ಯಲ್ಲಾಪುರ: ಬಾವಿಗೆ ಬಿದ್ದ ಪಂಪ್ ತೆಗೆಯಲು ಬಾವಿಗಿಳಿದ ಮೂವರು ಮೃತ್ಯು
Team Udayavani, May 11, 2023, 8:43 PM IST
ಯಲ್ಲಾಪುರ: ಬಾವಿಗೆ ಬಿದ್ದಿರುವ ಪಂಪನ್ನು ಮೇಲಕ್ಕೆತ್ತಲು ಬಾವಿಗಿಳಿದ ವ್ಯಕ್ತಿ ಅಸ್ವಸ್ಥಗೊಂಡ ಪರಿಣಾಮ ಆತನ ರಕ್ಷಣೆಗೆ ಇಳಿದ ಮತ್ತಿಬ್ಬರೂ ಸೇರಿ ಒಟ್ಟು ಮೂರು ಮಂದಿ ಮೃತಪಟ್ಟ ಘಟನೆ ಯಲ್ಲಾಪುರ ತಾಲೂಕಿನ ಮಾವಿನಕಟ್ಟಾದ ಭರತನಹಳ್ಳಿಯಲ್ಲಿ ಗುರುವಾರ ನಡೆದಿದೆ.
ಮೃತರನ್ನು ಗೋವಿಂದ ಸೋಮಯ್ಯ ಪೂಜಾರಿ (60) , ಗಣೇಶ ಶೇಟ (22) ಹಾಗೂ ಸುರೇಶ ನಾಯರ (40) ಎನ್ನಲಾಗಿದೆ.
ಘಟನೆ ವಿವರ: ಭರತನಹಳ್ಳಿಯ ರಾಘವೇಂದ್ರ ನಾಗ ಪೂಜಾರಿ ಅವರ ಮನೆಯ ಬಾವಿಗೆ ಬಿದ್ದಿದ್ದ ಪಂಪನ್ನು ಮೇಲೆತ್ತುವ ಸಂದರ್ಭದಲ್ಲಿ ಓರ್ವ ಬಾವಿಗೆ ಇಳಿದಿದ್ದು ಈ ವೇಳೆ ವ್ಯಕ್ತಿ ಅಸ್ವಸ್ಥಗೊಂಡಿದ್ದಾನೆ ಇದನ್ನು ಕಂಡ ಮತ್ತಿಬ್ಬರು ಆತನ ರಕ್ಷಣೆಗೆ ಬಾವಿಗೆ ಇಳಿದಿದ್ದಾರೆ ಈ ವೇಳೆ ಮೂವರು ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ.
ತಕ್ಷಣವೇ ಶಿರಸಿ ಅಗ್ನಿಶಾಮಕ ಠಾಣೆಯ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಲಂಬೋದರ ವಿ. ಪಟಗಾರ ನೇತೃತ್ವದಲ್ಲಿ ಅಗ್ನಿಶಾಮಕ ಚಾಲಕ ರಮೇಶ್ ಜಂಬಗಿ ಸಿಬಂಧಿಗಳಾದ ಮೋಹನ ನಾಯ್ಕ, ನೀಲಕಂಠ ನಾಯ್ಕ, ಕಾರ್ತಿಕ, ಬಸವರಾಜ ಪಟ್ಟದಕಲ್ಲ, ಮಂಜುನಾಥ ಚೆನ್ನಪಾಗೌಡರ ಅರುಣಕುಮಾರ, ಅಗ್ನಿಶಾಮಕ ಚಾಲಕ ತಂತ್ರಜ್ಞ ಪ್ರವೀಣ ಪಾಟೀಲ ಸ್ಥಳಕ್ಕೆ ಹಾಜರಾಗಿ ಕ್ಷಿಪ್ರ ಕಾರ್ಯಾಚರಣೆ ಮಾಡಿ ಮೂವರು ವ್ಯಕ್ತಿಗಳ ಮೃತ ದೇಹಗಳನ್ನು ಮೆಲಕ್ಕೆತ್ತಿದ್ದಾರೆ. ಕಾರ್ಯಾಚರಣೆಗೆ ಸ್ಥಳೀಯ ಸಂತೋಷ ನೆರವಾದರು.
ಇದನ್ನೂ ಓದಿ: ಮೇ 13 ರಂದು ಮತ ಎಣಿಕೆ: ಉಡುಪಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.