ಫ‌ಖರ್‌ ಜಮಾನ್‌ ತಿಂಗಳ ಆಟಗಾರ: ತಿಂಗಳ ಆಟಗಾರ್ತಿ ನರುಮೋಲ್‌ ಚೈವೈ


Team Udayavani, May 10, 2023, 7:25 AM IST

ಫ‌ಖರ್‌ ಜಮಾನ್‌ ತಿಂಗಳ ಆಟಗಾರ: ತಿಂಗಳ ಆಟಗಾರ್ತಿ ನರುಮೋಲ್‌ ಚೈವೈ

ದುಬಾೖ: ಪಾಕಿಸ್ಥಾನದ ಸ್ಟಾರ್‌ ಬ್ಯಾಟರ್‌ ಫ‌ಖರ್‌ ಜಮಾನ್‌ “ಐಸಿಸಿ ತಿಂಗಳ ಆಟಗಾರ’ ಗೌರವದಿಂದ ಪುರಸ್ಕೃತರಾಗಿದ್ದಾರೆ. ವನಿತಾ ವಿಭಾಗದ ಈ ಪ್ರಶಸ್ತಿ ಥಾಯ್ಲೆಂಡ್‌ನ‌ ಬ್ಯಾಟರ್‌ ನರುಮೋಲ್‌ ಚೈವೈ ಅವರಿಗೆ ಒಲಿದಿದೆ.

ಪುರುಷರ ವಿಭಾಗದಲ್ಲಿ ಶ್ರೀಲಂಕಾದ ಪ್ರಭಾತ್‌ ಜಯಸೂರ್ಯ, ನ್ಯೂಜಿಲ್ಯಾಂಡ್‌ನ‌ ಮಾರ್ಕ್‌ ಚಾಪ್‌ಮನ್‌ ರೇಸ್‌ನಲ್ಲಿದ್ದರು. ಫ‌ಖರ್‌ ಜಮಾನ್‌ ಇವರೆಲ್ಲರನ್ನೂ ಮೀರಿ ನಿಂತರು.

ಪ್ರವಾಸಿ ನ್ಯೂಜಿಲ್ಯಾಂಡ್‌ ಎದುರಿನ ರಾವಲ್ಪಿಂಡಿಯ ದ್ವಿತೀಯ ಏಕದಿನ ಪಂದ್ಯದಲ್ಲಿ 337 ರನ್‌ ಚೇಸ್‌ ಮಾಡುವಾಗ ಫ‌ಖರ್‌ ಜಮಾನ್‌ ಅಜೇಯ 180 ರನ್‌ ಬಾರಿಸಿದ್ದರು. ಇದು ಏಕದಿನ ಇತಿಹಾಸದ ಚೇಸಿಂಗ್‌ ವೇಳೆ ದಾಖಲಾದ 2ನೇ ಅತ್ಯಧಿಕ ವೈಯಕ್ತಿಕ ಮೊತ್ತವಾಗಿತ್ತು. ಫ‌ಖರ್‌ ಜಮಾನ್‌ 17 ಬೌಂಡರಿ ಹಾಗೂ 6 ಸಿಕ್ಸರ್‌ ಸಿಡಿಸಿ ಕಿವೀಸ್‌ ಬೌಲಿಂಗ್‌ ದಾಳಿಯನ್ನು ಧೂಳೀಪಟ ಮಾಡಿದ್ದರು.

ಇದು ಎಪ್ರಿಲ್‌ ತಿಂಗಳಲ್ಲಿ ಫ‌ಖರ್‌ ಜಮಾನ್‌ ಬಾರಿಸಿದ 2ನೇ ಶತಕವಾಗಿತ್ತು. ನ್ಯೂಜಿಲ್ಯಾಂಡ್‌ ಎದುರಿನ ಮೊದಲ ಪಂದ್ಯದಲ್ಲಿ 117 ರನ್‌ ಬಾರಿಸಿದ್ದರು. ಇದರಿಂದ ಪಾಕಿಸ್ಥಾನಕ್ಕೆ 289 ರನ್‌ ಮೊತ್ತವನ್ನು ಯಶಸ್ವಿಯಾಗಿ ಚೇಸ್‌ ಮಾಡಲು ಸಾಧ್ಯವಾಗಿತ್ತು.

