರ್ಯ, ಪರಾಕ್ರಮ ಅಧಿಕಾರಯುತ ನಡೆಯಿಂದ ಕೂಡಿದ ದಿನಚರಿ. ಮಾತಿನಲ್ಲಿ ತಾಳ್ಮೆ ಪ್ರೀತಿ ವಹಿಸಿದಲ್ಲಿ ಯಶಸ್ಸು ನಿಮ್ಮದಾಗಲಿದೆ. ಹೆಚ್ಚಿದ ವರಮಾನ. ಹೂಡಿಕೆ ಉಳಿತಾಯ ದಲ್ಲಿ ಪ್ರಗತಿ.
ಧನು: ಸಮಯ ಸಂದರ್ಭಕ್ಕೆ ಸರಿಯಾಗಿ ಪ್ರತಿಭೆ, ಬುದ್ಧಿವಂತಿಕೆ ಪ್ರದರ್ಶನ. ಜನಮನ್ನಣೆ, ಪ್ರಶಂಸೆ ಲಭ್ಯ. ಆರ್ಥಿಕವಾಗಿ ಬಲಿಷ್ಠತೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆ ಒದಗಿಬರುವ ಸಮಯ.
ಮಕರ: ಉದ್ಯೋಗ ವ್ಯವಹಾರ ಗಳಲ್ಲಿ ಅನಿರೀಕ್ಷಿತ ಪ್ರಗತಿ. ಬಹುಜನರ ಸಹಾಯ, ಮಾನ್ಯತೆ, ಜನಮನ್ನಣೆ ಲಭ್ಯ. ಆಸ್ತಿ ವಿಚಾರದಲ್ಲಿ ಸಂತೋಷ. ಬಂಧುಮಿತ್ರರ ಆಗಮನ. ಗೃಹದಲ್ಲಿ ಸಂಭ್ರಮದ ಪರಿಸ್ಥಿತಿ.
ಕುಂಭ: ಸಾಂಸಾರಿಕ ಜವಾಬ್ದಾರಿ. ಹಣಕಾಸಿನ ವಿಚಾರದಲ್ಲಿ ಜಾಗ್ರತೆಯ ನಡೆಯಿಂದ ಹೆಚ್ಚಿದ ಲಾಭ. ದೇವತಾ ಸ್ಥಳ ಸಂದರ್ಶನ. ಸಮಾಜಮುಖೀ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆ. ಗುರುಹಿರಿಯರು ಬೇಸರ ಗೊಳ್ಳದಂತೆ ವ್ಯವಹರಿಸಿ.
ಮೀನ: ಆರೋಗ್ಯ ಸುದೃಢ. ಅಧಿಕ ಧನ ಲಾಭ. ಸರಳತೆಯಿಂದ ಕೂಡಿದ ದಿನಚರಿ. ಜನಮೆಚ್ಚುಗೆಯ ವ್ಯವಹಾರ. ದೂರದ ಬಂಧುಗಳ ಭೇಟಿ. ಹೂಡಿಕೆಗಳಲ್ಲಿ ಆಸಕ್ತಿ. ಸಾಲದ ಹಣ ಹಿಂದಿರುಗಿ ಬರುವ ಸಮಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು
Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.