Arthroscopic surgery ಹಾಗೆಂದರೇನು?


Team Udayavani, May 7, 2023, 3:30 PM IST

Arthroscopic surgery ಹಾಗೆಂದರೇನು?

ಆರ್ಥ್ರೋಸ್ಕೊಪಿ ಎಂಬುದಾಗಿಯೂ ಕರೆಯಲ್ಪಡುವ ಆರ್ಥ್ರೋಸ್ಕೊಪಿಕ್‌ ಶಸ್ತ್ರಚಿಕಿತ್ಸೆ ಎಂದರೆ ಎಲುಬು ಸಂಧಿಗಳಿಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಅತ್ಯಂತ ಕನಿಷ್ಠ ಗಾಯ ಮಾಡುವ ಮೂಲಕ ಪತ್ತೆ ಹಚ್ಚಿ ಚಿಕಿತ್ಸೆ ಒದಗಿಸುವ ಒಂದು ವಿಧಾನ. ಈ ಚಿಕಿತ್ಸಾ ಪ್ರಕ್ರಿಯೆಯಲ್ಲಿ ದೊಡ್ಡ ಗಾಯವನ್ನು ಮಾಡದೆಯೇ ಸಂಧಿಯ ಒಳಭಾಗವನ್ನು ವೀಕ್ಷಿಸುವುದಕ್ಕಾಗಿ ಆರ್ಥ್ರೋಸ್ಕೊಪಿ ಎಂದು ಕರೆಯಲಾಗುವ, ಪುಟ್ಟ ದೀಪ ಮತ್ತು ಕೆಮರಾ ಜೋಡಿಸಿರುವ ಸಣ್ಣ ಕೊಳವೆಯನ್ನು ಉಪಯೋಗಿಸಲಾಗುತ್ತದೆ. ಇದನ್ನು ಮೊಣಕಾಲು, ಭುಜ, ಸೊಂಟ, ಹಿಮ್ಮಡಿ, ಮೊಣಕೈ ಮತ್ತು ಮಣಿಕಟ್ಟುಗಳಂತಹ ಸಂಧಿಗಳಲ್ಲಿ ಉಂಟಾಗಿರುವ ಗಾಯ, ಕಾರ್ಟಿಲೇಜ್‌ ಹರಿಯುವಿಕೆ, ಲಿಗಮೆಂಟ್‌ಗೆ ಆಗಿರುವ ಹಾನಿ, ಉರಿಯೂತ ಮತ್ತು ಅಸ್ಥಿರತೆಯಂತಹ ತೊಂದರೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಸಂಧಿಯ ಡಿಬ್ರಿಜ್‌ಮೆಂಟ್‌, ಲಿಗಮೆಂಟ್‌ ಪುನಾರಚನೆ, ಮೆನಿಸ್ಕಸ್‌ ದುರಸ್ತಿ ಮತ್ತು ಸಿನೊವೆಕ್ಟಮಿಯಂತಹ ಸಂಧಿ ಶಸ್ತ್ರಚಿಕಿತ್ಸೆಗಳಿಗೂ ಆರ್ಥ್ರೋಸ್ಕೊಪಿಯನ್ನು ಉಪಯೋಗಿಸಲಾಗುತ್ತದೆ.