“ಐಸಿಸಿ ಪ್ರಶಸ್ತಿ ನನ್ನ ಪಾಲಿಗೆ ಒದಗಿ ಬಂದ ಮಹಾನ್‌ ಗೌರವ. ರಾವಲ್ಪಿಂಡಿಯಲ್ಲಿ ಸತತ ಎರಡು ಶತಕ ಬಾರಿಸಿದ್ದನ್ನು ನಾನು ಬಹಳಷ್ಟು ಸಂಭ್ರಮಿಸಿದೆ. ದ್ವಿತೀಯ ಪಂದ್ಯದಲ್ಲಿ ಅಜೇಯ 180 ರನ್‌ ಹೊಡೆದದ್ದು ನನ್ನ ಶ್ರೇಷ್ಠ ಇನ್ನಿಂಗ್ಸ್‌ ಆಗಿದೆ’ ಎಂಬುದಾಗಿ ಪಾಕ್‌ ಬ್ಯಾಟರ್‌ ಪ್ರತಿಕ್ರಿಯಿಸಿದರು.

ಚೈವೈ ಸಾಧನೆ
ಥಾಯ್ಲೆಂಡ್‌ನ‌ ಮಧ್ಯಮ ಕ್ರಮಾಂಕದ ಆಟಗಾರ್ತಿ ನರುಮೋಲ್‌ ಚೈವೈ ಜಿಂಬಾಬ್ವೆ ಎದುರಿನ ಏಕದಿನ ಸರಣಿಯನ್ನು 3-0 ಅಂತರದಿಂದ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಎರಡು ಅಜೇಯ ಅರ್ಧ ಶತಕ ಚೈವೈ ಅವರ ಬ್ಯಾಟಿಂಗ್‌ ಸಾಮರ್ಥ್ಯವನ್ನು ತೆರೆದಿರಿಸಿತು.

“ಇದು ನನಗಲ್ಲ, ಥಾಯ್ಲೆಂಡ್‌ ಕ್ರಿಕೆಟ್‌ಗೆ ಒಲಿದ ಗೌರವ. ಈ ಸಂದರ್ಭದಲ್ಲಿ ನನ್ನ ಕುಟುಂಬಕ್ಕೆ, ಸ್ನೇಹಿತರಿಗೆ ಮತ್ತು ದೇಶದ ಕ್ರಿಕೆಟ್‌ ಅಭಿಮಾನಿಗಳಿಗೆ ಥ್ಯಾಂಕ್ಸ್‌ ಹೇಳಬಯಸುತ್ತೇನೆ’ ಎಂಬುದಾಗಿ ಚೈವೈ ಹೇಳಿದರು. ಪ್ರಶಸ್ತಿ ರೇಸ್‌ನಲ್ಲಿದ್ದ ಉಳಿದವರೆಂದರೆ ಜಿಂಬಾಬ್ವೆಯ ಕೆಲಿಸ್‌ ಎನ್‌ದ್ಲೋವು ಮತ್ತು ಯುಎಇಯ ಕವಿಶಾ ಎಗೋದಗೆ.

ಟಾಪ್ ನ್ಯೂಸ್

10-udupi

Udupi: ಪಟಾಕಿ ಅಕ್ರಮ ದಾಸ್ತಾನು ; ಪಟಾಕಿ ಪೊಲೀಸ್‌ ವಶಕ್ಕೆ

Thalapathy 69: 8 ವರ್ಷದ ಬಳಿಕ ಮತ್ತೆ ಪೊಲೀಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಜಯ್

Thalapathy 69: 8 ವರ್ಷದ ಬಳಿಕ ಮತ್ತೆ ಪೊಲೀಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಜಯ್

Nigeria: ತೈಲ ಟ್ಯಾಂಕರ್‌ ಸ್ಫೋಟ-ನೂರು ಮಂದಿ ಸಜೀವ ದಹನ, 50 ಜನರಿಗೆ ಗಾಯ

Nigeria: ತೈಲ ಟ್ಯಾಂಕರ್‌ ಸ್ಫೋಟ-ನೂರು ಮಂದಿ ಸಜೀವ ದಹನ, 50 ಜನರಿಗೆ ಗಾಯ

1-s-j

SCO Summit; ಉಗ್ರವಾದದ ವಿರುದ್ಧ ಪಾಕಿಸ್ಥಾನದಲ್ಲೇ ಸ್ಪಷ್ಟ ಸಂದೇಶ ನೀಡಿದ ಎಸ್. ಜೈಶಂಕರ್

1-yekanath

Maharashtra Poll; ”ತ್ಯಾಗ” ಮಾಡಲು ಸಿದ್ಧರಾಗಬೇಕು.. ಶಿಂಧೆಗೆ ಬಿಜೆಪಿ ಸ್ಪಷ್ಟ ಸಂದೇಶ!

