ರಾಜಸ್ಥಾನದ ಡೆಗಾನಾ ಪ್ರದೇಶದಲ್ಲಿ ಹೊಸ ಲೀಥಿಯಂ “ನಿಧಿ” ಪತ್ತೆ!
ಚೀನಾದ ಮೇಲಿನ ಅವಲಂಬನೆ ತಗ್ಗಿಸುವಲ್ಲೂ ನಿರ್ಣಾಯಕ ಪಾತ್ರ
Team Udayavani, May 9, 2023, 7:59 AM IST
ಜೈಪುರ: ಭಾರತೀಯರಿಗೆ ಸಿಹಿಸುದ್ದಿ ಎಂಬಂತೆ, ರಾಜಸ್ಥಾನದಲ್ಲೊಂದು “ನಿಧಿ” ಸಿಕ್ಕಿದೆ! ಎಲ್ಲವೂ ಅಂದುಕೊಂಡಂತೆ ನಡೆದರೆ ಈ ನಿಧಿಯು ಮುಂದಿನ ದಿನಗಳಲ್ಲಿ ಚೀನಾದ ಮೇಲಿನ ಭಾರತದ ಅವಲಂಬನೆಯನ್ನು ತಗ್ಗಿಸಿ, ದೇಶವನ್ನು ಸ್ವಾವಲಂಬಿಯಾಗಿಸಲಿದೆ!
ಹೌದು, ರಾಜಸ್ಥಾನದ ಡೆಗಾನಾ ಎಂಬ ಪ್ರದೇಶದಲ್ಲಿ ಭಾರೀ ಪ್ರಮಾಣದ ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ. ರಾಜಸ್ಥಾನ ಸರ್ಕಾರದ ಅಧಿಕಾರಿಗಳೇ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಭಾರತೀಯ ಭೌಗೋಳಿಕ ಸರ್ವೇ ಮತ್ತು ಗಣಿ ಅಧಿಕಾರಿಗಳು ಹೇಳುವ ಪ್ರಕಾರ, ಡೆಗಾನಾದಲ್ಲಿ ಪತ್ತೆಯಾಗಿರುವ ಲೀಥಿಯಂ ನಿಕ್ಷೇಪವು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಪತ್ತೆಯಾಗಿದ್ದುದಕ್ಕಿಂತ ಅಗಾಧ ಪ್ರಮಾಣದಲ್ಲಿದೆ. ಅಂದರೆ, ಭಾರತದ ಒಟ್ಟಾರೆ ಬೇಡಿಕೆಯ ಶೇ.80ರಷ್ಟನ್ನು ಪೂರೈಸುವಷ್ಟು ಲೀಥಿಯಂ ಇಲ್ಲಿದೆಯಂತೆ.
ಈಗಲೂ ಭಾರತವು ಲೀಥಿಯಂಗಾಗಿ ಚೀನಾವನ್ನೇ ಅವಲಂಬಿಸಿದೆ. ರಾಜಸ್ಥಾನದಲ್ಲಿ ಪತ್ತೆಯಾಗಿರುವ ಲೀಥಿಯಂ ನಿಧಿಯಿಂದ ಭಾರತಕ್ಕೆ ಬಂಪರ್ ಹೊಡೆಯಲಿದ್ದು, ಲೀಥಿಯಂ ಕ್ಷೇತ್ರದಲ್ಲಿನ ಚೀನಾದ ಏಕಸ್ವಾಮ್ಯವು ಅಂತ್ಯಗೊಳ್ಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ವಿಮಾನಯಾನ, ವಿಂಡ್ ಟರ್ಬೈನ್, ಸೌರ ಫಲಕಗಳು, ವಿದ್ಯುತ್‌ಚಾಲಿತ ವಾಹನಗಳು, ಮೊಬೈಲ್‌ಗಳು, ಮನೆಗಳಲ್ಲಿ ಉಪಯೋಗಿಸುವ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಚಾರ್ಜ್ ಮಾಡಲಾಗುವ ಸಾಧನಗಳಲ್ಲೂ ಲೀಥಿಯಂ ಅನ್ನೇ ಬಳಸಲಾಗುತ್ತಿದೆ. ಅಲ್ಲದೇ, ಮೊಬೈಲ್ ತಂತ್ರಜ್ಞಾನ ಹಾಗೂ ವಿದ್ಯುಚ್‌ಚಾಲಿತ ವಾಹನಗಳ ಕ್ಷೇತ್ರದಲ್ಲಿ ದೇಶವು ಮುಂದಡಿಯಿಡುತ್ತಿದೆ. ಜಗತ್ತಿನಾದ್ಯಂತ ಎಲ್ಲ ದೇಶಗಳೂ ಇಂಧನ ಶಕ್ತಿಯಿಂದ ಹಸಿರು ಇಂಧನಕ್ಕೆ ಪರಿವರ್ತನೆಗೊಳ್ಳುತ್ತಿರುವ ಈ ಹೊತ್ತಲ್ಲೇ ಲೀಥಿಯಂ ನಿಕ್ಷೇಪ ಪತ್ತೆಯಾಗಿರುವುದು ದೇಶಕ್ಕೆ ವರವಾಗಿ ಪರಿಣಮಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪತ್ತೆಯಾಗಿದ್ದೆಲ್ಲಿ?
