ತಿಪಟೂರಿಗೆ ಕೈಕೊಟ್ಟ ಪೂರ್ವ ಮುಂಗಾರು: ರೈತರಲ್ಲಿ ಆತಂಕ
Team Udayavani, May 8, 2023, 3:12 PM IST
ತಿಪಟೂರು: ತಾಲೂಕಿಗೆ ಈ ಬಾರಿ ಮೇ ಮೊದಲ ವಾರ ಮುಗಿದರೂ ಮಳೆರಾಯ ಕೃಪೆ ತೋರದ್ದ ರಿಂದ ಹೊಲಮಾಳಗಳೆಲ್ಲಾ ಕಂಗಾಡಾಗಿ ರೈತರು ಮಳೆಗಾಗಿ ಆಕಾಶದಿಟ್ಟಿಸುವಂತಾಗಿದೆ.
ಕಳೆದ ವರ್ಷ ಏಪ್ರಿಲ್ 2ನೇ ವಾರದಿಂದಲೇ ಪೂರ್ವ ಮುಂಗಾರು ಮಳೆ ಕೃಪೆ ತೋರಿದ್ದರಿಂದ ರೈತರು ಖುಷಿಯಿಂದ ಪೂರ್ವಮುಂಗಾರು ಬೆಳೆಗಳನ್ನು ಬಿತ್ತನೆ ಮಾಡಿದ್ದಲ್ಲದೆ, ಎಲ್ಲೆಲ್ಲೂ ಹಸಿರು ಕಂಗೊಳಿಸುತ್ತಿತ್ತು.ಹೊಲಬದುಗಳಲ್ಲಿ ಜಾನುವಾರುಗಳಿಗೆ ಮೇವು ಚಿಗುರಿತ್ತು. ಹಿಂದಿನಿಂದಲೂ ವಾಡಿಕೆಯಂತೆ ತಾಲೂ ಕಿನಲ್ಲಿ ಪೂರ್ವಮುಂಗಾರು ಮಳೆಗಳಾದ ಅಶ್ವಿನಿ, ಭರಣಿ ಮಳೆಗಳು ಏಪ್ರಿಲ್ ಆರಂಭದಲ್ಲೇ ಪ್ರಾರಂಭ ವಾಗಿ ಬೇಸಿಗೆಯ ಧಗೆಯನ್ನು ಸ್ವಲ್ಪಮಟ್ಟಿ ಗಾದರೂ ತಣಿಸುತ್ತಿದ್ದವಲ್ಲದೆ, ತಾಲೂಕಿನ ಪ್ರಮುಖ ವಾಣಿಜ್ಯ ಬೆಳೆಗಳಾದ ತೆಂಗು-ಅಡಿಕೆ ಗಿಡಗಳಿಗೂ ಅನುಕೂಲವಾಗುತ್ತಿತ್ತು. ಹೆಸರು, ಉದ್ದು, ಅಲಸಂದಿ ಮತ್ತು ಎಳ್ಳು ಬೆಳೆಗಳನ್ನು ಬಿತ್ತಲು ಅನುಕೂಲವಾಗುತ್ತಿತ್ತು.
ಎರಡೂವರೆ ತಿಂಗಳಿಗೆ ಕಟಾವಿಗೆ ಬರುವ ಈ ಬೆಳೆ ಗಳನ್ನು ಬಿತ್ತಲು ಮೇ ಕೊನೆವರೆಗೂ ಸಮಯ ವಿದ್ದರೂ, ಏಪ್ರಿಲ್‌ನಲ್ಲಿ ಬರುವ ಪೂರ್ವ ಮುಂಗಾರು ಮಳೆಗೇ ಬಿತ್ತಿದರೆ ಜೂನ್ ಅಂತ್ಯಕ್ಕೆ ಅಥವಾ ಜುಲೈ ತಿಂಗಳಿಗೆ ಅದೇ ಭೂಮಿಗೆ ಮತ್ತೆ ರಾಗಿ ಬಿತ್ತಬಹುದೆಂಬ ಲೆಕ್ಕಾಚಾರದಲ್ಲಿ ಹೆಸರು, ಉದ್ದು ಮತ್ತಿತರೆ ಧಾನ್ಯಗಳನ್ನು ಪೂರ್ವ ಮುಂಗಾರು ಮಳೆಗೆ ಬಿತ್ತಲು ರೈತರು ಉತ್ಸುಕರಾಗಿರುತ್ತಾರೆ.
