ಆರ್‌ಸಿಬಿಗೆ ತಟ್ಟಿತು ಸೂರ್ಯ ತಾಪ: ಕಾಲ ಮಿಂಚಿದೆ… ನಿರ್ಗಮನ ಸಮೀಪಿಸಿದೆ!

Team Udayavani, May 11, 2023, 7:30 AM IST

ಆರ್‌ಸಿಬಿಗೆ ತಟ್ಟಿತು ಸೂರ್ಯ ತಾಪ: ಕಾಲ ಮಿಂಚಿದೆ… ನಿರ್ಗಮನ ಸಮೀಪಿಸಿದೆ!

ಮುಂಬಯಿ: ಆರ್‌ಸಿಬಿಗೆ ಪ್ಲೇ ಆಫ್ ಟಿಕೆಟ್‌ ಕೈತಪ್ಪುವುದು ಬಹುತೇಕ ಖಚಿತವಾಗಿದೆ. ಬೆಂಗಳೂರು ತಂಡದ ಮುನ್ನಡೆಯ ಹಾದಿ ಕೊನೆಗೊಂಡಿದೆ ಎಂದು ಹೇಳಿದರೂ ನಡೆಯುತ್ತದೆ. ಮಂಗಳವಾರ ರಾತ್ರಿಯ “ವಾಂಖೇಡೆ’ ಮೇಲಾಟದಲ್ಲಿ ಸೂರ್ಯನ ತಾಪಕ್ಕೆ ಕರಟಿದ್ದೇ ಇದಕ್ಕೆಲ್ಲ ಮೂಲ.

ಕೇವಲ ಮೂವರು ಬ್ಯಾಟರ್, ಓರ್ವ ಬೌಲರ್‌ನನ್ನಿಟ್ಟುಕೊಂಡು ಈ ಕ್ಯಾಶ್‌ ರಿಚ್‌ ಲೀಗ್‌ನಲ್ಲಿ ಆಡುತ್ತಿರುವ ಏಕೈಕ ತಂಡ ಎಂದು ಎಲ್ಲರಿಂದ ವ್ಯಂಗ್ಯಕ್ಕೊಳಗಾಗಿರುವ ತಂಡ ಆರ್‌ಸಿಬಿ. ಮೂವರು ಬ್ಯಾಟರ್‌ಗಳಲ್ಲಿ ಒಬ್ಬರದು ಸೊನ್ನೆ ಸಾಧನೆ, ತಪ್ಪಿದರೆ ಒಂಟಿ ರನ್‌ ಗಳಿಕೆ. ಇನ್ನು ಬೌಲಿಂಗ್‌ ಕತೆ ಕೇಳುವುದೇ ಬೇಡ. ಈ ಎಲ್ಲ ಅವಸ್ಥೆಗೂ ಮುಂಬೈ ಎದುರಿನ ಪಂದ್ಯ ಸಾಕ್ಷಿಯಾಯಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ 6 ವಿಕೆಟಿಗೆ 199 ರನ್‌ ಪೇರಿಸಿತು. ಸಿಡಿದದ್ದು ಇಬ್ಬರೇ-ಡು ಪ್ಲೆಸಿಸ್‌ ಮತ್ತು ಮ್ಯಾಕ್ಸ್‌ವೆಲ್‌. ಮುಂಬೈ ಕೇವಲ 16.3 ಓವರ್‌ಗಳಲ್ಲಿ ನಾಲ್ಕೇ ವಿಕೆಟಿಗೆ ಈ ಮೊತ್ತವನ್ನು ಹಿಂದಿಕ್ಕಿತು. ಬೆಂಗಳೂರು ಬೌಲಿಂಗ್‌ ಚೆಲ್ಲಾಪಿಲ್ಲಿಗೊಂಡಿತು. ಆ “ಒಬ್ಬ ಬೌಲರ್‌’ ಕೂಡ ಕ್ಲಿಕ್‌ ಆಗಲಿಲ್ಲ. ಐದೂ ಮಂದಿ ಓವರಿಗೆ ಹತ್ತಕ್ಕೂ ಹೆಚ್ಚಿನ ಸರಾಸರಿಯಲ್ಲಿ ರನ್‌ ಬಿಟ್ಟುಕೊಟ್ಟರು. ಜತೆಗೆ 13 ಸಿಕ್ಸರ್‌ ಕೂಡ ನೀಡಿದರು.

