ಯು-ಟರ್ನ್ ತೆರವುಗೊಳಿಸಲು ಆಗ್ರಹ
Team Udayavani, May 8, 2023, 4:27 PM IST
ದೇವನಹಳ್ಳಿ: ರಾಷ್ಟ್ರೀಯ ಹೆದ್ದಾರಿ 7ರ ಕನ್ನಮಂಗಲ ಗೇಟ್ ಬಳಿಯ ಯು- ಟರ್ನ್ ಇದ್ದು, ಯು-ಟರ್ನ್ ಅನ್ನು ಟೋಲ್ ಸಿಬ್ಬಂದಿ ಹಾಗೂ ಸಂಚಾರಿ ಪೊಲೀಸರು ಮುಚ್ಚಿರುವುದನ್ನು ಖಂಡಿಸಿ ಕನ್ನಮಂಗಲ ಮತ್ತು ಸುತ್ತ ಮುತ್ತಲಿನ ಹಳ್ಳಿಗಳ ಗ್ರಾಮಸ್ಥರಿಗೆ ಹೆಚ್ಚು ತೊಂದರೆಯಾಗುತ್ತಿರುವುದರಿಂದ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸಾಮೂಹಿಕ ಮತದಾನ ಬಹಿಷ್ಕಾರವನ್ನು ಮಾಡಲಾಗುತ್ತಿದೆ ಎಂದು ಕನ್ನಮಂಗಲ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಗ್ರಾಮಸ್ಥರು ದೇವನಹಳ್ಳಿ ತಾಲೂಕು ಆಡಳಿತ ಸೌಧದ ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಶಿವ ರಾಜ್‌ಗೆ ಮನವಿ ಪತ್ರ ಸಲ್ಲಿಸುವುದರ ಮೂಲಕ ತಮ್ಮ ಅಳಲನ್ನು ತೋಡಿಕೊಂಡರು.
ಈ ರಸ್ತೆ ಮುಚ್ಚಿರುವುದರಿಂದ ಸಾಕಷ್ಟು ಗ್ರಾಮಸ್ಥರಿಗೆ ತೊಂದರೆ ಉಂಟಾಗುತ್ತಿದೆ. ಭುವನಹಳ್ಳಿ ಮೇಲ್ಸೇತುವೆ ಇಳಿದು ಸ್ವಲ್ಪ ದೂರ ಯು-ಟರ್ನ್ ಹೋಗಿ ಮೇಲ್ಸೇತುವೆ ಕೆಳಭಾಗ ದಲ್ಲಿ ಕನ್ನಮಂಗಲ ಗೇಟ್ ಗೆ ಸುತ್ತಾಕಿಕೊಂಡು ಹೋಗ ಬೇಕು. ದೇವನಹಳ್ಳಿಗೆ ಯರ್ತಿಗಾನಹಳ್ಳಿಯಿಂದ ಹೋಗಬೇಕಾದರೆ ಸುತ್ತಾಕಿ ಕೊಂಡು ಮೇಲ್ಸೇತುವೆ ಹತ್ತಬೇಕು. ಸಾಕಷ್ಟು ಸಮಯ ವ್ಯತ್ಯಯವಾಗುತ್ತಿದೆ.ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಬಚ್ಚಹಳ್ಳಿ ಗೇಟ್‌ಬಳಿ ಹಲವು ಅಪಘಾತಗಳಿಗೂ ಕಾರಣವಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸಿ, ಅಂಡರ್‌ಪಾಸ್‌ಗೆ ಹೋಗಲು ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಮಾಡಬೇಕು. ಜತೆಗೆ ಸಾರ್ವಜನಿಕರಿಗೆ ಅನು ಕೂಲವಾಗುಂತೆ ಮುಚ್ಚಿರುವ ಹೆದ್ದಾರಿ ತಿರು ವನ್ನು ತೆರವು ಗೊಳಿಸಿ, ನಾಮಫಲಕ ಅಳವಡಿಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಡಬೇಕು ಚುನಾವಣೆಗೆ ಸಂದರ್ಭಕ್ಕೆ ತಕ್ಕಂತೆ ಏನಾದರೂ ಯು ಟರ್ನ್ ಮುಚ್ಚಿ ರುವುದನ್ನು ತೆರವುಗೊಳಿಸದ ಪಕ್ಷದಲ್ಲಿ ಸಾಮೂಹಿಕವಾಗಿ ಮತದಾನ ಮಾಡದೆ ಬಹಿಷ್ಕರಿಸಲಾಗುತ್ತದೆ.
ಸುಮಾರು 10ಸಾವಿರಕ್ಕೂ ಹೆಚ್ಚು ನಿವಾಸಿಗಳು ಯುಟರ್ನ್ ಬಳಕೆಯಲ್ಲಿ ಹೆಚ್ಚು ತೊಂದರೆ ಯನ್ನು ಅನುಭವಿಸುತ್ತಿದ್ದಾರೆ. ಯುಟರ್ನ್ ಸ್ಥಳವನ್ನು ತಲುಪಲು ಆಂಬ್ಯುಲೆನ್ಸ್ ಹೆಚ್ಚುವರಿ ಯಾಗಿ ಐದಾರು ಕಿ.ಮೀ. ಕ್ರಮಿಸ ಬೇಕಾದ ಪರಿಸ್ಥಿತಿ ಇದ್ದು, ಅನೇಕ ಶಾಲಾ ಕಾಲೇಜುಗಳಿದ್ದು, ವಿದ್ಯಾರ್ಥಿಗಳಿಗೆ ಸಾಕಷ್ಟು ಅನಾನುಕೂಲ ವಾಗುತ್ತಿದೆ ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.