ಬೈಂದೂರಿನಲ್ಲಿ ಬಿಜೆಪಿ ಅಲೆ: ಗುರುರಾಜ್ ಗಂಟಿಹೊಳೆಗೆ ಗೆಲುವು; ರಘಪತಿ ಭಟ್
ಗ್ಯಾರಂಟಿ ಆಮಿಷಗಳಿಗೆ ಮರುಳಾದರೆ ಮಕ್ಕಳ ಭವಿಷ್ಯಕ್ಕೆ ಕುತ್ತು
Team Udayavani, May 9, 2023, 4:08 PM IST
ಉಪ್ಪುಂದ: ಕಾಂಗ್ರೆಸ್ ಅಧಿಕಾರಕ್ಕೆ ಬಂದು ಭರವಸೆಗಳನ್ನು ಜಾರಿಗೊಳಿಸಿದರೆ ಲಕ್ಷ ಕೋಟಿ ವೆಚ್ಚ ಮಾಡಿದರು ಸಾಕಾಗುವುದಿಲ್ಲ, ಆಗ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡಲು ಕಾರಣವಾಗುತ್ತದೆ. ಇದರಿಂದ ರಾಜ್ಯ ದಿವಾಳಿಯಾಗುವ ಆತಂಕವನ್ನು ಆರ್ಥಿಕ ತಜ್ಞರು ವ್ಯಕ್ತಪಡಿಸಿದ್ದಾರೆ. ಮತದಾರರು ಮತದಾನ ಮಾಡುವಾಗ ಯೋಚಿಸಬೇಕು, ಗ್ಯಾರಂಟಿ ಆಮಿಷಗಳಿಗೆ ಮರುಳಾದರೆ ಮುಂದಿನ ನಮ್ಮ ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ರಾಜ್ಯದ ಹಾಗೂ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದು ಶಾಸಕ ರಘಪತಿ ಭಟ್ ಹೇಳಿದರು.
ಅವರು ಉಪ್ಪುಂದದಲ್ಲಿ ನಡೆದ ಚುನಾವಣೆಯ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು.
ಬೈಂದೂರಿನ ಜನತೆ ಮೇಲೆ ಮೋದಿ ನಂಬಿಕೆ:
ರಾಜ್ಯ ರಾಜಕೀಯದಲ್ಲಿ ಹೊಸತನವನ್ನು ಪರಿಚಯಿಸುವ ದೂರದೃಷ್ಟಿಯಿಂದ, ಮೋದಿ, ಅಮಿತಾ ಶಾ ಅವರು ಸಮರ್ಥ, ಯೋಗ್ಯ ಅಭ್ಯರ್ಥಿಯನ್ನು ಬೈಂದೂರಿಗೆ ನೀಡಿದ್ದಾರೆ. ಮೋದಿ ಅವರು ಬೈಂದೂರಿನ ಜನತೆಯ ಮೇಲೆ ವಿಶ್ವಾಸ ಇಟ್ಟಿದ್ದಾರೆ, ಗುರುರಾಜ್ ಅವರನ್ನು ಗೆಲ್ಲಿಸುವ ಹೊಣೆ ನಮ್ಮ ಮೇಲಿದೆ ಎಂದರು.
ಮಕ್ಕಳ ಭವಿಷ್ಯಕ್ಕಾಗಿ ಬಿಜೆಪಿಗೆ ಮತ
ಕ್ರಾಂಗ್ರೆಸ್ ಅಭ್ಯರ್ಥಿ 18 ವರ್ಷ ಅಧಿಕಾರ ನಡೆಸಿದ್ದಾರೆ, ಈದೀಗ ವಯಸ್ಸು ಆಗಿದೆ, ಕೊನೆಯ ಚುನಾವಣೆ ಎನ್ನುತ್ತಿದ್ದಾರೆ ಅವರಿಂದ ಅಭಿವೃದ್ಧಿ ಸಾಧ್ಯವೆ ಜನರು ಯೋಚಿಸಬೇಕು. ಬಿಜೆಪಿ ದೂರದೃಷ್ಟಿಯ ಯುವ ಅಭ್ಯರ್ಥಿಯನ್ನು ಬೈಂದೂರಿಗೆ ನೀಡಿದೆ, ಬಿಜೆಪಿಗೆ ಮತ ನೀಡಿ ಬೈಂದೂರಿನ ಉಜ್ವಲ ಭವಿಷ್ಯದ ನಿರ್ಮಾಣಕ್ಕೆ ಕಾರಣರಾಗಬೇಕಿದೆ ಎಂದು ಯಶ್‌ಪಾಲ್ ಸುವರ್ಣ ಹೇಳಿದರು.
ದೇಶ, ಧರ್ಮ ರಕ್ಷಣೆಗೆ ಮತ ನೀಡಿ:
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧಿಸಿ, ಗೋ ಹತ್ಯೆ ನಿಷೇಧ ಕಾಯ್ದಿಯನ್ನು ವಾಪಾಸ್ಸು ತಗೆದುಕೊಳ್ಳುತ್ತದೆ, ಆಗ ರಾತ್ರಿ ಮನೆಗಳಿಗೆ ನುಗ್ಗಿ ಗೋ-ಕಳ್ಳತನ ವ್ಯಾಪಕಗೊಳ್ಳುವ ಸಾಧ್ಯತೆ ಹೆಚ್ಚು ಆದರಿಂದ ಮತದಾರರು ದೇಶ, ಧರ್ಮ ರಕ್ಷಣೆಗಾಗಿ ಮತದಾನ ಮಾಡಬೇಕು. ಗುರುರಾಜ್ ಗಂಟಿಹೊಳೆ ಅವರನ್ನು ಗೆಲ್ಲಿಸುವ ಮೂಲಕ ದೇಶಕ್ಕೆ ಒಂದು ಸಂದೇಶ ನೀಡುವ ಜವಬ್ದಾರಿ ನಮ್ಮ ಮೇಲಿದೆ ಎಂದರು.
