ಅಭಿವೃದ್ಧಿಗಾಗಿ BJP ಡಬಲ್ ಎಂಜಿನ್ ಸರಕಾರವನ್ನು ಬೆಂಬಲಿಸಿ : ಮಹಾ ಸಿಎಂ ಏಕನಾಥ್ ಶಿಂಧೆ
ಗುರ್ಮೆ ಸುರೇಶ್ ಶೆಟ್ಟಿ ಪರ ಚುನಾವಣಾ ಬಹಿರಂಗ ಪ್ರಚಾರ ಸಮಾರೋಪ
Team Udayavani, May 9, 2023, 1:04 PM IST
ಕಾಪು: ಕೇಂದ್ರ, ರಾಜ್ಯದಲ್ಲಿ ಒಂದೇ ಸರಕಾರ ಆಡಳಿತದಲ್ಲಿದ್ದಾಗ ಮಾತ್ರ ವಿಕಾಸ ಮತ್ತು ಅಭಿವೃದ್ಧಿ ಕಾಣಬಹುದು. ಡಬಲ್ ಎಂಜಿನ್ ಸರಕಾರದಿಂದ ಮಾತ್ರ ಅಭಿವೃದ್ಧಿ ಕಾರ್ಯ, ಜನಪರ ಆಡಳಿತ ನೀಡಲು ಸಾಧ್ಯವಿದೆ. ಮುಖ್ಯಮಂತ್ರಿ ಆದ 8 -9 ತಿಂಗಳಲ್ಲಿ ನನಗೆ ಇದರ ಅನುಭವ ಆಗಿದೆ. ಅಭಿವೃದ್ಧಿಗಾಗಿ ಈ ಬಾರಿಯೂ ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರಕಾರವನ್ನು ಬೆಂಬಲಿಸಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಹೇಳಿದರು.
ಮಂಗಳವಾರ ಕಾಪು ಕ್ಷೇತ್ರ ಬಿಜೆಪಿ ವತಿಯಿಂದ ಕಾಪು ಪೇಟೆಯಲ್ಲಿ ಜರಗಿದ ಚುನಾವಣಾ ಬಹಿರಂಗ ಪ್ರಚಾರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಅಭಿವೃದ್ಧಿ, ವಿಕಾಸ, ಸರಕಾರದ ನೀತಿಗಳ ಬಗ್ಗೆ ಚರ್ಚೆ ನಡೆಯಬೇಕು. ಆದರೆ ಕಾಂಗ್ರೆಸ್ ಅವರು ಮರ್ಯಾದೆ ಬಿಟ್ಟು ಪ್ರಧಾನಿ ನರೇಂದ್ರ ಮೋದಿ ಅವರನ್ನು ವೈಯಕ್ತಿಕವಾಗಿ ಟೀಕೆ ಮಾಡುತ್ತಿದ್ದಾರೆ. ಇವತ್ತು ಜಗತ್ತಿನಲ್ಲಿ ಭಾರತ ಪ್ರಕಾಶಿಸುತ್ತಿದೆ. ದೇಶದ ಅರ್ಥ ವ್ಯವಸ್ಥೆಯನ್ನು ಪ್ರಧಾನಿ ಮೋದಿ ಅವರು ಸುಸ್ಥಿಗೆ ತರಲು ಶ್ರಮಿಸಿದ್ದಾರೆ. ಭಾರತಕ್ಕೆ ಜಿ.20 ಅಧ್ಯಕ್ಷತೆ ಸಿಕ್ಕಿರುವುದು ಪ್ರತೀ ಪ್ರಜೆಯ ಗೌರವ ಮತ್ತು ಹೆಮ್ಮೆಯ ವಿಷಯವಾಗಿದೆ. ನಮ್ಮ ಪ್ರಧಾನಿ ಅವರನ್ನು ಅವಹೇಳನ ಮಾಡುವ ಕಾಂಗ್ರೆಸ್‌ಗೆ ಮೇ.10 ರಂದು ಮತದಾರರು ತಕ್ಕ ಪಾಠವನ್ನು ಕಲಿಸಬೇಕಿದೆ ಎಂದರು.