ಈ ಚಿಕಿತ್ಸಾ ಪ್ರಕ್ರಿಯೆಯ ಸಂದರ್ಭದಲ್ಲಿ ಶಸ್ತ್ರಚಿಕಿತ್ಸಕರು ಸಂಧಿಯ ಬಳಿ ಸಣ್ಣ ರಂಧ್ರವೊಂದನ್ನು ಮಾಡುತ್ತಾರೆ, ಅದರ ಮೂಲಕ ಆರ್ಥ್ರೋಸ್ಕೋಪ್‌ ಉಪಕರಣವನ್ನು ಒಳಕಳುಹಿಸಿ ಮಾನಿಟರ್‌ ಮೇಲೆ ಸಂಧಿಯ ಒಳಭಾಗವನ್ನು ವೀಕ್ಷಿಸುತ್ತಾರೆ. ಆಥ್ರೊìಸ್ಕೋಪ್‌ ಒದಗಿಸುವ ರಿಯಲ್‌ ಟೈಮ್‌ ಚಿತ್ರಗಳಿಂದಾಗಿ ಸಮಸ್ಯೆಯನ್ನು ನಿಖರವಾಗಿ ಪತ್ತೆ ಹಚ್ಚಲು ಮಾತ್ರವಲ್ಲದೆ ಶಸ್ತ್ರಚಿಕಿತ್ಸಾ ಉಪಕರಣಗಳ ಮೂಲಕ ಅಗತ್ಯ ದುರಸ್ತಿ ಮತ್ತು ಚಿಕಿತ್ಸೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಇನ್ನೊಂದು ಸಣ್ಣ ರಂಧ್ರದ ಮೂಲಕ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಕಳುಹಿಸಿ ಸಂಧಿಯ ಒಳಗಿನ ಅಂಗಾಂಶಗಳನ್ನು ಚುಟುಕಾಗಿಸಲು, ತೆಗೆದುಹಾಕಲು, ದುರಸ್ತಿ ಮಾಡಲು ಅಥವಾ ಪುನಾರಚಿಸಲು ಸಾಧ್ಯವಾಗುತ್ತದೆ.

ಆಥ್ರೊಸ್ಕೊಪಿಕ್‌ ಶಸ್ತ್ರಚಿಕಿತ್ಸೆಯ ಗಮನಾರ್ಹ ಪ್ರಯೋಜನ ಎಂದರೆ ಸಾಂಪ್ರದಾಯಿಕ, ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ಇದರಲ್ಲಿ ಉಂಟಾಗುವ ಗಾಯ ಅತ್ಯಂತ ಸಣ್ಣದು. ಇದರಿಂದಾಗಿ ನೋವು ಕಡಿಮೆ, ಗಾಯದ ಗುರುತು ಉಳಿಯುವುದು ಅತ್ಯಲ್ಪ, ಗುಣವಾಗುವುದು ಬೇಗ. ಇದನ್ನು ಸಾಮಾನ್ಯವಾಗಿ ಹೊರರೋಗಿಯಾಗಿ ದಾಖಲಿಸಿ ನಡೆಸಲಾಗುತ್ತದೆ, ಇದರಿಂದಾಗಿ ರೋಗಿ ಶಸ್ತ್ರಚಿಕಿತ್ಸೆಗೆ ಒಳಗಾದ ದಿನವೇ ಮನೆಗೆ ವಾಪಸಾಗಲು ಸಾಧ್ಯವಾಗುತ್ತದೆ. ಇತರ ವೈದ್ಯಕೀಯ ದರ್ಶಿಕೆ ವಿಧಾನಗಳಿಗೆ ಹೋಲಿಸಿದರೆ ಅಥ್ರೊಸ್ಕೊಪಿಯು ಸಂಧಿಯ ಹೆಚ್ಚು ನಿಖರವಾದ ಮತ್ತು ವಿವರವಾದ ಚಿತ್ರಣವನ್ನು ಒದಗಿಸುತ್ತದೆ; ಇದರಿಂದಾಗಿ ನಿಖರವಾದ ಶಸ್ತ್ರಚಿಕಿತ್ಸೆಗಳನ್ನು ನಡೆಸುವುದು ಸಾಧ್ಯವಾಗುತ್ತದೆ.