ಬೈಂದೂರಿನಲ್ಲಿ ಬಿಜೆಪಿ ಅಲೆ
ಮೋದಿ ಅವರು ರಾಜ್ಯ ರಾಜಕೀಯ ಕ್ಷೇತ್ರಕ್ಕೆ ಹೊಸತನ, ತಾರುಣ್ಯ ಮತ್ತು ಮುಂದಿನ ಯುವಕರಿಗೆ ಪ್ರೇರಣೆ ಮೂಡಿಸುವುದಕ್ಕಾಗಿ ಮಹತ್ವದ ಸಂದೇಶ ಎಂಬಂತೆ ಬೈಂದೂರಿಗೆ ಜನಸಾಮಾನ್ಯ ವ್ಯಕ್ತಿಯ ಆಯ್ಕೆಗೆ ಜನತೆಯಲ್ಲಿ ಹೊಸ ಹುರುಪು, ಉತ್ಸಾಹ ಮೂಡಿಸಿರುವುದು ಕಂಡುಬಂದಿದೆ. ಕಾರ್ಯಕರ್ತರ ಅಬ್ಬರದ ಪ್ರಚಾರ, ಬಿಜೆಪಿಯ ಅçೆಯ ನಡುವೆ ಚಪ್ಪಲಿ ಹಾಕದ ಅಭ್ಯರ್ಥಿಯ ಶ್ರದ್ಧೆ, ಭಕ್ತಿಗೆ ಜನರು ಅಭಿಮಾನಗೊಂಡು ಬೆಂಬಲ ನೀಡುತ್ತಿರುವುದು ಕಾಂಗ್ರೆಸ್ ಮಂಕಾಗಿದೆ ಎನ್ನುತ್ತಾರೆ ಕಾರ್ಯಕರ್ತರು.
ಹುಟ್ಟು ಕಡು ಬಡತನ, ಹಸಿವು, ಸಂಪರ್ಕವೇ ಇಲ್ಲದ ಹಳ್ಳಿ ಬದುಕು, ಅನಕ್ಷರಸ್ಥ ಕುಟುಂಬ, ಕಷ್ಟಪಟ್ಟು ಅಲೆದು ಅಲೆದು ಪಡೆದ ಶಿಕ್ಷಣ ನನ್ನನ್ನು ಈ ಸಮಾಜವನ್ನೇ ಬದಲಾಯಿಸಬೇಕೆಂಬ ಏಕೈಕ ಗುರಿಯೊಂದಿಗೆ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಕ್ಷೇತ್ರದ ಮೂಲೆ ಮೂಲೆಯಲ್ಲೂ ಜನರು ಬೆಂಬಲಿಸುತ್ತಿದ್ದಾರೆ, ಈಗ ನೀವು ನನಗಾಗಿ ಹೋರಾಟ ಮಾಡುತ್ತಿದೀªರಿ ಗೆಲುವಿನ ಬಳಿಕ ನಾನು ನಿಮಗಾಗಿ ಹೋರಾಡುತ್ತೇನೆ ಇದು ನನ್ನ ಸಂಕಲ್ಪ.
ಗುರುರಾಜ್ ಗಂಟಿಹೊಳೆ ಬಿಜೆಪಿ ಅಭ್ಯರ್ಥಿ
ಸುಮಾರು 20ವರ್ಷ ಸಂಘಟನೆಗಾಗಿ ಸೇವೆ ಸಲ್ಲಿಸಿ ಈಶಾನ್ಯ ರಾಜ್ಯಗಳಿಗೆ ತೆರಳಿ ದಾರಿ ತಪ್ಪುವ ಯುವ ಜನರನ್ನು ಮನ ಒಲಿಸಿ, ವಿಧ್ಯಾಭ್ಯಾಸ ನೀಡಿ ಮಾದರಿಯಾಗಿದ್ದಾರೆ. ಬಿಜೆಪಿ ಇಂತಹ ವ್ಯಕ್ತಿಗೆ ಟಿಕೆಟ್ ನೀಡಿದೆ, ನಾಗರಿಕರು ಯೋಚಿಸಬೇಕು ನವ ಬೈಂದೂರಿನ ನಿರ್ಮಾಣಕ್ಕೆ ಶ್ರಮಿಕ ಜೀವಿಗೆ ಮತನೀಡಿ ದೊಡ್ಡ ಅಂತರದಿಂದ ಗೆಲ್ಲಿಸಬೇಕು.
ವಿಜಯ ಕೊಡವೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ರಿಕ್ಷಾದಿಂದ ಬಿದ್ದು ಮಹಿಳೆಗೆ ಗಂಭೀರ ಗಾಯ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್ ಸೊರೇನ್ ನ.28ಕ್ಕೆ ಪದಗ್ರಹಣ
Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.