ಕಾಂಗ್ರೆಸ್ ಪ್ರಣಾಳಿಕೆಗೆ ‘ಬಜರಂಗದಳ- ಪಿಎಫ್ಐ ನಿಷೇಧ’ ಸೇರಿದ್ಹೇಗೆ? ಇಲ್ಲಿದೆ Inside story
Team Udayavani, May 7, 2023, 11:56 AM IST
ಬೆಂಗಳೂರು: ಬಜರಂಗದಳ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ದಂತಹ ಸಂಘಟನೆಗಳು ಕೋಮು ಸೌಹಾರ್ದತೆಗೆ ಭಂಗ ತಂದರೆ ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಇದು ರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಇದೀಗ ಪ್ರಚಾರದ ಹೊಸ ಸರಕಾಗಿದೆ.
ಈ ಸಂಘಟನೆಗಳನ್ನು ನಿಷೇಧಿಸುವ ವಿಚಾರವನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾವಿಸುವ ಕುರಿತು ನಡೆದ ಚರ್ಚೆಯ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ.
ಪ್ರಣಾಳಿಕೆಯನ್ನು ರಚಿಸುವಾಗ ಕಾನೂನು ಮತ್ತು ನ್ಯಾಯದ ಅಧ್ಯಾಯದಲ್ಲಿ ಸಮಾಜದಲ್ಲಿ ದ್ವೇಷವನ್ನು ಹರಡುವ ಗುಂಪುಗಳ ವಿರುದ್ಧ ಶಿಕ್ಷಾರ್ಹ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸೇರಿಸಲಾಗಿತ್ತು. ಈ ವೇಳೆ ಯಾವುದೇ ಸಂಘಟನೆಯ ಹೆಸರನ್ನು ಅಲ್ಲಿ ನಮೂದಿಸಿರಲಿಲ್ಲ.
ಇದನ್ನೂ ಓದಿ:IPL 2023: ಈತ ಟೆಸ್ಟ್ ಕ್ರಿಕೆಟ್ ಆಡಲೇಬಾರದು..: ಯುವ ಬೌಲರ್ ಗೆ ಧೋನಿ ಕಿವಿಮಾತು
ಆದರೆ, ಬಳಿಕ ಕೇಂದ್ರ ನಾಯಕರೊಬ್ಬರು ಪ್ರಣಾಳಿಕೆ ಸಮಿತಿಯ ಹಿರಿಯ ಸದಸ್ಯರಿಗೆ ಪಿಎಫ್‌ಐ, ಬಜರಂಗದಳ ಮುಂತಾದ ಹೆಸರುಗಳನ್ನು ಸೇರಿಸುವಂತೆ ಸೂಚಿಸಿದರು ಎಂದು ವರದಿ ತಿಳಿಸಿದೆ.
ರಾಷ್ಟ್ರೀಯ ನಾಯಕನ ಮನವಿಗೆ ಮಣಿದು ಬಜರಂಗದಳ ಮತ್ತು ಪಿಎಫ್‌ಐ ಕಾಂಗ್ರೆಸ್ ಪ್ರಣಾಳಿಕೆಯನ್ನು ಪ್ರವೇಶಿಸಿದವು, ಮೇ 10 ರಂದು ನಡೆಯುವ ಮತದಾನಕ್ಕೆ ಮುಂಚಿತವಾಗಿ ಹಿಂದೂ ಮತ್ತು ಮುಸ್ಲಿಂ ಮತಗಳನ್ನು ಕ್ರೋಢೀಕರಿಸಲು ಎರಡು ಗುಂಪುಗಳನ್ನು ಹೆಸರಿಸಲಾಗಿದೆ ಎಂದು ನಂಬಲಾಗಿದೆ.
ಬಜರಂಗದಳ ಮತ್ತು ಪಿಎಫ್‌ಐ ಮೇಲೆ ನಿಷೇಧವನ್ನು ಮಾಡುವ ಆಲೋಚನೆಯು ಸುಪ್ರೀಂ ಕೋರ್ಟ್‌ನ ಇತ್ತೀಚಿನ ದ್ವೇಷದ ಭಾಷಣಗಳ ವಿರುದ್ಧ ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳಲು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶಿಸಿದ ತೀರ್ಪಿನಿಂದ ಬಂದಿರಬಹುದು ಎಂದು ಹಿರಿಯ ನಾಯಕ ಮತ್ತು ಮಾಜಿ ಕ್ಯಾಬಿನೆಟ್ ಮಂತ್ರಿಯೊಬ್ಬರು ಹೇಳಿರುವುದುನ್ನು ಇಂಡಿಯಾ ಟುಡೇ ಉಲ್ಲೇಖಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Transport: ಕೆಎಸ್ಸಾರ್ಟಿಸಿ ದಾಖಲೆ: ಒಂದೇ ದಿನ 1.23 ಕೋಟಿ ಮಂದಿ ಪ್ರಯಾಣ
MUST WATCH
ಹೊಸ ಸೇರ್ಪಡೆ
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
Folk singer; ಪದ್ಮಭೂಷಣ ಪುರಸ್ಕೃತೆ ಶಾರದಾ ಸಿನ್ಹಾ ವಿಧಿವಶ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.