AI ಸೃಷ್ಟಿ: ಭಾರತದ ಕ್ರಿಕೆಟಿಗರು ಪ್ರಾಯಸ್ಥರಾದಾಗ ಹೀಗಿರ್ತಾರೆ ನೋಡಿ..!
ಎಂ.ಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಚೇತೇಶ್ವರ್ ಪೂಜಾರ, ಜಸ್‌ಪ್ರೀತ್ ಬುಮ್ರಾ...
Team Udayavani, May 8, 2023, 5:58 PM IST
ಮುಂಬೈ: ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇತ್ತೀಚಿನ ಕೆಲ ದಿನಗಳಿಂದ ವಿಶ್ವದಾದ್ಯಂತ ಸುದ್ದಿಯಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಹೊಸ ಹೊಸ ಕ್ರಿಯೆಟಿವ್ ಪೋಸ್ಟ್‌ಗಳು ವೈರಲ್ ಆಗುತ್ತಿವೆ. ಕಳೆದ ಕೆಲ ದಿನಗಳ ಹಿಂದಷ್ಟೇ ವಿಶ್ವದ ಶ್ರೀಮಂತ ವ್ಯಕ್ತಿಗಳು ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿರುವ ಚಿತ್ರಗಳು ವೈರಲ್ ಆಗಿದ್ದವು. ಅದರಲ್ಲಿ ಎಲಾನ್ ಮಸ್ಕ್‌ನಿಂದ ಹಿಡಿದು ಭಾರತದ ಮುಖೇಶ್ ಅಂಬಾನಿ, ರತನ್ ಟಾಟಾ ಅವರೆಲ್ಲ ಜಿಮ್‌ನಲ್ಲಿರುವಂತೆ ಸೃಷ್ಟಿಸಲಾಗಿತ್ತು.
ಆದರೆ ಈಗ ಭಾರತೀಯ ಕ್ರಿಕೆಟ್ ತಂಟದ ಆಟಗಾರರು ಪ್ರಾಯಸ್ಥರಾದಾಗ ಯಾವ ರೀತಿ ಕಾಣಬಹುದು ಎಂಬ ಬಗೆಗಿರುವ ಫೋಟೋಗಳನ್ನು ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಿಕೊಂಡು ರಚಿಸಲಾಗಿದೆ. ಇದರಲ್ಲಿ ಭಾರತದ ಆಟಗಾರರಾದ ಎಂ. ಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಚೇತೇಶ್ವರ್ ಪೂಜಾರ, ಜಸ್‌ಪ್ರೀತ್ ಬುಮ್ರಾ ಅವರನ್ನೆಲ್ಲ ಎ.ಐ ಟೆಕ್ನಾಲಜಿ ಉಪಯೋಗಿಸಿಕೊಂಡು ಸೃಷ್ಟಿಸಲಾಗಿದ್ದು ಚಿತ್ರಗಳು ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: “ಗೆರೆ ದಾಟಬಾರದು…”: ಸಂದೀಪ್ ಶರ್ಮಾ ನೋ ಬಾಲ್ ಗೆ ಸಂಜು ಸ್ಯಾಮ್ಸನ್ ಪ್ರತಿಕ್ರಿಯೆ
View this post on Instagram
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.