ರಾಜಸ್ಥಾನದ ಡೆಗಾನಾದ ರೇಣಾತ್ ಪರ್ವತ ಪ್ರದೇಶ ಮತ್ತು ಸುತ್ತಮುತ್ತಲ ಜಾಗದಲ್ಲಿ ಲೀಥಿಯಂ ನಿಕ್ಷೇಪ ಪತ್ತೆಯಾಗಿದೆ. ಇದೇ ಪ್ರದೇಶದಿಂದ ಒಂದು ಕಾಲದಲ್ಲಿ ಇಡೀ ದೇಶಕ್ಕೆ ಟಂಗ್‌ಸ್ಟನ್ ಅನ್ನು ಪೂರೈಕೆ ಮಾಡಲಾಗುತ್ತಿತ್ತು. ಇಲ್ಲಿ ಟಂಗ್‌ಸ್ಟನ್ ಖನಿಜ ಪತ್ತೆಯಾಗಿದ್ದು 1914ರಲ್ಲಿ ಅಂದರೆ ಬ್ರಿಟಿಷರ ಆಡಳಿತದ ಅವಧಿಯಲ್ಲಿ. ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮುನ್ನ ಈ ಪ್ರದೇಶದಲ್ಲಿ ಉತ್ಪತ್ತಿ ಮಾಡಲಾದ ಟಂಗ್‌ಸ್ಟನ್ ಅನ್ನು ಬ್ರಿಟಿಷ್ ಸೇನೆಗೆ ಯುದ್ಧ ಸಾಮಗ್ರಿ ತಯಾರಿಸಲು ಬಳಸಲಾಗುತ್ತಿತ್ತು. ಸ್ವಾತಂತ್ರಾéನಂತರ, ದೇಶದ ಇಂಧನ ಮತ್ತು ಆರೋಗ್ಯ ಕ್ಷೇತ್ರದ ಸರ್ಜಿಕಲ್ ಸಾಮಗ್ರಿಗಳ ತಯಾರಿಕೆಗೆ ಇದನ್ನು ಬಳಸಲು ಆರಂಭಿಸಲಾಯಿತು. ಆ ಸಮಯದಲ್ಲಿ ಇಲ್ಲಿ ಸುಮಾರು 1500 ಕಾರ್ಮಿಕರು ಕೆಲಸ ಮಾಡುತ್ತಿದ್ದರು.
ಭಾರತದ ಆಮದು ಪ್ರಮಾಣ
ಭಾರತವು ಆಮದು ಮಾಡುತ್ತಿರುವ ಒಟ್ಟಾರೆ ಲೀಥಿಯಂ ಪೈಕಿ ಶೇ.53.76ರಷ್ಟು ಬರುವುದೇ ಚೀನಾದಿಂದ. 2020-21ರಲ್ಲಿ ಭಾರತವು ಒಟ್ಟಾರೆ 6 ಸಾವಿರ ಕೋಟಿ ರೂ. ಮೌಲ್ಯದ ಲೀಥಿಯಂ ಅನ್ನು ಆಮದು ಮಾಡಿಕೊಂಡಿದೆ. ಈ ಪೈಕಿ ಚೀನಾವೊಂದರಿಂದಲೇ 3,500 ಕೋಟಿ ರೂ. ಮೌಲ್ಯದ ಲೀಥಿಯಂ ಖರೀದಿಸಲಾಗಿದೆ.
– ಜಮ್ಮು-ಕಾಶ್ಮೀರದಲ್ಲಿ ಪತ್ತೆಯಾದ ಲೀಥಿಯಂ ನಿಕ್ಷೇಪದ ಅಂದಾಜು ಪ್ರಮಾಣ- 5.9 ದಶಲಕ್ಷ ಟನ್
– ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಟನ್ ಲೀಥಿಯಂಗೆ ಇರುವ ದರ – 57.36 ಲಕ್ಷ ರೂ.
– ವಿಶ್ವಬ್ಯಾಂಕ್ ವರದಿ ಪ್ರಕಾರ, 2025ರ ವೇಳೆಗೆ ಜಾಗತಿಕ ಲೀಥಿಯಂ ಬೇಡಿಕೆ ಎಷ್ಟು ಹೆಚ್ಚಲಿದೆ?- ಶೇ.500
– ಪ್ರಸ್ತುತ ಅತಿದೊಡ್ಡ ನಿಕ್ಷೇಪ ಹೊಂದಿರುವ ಬೊಲಿವಿಯಾದಲ್ಲಿರುವ ಲೀಥಿಯಂ ಪ್ರಮಾಣ – 21 ದಶಲಕ್ಷ ಟನ್
– ಚೀನಾದಲ್ಲಿರುವ ಲೀಥಿಯಂ ಪ್ರಮಾಣ – 5.1 ದಶಲಕ್ಷ ಟನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
Decision Awaited: 2025ಕ್ಕೆ ನೀಟ್ ಆನ್‌ಲೈನ್: ಶೀಘ್ರವೇ ನಿರ್ಧಾರ
Tata Steel: ಟಾಟಾ ಗಣಿಯ ಪೂರ್ಣ ಹೊಣೆ ಮಹಿಳೆಯರಿಗೆ:ದೇಶದಲ್ಲೇ ಮೊದಲು!
Parliament Session: ಮೀಸಲಾತಿ ಪರಾಮರ್ಶೆ: ದೇವೇಗೌಡರ ಆಗ್ರಹ
Noida: ಕಚೇರಿಯಲ್ಲಿ ವೃದ್ಧನನ್ನು ಕಾಯಿಸಿದ ಸಿಬ್ಬಂದಿಗೆ ನಿಂತು ಕೆಲಸ ಮಾಡೋ ಶಿಕ್ಷೆ
MUST WATCH
ಹೊಸ ಸೇರ್ಪಡೆ
Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.