ಅಂದು ರಾಮ ಮಂದಿರಕ್ಕೆ, ಇಂದು ಬಜರಂಗದಳಕ್ಕೆ ಕಾಂಗ್ರೆಸ್ ವಿರೋಧ
ದೇಶ ಭಕ್ತ ಸಂಘಟನೆ ಬಜರಂಗದಳ ನಿಷೇಧ ಮಾಡಲು ಕಾಂಗ್ರೆಸ್ ಹೊರಟಿದೆ. ದೇಶ ದ್ರೋಹ ಚಟುವಟಿಕೆ ನಡೆಸುವ ಸಂಘಟನೆಗಳ ಜತೆ ಹೋಲಿಕೆ ಮಾಡುವ ಕಾಂಗ್ರೆಸ್ ನಿಲುವಿಗೆ ತಕ್ಕ ಪಾಠವನ್ನು ಕಲಿಸಬೇಕಿದೆ. ಅಂದು ರಾಮ ಮಂದಿರಕ್ಕೆ ಇಂದು ಬಜರಂಗದಳಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಇದು ಕಾಂಗ್ರೆಸ್ ಪಕ್ಷದ ನಿಜವಾದ ಮುಖ ಎಂದು ಶಿಂಧೆ ಟೀಕಿಸಿದರು.
ಅಭಿವೃದ್ಧಿ, ವಿಕಾಸಕ್ಕೆ ಗುರ್ಮೆ ಅವರನ್ನು ಗೆಲ್ಲಿಸಿ
ಬಿಜೆಪಿ ಪಕ್ಷವು ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಉತ್ತಮ ಜವಬ್ದಾರಿ, ನಾಯಕತ್ವ ನೀಡುತ್ತದೆ. ಪಕ್ಷದಲ್ಲಿ ಎಷ್ಟೇ ದೊಡ್ಡ ನಾಯಕನಿದ್ದರೂ ಕಾರ್ಯಕರ್ತರಂತೆ ಇರುತ್ತಾರೆ. ಸಾಮಾಜಿಕ ಕ್ಷೇತ್ರದಲ್ಲಿ ಜನಸೇವೆ ಮಾಡಿದ ಗುರ್ಮೆ ಸುರೇಶ್ ಶೆಟ್ಟಿ ಅವರಂತಹ ಪ್ರಾಮಾಣಿಕ ವ್ಯಕ್ತಿಯನ್ನು ಕಾಪು ಕ್ಷೇತ್ರದ ಅಧಿಕ ಮತಗಳ ಅಂತರದಿಂದ ಗೆಲ್ಲಿಸುವ ಮೂಲಕ ಅಭಿವೃದ್ದಿ, ವಿಕಾಸಕ್ಕೆ ಕಾರಣರಾಗೋಣ ಎಂದರು.
ಮುಂಬಯಿ ಸಂಸದ ಗೋಪಾಲ ಶೆಟ್ಟಿ ಅವರು ಮಾತನಾಡಿ, ಬಿಜೆಪಿ ಸರಕಾರ ಅಭಿವೃದ್ಧಿ ಮತ್ತು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತದೆ. ಕರ್ನಾಟಕದಲ್ಲಿ ಮಾದರಿಯಾಗುವ ನಿಟ್ಟಿನಲ್ಲಿ ಸಾವಿರಾರು ಕೋ. ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿವೆ. ಇದಕ್ಕೆ ಕಾಪು ಕ್ಷೇತ್ರವೇ ಉದಾಹರಣೆಯಾಗಿದೆ. ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸೋಣ ಎಂದರು.
ಶಾಸಕ ಲಾಲಾಜಿ ಅವರಿಗೆ ಮಹಾ ಸಿಎಂ ವಿಶೇಷ ಅಭಿನಂದನೆ
ಕಾಪು ಕ್ಷೇತ್ರದ ಅಭಿವೃದ್ಧಿಗೆ ಗರಿಷ್ಠ ಅನುದಾನ ನೀಡಿ ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಗೊಳ್ಳಲು ಕಾರಣರಾದ ಶಾಸಕ ಲಾಲಜಿ ಮೆಂಡನ್ ಅವರನ್ನು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆ ಅವರಿಗೆ ಅಭಿನಂದನೆ ಸಲ್ಲಿಸಿದರು.
ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಬಿಜೆಪಿ ಡಬಲ್ ಎಂಜಿನ್ ಸರಕಾರದಿಂದಾಗಿ ಕ್ಷೇತ್ರದ ಅಭಿವೃದ್ಧಿಗೆ ಗರಿಷ್ಠ ಅನುದಾನ ಸಿಗಲು ಕಾರಣವಾಗಿದೆ. ಮುಂದೆಯೂ ಉತ್ತಮ ಅನುದಾನ ದೊರೆತು, ಅಭಿವೃದ್ಧಿ ಕೆಲಸಗಳು ನಡೆಯಲು ನಾವೆಲ್ಲರೂ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಜನಪರ ಆಡಳಿತ ನೀಡುವ ಬಿಜೆಪಿಯನ್ನು ಮತ್ತೊಮ್ಮೆ ಗೆಲ್ಲಿಸಿ :ಸಚಿವ ಕೋಟ
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇವತ್ತು ಕರ್ನಾಟಕ ಭಾರತದಲ್ಲಿಯೇ ನಂಬರ್ ವನ್ ಸ್ಥಾನದಲ್ಲಿದೆ. ಇದು ಡಬಲ್ ಎಂಜಿನ್ ಸರಕಾರದಿಂದ ಮಾತ್ರ ಸಾಧ್ಯವಾಗಿದೆ. ವಿಶ್ವ ನಾಯಕ ನರೇಂದ್ರ ಮೋದಿ ಅವರಿಂದಾಗಿ, ಬಿಜೆಪಿ ಸರಕಾರದ ಜನಪರ ಆಡಳಿತದಿಂದಾಗಿ ಭಾರತ ಮಾದರಿ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. ಗುರ್ಮೆ ಸುರೇಶ್ ಶೆಟ್ಟಿ ಅವರು ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ನಡೆಯಬೇಕು ಎಂದರು.
ಕಾಪು ಕ್ಷೇತ್ರ ಮಾದರಿಯಾಗಿಸುವೆ : ಗುರ್ಮೆ ಸುರೇಶ್ ಶೆಟ್ಟಿ
ಪ್ರಧಾನಿ ನರೇಂದ್ರ ಮೋದಿ ಅವರು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಎಲ್ಲ ವರ್ಗದ ಜನರ ಭರವಸೆಯಾಗಿದ್ದಾರೆ. ಕೇಂದ್ರ,ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೆ ಪ್ರತೀ ಕ್ಷೇತ್ರವು ಅಭಿವೃದ್ಧಿಯಾಗಲಿದೆ. ಕಾಪು ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸಿ ಜನರ ಋಣ ತೀರಿಸುತ್ತೇನೆ. ನಿಮ್ಮ ಒಂದೊಂದು ಮತಗಳು ಕೂಡಾ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲಿದೆ ಎಂದರು.
ಸಮಾರೋಪ ಸಮಾರಂಭಕ್ಕೆ ಮುನ್ನ ಕಾಪು ಶ್ರೀ ಲಕ್ಷೀ ಜನಾರ್ದನ ದೇವಸ್ಥಾನದಿಂದ ಕಾಪು ಪೇಟೆಯವರೆಗೆ ಸಾವಿರಾರು ಮಂದಿ ಕಾರ್ಯಕರ್ತರ ಪಾಲ್ಗೊಳ್ಳುವಿಕೆಯೊಂದಿಗೆ ಬೃಹತ್ ರೋಡ್ ಶೋ ನಡೆಯಿತು.
ಮಹಾರಾಷ್ಟ್ರ ಸಂಸದ ರಾಹುಲ್ ಸಾವ್ಲೆ , ಸಚಿವ ಉದಯ್ ಸಾವಂತ್, ಚುನಾವಣಾ ಪ್ರವಾಸಿ ಪ್ರಭಾರಿ ವಿಜೇಂದ್ರ ಗುಪ್ತಾ, ಉಸ್ತುವಾರಿ ಸುಲೋಚನಾ ಭಟ್, ಥಾಣೆ ಮೇಯರ್ ಮೀನಾಕ್ಷಿ ಸುವರ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್, ಪಕ್ಷದ ಮುಖಂಡರಾದ ಉದಯ್ ಕುಮಾರ್ ಶೆಟ್ಟಿ, ನಯನಾ ಗಣೇಶ್, ಮಟ್ಟಾರು ರತ್ನಾಕರ ಹೆಗ್ಡೆ, ಹರೀಶ್ ಶೆಟ್ಟಿ ಎರ್ಮಾಳು, ದಿನಕರ ಬಾಬು, ಪ್ರಕಾಶ್ ಶೆಟ್ಟಿ, ಶಿಲ್ಪಾ ಜಿ. ಸುವರ್ಣ, ಗೀತಾಂಜಲಿ ಸುವರ್ಣ, ಸುಧಾಮ ಶೆಟ್ಟಿ, ಶ್ರೀಶ ನಾಯಕ್, ಪ್ರಕಾಶ್ ಶೆಟ್ಟಿ, ದಿನಕರ ಬಾಬು, ವೀಣಾ ಶೆಟ್ಟಿ, ಸಂದೀಪ್ ಶೆಟ್ಟಿ, ಅನಿಲ್ ಶೆಟ್ಟಿ, ಗೋಪಾಲಕೃಷ್ಣ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.