ಚಾಟ್ ಜಿಪಿಟಿ ಪ್ರತಿಸ್ಪರ್ಧಿ ಗೂಗಲ್ ಬಾರ್ಡ್ ಬಿಡುಗಡೆ
Team Udayavani, May 12, 2023, 7:30 AM IST
ನವದೆಹಲಿ: ಎಐ ತಂತ್ರಜ್ಞಾನ ಆಧರಿತ ಚಾಟ್ ಜಿಪಿಟಿಯ ಪ್ರತಿಸ್ಪರ್ಧಿಯಾಗಿ ಭಾರತದಲ್ಲಿ ಗೂಗಲ್ನ ಎಐ ಚಾಟ್ಬೋಟ್ ಬಾರ್ಡ್ ಬಿಡುಗಡೆಗೊಂಡಿದೆ. ಈ ಹಿಂದೆಯೇ ಗೂಗಲ್ ಬಾರ್ಡ್ ಅನ್ನು ಬಿಡುಗಡೆಗೊಳಿಸಿತ್ತಾದರೂ, ಕೆಲ ತಾಂತ್ರಿಕ ಕಾರಣಗಳಿಂದ ಬಳಕೆದಾರರು ಈ ಸೇವೆ ಪಡೆಯಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಗೂಗಲ್ ಬಳಕೆದಾರರು ಈ ವೆಬ್ಸೈಟ್ ಬಳಸಬಹುದಾಗಿ ಎಂದು ಸಂಸ್ಥೆ ತಿಳಿಸಿದೆ. ಈ ಮೂಲಕ ಭಾರತ ಸೇರಿದಂತೆ 180 ದೇಶಗಳಲ್ಲಿ ಇನ್ನು ಮುಂದೆ ಎಐ ಬಾರ್ಡ್ ಸೇವೆ ಲಭ್ಯವಿರಲಿದೆ.
ಗೂಗಲ್ ಪ್ರಸಕ್ತ ಅತ್ಯಾಧುನಿಕ ಭಾಷಾ ಮಾದರಿಯಾಗಿರುವ ಪಾಮ್2 ವ್ಯವಸ್ಥೆಯನ್ನು ಬಾರ್ಡ್ ಆಧರಿಸಿದ್ದು, ಬಳಕೆದಾರರ ಪ್ರಶ್ನೆಗೆ ಸೂಕ್ತವಾಗಿ ಉತ್ತರಿಸುವ ಸಾಮರ್ಥ್ಯವನ್ನು ಹೊಂದಿದೆ. ಆದಾಗ್ಯೂ, ಮುಂದಿನ ದಿನಗಳಲ್ಲಿ ಸಂವಹನವನ್ನು ಸುಧಾರಿಸುವ ನಿಟ್ಟಿನಲ್ಲಿ ಜಿಮಿನಿ ಎನ್ನುವ ನೂತನ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಯೋಜಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಗೂಗಲ್ ಅಕೌಂಟ್ ಮೂಲಕ http://bard.google.com ವೆಬ್ಸೈಟ್ ಲಾಗಿನ್ ಆಗುವ ಮೂಲಕ ಟ್ರೈ ಬಾರ್ಡ್ ಎನ್ನುವ ಆಪ್ಶನ್ ಆಯ್ಕೆಮಾಡಿ ಬಳಿಕ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.