ಸೋಮವಾರಪೇಟೆ: ಅರೆಸೇನಾ ಸಿಬಂದಿಯಿಂದ ಲಾಠಿ ಪ್ರಹಾರ
Team Udayavani, May 11, 2023, 6:40 AM IST
ಸೋಮವಾರಪೇಟೆ: ಮಡಿಕೇರಿ ಕ್ಷೇತ್ರದ ಮಾದಾಪುರ ಮತಗಟ್ಟೆಯ ಗೊಂದಲದಿಂದ ಕೆಲ ಕಾಲ ಮತದಾನಕ್ಕೆ ತೊಡಕುಂಟಾಯಿತು.
ಮತದಾನಕ್ಕೆ ಕಾಯ್ದು ಬಳಲಿದ್ದ ಮತದಾರರು ಕುಡಿಯುವ ನೀರಿಗಾಗಿ ಪರದಾಡಿ ತಾಳ್ಮೆ ಕಳೆದುಕೊಂಡರು. ಈ ಸಂದರ್ಭ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಅರೆಸೇನಾ ಪಡೆಯ ಸಿಬಂದಿ ಲಾಠಿ ಬೀಸಿದ ಪರಿಣಾಮ ನಿವೃತ್ತ ಯೋಧರು ಸೇರಿದಂತೆ ಹಲವು ಮಂದಿಗೆ ಗಾಯಗಳಾದವು.
ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಅರೆಸೇನಾ ಪಡೆಯ ಸಿಬಂದಿಯನ್ನು ಹೊರಗೆ ಕಳುಹಿಸಬೇಕು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ಇಲ್ಲದಿದ್ದರೆ ಮತದಾನ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದರು. ತಹಶೀಲ್ದಾರ್ ನರಗುಂದ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರಾದರೂ ಜನರ ಒತ್ತಾಯಕ್ಕೆ ಮಣಿದು ರಕ್ಷಣ ಪಡೆಯನ್ನು ಹೊರಕ್ಕೆ ಕಳುಹಿಸಿದರು.
ಮತದಾನ ಕೇಂದ್ರದ ಒಳಗೆ ಮೊಬೈಲ್ ನಿಷೇಧ ಇದ್ದರೂ ರಾಷ್ಟ್ರೀಯ ಪಕ್ಷದ ತಾಲೂಕಿನ ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿಯೋರ್ವರು ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿರುವುದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Madikeri: ದೇಗುಲದಲ್ಲಿ ಸಮಾನತೆಯೇ ಉದ್ದೇಶ ; ಕಟ್ಟೆಮಾಡಿನ ಶ್ರೀ ಮಹಾ ಮೃತ್ಯುಂಜಯ ವಿವಾದ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Kodagu: ಯೋಧ ದಿವಿನ್ ಪಂಚಭೂತಗಳಲ್ಲಿ ಲೀನ
Kasaragod ಅಪರಾಧ ಸುದ್ದಿಗಳು: ಅಂಗಡಿಗೆ ಲಾರಿ ಢಿಕ್ಕಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.