Karnataka Election 2023;ಸರ್ವ ಸಮುದಾಯಗಳ ಏಳಿಗೆಗೆ ಬಿಜೆಪಿಗೆ ಬದ್ಧ: ಯಶ್‌ಪಾಲ್ ಸುವರ್ಣ
ಉಡುಪಿ ನಗರದಲ್ಲಿ ಬಿಜೆಪಿ ಪ್ರಚಾರ ಸಭೆ, ವಿವಿಧಡೆ ಮತ ಯಾಚನೆ
Team Udayavani, May 8, 2023, 1:04 PM IST
ಉಡುಪಿ: ಸಮಾಜದ ಸರ್ವ ಸಮುದಾಯಗಳ ಏಳಿಗೆಗೆ ಪಣತೊಟ್ಟು ಬಿಜೆಪಿ ಸರಕಾರ ಕಾರ್ಯ ನಿರ್ವಹಿಸುವ ಮೂಲಕ ಸರ್ವಸ್ಪರ್ಶಿ ಸರ್ವವ್ಯಾಪಿ ಆಡಳಿತದ ಮೂಲಕ ಜನ ಸಾಮಾನ್ಯರಲ್ಲಿ ಹೊಸ ಭರವಸೆ ಮೂಡಿಸಿದೆ ಎಂದು ಬಿಜೆಪಿ ಅಭ್ಯರ್ಥಿ ಯಶ್‌ಪಾಲ್ ಸುವರ್ಣ ಹೇಳಿದರು.
ಅವರು ಚಿಟಾ³ಡಿಯ ದೇವಾಡಿಗರ ಸಂಘದಲ್ಲಿ ದೇವಾಡಿಗ ಸಮಾಜದ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಿ ಮಾತನಾಡಿದರು.
ದೇವಾಡಿಗ ಸಮಾಜ ನಿರಂತರವಾಗಿ ಅಭಿವೃದ್ದಿ ಪರವಾದ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ ರಾಷ್ಟ್ರೀಯವಾದಿ ಚಿಂತನೆಯ ಸರಕಾರಕ್ಕೆ ಸಹಕಾರ ನೀಡುತ್ತಿದೆ. ದೇವಾಡಿಗ ಸಮಾಜ ಸಹಿತ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ವಿಶೇಷ ಮುತವರ್ಜಿ ವಹಿಸಿದ್ದು, ಈ ಬಾರಿ ದೇವಾಡಿಗ ಸಮಾಜ ಉಡುಪಿ ಕ್ಷೇತ್ರದಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಕ್ಷೇತ್ರದ ಜನತೆಗೆ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು.
ಸರಕಾರದ ಯೋಜನೆಗಳನ್ನು ಮುಟ್ಟಿಸಲಿ:
ಸಭೆಯಲ್ಲಿ ಉಪಸ್ಥಿತರಿದ್ದ ಗಣೇಶ್ ದೇವಾಡಿಗ ಮಾತನಾಡಿ ದೇವಾಡಿಗ ಸಮುದಾಯದ ಹಲವಾರು ಯೋಜನೆ ಬೇಡಿಕೆಗಳಿಗೆ ಬಿಜೆಪಿ ಸರಕಾರ ಸ್ಪಂದಿಸಿದ್ದು, ಮುಂದಿನ ದಿನಗಳಲ್ಲಿ ದೇವಾಡಿಗ ಸಮುದಾಯಕ್ಕೆ ಯಶ್‌ಪಾಲ್ ಸುವರ್ಣ ಅವರು ಶಾಸಕರಾಗಿ ಹೆಚ್ಚಿನ ಸೇವೆ ಮಾಡುವ ಅವಕಾಶ ಒದಗಿ ಬರಲಿದೆ. ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆಗಳನ್ನು ಸಮಾಜಕ್ಕೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಹೇಳಿದರು.
ಸಭೆಯಲ್ಲಿ ಕಟ್ಟಡ ಸಮಿತಿ ಅಧ್ಯಕ್ಷರಾದ ರತ್ನಾಕರ ಜಿ ಎಸ್., ಸಂಘದ ಪ್ರಮುಖರಾದ ಸುದರ್ಶನ್ ಶೇರಿಗಾರ್, ಸುಂದರ ದೇವಾಡಿಗ ಉಡುಪಿ, ಸೋಮಪ್ಪ ದೇವಾಡಿಗ ಪರ್ಕಳ, ಹರೀಶ್ ದೇವಾಡಿಗ ಕುಕ್ಕಿಕಟ್ಟೆ, ದೇಜು ಶೇರಿಗಾರ್ ಗುಂಡಿ ಬೆ„ಲ್ ಹಾಗೂ ದೇವಾಡಿಗ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಸಮುದಾಯ ವ್ಯಾಪಕ ಬೆಂಬಲ:
ಬಿಜೆಪಿ ಅಭ್ಯರ್ಥಿ ಯಶ್‌ಪಾಲ್ ಸುವರ್ಣ ಅವರು ಕಳೆದ ಹಲವು ವರ್ಷಗಳಿಂದ ದೇವಾಡಿಗ ಸಮುದಾಯದೊಂದಿಗೆ ನಿಕಟ ಸಂಪರ್ಕ ಹೊಂದಿರುವ ವ್ಯಕ್ತಿ. ತನ್ನ ಸಮಾಜಮುಖೀ ಚಿಂತನೆ, ಸಹಕಾರಿ ಕ್ಷೇತ್ರ, ಹಿಂದುತ್ವದ ಯುವ ನಾಯಕರಾಗಿ ಭರವಸೆ ಮೂಡಿಸಿರುವ ಯಶ್‌ಪಾಲ್ ಸುವರ್ಣರಿಗೆ ದೇವಾಡಿಗ ಸಮುದಾಯದಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ದೇವಾಡಿಗ ಸಂಘದ ಸಮಾಜಮುಖೀ ಕಾರ್ಯಗಳಿಗೆ ಹಾಗೂ ಬೇಡಿಕೆಗಳಿಗೆ ಯಶ್‌ಪಾಲ್ ಸುವರ್ಣ ರವರು ಸ್ಪಂದಿಸಿ ಸಹಕರಿಸುವ ವಿಶ್ವಾಸವಿದೆ ದೇವಾಡಿಗ ಸಂಘದ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ರತ್ನಾಕರ ಜಿ. ಎಸ್. ಹೇಳಿದರು.
