ಬಿಜೆಪಿ ಗೆದ್ದಾಗೆಲ್ಲ ಬೈಂದೂರಿನ ಅಭಿವೃದ್ಧಿ ಹತ್ತು ಹೆಜ್ಜೆ ಮುಂದೆ : ಗುರುರಾಜ್ ಗಂಟಿಹೊಳೆ
ಕ್ಷೇತ್ರದಾದ್ಯಂತ ಬಿಜೆಪಿಯಿಂದ ಬೃಹತ್ ರೋಡ್ ಶೋ
Team Udayavani, May 7, 2023, 2:43 PM IST
ಕುಂದಾಪುರ: ಬೈಂದೂರು ಕ್ಷೇತ್ರದಲ್ಲಿ ಯಾವಾಗೆಲ್ಲ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೋ ಆವಾಗೆಲ್ಲ ಕ್ಷೇತ್ರದ ಅಭಿವೃದ್ಧಿ ಹತ್ತು ಹೆಜ್ಜೆ ಮುಂದೆ ಹೋಗಿದೆ. ಹಿಂದಿನ ಶಾಸಕರ ಅವಧಿಯಲ್ಲಿಯೂ 3,500 ಕೋ.ರೂ. ಅನುದಾನ ಹರಿದು ಬಂದಿದ್ದು, ಹಳ್ಳಿ- ಹಳ್ಳಿಗಳ ರಸ್ತೆ, ಚರಂಡಿ, ಕೆರೆ, ಸೇತುವೆ, ನೀರಾವರಿ ಸೌಲಭ್ಯಗಳ ಅಭಿವೃದ್ಧಿಗೆ ವರದಾನವಾಗಿದೆ. ಬಿಜೆಪಿ ಅಂದರೆ ಅಭಿವೃದ್ಧಿ. ಅಭಿವೃದ್ಧಿಯ ಪರ್ವವನ್ನೇ ತಂದದ್ದು ಬಿಜೆಪಿ. ಮುಂದೆಯೂ ಸಹಿತ ಅಭಿವೃದ್ಧಿಯೂ ಮುಂದುವರಿಯಲಿದೆ. ಅದಕ್ಕಾಗಿ ನನಗೊಂದು ಅವಕಾಶ ಕೊಡಿ ಎಂದು ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಮನವಿ ಮಾಡಿಕೊಂಡರು.
ಬೈಂದೂರು ಕ್ಷೇತ್ರದ ವಿವಿಧೆಡೆಗಳಲ್ಲಿ ಅವರು ಶುಕ್ರವಾರ ಹಾಗೂ ಗುರುವಾರ ನಡೆದ ಬೃಹತ್ ರೋಡ್ ಶೋಗಳಲ್ಲಿ ಪಾಲ್ಗೊಂಡು, ಮಾತನಾಡಿದರು.
ಉದ್ಯೋಗ- ಉದ್ಯಮ ಆದ್ಯತೆ
ನನ್ನ ಮೂಲಕ ಬೈಂದೂರಿನ ಅಭಿವೃದ್ಧಿ ಇನ್ನೊಂದು ಮಗ್ಗುಲಿಗೆ ಸಾಗಲಿದೆ. ಬೈಂದೂರಿನ ಜನರ ಆಶೀರ್ವಾದ ಮಾಡುವ ನಿರೀಕ್ಷೆಯಿದೆ. ರಸ್ತೆ, ನೆಟÌರ್ಕ್‌ನಂತಹ ಮೂಲಭೂತ ಸೌಕರ್ಯಗಳ ಸಮಸ್ಯೆಗಳು ಕೊನೆಗೊಳ್ಳಬೇಕು ಎನ್ನುವುದೇ ನನ್ನ ಪ್ರಥಮ ಆದ್ಯತೆ. ಅದಲ್ಲದೆ ಶಿಕ್ಷಣ ಪಡೆದು ದೂರ-ದೂರದ ಊರುಗಳಲ್ಲಿ ಉದ್ಯೋಗಕ್ಕೆ ತೆರಳದಂತೆ ಇಲ್ಲಿಯೇ ಉದ್ಯೋಗ ಸೃಷ್ಟಿ, ಉದ್ಯಮ ಆರಂಭಕ್ಕೆ ಪೂರಕ ವಾತಾವರಣ ನಿರ್ಮಿಸಿ ಕೊಡಲು ಪ್ರಯತ್ನ ಪಡುವೆ ಎಂದವರು ಭರವಸೆ ನೀಡಿದರು.