“360 ಡಿಗ್ರಿ ಬ್ಯಾಟರ್‌’ ಸೂರ್ಯಕುಮಾರ್‌ ಯಾದವ್‌ ಆರ್‌ಸಿಬಿಗೆ ಚೆನ್ನಾಗಿಯೇ ಬಿಸಿ ಮುಟ್ಟಿಸಿದರು. 35 ಎಸೆತಗಳಿಂದ ಜೀವನಶ್ರೇಷ್ಠ 83 ರನ್‌ ಬಾರಿಸಿದರು (7 ಬೌಂಡರಿ, 6 ಸಿಕ್ಸರ್‌). ನೇಹಲ್‌ ವಧೇರ ಅಜೇಯ 52, ಇಶಾನ್‌ ಕಿಶನ್‌ 42 ರನ್‌ ಮಾಡಿದರು.

6 ಸೋಲು, 10 ಅಂಕ
ಇದು 11 ಪಂದ್ಯಗಳಲ್ಲಿ ಆರ್‌ಸಿಬಿಗೆ ಎದುರಾದ 6ನೇ ಸೋಲು. ಕೈಲಿರುವ ಅಂಕ ಬರೀ 10. ರನ್‌ರೇಟ್‌ -0.345. ಉಳಿದದ್ದು ಮೂರೇ ಪಂದ್ಯ. ಎಲ್ಲವನ್ನೂ ದೊಡ್ಡ ಅಂತರದಿಂದ ಗೆದ್ದರೂ ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲ. ಈಗಿನ ಲೆಕ್ಕಾಚಾರದಂತೆ ಗುಜರಾತ್‌, ಚೆನ್ನೈ, ಮುಂಬೈ, ಲಕ್ನೋಗೆ ಪ್ಲೇ ಆಫ್ ಅವಕಾಶ ಹೆಚ್ಚು. ರಾಜಸ್ಥಾನ್‌ ಮತ್ತು ಕೋಲ್ಕತಾ ನಡುವೆ ಒಂದು ಸ್ಥಾನಕ್ಕೆ ರೇಸ್‌ ಏರ್ಪಡಬಹುದು. ಇಂಥ ಪರಿಸ್ಥಿತಿಯಲ್ಲಿ ಆರ್‌ಸಿಬಿ ಮೇಲೇರುವುದು ಸಾಧ್ಯವಿಲ್ಲದ ಮಾತು.

ಆರ್‌ಸಿಬಿಯ ಮುಂದಿನ ಎದುರಾಳಿಗಳೆಂದರೆ ರಾಜಸ್ಥಾನ್‌, ಹೈದರಾಬಾದ್‌ ಮತ್ತ ಗುಜರಾತ್‌. ಇವುಗಳಲ್ಲಿ ಬೆಂಗಳೂರಿನಲ್ಲಿ ಏರ್ಪಡುವುದು ಚಾಂಪಿಯನ್‌ ಗುಜರಾತ್‌ ಎದುರಿನ ಪಂದ್ಯ ಮಾತ್ರ. ಉಳಿದವನ್ನು ಜೈಪುರ ಮತ್ತು ಹೈದರಾಬಾದ್‌ನಲ್ಲಿ ಆಡಬೇಕಿದೆ.

