“ಧೋನಿ ನಾಯಕರಾಗಿದ್ದರೆ ಆರ್ ಸಿಬಿ ಮೂರು ಸಲ ಐಪಿಎಲ್ ಕಪ್ ಗೆಲ್ಲುತ್ತಿತ್ತು’
Team Udayavani, May 8, 2023, 12:39 PM IST
ನವದೆಹಲಿ: ಒಂದು ವೇಳೆ ಮಹೇಂದ್ರ ಸಿಂಗ್ ಧೋನಿ ಆರ್‌ಸಿಬಿ ತಂಡದ ನಾಯಕರಾಗಿದ್ದರೆ, ತಂಡ ಇಷ್ಟರಲ್ಲಿ ಮೂರು ಸಲ ಚಾಂಪಿಯನ್ ಆಗಿರುತ್ತಿತ್ತು ಎಂದಿದ್ದಾರೆ ಪಾಕಿಸ್ತಾನದ ಲೆಜೆಂಡ್ರಿ ವೇಗಿ ವಾಸಿಮ್ ಅಕ್ರಮ್!
ಐಪಿಎಲ್‌ನ ಅತ್ಯಂತ ನತದೃಷ್ಟ ತಂಡಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ ಬೆಂಗಳೂರು, 2009, 2011 ಮತ್ತು 2016ರಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿತ್ತು. ಆದರೆ ಮೂರೂ ಸಲ ರನ್ನರ್ ಅಪ್ ಸ್ಥಾನಕ್ಕೆ ಸಮಾಧಾನಪಟ್ಟಿತ್ತು. ಒಂದು ವೇಳೆ ಮಹೇಂದ್ರ ಸಿಂಗ್ ಧೋನಿ ಆರ್‌ಸಿಬಿ ತಂಡದ ನಾಯಕರಾಗಿದ್ದರೆ, ತಂಡ ಇಷ್ಟರಲ್ಲಿ ಮೂರು ಸಲ ಚಾಂಪಿಯನ್ ಆಗಿರುತ್ತಿತ್ತು ಎಂಬುದಾಗಿ ಕ್ರಿಕೆಟ್ ವೆಬ್‌ಸೈಟ್ ಜತೆಗಿನ ಸಂದರ್ಶನವೊಂದರಲ್ಲಿ ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಎಸ್ಎಸ್ಎಲ್ ಸಿ ಫಲಿತಾಂಶ: ಪೂರಕ ಪರೀಕ್ಷೆ ನೋಂದಣಿಗೆ ಮೇ.15 ರವರೆಗೆ ಇದೆ ಅವಕಾಶ
“ಅಪಾರ ಅಭಿಮಾನಿಗಳ ಬೆಂಬಲವನ್ನು ಹೊಂದಿರುವ ಆರ್‌ಸಿಬಿ ಈವರೆಗೆ ಒಮ್ಮೆಯೂ ಚಾಂಪಿಯನ್ ಆಗದಿದೇ ಇರುವುದು ದೌರ್ಭಾಗ್ಯ. ಕ್ರಿಕೆಟಿನ ಆಧುನಿಕ ಯುಗದ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಹೊಂದಿರುವ ತಂಡವಿದು. ಹಿಂದೆ ಗೇಲ್, ಎಬಿಡಿ ಅವರಂಥ ಸ್ಫೋಟಕ ಆಟಗಾರರಿದ್ದರು. ಆದರೂ ಗೆಲುವು ಮರೀಚಿಕೆಯೇ ಆಗಿದೆ. ಆ ಮೂರು ಫೈನಲ್‌ಗಳ ವೇಳೆ ಧೋನಿಯವರ ನಾಯಕತ್ವ ಹೊಂದಿದ್ದೇ ಆದಲ್ಲಿ ಆರ್‌ಸಿಬಿ ಖಂಡಿತವಾಗಿಯೂ ಕಪ್ ಗೆಲ್ಲುತ್ತಿತ್ತು’ ಎಂದಿದ್ದಾರೆ.
“ಧೋನಿ ಕ್ರಿಕೆಟ್‌ನ ವಿಶ್ವದ ಮಹಾನ್ ಹಾಗೂ ಜಾಣ ನಾಯಕರಲ್ಲೊಬ್ಬರು. ಅವರಿಗೆ ತಂಡವನ್ನು ಮುನ್ನಡೆಸುವುದೊಂದು ಹವ್ಯಾಸವೇ ಆಗಿದೆ. ಆಟಗಾರರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಅವರನ್ನು ಹೇಗೆ ಹುರಿದುಂಬಿಸಬೇಕು, ಅವರ ಆಟವನ್ನು ಹೇಗೆ ಹೊರತೆಗೆಯಬೇಕು ಎಂಬುದೆಲ್ಲ ಚೆನ್ನಾಗಿ ಕರಗತವಾಗಿದೆ. ಖಂಡಿತವಾಗಿಯೂ ಧೋನಿ ಕೂಲ್ ಅಲ್ಲ, ಹೊರಗಿನಿಂದ ಹಾಗೆ ತೋರಿಸಿಕೊಳ್ಳುತ್ತಾರೆ, ಅಷ್ಟೇ. ಆಟಗಾರರಲ್ಲಿ ಆತ್ಮವಿಶ್ವಾಸ ಮೂಡಿಸುವ ವಿಧಾನ ಅವರ ಹೆಚ್ಚುಗಾರಿಕೆ,’ ಎಂದು ಅಕ್ರಮ್ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.