IPL-2023; ಮುಂಬೈ ಇಂಡಿಯನ್ಸ್ ಆರು ವಿಕೆಟ್ ಜಯಭೇರಿ
Team Udayavani, May 10, 2023, 7:05 AM IST
ಮುಂಬಯಿ: “ವಾಂಖೇಡೆ’ಯಲ್ಲಿ ನಡೆದ ಆರ್‌ಸಿಬಿ ಎದುರಿನ ದ್ವಿತೀಯ ಸುತ್ತಿನ ಐಪಿಎಲ್ ಮುಖಾಮುಖಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಆರು ವಿಕೆಟ್‌ಗಳಿಂದ ಜಯಭೇರಿ ಬಾರಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ 6 ವಿಕೆಟಿಗೆ 199 ರನ್ ಪೇರಿಸಿ ಸವಾಲೊಡ್ಡಿದರೆ, ಮುಂಬೈ ತಂಡವು 16.3 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟದಲ್ಲಿ ಜಯ ಸಾಧಿಸಿತಲ್ಲದೇ ಮೊದಲ ಮುಖಾಮುಖೀಯಲ್ಲಿ 8 ವಿಕೆಟ್‌ಗಳ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಆರಂಭಿಕ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಮತ್ತು ನೇಹಲ್ ವಧೇರ ಅವರ ಅಮೋಘ ಆಟದಿಂದಾಗಿ ಮುಂಬೈ ಸುಲಭವಾಗಿ ಗೆಲುವು ಕಂಡಿತು. ನಾಯಕ ರೋಹಿತ್ ಶರ್ಮ ಈ ಪಂದ್ಯದಲ್ಲೂ ವೈಫಲ್ಯ ಅನುಭವಿಸಿದರು. ಅವರ ಗಳಿಕೆ ಕೇವಲ 7 ರನ್. ಆದರೆ ಅವರು ಮೊದಲ ವಿಕೆಟಿಗೆ ಕಿಶನ್ ಜತೆಗೂಡಿ 51 ರನ್ ಪೇರಿಸಿದ್ದರು.
ಸೂರ್ಯಕುಮಾರ್ ಯಾದವ್ ಮತ್ತು ನೇಹಲ್ ವಧೇರ ಮೂರನೇ ವಿಕೆಟಿಗೆ 140 ರನ್ ಪೇರಿಸಿದ್ದರಿಂದ ಮುಂಬೈ ಗೆಲುವಿನ ಸನಿಹಕ್ಕೆ ಬಂತು. ಸೂರ್ಯಕುಮಾರ್ 35 ಎಸೆತಗಳಿಂದ 83 ರನ್ ಗಳಿಸಿದರು. 7 ಬೌಂಡರಿ ಮತ್ತು 6 ಸಿಕ್ಸರ್ ಬಾರಿಸಿದ್ದರು. ವಧೇರ 34 ಎಸೆತಗಳಿಂದ 52 ರನ್ ಗಳಿಸಿ ಅಜೇಯರಾಗಿ ಉಳಿದರು. 4 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದ್ದರು.
ಫಾ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅಬ್ಬರದ ಆಟ ಆರ್‌ಸಿಬಿಗೆ ವರವಾಗಿ ಪರಿಣಮಿಸಿತು. ಇವರು 3ನೇ ವಿಕೆಟಿಗೆ 10.1 ಓವರ್‌ಗಳಿಂದ 120 ರನ್ ಪೇರಿಸಿ ಮುಂಬೈ ಬೌಲರ್‌ಗಳನ್ನು ಸತಾಯಿಸಿದರು. ಇದರೊಂದಿಗೆ ಡು ಪ್ಲೆಸಿಸ್ ಈ ಬಾರಿಯ ಐಪಿಎಲ್ ಋತುವಿನಲ್ಲಿ 6ನೇ ಶತಕದ ಜತೆಯಾಟದಲ್ಲಿ ಭಾಗಿಯಾದಂತಾಯಿತು.
