ಚುನಾವಣ ಕಣದಲ್ಲಿ ಸದ್ದು ಮಾಡಿದ ಕಾಂಚಾಣ! ಆರೋಪ-ಪ್ರತ್ಯಾರೋಪಗಳ ಅಬ್ಬರ


Team Udayavani, May 13, 2023, 7:10 AM IST

ಚುನಾವಣ ಕಣದಲ್ಲಿ ಸದ್ದು ಮಾಡಿದ ಕಾಂಚಾಣ! ಆರೋಪ-ಪ್ರತ್ಯಾರೋಪಗಳ ಅಬ್ಬರ

ಮಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಕಾಂಚಾಣ ಭಾರೀ ಸದ್ದು ಮಾಡಿದೆ. ಕರಾವಳಿ ಭಾಗದಲ್ಲೂ ಚುನಾವಣಾ ಆಯೋಗದ ಹದ್ದಿನ ಕಣ್ಣು ತಪ್ಪಿಸಿ ಯಥೇತ್ಛ ಹಣ ವ್ಯಯಿಸಲಾಗಿದೆ ಎನ್ನಲಾಗುತ್ತಿದೆ. ಇದರ ಜತೆಗೆ ಮದ್ಯದ ಆಮಿಷವೂ ಕೆಲಸ ಮಾಡಿರುವ ಸಾಧ್ಯತೆ ಹೆಚ್ಚು. ನಡೆದಿರುವ ದಾಳಿ, ದಾಖಲಾಗಿರುವ ಪ್ರಕರಣಗಳು ಇದನ್ನು ಪುಷ್ಟೀಕರಿಸುವಂತಿವೆ.

ಮತದಾನದ ದಿನದವರೆಗೆ ದ.ಕ ಜಿಲ್ಲೆಯಲ್ಲಿ ಹಣ ವಿತರಣೆ ಬಗ್ಗೆ 3 ದೂರುಗಳು ದಾಖಲಾಗಿದ್ದರೆ ಮತದಾನದ ಹಿಂದಿನ ದಿನ ರಾತ್ರಿ 5 ದೂರುಗಳು ದಾಖಲಾಗಿವೆ. ಒಂದು ಪ್ರಕರಣದಲ್ಲಿ 61,500 ರೂ. ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಮನೆ ಮನೆಗೆ ತೆರಳಿ ಹಣ ಹಂಚಲಾಗಿದೆ ಎಂಬ ಆರೋಪವೂ ಕೆಲವು ಕ್ಷೇತ್ರಗಳಲ್ಲಿದ್ದು, ಪ್ರಮುಖ ಪಕ್ಷಗಳು ಪರಸ್ಪರ ಆರೋಪಿಸಿವೆ. ಅನೇಕ ಕಡೆಗಳಲ್ಲಿ ಹಣ ಹಂಚಿಕೆ ವಿಷಯವೇ ಕಾರ್ಯಕರ್ತರ ನಡುವಿನ ಸಂಘರ್ಷಕ್ಕೆ ಮುಖ್ಯ ಕಾರಣವಾಗಿತ್ತು. ಪೊಲೀಸರಿಗೆ ದೊರೆತಿರುವ ಮಾಹಿತಿಯ ಪೈಕಿ ಕೆಲವು ಸುಳ್ಳು ಮಾಹಿತಿ ಆಗಿತ್ತು. ಇನ್ನು ಕೆಲವೆಡೆ ಸಾಕ್ಷ್ಯಲಭಿಸಿಲ್ಲ.

ಮತದಾನದ ಹಿಂದಿನ ದಿನ ತಡ ರಾತ್ರಿಯವರೆಗೂ ಕೆಲವು ಪಕ್ಷಗಳ ಕಾರ್ಯಕರ್ತರು ಹಣ ಹಂಚುವ ಕಾರ್ಯದಲ್ಲಿ ತೊಡಗಿದ್ದರು ಎಂದು ನಾಗರಿಕರು, ಕಾರ್ಯಕರ್ತರು ಆರೋ ಪಿಸಿದ್ದರು. ಆದರೆ ಈ ಬಗ್ಗೆ ದಾಖಲಾದ ದೂರುಗಳ ಸಂಖ್ಯೆ ಕಡಿಮೆ.