ಆದರೆ, ಎಲ್ಲ ಶಸ್ತ್ರಚಿಕಿತ್ಸಾ ವಿಧಾನಗಳಂತೆ ಆಥ್ರೊìಸ್ಕೊಪಿಯಲ್ಲಿಯೂ ಕೆಲವು ಅಪಾಯ ಸಾಧ್ಯತೆಗಳು ಇವೆ. ಸೋಂಕು, ರಕ್ತಸ್ರಾವ, ನರ ಅಥವಾ ರಕ್ತನಾಳಕ್ಕೆ ಹಾನಿ ಮತ್ತು ಅರವಳಿಕೆಯಿಂದ ಅಡ್ಡ ಪರಿಣಾಮಗಳು ಇದರಲ್ಲಿ ಸೇರಿವೆ. ಶಸ್ತ್ರಚಿಕಿತ್ಸೆಯ ವಿಧ ಮತ್ತು ಸಂಕೀರ್ಣತೆ ಹಾಗೂ ರೋಗಿಯ ಸ್ಥಿತಿ ಮತ್ತು ಶಸ್ತ್ರಚಿಕಿತ್ಸೆಗೆ ಪ್ರತಿಸ್ಪಂದನೆಯನ್ನು ಅವಲಂಬಿಸಿ ಚೇತರಿಸಿಕೊಳ್ಳುವ ಸಮಯ ಮತ್ತು ಫ‌ಲಿತಾಂಶ ಬದಲಾಗಬಹುದಾಗಿದೆ.

ಸಂಧಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಒದಗಿಸುವ ಕಡಿಮೆ ಗಾಯ ಮತ್ತು ನೋವಿನ ಚಿಕಿತ್ಸಾ ವಿಧಾನವಾಗಿ ಉಪಯೋಗಕ್ಕೆ ಬರುವ ಮೂಲಕ ಆರ್ಥ್ರೋಸ್ಕೊಪಿಕ್‌ ಶಸ್ತ್ರಚಿಕಿತ್ಸೆಯು ಮೂಳೆ ಚಿಕಿತ್ಸಾ ವಿಭಾಗದಲ್ಲಿ ಹೊಸ ಕ್ರಾಂತಿಯನ್ನೇ ಉಂಟು ಮಾಡಿದೆ. ಸಂಧಿಗಳಿಗೆ ಸಂಬಂಧಿಸಿದ ಗಾಯಗಳು ಮತ್ತು ಸಮಸ್ಯೆಗಳನ್ನು ನಿರ್ವಹಿಸಲು ಇದನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ ರೋಗಿಗಳು ಬೇಗನೆ ಗುಣ ಹೊಂದಿ, ಸಂಧಿಗಳ ಕಾರ್ಯಕ್ಷಮತೆ ಉತ್ತಮಗೊಂಡು ತಮ್ಮ ದೈನಿಕ ಚಟುವಟಿಕೆಗಳನ್ನು ಚೆನ್ನಾಗಿ ನಡೆಸುವುದು ಸಾಧ್ಯವಾಗುತ್ತಿದೆ.

ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ಇರುವ ಆಥೊìಪೆಡಿಕ್‌ ವಿಭಾಗವು ಅನುಭವಿ ಮತ್ತು ನಿಪುಣ ಆಥೊìಪೆಡಿಕ್‌ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಆಥ್ರೊìಸ್ಕೊಪಿ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ಅಗತ್ಯವಾದ ಗುಣಮಟ್ಟದ ಉಪಕರಣಗಳನ್ನು ಹೊಂದಿದೆ.

-ಡಾ| ಆತ್ಮಾನಂದ ಎಸ್‌. ಹೆಗ್ಡೆ
ಪ್ರೊಫೆಸರ್‌ ಮತ್ತು ಯೂನಿಟ್‌ ಮುಖ್ಯಸ್ಥರು, ಆರ್ಥ್ರೋಪೆಡಿಕ್‌ ವಿಭಾಗ
ಕೆಎಂಸಿ ಆಸ್ಪತ್ರೆ, ಅತ್ತಾವರ, ಮಂಗಳೂರು

ಟಾಪ್ ನ್ಯೂಸ್

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶನ: ಸುಗಮಗೊಳಿಸಲು ಬಯಸಿದ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Chhattisgarh: ಐಇಡಿ ಸ್ಫೋ*ಟ: ಪೊಲೀಸ್‌ ಸಿಬ್ಬಂದಿಗೆ ಗಾಯ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.