ಬೈಂದೂರಿನಾದ್ಯಂತ ರೋಡ್ ಶೋ
ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಪರ ಬೈಂದೂರು ಕ್ಷೇತ್ರದಾದ್ಯಂತ ಕಳೆದೆರಡು ದಿನಗಳಿಂದ ಬೃಹತ್ ರೋಡ್ ಶೋಗಳು ನಡೆಯಿತು. ಈ ರೋಡ್ ಶೋಗೆ ಬಹುತೇಕ ಎಲ್ಲ ಕಡೆಗಳಿಂದಲೂ ಜನರಿಂದ, ಪಕ್ಷದ ಕಾರ್ಯಕರ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಉಪ್ಪಿನಕುದ್ರು, ತಲ್ಲೂರು, ಹಟ್ಟಿಯಂಗಡಿ, ಗುಲ್ವಾಡಿ, ನೇರಳಕಟ್ಟೆ ಪೇಟೆ, ನೆಂಪು, ಇಡೂರು, ಚಿತ್ತೂರು, ಆಲೂರು ಕ್ರಾಸ್, ನೂಜಾಡಿ ಕ್ರಾಸ್, ಬಗ್ವಾಡಿ ಕ್ರಾಸ್, ಕುಂದಬಾರಂದಾಡಿ, ಹಕ್ಲಾಡಿ, ಸೇನಾಪುರ, ಗುಡ್ಡೆಯಂಗಡಿ, ಪಡುಕೋಣೆ, ಮರವಂತೆ, ಶಿರೂರು, ಪಡುವರಿ, ಬೈಂದೂರು, ಯಡ್ತರೆ, ಗೋಳಿಹೊಳೆ, ಯಳಜಿತ್, ಅರೆಶಿರೂರು, ಕೊಲ್ಲೂರು, ಜಡ್ಕಲ್, ಸೆಳ್ಕೊàಡು, ಹಳ್ಳಿಹೊಳೆ, ಕಮಲಶಿಲೆ, ಆಜ್ರಿ, ಮೂಡುಬಗೆ, ಅಂಪಾರು, ಶಂಕರನಾರಾಯಣ ಮತ್ತಿತರ ಕಡೆಗಳಲ್ಲಿ ರೋಡ್ ಶೋ ನಡೆಯಿತು.
ನಟರಾದ ಪ್ರಮೋದ್ ಶೆಟ್ಟಿ, ಶೈನ್ ಶೆಟ್ಟಿ, ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ಬಿಜೆಪಿ ಉಸ್ತುವಾರಿ ಬ್ರಿಜೇಶ್ ಚೌಟ, ಪ್ರಮುಖರಾದ ಸುರೇಶ್ ಶೆಟ್ಟಿ, ಆನಂದ ಖಾರ್ವಿ, ರೋಹಿತ್ ಕುಮಾರ್ ಶೆಟ್ಟಿ, ಗೋವಿಂದ ಬಾಬು ಪೂಜಾರಿ, ಸದಾನಂದ ಉಪ್ಪಿನಕುದ್ರು, ಕರಣ್ ಪೂಜಾರಿ, ಮತ್ತಿತರರು ಪಾಲ್ಗೊಂಡಿದ್ದರು.
ಅಭಿವೃದ್ಧಿಯೇ ಗಂಟಿಹೊಳೆ ಗೆಲುವಿಗೆ ಶ್ರೀ ರಕ್ಷೆ
ಬೈಂದೂರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಮಾಡಿರುವ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳೇ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಗೆಲುವಿಗೆ ಶ್ರೀ ರಕ್ಷೆಯಾಗಲಿದೆ. ಕ್ಷೇತ್ರದಾದ್ಯಂತ ಗುರುರಾಜ್ ಹಾಗೂ ಬಿಜೆಪಿಗೆ ಜನರು ನೀಡುತ್ತಿರುವ ಬೆಂಬಲವು ಖಂಡಿತ ಗೆಲುವಿಗೆ ಸಹಕಾರಿಯಾಗಲಿದೆ. ಅಭಿವೃದ್ಧಿ ಕಾರ್ಯ, ಹಿಂದುತ್ವ, ಯುವ ಚಿಂತನೆ, ಶೈಕ್ಷಣಿಕ, ಪ್ರವಾಸೋದ್ಯಮ, ಮೀನುಗಾರಿಕೆ, ಉದ್ಯೋಗ ಸೃಷ್ಟಿ, ಕೈಗಾರಿಕೆಗಳಿಗೆ ಉತ್ತೇಜನದಂತಹ ದೂರದೃಷ್ಟಿ ಚಿಂತನೆ ಅವರಲ್ಲಿದೆ.
– ಕೆ. ಲಕ್ಷ್ಮಿನಾರಾಯಣ, ಬೈಂದೂರಿನ ಮಾಜಿ ಶಾಸಕರು
ಹಳ್ಳಿ-ಹಳ್ಳಿಗಳಲ್ಲಿ ಸುತ್ತಾಡಿದಾಗ ಜನರಿಂದ ಅಪಾರ ಪ್ರೀತಿ ವ್ಯಕ್ತವಾಗುತ್ತಿದ್ದು, ಅದನ್ನು ಇಟ್ಟುಕೊಂಡು ಋಣವನ್ನು ತೀರಿಸುವ ಸೇವೆ ಮಾಡುವೆ. ಸುಕುಮಾರ್ ಶೆಟ್ರಾ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಭರವಸೆಗಳ ಪೈಕಿ ಶೇ. 90 ರಷ್ಟನ್ನು ಈಡೇರಿಸಿದ್ದಾರೆ. ನಮಗೆ ರಸ್ತೆ ಬಂದಿದ್ದು, ಬಿ.ವೈ. ರಾಘವೇಂದ್ರ ಹಾಗೂ ಸುಕುಮಾರ್ ಶೆಟ್ಟರಿಂದಾಗಿ ಅನ್ನುವ ಮಾತುಗಳು ಹಳ್ಳಿ-ಹಳ್ಳಿಗಳಲ್ಲಿ ಕೇಳಿ ಬರುತ್ತಿದೆ. ಇನ್ನುಳಿದ ಶೇ. 10 ರಷ್ಟು ಬಾಕಿಯಿದ್ದು, ಅದನ್ನು ಪೂರೈಸುವ ಜತೆಗೆ, ಇನ್ನಷ್ಟು ಅಭಿವೃದ್ದಿಯ ಕಲ್ಪನೆ ಸಾಕಾರಗೊಳ್ಳಲಿದೆ.
– ಗುರುರಾಜ್ ಗಂಟಿಹೊಳೆ, ಬಿಜೆಪಿ ಅಭ್ಯರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.