ಪೂರ್ವ ಮುಂಗಾರು ಮಳೆಗಳು ಏಪ್ರಿಲ್‌ನಲ್ಲಿ ಪ್ರಾರಂಭವಾಗುತ್ತಿದ್ದರಿಂದ, ಹೊಲ-ತೋಟಗಳ ಬದು, ರಸ್ತೆ ಅಂಚುಗಳಲ್ಲಿ ಹಸಿರು ಮೇವು ಚಿಗು ರೊಡೆಯುವ ಮೂಲಕ ಸ್ವಲ್ಪ ಮಟ್ಟಿಗಾದರೂ ಜಾನು ವಾರು, ಕುರಿ-ಮೇಕೆಗಳ ಹಸಿವನ್ನೂ ನೀಗಿಸುತ್ತಿದ್ದವು. ಪೂರ್ವ ಮುಂಗಾರು ಮಳೆಗಳು ಕೃಪೆ ತೋರಿದ್ದರೆ ತೆಂಗು-ಅಡಿಕೆಗೂ ವರದಾನವಾಗುತ್ತಿತ್ತು. ಅಲ್ಲದೆ ಮಳೆ ತೇವಾಂಶಕ್ಕೆ ಬೋರ್‌ವೆಲ್‌ಗಳಿಗೆ ಬಿಡುವು ಸಿಕ್ಕಿ ಅಂತರ್‌ಜಲ ಮತ್ತಷ್ಟು ದಿನ ಬಾಳಿಕೆ ಬರುತ್ತಿತ್ತು. ಆದರೆ ಈಗಾಗಲೆ ಬೋರ್‌ವೆಲ್‌ಗಳ ಅಂತರ್‌ಜಲ ಹೆಚ್ಚು ಆಳಕ್ಕಿಳಿಯುತ್ತಿದ್ದು ರೈತರು ಮಳೆರಾಯನ ಆಗಮನಕ್ಕೆ ದೈವದ ಮೊರೆ ಹೋಗುತ್ತಿದ್ದಾರೆ.
ಬಿತ್ತನೆ ಬೀಜ ಕೇಳುವವರಿಲ್ಲ: ಕೃಷಿ ಇಲಾಖೆ ಸಾಕಷ್ಟು ಪ್ರಮಾಣದಲ್ಲಿ ಪೂರ್ವಮುಂಗಾರು ಬಿತ್ತನೆ ಗಳಾದ ಹೆಸರು, ಉದ್ದು, ತೊಗರಿ ಮತ್ತಿತರೆ ಬೀಜ ಗಳನ್ನು ಸ್ಟಾಕ್ ಮಾಡಿದ್ದು ಮಳೆ ಬೀಳದ್ದರಿಂದ ಕೇಳು ವವರಿಂತಿಲ್ಲದಾಗಿದೆ. ಇದೇ ಪರಿಸ್ಥಿತಿ ಗೊಬ್ಬರದ ಅಂಗಡಿಗಳಲ್ಲೂ ಇದ್ದು ಬಿತ್ತನೆ ಬೀಜ ಮತ್ತು ಗೊಬ್ಬರವನ್ನು ಕೇಳುವವರಿಲ್ಲದಂತಾಗಿ ವ್ಯಾಪಾರಿಗಳು ತಲೆ ಮೇಲೆ ಕೈಹೊತ್ತು ಕೂರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪೂರ್ವ ಮುಂಗಾರು ಮಳೆ ಬಾರದ್ದರಿಂದ ಹೊಲಗಳಲ್ಲಿ ರಾಸುಗಳಿಗೆ ಹಸಿರು ಮೇವೂ ಸಿಗದ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ವರ್ಷ ಏಪ್ರಿಲ್ 2ನೇ ವಾರಕ್ಕೆ ಮಳೆ ಬಂದಿದ್ದರಿಂದ ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಎಳ್ಳು ಬಿತ್ತಿದ್ದು ಬಂಪರ್ ಬೆಳೆ ಬಂದಿತ್ತು. ಆದರೆ ಈ ಬಾರಿ ಮಳೆರಾಯ ತಾಲೂಕಿನ ಬಹುಭಾಗಗಳಲ್ಲಿ ಕೈಕೊಟ್ಟಿರುವುದರಿಂದ ಏನೂ ಮಾಡಲಾಗುತ್ತಿಲ್ಲ. – ಮುರುಳಿ, ರೈತ, ಮಲ್ಲೇನಹಳ್ಳಿ
ಆದಷ್ಟು ಬೇಗ ಕೆರೆಕಟ್ಟೆಗಳಿಗೆ ನೀರು ಬರುವಂತ ಮಳೆ ಬಾರ ದಿದ್ದರೆ ಜಾನುವಾರುಗಳನ್ನು ಸಲುಹುವುದು ಕಷ್ಟ. ಮಳೆ ನಿಂತು ಹೋಗಿ 6 ತಿಂಗಳಾಗಿದೆ. ಇದರಿಂದ ತೆಂಗು-ಅಡಿಕೆ ಮರಗಳನ್ನು ಉಳಿಸಿಕೊಳ್ಳಲಾಗುತ್ತಿಲ್ಲ. ಅವುಗಳ ಹರಳುಗಳು ಉದುರುತ್ತಿವೆ.-ಬಸವರಾಜು, ರೈತ, ನಾಗತೀಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.