ಕೋ.ರೂ.ಅಕ್ರಮ- ಸಕ್ರಮ!
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹಣ, ಉಡುಗೊರೆ ಯಂತಹ ವಸ್ತುಗಳ ಅಕ್ರಮ ಸಾಗಣೆ ತಡೆಗೆ ವ್ಯಾಪಕ ತಪಾಸಣೆ ನಡೆಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾ.29 ರಿಂದ ಮೇ 10ರವರೆಗೆ ವಾಹನಗಳ ತಪಾಸಣೆ ವೇಳೆ ಸೂಕ್ತ ದಾಖಲೆಗಳು ಇಲ್ಲದ ಒಟ್ಟು 1.73 ಕೋ.ರೂ. ಪತ್ತೆ ಮಾಡಲಾಗಿತ್ತು. ಅನಂತರ ವಾರಸುದಾರರು ವಿಚಾರಣೆ ವೇಳೆ ಸೂಕ್ತ ದಾಖಲೆಗಳನ್ನು ತಂದಿರುವ ಹಿನ್ನೆಲೆಯಲ್ಲಿ ವಾಪಸ್‌ ನೀಡಲಾಗಿದೆ.

ಅಬಕಾರಿ ಇಲಾಖೆ: ಒಟ್ಟು 1,798 ದಾಳಿ
ಅಬಕಾರಿ ಇಲಾಖೆ ಮಾ.29ರಿಂದ ಮೇ 10ರವರೆಗೆ ಒಟ್ಟು 1,798 ದಾಳಿ ಗಳನ್ನು ನಡೆಸಿ 85 ಘೋರ ಮೊಕ ದ್ದಮೆಗಳನ್ನು ದಾಖಲಿಸಿದೆ. ಈ ವೇಳೆ 2,023.640 ಲೀ. ಐಎಂಎಲ್‌, 217.950 ಲೀ. ಗೋವಾ ಮದ್ಯ, 2,220 ಲೀ. ಶೇಂದಿ, 81.720 ಲೀ. ಕಳ್ಳಭಟ್ಟಿ, 1,225 ಲೀ ಗೇರುಹಣ್ಣಿನ ಕೊಳೆ, 175.750 ಲೀ. ಬಿಯರ್‌, 7.249 ಕೆಜಿ ನಿಷೇಧಿತ ಮಾದಕ ವಸ್ತು, 42 ವಾಹನಗಳನ್ನು ಸ್ವಾಧೀನಪಡಿಸಿ ಕೊಂಡಿದೆ.
ಓರ್ವ ಅಭ್ಯರ್ಥಿಗೆ ಗರಿಷ್ಠ ವೆಚ್ಚ 40 ಲ.ರೂ. ಎಂಬುದಾಗಿ ಚುನಾವಣ ಆಯೋಗ ನಿಗದಿಗೊಳಿಸಿತ್ತು.

ವೆಚ್ಚದ ಪರಿಶೀಲನೆ
ಅಭ್ಯರ್ಥಿಗಳ ಚುನಾವಣಾ ವೆಚ್ಚದ ಬಗ್ಗೆ ಸಂಗ್ರಹಿಸಿರುವ ಮಾಹಿತಿಯನ್ನು ಪರಿಶೀಲಿಸಿ ಇನ್ನಷ್ಟೇ ಕ್ರೋಢೀಕರಿಸಬೇಕಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 1.73 ಕೋ.ರೂ ವಶಪಡಿಸಿಕೊಳ್ಳಲಾಗಿತ್ತು. ಬಳಿಕ ವಾರಸುದಾರರು ಸೂಕ್ತ ದಾಖಲೆಗಳನ್ನು ನೀಡಿ ವಾಒಸು ಪಡೆದಿದ್ದಾರೆ.
-ಡಾ| ಕುಮಾರ್‌, ಅಧ್ಯಕ್ಷರು, ಸ್ವಾಧೀನಪಡಿಸಿಕೊಂಡ ನಗದು ಹಣ ಇತ್ಯರ್ಥ ಸಮಿತಿ

ಟಾಪ್ ನ್ಯೂಸ್

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-maralu

Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.