ಸ್ಕೋರ್ ಪಟ್ಟಿ
ರಾಯಲ್ ಚಾಲೆಂಜರ್ ಬೆಂಗಳೂರು
ವಿರಾಟ್ ಕೊಹ್ಲಿ ಸಿ ಇಶಾನ್ ಬಿ ಬೆಹ್ರೆಂಡಾರ್ಫ್ 1
ಫಾ ಡು ಪ್ಲೆಸಿಸ್ ಸಿ ವಿಷ್ಣು ವಿನೋದ್ ಬಿ ಗ್ರೀನ್ 65
ಅನುಜ್ ರಾವತ್ ಸಿ ಗ್ರೀನ್ ಬಿ ಬೆಹ್ರೆಂಡಾರ್ಫ್ 6
ಗ್ಲೆನ್ ಮ್ಯಾಕ್ಸ್‌ವೆಲ್ ಸಿ ನೇಹಲ್ ಬಿ ಬೆಹ್ರೆಂಡಾರ್ಫ್ 68
ಎಂ. ಲೊನ್ರೋರ್ ಬಿ ಕಾರ್ತಿಕೇಯ 1
ದಿನೇಶ್ ಕಾರ್ತಿಕ್ ಸಿ ನೇಹಲ್ ಬಿ ಜೋರ್ಡನ್ 30
ಕೇದಾರ್ ಜಾಧವ್ ಔಟಾಗದೆ 12
ವನಿಂದು ಹಸರಂಗ ಔಟಾಗದೆ 12
ಇತರ 4
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 199
ವಿಕೆಟ್ ಪತನ: 1-2, 2-16, 3-136, 4-146, 5-146, 6-185.
ಬೌಲಿಂಗ್:
ಬೆಹ್ರೆಂಡಾರ್ಫ್ 4-0-36-3; ಪೀಯೂಷ್ ಚಾವ್ಲಾ 4-0-41-0; ಕ್ಯಾಮರಾನ್ ಗ್ರೀನ್ 2-0-15-1; ಕ್ರಿಸ್ ಜೋರ್ಡನ್ 4-0-48-1; ಕುಮಾರ ಕಾರ್ತಿಕೇಯ 4-0-35-1; ಆಕಾಶ್ ಮಧ್ವಾಲ್ 2-0-23-0
ಮುಂಬೈ ಇಂಡಿಯನ್ಸ್
ಇಶಾನ್ ಕಿಶನ್ ಸಿ ರಾವತ್ ಬಿ ಹಸರಂಗ 42
ರೋಹಿತ್ ಶರ್ಮ ಎಲ್‌ಬಿಡಬ್ಲ್ಯು ಹಸರಂಗ 7
ಸೂರ್ಯಕುಮಾರ್ ಸಿ ಜಾಧವ್ ಬಿ ವೈಶಾಖ್ 83
ನೇಹಲ್ ವಧೇರ ಔಟಾಗದೆ 52
ಟಿಮ್ ಡೇವಿಡ್ ಸಿ ಮ್ಯಾಕ್ಸ್‌ವೆಲ್ ಬಿ ವೈಶಾಖ್ 0
ಕ್ಯಾಮರಾನ್ ಗ್ರೀನ್ ಔಟಾಗದೆ 2
ಇತರ 14
ಒಟ್ಟು (16.3 ಓವರ್‌ಗಳಲ್ಲಿ ನಾಲ್ಕು ವಿಕೆಟಿಗೆ) 200
ವಿಕೆಟ್ ಪತನ: 1-51, 2-52, 3-192, 4-192
ಬೌಲಿಂಗ್:
ಮೊಹಮ್ಮದ್ ಸಿರಾಜ್ 3-0-31-0; ಜೋಶ್ ಹೇಝಲ್‌ವುಡ್ 3-0-32-0; ವನಿಂದು ಹಸರಂಗ 4-0-53-2; ವೈಶಾಖ್ ವಿಜಯ್‌ಕುಮಾರ್ 3-0-37-2; ಹರ್ಷಲ್ ಪಟೇಲ್ 3.3-0-41-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
MUST WATCH
ಹೊಸ ಸೇರ್ಪಡೆ
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.