ಹಿಂದು ಕಾರ್ಯಕರ್ತರ ಪ್ರತಿನಿಧಿ:
ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧಿ ನಿಲುವಿಗೆ ಕೈಗನ್ನಡಿಯಾಗಿ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಕ್ಕೆ ಮುಂದಾಗುವ ಮೂಲಕ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದೆ. ಭಜರಂಗದಳದ ಜಿಲ್ಲಾ ಸಂಚಾಲಕರಾಗಿದ್ದ, ಹಿಂದೂತ್ವದ ವಿಚಾರದಲ್ಲಿ ಎಂದೂ ರಾಜಿಯಾಗದ ದಿಟ್ಟ ನಿಲುವಿನ ಯಶ್‌ಪಾಲ್ ಸುವರ್ಣ ಈ ಬಾರಿ ಹಿಂದೂ ಕಾರ್ಯಕರ್ತರ ಪ್ರತಿನಿಧಿಯಾಗಿ ಉಡುಪಿ ಕ್ಷೇತ್ರದ ಜನತೆ ಗೆಲ್ಲಿಸುವ ಮೂಲಕ ಕಾಂಗ್ರೆಸಿಗೆ ತಕ್ಕ ಉತ್ತರ ನೀಡಲಿದೆ.
ಸಮಸ್ತ ಹಿಂದೂ ಸಂಘಟನೆಗಳ ಕಾರ್ಯಕರ್ತರು ಯಶ್ ಪಾಲ್ ಸುವರ್ಣ ಅವರ ಗೆಲುವಿಗೆ ಪಣ ತೊಟ್ಟಿದ್ದು, ಈ ಮೂಲಕ ಹಿಂದೂ ಕಾರ್ಯಕರ್ತರ ಶಕ್ತಿಯನ್ನು ಕಾಂಗ್ರೆಸಿಗೆ ತೋರಿಸಲಿದ್ದಾರೆ. ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗ ಸಹ ಸಂಯೋಜಕ ಮಹೇಶ್ ಬೈಲೂರು ಹೇಳಿದರು.
ಕೃಷ್ಣ ನಗರಿಯ ಸೇವೆ ಸಲ್ಲಿಸುವ ಅವಕಾಶ:
ಹಿಂದುತ್ವ, ರಾಷ್ಟ್ರೀಯ ವಿಚಾರಧಾರೆಯ ಮೂಲಕ ಎಳೆಯ ವಯಸ್ಸಿನಲ್ಲಿಯೇ ನಾಯಕತ್ವದ ಮೂಲಕ ಗುರುತಿಸಿಕೊಂಡಿರುವ ಯಶ್‌ಪಾಲ್ ಸುವರ್ಣ ಈ ಬಾರಿ ಬಿಜೆಪಿ ಪಕ್ಷದ ಉಡುಪಿ ಅಭ್ಯರ್ಥಿಯಾಗಿರುರುವುದು ಸಂತಸ ತಂದಿದೆ. ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ಪರಮ ಭಕ್ತನಾಗಿ,ಅಷ್ಟಮಠಗಳ ಶ್ರೀಪಾದಂಗಳವರ ನಿಕಟ ಸಂಪರ್ಕ, ಪರ್ಯಾಯ ಸಂದರ್ಭದಲ್ಲಿ ಶೋಭಾ ಯಾತ್ರೆ ಹಾಗೂ ಶ್ರೀ ಮಠದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಧಾರ್ಮಿಕ ಬದ್ಧತೆಯನ್ನು ತೋರಿದ್ದಾರೆ. ಗೋ ರಕ್ಷಣೆ, ರಾಷ್ಟ್ರೀಯವಾದಿ ಚಿಂತನೆಯಲ್ಲಿ ದಿಟ್ಟ ಧ್ವನಿಯಾಗಿ, ನಗರಸಭಾ ಸದಸ್ಯರಾಗಿ, ಸಹಕಾರಿ ಕ್ಷೇತ್ರದ ಸಾಧನೆಗೆ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಯುವ ಸಾಧಕನಿಗೆ ಈ ಬಾರಿ ಶಾಸಕರಾಗಿ ಪೊಡವಿಗೊಡೆಯ ಶ್ರೀಕೃಷ್ಣನ ನಗರಿಯ ಸೇವೆ ಸಲ್ಲಿಸುವ ಅವಕಾಶ ಉಡುಪಿಯ ಜನತೆ ನೀಡುವ ವಿಶ್ವಾಸವಿದೆ ಎಂದು ಉಡುಪಿ ಗೋವಿಂದ ರಾಜ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.