Fitch Ratings;ದೇಶದ ಅರ್ಥವ್ಯವಸ್ಥೆ ಸ್ಥಿರ: ಫಿಚ್
Team Udayavani, May 10, 2023, 6:30 AM IST
ನವದೆಹಲಿ: ದೇಶದ ಅರ್ಥವ್ಯವಸ್ಥೆ ಸ್ಥಿರವಾಗಿದೆ ಮತ್ತು ಅಭಿವೃದ್ಧಿ ಕಾಣಲಿದೆ ಎಂದು ರೇಟಿಂಗ್ ಸಂಸ್ಥೆ ಫಿಚ್ ಹೇಳಿದೆ.
ಅಲ್ಲದೇ, ದೇಶದ ಆರ್ಥಿಕ ವ್ಯವಸ್ಥೆಗೆ “ಬಿಬಿಬಿ-‘ ಶ್ರೇಯಾಂಕವನ್ನು ಮುಂದುವರಿಸಿದೆ. 2006ರ ಆಗಸ್ಟ್‌ನಿಂದ ಫಿಚ್ ಇದೇ ರೇಟಿಂಗ್ ಅನ್ನು ಕಾಯ್ದುಕೊಂಡು ಬಂದಿದೆ.
ಪ್ರಸಕ್ತ ವರ್ಷದ ಏಪ್ರಿಲ್‌ನಿಂದ 2024ರ ಮಾರ್ಚ್‌ವರೆಗೆ ಭಾರತದ ಅರ್ಥ ವ್ಯವಸ್ಥೆ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುವ ಅರ್ಥ ವ್ಯವಸ್ಥೆಯಾಗಲಿದೆ. ಒಂದು ವರ್ಷದ ಅವಧಿಯಲ್ಲಿ ಶೇ.6ರ ದರದಲ್ಲಿ ಅಭಿವೃದ್ಧಿ ಸಾಧಿಸಲಿದೆ ಎಂದೂ ಅದನ್ನು ತನ್ನ ಮುನ್ಸೂಚನಾ ವರದಿಯಲ್ಲಿ ಹೇಳಿದೆ.
2022-23ನೇ ಸಾಲಿನಲ್ಲಿ ಶೇ.7, 2024-25ನೇ ಸಾಲಿನಲ್ಲಿ ಶೇ.6.7ರ ದರದಲ್ಲಿ ದೇಶದ ಅರ್ಥ ವ್ಯವಸ್ಥೆ ಅಭಿವೃದ್ಧಿ ಸಾಧಿಸಲಿದೆ ಎಂದೂ ಫಿಚ್ ಮುನ್ಸೂಚನೆ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.