ಬೆಳ್ತಂಗಡಿ ಸುತ್ತಮುತ್ತ ಗುಡುಗು ಸಿಡಿಲು ಸಹಿತ ಭಾರೀ ಮಳೆ
ರಾ.ಹೆ.ಗೆ ಮರ ಬಿದ್ದು ತಾಸುಗಳ ಕಾಲ ರಸ್ತೆ ತಡೆ
Team Udayavani, May 12, 2023, 6:50 AM IST
ಬೆಳ್ತಂಗಡಿ: ತಾಲೂಕಿನ ಬಹುತೇಕ ಕಡೆ ಗುರುವಾರ ಸಂಜೆ ಗುಡುಗು, ಮಿಂಚು ಸಹಿತ ಭಾರೀ ಗಾಳಿ ಮಳೆಯಾದ ಪರಿಣಾಮ ಮರಗಳು ಉರುಳಿ ರಾಷ್ಟ್ರೀಯ ಹೆದ್ದಾರಿ ಸಹಿತ ರಸ್ತೆ ತಡೆ ಉಂಟಾಯಿತು.
ಬೆಳಗ್ಗೆ ಬಿಸಿಲಿನ ವಾತಾವರಣದಿಂದ ಕೂಡಿದ್ದು, ಸಂಜೆಯಾಗುತ್ತಲೇ ಮೋಡ ಕವಿಯಲಾರಂಭಿಸಿ 5 ಗಂಟೆ ವೇಳೆಗೆ ಸಿಡಿಲು, ಮಿಂಚು ಸಹಿತ ಮಳೆ ಆರಂಭವಾಯಿತು. ಬೆಳ್ತಂಗಡಿಯಿಂದ ಮಂಗಳೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಪಿಲಿಚಂಡಿಕಲ್ಲು ಬಳಿ ಬೃಹತ್ ಮರವೊಂದು ರಸ್ತೆಗೆ ಉರುಳಿ ತಾಸುಗಳ ಕಾಲ ರಸ್ತೆ ತಡೆ ಉಂಟಾಯಿತು. ಸ್ಥಳೀಯರು ಜೆಸಿಬಿ ಮೂಲಕ ಮರ ತೆರವು ಮಾಡಿದರು. ಬಳಿಕ ಅರಣ್ಯ ಇಲಾಖೆ ಸಿಬಂದಿ ಮರ ತೆರವುಗೊಳಿಸಿದರು. ತುರ್ತು ಕಾರಣ ಸಹಿತ ದೂರದ ಊರಿಗೆ ಪ್ರಯಾಣಿಸುವ ಮಂದಿ ಪರದಾಡುವಂತಾಯಿತು.
ಮರಗಳು ಬಿದ್ದು ಹಾನಿ
ಬೆಳ್ತಂಗಡಿ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದ ಬಳಿ ಮರ ಉರುಳಿ ಬಿದ್ದು ಆವರಣ ಗೋಡೆಗೆ ಹಾಗೂ ವಿದ್ಯುತ್ ತಂತಿ, ಕಂಬ ಸಹಿತ ಮುರಿದುಬಿದ್ದಿದೆ. ಸವಣಾಲು ರಸ್ತೆಯ ಕಲ್ಕಣಿ ಬಳಿ ಮನೆಯೊಂದಕ್ಕೆ ತೆಂಗಿನ ಮರವೊಂದು ರಸ್ತೆಗೆ ಉರುಳಿ ಬಿದ್ದ ಪರಿಣಾಮ ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಬೆಳ್ತಂಗಡಿ ಗುರುದೇವ ಕಾಲೇಜು ಬಳಿ ತಿಂಗಿನ ಮರವೊಂದು ಧರೆಗುರುಳಿದೆ.
ಮನೆಗೆ ಹಾನಿ
ಕುವೆಟ್ಟು ಗ್ರಾಮದ ಕವಿತಾ ರಮೇಶ್ ಪೂಜಾರಿ ಅವರ ಮನೆ ಭಾಗಶಃ ಹಾನಿಯಾಗಿದೆ. ತಾಲೂಕಿನಲ್ಲಿ ಒಟ್ಟು 12 ವಿದ್ಯುತ್ ಕಂಬಗಳು ಧರೆಗುರುಳಿವೆ. ಮಡಂತ್ಯಾರು. ಕುವೆಟ್ಟು, ಗೇರುಕಟ್ಟೆ, ಬೆಳ್ತಂಗಡಿ, ಲಾೖಲ ಸಹಿತ ಸುತ್ತಮುತ್ತ ಉತ್ತಮ ಮಳೆಯಾಗಿದ್ದು ಇತರೆಡೆ ಸಾಧಾರಣ ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.