![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, May 10, 2023, 10:38 AM IST
ಮಸ್ಕಿ: ಪಟ್ಟಣದಲ್ಲಿನ ಮತಗಟ್ಟೆ 89ರಲ್ಲಿ ಮತಯಂತ್ರ ದೋಷದಿಂದ ತಡವಾಗಿ ಮತದಾನ ಆರಂಭವಾದರೆ, ಮತಗಟ್ಟೆ ಮುಂದೆಯೆ ಮಾಜಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಧ್ವಜವಿರುವ ಕಾರು ನಿಲ್ಲಿಸಿದ್ದು ವಿವಾದಕ್ಕೆ ಕಾರಣವಾಗಿದೆ.
ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಬುಧಚಾರ ಬೆಳಗ್ಗೆಯಿಂದ ಮತದಾನ ಆರಂಭವಾಗಿದ್ದು, ಅಲ್ಲಲ್ಲಿ ಕೆಲವು ವಾಗ್ವಾದ, ತಡವಾಗಿ ಮತದಾನ ಆರಂಭದ ಘಟನೆಗಳಾಗಿವೆ. 89 ಮತಗಟ್ಟೆಯಲ್ಲಿ ಇವಿಎಂ ಮಷಿನ್ ದೋಷದಿಂದ 30 ನಿಮಿಷ ತಡವಾಗಿ ಮತದಾನ ಆರಂಭಿಸಲಾಯಿತು.
ಇನ್ನು ಮತಗಟ್ಟೆ ಸಂಖ್ಯೆ 88ರ ಮುಂದೆಯೇ ಪ್ರತಾಪಗೌಡ ಪಾಟೀಲ್ ಮನೆ ಇದ್ದು, ಬಿಜೆಪಿ ಧ್ವಜ ಬಳಸಿದ ಕಾರು ನಿಲ್ಲಿಸಿದ್ದರಿಂದ ಕೆಲ ಕಾಲ ಗೊಂದಲ ಉಂಟಾಗಿ ವಿವಾದಕ್ಕೆ ಇಡಾಯಿತು. ತಾಲೂಕಿನ ಗುಂಡಾ ಗ್ರಾಮದಲ್ಲಿ ಮತದಾನ ಕೇಂದ್ರ ಹಾಗೂ ಕೆಲ ಕಡೆಗಳಲ್ಲಿ ವಾಮಾಚಾರ ನಡೆದಿದೆ ಎಂದು ಗಲಾಟೆ ನಡೆದ ಘಟನೆಗಳು ಕೂಡ ವರದಿಯಾಗಿವೆ.
You seem to have an Ad Blocker on.
To continue reading, please turn it off or whitelist Udayavani.