ಅವಕಾಶ ವಂಚಿತರು…
ಆಡಿದವರನ್ನೇ ಆಡಿಸುವುದು, ಕಳಪೆ ಪ್ರದರ್ಶನ ನೀಡಿದವರನ್ನೇ ಮುಂದುವರಿಸುವುದು, ಕೆಲವು ಪ್ರತಿಭಾನ್ವಿತರನ್ನು ಇನ್ನೂ ಬೆಂಚ್‌ ಮೇಲೆಯೇ ಕೂರಿಸಿರುವುದೆಲ್ಲ ಆರ್‌ಸಿಬಿಯ ವೈಫ‌ಲ್ಯಕ್ಕೆ ಮುಖ್ಯ ಕಾರಣ.

ಹಿಮಾಂಶು ಶರ್ಮ, ಅವಿನಾಶ್‌ ಸಿಂಗ್‌, ಮನೋಜ್‌ ಭಾಂಡಗೆ, ಫಿನ್‌ ಅಲೆನ್‌, ಸಿದ್ಧಾರ್ಥ್ ಕೌಲ್‌ ಮೊದಲಾದ ಪ್ರತಿಭಾನ್ವಿತರಿಗೆ ಆರ್‌ಸಿಬಿ ಇನ್ನೂ ಆಡುವ ಚಾನ್ಸ್‌ ಕೊಟ್ಟಿಲ್ಲ. ಬ್ರೇಸ್‌ವೆಲ್‌ಗೆ ನೀಡಿದ್ದು ಒಂದೋ, ಎರಡೋ ಅವಕಾಶ ಮಾತ್ರ. ದಿನೇಶ್‌ ಕಾರ್ತಿಕ್‌, ಶಾಬಾಜ್‌ ಅಹ್ಮದ್‌, ಅನುಜ್‌ ರಾವತ್‌ಗೆ ನೀಡಿದ ಅವಕಾಶಕ್ಕೆ ಲೆಕ್ಕವಿಲ್ಲ. ಆದರೆ ಇವರು ಸಾಧಿಸಿದ್ದೇನೂ ಇಲ್ಲ. ಆಟಗಾರರ ಆಯ್ಕೆಯಲ್ಲಿ ಆರ್‌ಸಿಬಿ ಆಡಳಿತ ಮಂಡಳಿಯೇ ಸತತವಾಗಿ ಎಡವುತ್ತಲೇ ಇದೆ. ಕಾಲ ಮಿಂಚಿದೆ; ನಿರ್ಗಮನ ಸಮೀಪಿಸಿದೆ!

ಟಾಪ್ ನ್ಯೂಸ್

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

2-bus

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Jasprit-Bumra

ICC World Rankings: ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ ಬುಮ್ರಾ ಮರಳಿ ನಂ.1

horoscope-new-3

Daily Horoscope: ವೆಚ್ಚಗಳು ಎಣಿಸದೆ ಬಂದರೂ ಅಪವ್ಯಯ ಇಲ್ಲ, ಎಲ್ಲದರಲ್ಲೂ ಎಚ್ಚರವಿರಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Jasprit-Bumra

ICC World Rankings: ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ ಬುಮ್ರಾ ಮರಳಿ ನಂ.1

virat-sachin-Dhoni

Brand Value: ಬಾಲಿವುಡ್‌ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್‌ ಮೌಲ್ಯ!

Panth–Iyer

IPL Auction: 27 ಕೋ. ರೂ. ಒಡೆಯ ರಿಷಭ್‌ ಪಂತ್‌ಗೆ ಸಿಗುವುದು 18.90 ಕೋಟಿ ಮಾತ್ರ!

Bowler-Siraj

IPL Auction: ಗುಜರಾತ್‌ ಟೈಟಾನ್ಸ್‌ ಪಾಲಾದ ಸಿರಾಜ್‌; ಆರ್‌ಸಿಬಿಗೆ ಹೃದಯಸ್ಪರ್ಶಿ ಸಂದೇಶ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

3-hunsur

Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

2-bus

ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.