ದೇವರು – ಧರ್ಮದ ವಿಷಯದಲ್ಲಿ ಬಿಜೆಪಿ ರಾಜಕೀಯ; ವಾಸ್ತು ಮತ್ತು ಸಂಪ್ರದಾಯಕ್ಕೆ ಧಕ್ಕೆ : ಸೊರಕೆ
ಹಿರಿಯಡಕ ಪೇಟೆಯಲ್ಲಿ ಸೊರಕೆ ಪರ ಬಹಿರಂಗ ಪ್ರಚಾರ ಸಮಾಪನ
Team Udayavani, May 9, 2023, 3:27 PM IST
ಹಿರಿಯಡಕ : ದೇವರು – ಧರ್ಮ ಎಂದು ಜನರನ್ನು ನಂಬಿಸುತ್ತಲ್ಲೇ ಆಧಿಕಾರಕ್ಕೆ ಬರುತ್ತಿರುವ ಬಿಜೆಪಿ ನಾಯಕರು ದೇವಸ್ಥಾನಗಳ ವಿಷಯದಲ್ಲಿ ಹೀನಾಯ ರಾಜಕೀಯವನ್ನು ಪ್ರಾರಂಭಿಸಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ದೇವಸ್ಥಾನಗಳ ವಾಸ್ತು, ಪರಂಪರೆ ಮತ್ತು ಸಂಪ್ರಧಾಯಕ್ಕೆ ಧಕ್ಕೆಯುಂಟು ಮಾಡುವ ಮೂಲಕ ಜನರ ಭಾವನೆಗಳಿಗೆ ಘಾಸಿಯುಂಟು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ, ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೆಳಿದ್ದಾರೆ.
ಹಿರಿಯಡ್ಕ ಪೇಟೆಯಲ್ಲಿ ರವಿವಾರ ಸಂಜೆ ನಡೆದ ಕಾಂಗ್ರೆಸ್ ಚುನಾವಣಾ ಬಹಿರಂಗ ಪ್ರಚಾರ ಸಭೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇವಸ್ಥಾನ – ಧರ್ಮ ಎಂದು ಯುವಜನತೆಗೆ ಪಾಠ ಹೇಳುವ ಬಿಜೆಪಿಯ ರಾಜಕೀಯ ನಾಯಕರು ಹಿರಿಯಡ್ಕ ವೀರಭದ್ರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ವಿಚಾರದಲ್ಲಿ ಮತ್ತು ಪೆರ್ಡೂರು ಅನಂತ ಪದ್ಮನಾಭ ದೇವಸ್ಥಾನದ ರಸ್ತೆ ಅಗಲೀಕರಣದ ವಿಷಯದಲ್ಲಿ ತಮ್ಮ ಸ್ವಾರ್ಥ ಸಾಧನೆಗಾಗಿ ರಾಜಕೀಯ ಮಾಡಿ ದೇವಸ್ಥಾನದ ವಾಸ್ತುವಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ನನ್ನ ಶಾಸಕತ್ವದ ಅವಧಿಯಲ್ಲಿ ಹಿರಿಯಡ್ಕ ವ್ಯಾಪ್ತಿಯಲ್ಲಿ 800 ಅಕ್ರಮ ಸಕ್ರಮ ಮನೆ ನಿವೇಶನಕ್ಕೆ ಶಿಫಾರಸು ಮಾಡಲಾಗಿತ್ತು. ನಂತರ ಬಂದ ಬಿಜೆಪಿ ಅದನ್ನು ಅರ್ಜಿಯನ್ನು ತಿರಸ್ಕರಿಸಿದೆ. ಪ್ರತೀ ಗ್ರಾ.ಪಂ. ನಲ್ಲೂ ಇಂಹತ ದೊಡ್ಡ ದೊಡ್ಡ ಗಂಟುಗಳಿದ್ದು ಅದನ್ನು ತೆರೆಯ ಬೇಕಾದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಅಗತ್ಯವಾಗಿದೆ. ಅಧಿಕಾರಕ್ಕೆ ಬಂದ ಕೂಡಲೇ ಮನೆ ನಿವೇಶನ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದರು.