Sagara: ತಾಯಿ ಮಗು ಆಸ್ಪತ್ರೆ ಹೈಟೆಕ್ ಮಾಡಲು ಅಗತ್ಯ ಕ್ರಮ; ಬೇಳೂರು

Sagara: ತಾಯಿ ಮಗು ಆಸ್ಪತ್ರೆ ಹೈಟೆಕ್ ಮಾಡಲು ಅಗತ್ಯ ಕ್ರಮ; ಬೇಳೂರು

Helicopter: ಮುಖ್ಯ ಚುನಾವಣಾ ಆಯುಕ್ತರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

Helicopter: ಮುಖ್ಯ ಚುನಾವಣಾ ಆಯುಕ್ತರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

50th year for Bengaluru Chinnaswamy stadium

Bengaluru Chinnaswamy stadium; ಟೆಸ್ಟ್‌ ಆತಿಥ್ಯಕ್ಕೆ 50 ವರ್ಷ; ಟೆಸ್ಟ್‌ ಸಂಖ್ಯೆ 25

Test; ಭಾರತ-ನ್ಯೂಜಿಲ್ಯಾಂಡ್‌ ಟೆಸ್ಟ್‌ ಸರಣಿ: ಪ್ರಕೃತಿ ಸಹಕರಿಸಿದರೆ ಬೆಂಗಳೂರು ಪಂದ್ಯ

Test; ಭಾರತ-ನ್ಯೂಜಿಲ್ಯಾಂಡ್‌ ಟೆಸ್ಟ್‌ ಸರಣಿ: ಪ್ರಕೃತಿ ಸಹಕರಿಸಿದರೆ ಬೆಂಗಳೂರು ಪಂದ್ಯ

Hockey auction: Udita is an expensive player

Hockey auction: ಉದಿತಾ ದುಬಾರಿ ಆಟಗಾರ್ತಿ

PAKvsENG: Kamran Ghulam’s century that troubled Babar Azam

PAKvsENG: ಬಾಬರ್‌ ಅಜಂಗೆ ಸಂಕಷ್ಟ ತಂದ ಕಮ್ರಾನ್‌ ಘುಲಾಂ ಶತಕ

Chandika Hathurusinghe

BCB: ಕೋಚ್‌ ಚಂಡಿಕಾ ಹತುರುಸಿಂಘೆರನ್ನು ಅಮಾನತು ಮಾಡಿದ ಬಾಂಗ್ಲಾದೇಶ ಕ್ರಿಕೆಟ್

MUST WATCH

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

ಹೊಸ ಸೇರ್ಪಡೆ

10-udupi

Udupi: ಪಟಾಕಿ ಅಕ್ರಮ ದಾಸ್ತಾನು ; ಪಟಾಕಿ ಪೊಲೀಸ್‌ ವಶಕ್ಕೆ

15(1)

Manipal: ಎಂಜಿಎಂ ಚಿಟ್ಟೆ ಪಾರ್ಕ್‌ನಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು

14

Malpe: ಸಿಎನ್‌ಜಿ ಕೊರತೆ; ರಿಕ್ಷಾ ಚಾಲಕರಿಗೆ ಚಿಂತೆ

9-sagara

Sagara: ನಗರ ವ್ಯಾಪ್ತಿಯ ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯ; ಬೇಳೂರು ಸೂಚನೆ

ಎಳನೀರು: ಮೊದಲ ಬಾರಿ ರೈತರಿಗೆ ಬಂಪರ್‌ ದರ-36ರೂ.ಗೆ ಬೆಳೆಗಾರರಿಂದ ಖರೀದಿ

ಎಳನೀರು: ಮೊದಲ ಬಾರಿ ರೈತರಿಗೆ ಬಂಪರ್‌ ದರ-36ರೂ.ಗೆ ಬೆಳೆಗಾರರಿಂದ ಖರೀದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.