ಹಿರಿಯಡ್ಕದಲ್ಲಿ ನಾಡ ಕಚೇರಿ ಸ್ಥಾಪನೆ ಮತ್ತು ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವುದು ಅತೀ ಅಗತ್ಯವಾಗಿದೆ. ಯೋಜನೆಯನ್ನು ಹಮ್ಮಿಕೊಂಡಿದ್ದೇನೆ. ಕಾಪು ಕ್ಷೇತ್ರದಲ್ಲಿ ಇರುವ ನೀರಿನ ಸಮಸ್ಯೆ ನಿವಾರಣೆಗಾಗಿ ಮಣಿಪುರದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನನ್ನ ಅವಧಿಯಲ್ಲಿ ಚಾಲನೆ ನೀಡಲಾಗಿತ್ತಾರೂ ನಂತರ ಬಂದ ಬಿಜೆಪಿ ಶಾಸಕರ ನಿರಾಸಕ್ತಿಯಿಂದಾಗಿ ಕಾಮಗಾರಿ ಅನುಷ್ಟಾನ ವಿಳಂಭವಾಗಿದೆ. ಶಾಸಕನಾಗಿ ಆಯ್ಕೆಯಾದ ಕೂಡಲೇ ಕಾಮಗಾರಿಯ ವೇಗ ಹೆಚ್ಚಿಸಲಾಗುವುದು ಎಂದರು.
ಪ್ರಾಮಾಣಿಕ ಜನಸೇವೆಗೆ ವಿನಯಣ್ಣ ಮಾದರಿ : ಶಕುಂತಳಾ ಶೆಟ್ಟಿ
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ವಿನಯಣ್ಣನವರದ್ದು ಸ್ವಚ್ಛ, ಪ್ರಾಮಾಣಿಕ ಮತ್ತು ಮಾದರಿಯಾದ ವ್ಯಕ್ತಿತ್ವ. ಅವರಿಗೆ ಪುತ್ತೂರು ಜನ್ಮಭೂಮಿಯಾದರೆ, ಕಾಪು ಕರ್ಮ ಭೂಮಿಯಾಗಿದೆ. ರಾಜಕೀಯ ಮರುಜನ್ಮ ನೀಡಿದ ಕ್ಷೇತ್ರವನ್ನು ಕಾಪು ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಿದ್ದಾರೆ. ಕಾಪುವಿನಲ್ಲಿ ಈಗ ಕಾಣಿಸುತ್ತಿರುವ ಎಲ್ಲಾ ಅಭಿವೃದ್ಧಿ ಯೋಜನೆಗಳೂ ವಿನಯ್ ಕುಮಾರ್ ಸೊರಕೆಯವರ ಕಾಲದಲ್ಲೇ ಆಗಿರುವುದು ಎನ್ನುವುದು ವಿಶೇಷವಾಗಿದೆ. ಕ್ಷೇತ್ರದ ಜನತೆಯನ್ನು ಸಮಾನತೆಯಿಂದ ಕಾಣುವ ವಿನಯಣ್ಣನಿಗೆ ಜನಸೇವೆಯೇ ಬಂಡವಾಳವಾಗಿದೆ. ಕೆಲಸದಲ್ಲಿ ಮಾತ್ರ ರಾಜಕೀಯ ನಡೆಸುವ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ, ಮಂತ್ರಿಯನ್ನಾಗಿ ನೋಡುವ ಅವಕಾಶ ನಮ್ಮ ಮುಂದಿದೆ. ಕ್ಷೇತ್ರದ ಜನತೆ ಇದನ್ನು ಅರ್ಥಮಾಡಿಕೊಂಡು ಮತದಾನ ಮಾಡಬೇಕು ಎಂದರು.
ನೀವು ಗೆಲ್ಲಿಸಿ, ಪಕ್ಷ ಸಚಿವರನ್ನಾಗಿ ಮಾಡುತ್ತದೆ : ರಾಜಶೇಖರ್ ಕೋಟ್ಯಾನ್
ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ್ ಕೋಟ್ಯಾನ್ ಮಾತನಾಡಿ, ಬಿಜೆಪಿ ಹಿಂದುತ್ವದ ವಿರುದ್ಧ ಹಿಂದುತ್ವ ರಾಜಕೀಯ ಮಾಡುತ್ತಿದೆ. ವಿವಿಧತೆಯಲ್ಲಿ ಏಕತೆಯಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್ ಪಕ್ಷದ್ದೇ ನಿಜವಾದ ಹಿಂದುತ್ವವಾಗಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಸೊರಕೆಯವರು ಸಚಿವರಾಗುವುದು ನಿಶ್ಚಿತವಾಗಿದೆ. ಅದಕ್ಕಾಗಿ ನಾವು ಕಾಂಗ್ರೆಸ್ ಪಕ್ಷವನ್ನು ಬಹುಮತಗಳಿಂದ ಗೆಲ್ಲಿಸೋಣ ಎಂದರು.
ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಬೆಳಪು, ಪಕ್ಷದ ಪ್ರಮುಖರಾದ ನೀರೆ ಕೃಷ್ಣ ಶೆಟ್ಟಿ, ಸಂತೋಷ್ ಕುಲಾಲ್, ಚರಣ್ ವಿಠಲ್ ಕುದಿ, ಶಶಿಧರ ಜತ್ತನ್, ಸಂದೇಶ್, ದಿಲೀಪ್ ಹೆಗ್ಡೆ, ಜಿತೇಂದ್ರ ಫುಟಾರ್ಡೊ, ಗುರುದಾಸ್ ಭಂಡಾರಿ, ಭಾಸ್ಕರ ಪೂಜಾರಿ, ನಾಗೇಶ್ ಕುಮಾರ್ ಉದ್ಯಾವರ, ಹರೀಶ್ ಕಿಣಿ, ಸುರೇಶ್ ನಾಯಕ್, ಪುಷ್ಪ ಅಂಚನ್, ಸಂಧ್ಯಾ, ವಿನೋದ್ ಉಪಸ್ಥಿತರಿದ್ದರು.
ಹಿರಿಯಡಕ -ಪೆರ್ಡೂರು ದೇವಸ್ಥಾನಗಳ ಮೇಲೆ ಬಿಜೆಪಿ ವಕ್ರದೃಷ್ಠಿ
ಹಿರಿಯಡ್ಕ ವೀರಭದ್ರ ದೇವಸ್ಥಾನದಲ್ಲಿ ಬಿಜೆಪಿ ವಿನಾಕಾರಣ ರಾಜಕೀಯ ಮಾಡುತ್ತಿದೆ. ಜೀರ್ಣೋದ್ಧಾರ ಸಮಯದಲ್ಲಿದ್ದ ಆಡಳಿತ ಸಮಿತಿ 30 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡುವ ಕಾರ್ಯವನ್ನು ಹಮ್ಮಿಕೊಂಡಿತ್ತು. ಜೀರ್ಣೋದ್ಧಾರ ಪೂರ್ಣಗೊಂಡ ನಂತರ ಜೀರ್ಣೋದ್ಧಾರ ಮಾಡಿದ ಕಮಿಟಿಯನ್ನು ಹೊರಗಿಟ್ಟು ಜೀರ್ಣೋದ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಕಮಿಟಿಯನ್ನು ಧಾರ್ಮಿಕ ಧತ್ತಿ ಇಲಾಖೆ ಮೂಲಕ ಆಡಳಿತದಲ್ಲಿ ಕೂರಿಸಲಾಗಿದೆ.
ಪೆರ್ಡೂರು ಅನಂತ ಪದ್ಮನಾಭ ದೇವಸ್ಥಾನದ ವಿಷಯದಲ್ಲೂ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದು ದೇವಸ್ಥಾನದ ಹಿಂಭಾಗದ ರಸ್ತೆಯ ಮೂಲಕ ಹೆದ್ದಾರಿ ಅಗಲೀಕರಣ ಪ್ರಸ್ತಾಪ ಮಾಡಿದೆ. ಇದರಿಂದ ದೇವಸ್ಥಾನದ ವಾಸ್ತುವಿಗೆ ಹಾನಿಯಾಗಲಿದೆ, ದೇವಸ್ಥಾನದ ಕೆರೆ, ರಥಬೀದಿ ಮತ್ತು ಪಾಣಿಗ್ರಹಕ್ಕೆ ಹಾನಿಯಾಗಲಿದೆ ಎಂದು ದೇವಸ್ಥಾನದ ಅರ್ಚಕರೇ ಅಭಿಪ್ರಾಯ ಪಟ್ಟಿದ್ದರೂ ಅದನ್ನು ಕಡೆಗಣಿಸಲಾಗುತ್ತಿದೆ.
ದೇವಸ್ಥಾನಕ್ಕೆ ಹಾನಿಯಾಗದಂತೆ ಬೈಪಾಸ್ ರಸ್ತೆ ಮೂಲಕ ಅಗಲೀಕರಣ ಮಾಡುವಂತೆ ಗ್ರಾಮಸ್ಥರು ಮತ್ತು ದೇವಸ್ಥಾನದ ಮುಖಂಡರು ಪ್ರಸ್ತಾಪ ಮಾಡಿದ್ದರೂ ಬಿಜೆಪಿ ನಾಯಕರು ಇದಕ್ಕೆ ವಿರೋಧ ವಕ್ಯಪಡಿಸಿ ದೇವಸ್ಥಾನದ ವಾಸ್ತುವಿಗೆ ಹಾನಿಯುಂಟು ಮಾಡುವಂತಹ ರಾಜಕೀಯ ನಡೆಸುತ್ತಿದ್ದಾರೆ ಎಂದು ವಿನಯ್ ಕುಮಾರ್ ಸೊರಕೆ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.