ಕಾಡಾನೆ ಹಾವಳಿ ತಡೆಗೆ ಸೋಲಾರ್‌ ಬೇಲಿ ತಂತ್ರ


Team Udayavani, May 13, 2023, 11:11 AM IST

ಕಾಡಾನೆ ಹಾವಳಿ ತಡೆಗೆ ಸೋಲಾರ್‌ ಬೇಲಿ ತಂತ್ರ

ರಾಮನಗರ: ವನ್ಯಜೀವಿ ವಲಯದಿಂದ ನಾಡಿ ನತ್ತ ಬಂದು ಹಾವಳಿ ಎಬ್ಬಿಸುತ್ತಿರುವ ಗಜಪಡೆಯ ನಿಯಂತ್ರಣಕ್ಕೆ ಇದೀಗ ಅರಣ್ಯ ಇಲಾಖೆಯ ಸಿಬ್ಬಂದಿ ಸೌರಬೇಲಿ ನಿರ್ಮಾಣಕ್ಕೆ ಮೊರೆ ಹೋಗಿದ್ದು, ಈಗಾಗಲೇ ಜಿಲ್ಲೆಯಲ್ಲಿ 20 ಕಿ.ಮೀ. ನಷ್ಟು ಸೌರಬೇಲಿಯನ್ನು ಅಳವಡಿಸಿರುವ ಅರಣ್ಯ ಇಲಾಖೆ. ಇದರಿಂದ ಕಾಡಾನೆ ಉಪಟಳ ನಿಯಂತ್ರಣಕ್ಕೆ ಬಂದಿದೆ ಎಂದು ನಿಟ್ಟುಸಿರು ಬಿಟ್ಟಿದೆ.

ಈಗಾಗಲೇ ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಲು ಸಾಕಷ್ಟು ಪ್ರಯತ್ನ ಪಟ್ಟು ವಿಫಲ ಗೊಂಡಿರುವ ಅರಣ್ಯ ಇಲಾಖೆ ಸೌರಬೇಲಿಯನ್ನು ಅಳವಡಿಸಿದ್ದು, ಇದರಿಂದ ಧನಾತ್ಮಕ ಫಲಿತಾಂಶ ಲಭ್ಯವಾಗಿರುವ ಕಾರಣ ಜಿಲ್ಲೆಯಲ್ಲಿ ಇತರ ಭಾಗ ದಲ್ಲೂ ಸೌರಬೇಲಿ ಅಳವಡಿಸಲು ಮುಂದಾಗಿದೆ.

ಜಿಲ್ಲೆಯ ಮೀಸಲು ಅರಣ್ಯದಲ್ಲಿ ಬೇಲಿ ಅಳವಡಿಕೆ: ಕಾವೇರಿ ವನ್ಯಜೀವಿ ಅರಣ್ಯ ಪ್ರದೇಶದ ಪಕ್ಕದಲ್ಲಿರುವ ಸಣ್ಣ ಪ್ರಮಾಣದ ರಾಜ್ಯವಲಯದ ಸಾಮಾನ್ಯ ಅರಣ್ಯ ಪ್ರದೇಶಗಳತ್ತ ಆಗಮಿಸುವ ಕಾಡಾನೆಗಳು ಅಕ್ಕಪಕ್ಕದ ಗ್ರಾಮಗಳಲ್ಲಿ ದಾಂಧಲೆ ಎಬ್ಬಿಸುತ್ತಿವೆ. ವನ್ಯಜೀವಿ ವಲಯದಿಂದ ಹೊರಬರದಂತೆ ಕಾಡಾನೆಗಳನ್ನು ತಡೆಹಿಡಿಯಲು ರೈಲ್ವೆ ಬ್ಯಾರಿಕೇಡ್‌ ನಿರ್ಮಾಣ ಕಗ್ಗಂಟಾಗೇ ಉಳಿದಿ ರುವ ಹಿನ್ನೆಲೆಯಲ್ಲಿ ವಲಯ ಅರಣ್ಯಪ್ರದೇಶಕ್ಕೆ ಸೋಲಾರ್‌ ಪೆನ್ಸಿಂಗ್‌ ಅಳವಡಿಕೆ ಕಾರ್ಯ ಕೈಗೊಂಡಿದ್ದಾರೆ. ಈಗಾಗಲೇ ಚಿಕ್ಕಮಣ್ಣುಗುಡ್ಡೆ ಮತ್ತು ತೆಂಗಿನ ಕಲ್ಲು ಅರಣ್ಯ ಪ್ರದೇಶದಲ್ಲಿ ಸೋಲಾರ್‌ ಬೇಲಿ ಅಳವಡಿಕೆ ಕಾರ್ಯವನ್ನು ಕೈಗೊಳ್ಳಲಾಗಿದೆ.

ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ 12.250 ಕಿ.ಮೀ., ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ 8 ಕಿ. ಮೀ. ದೂರ ಸೋಲಾರ್‌ ಬೇಲಿ ಅಳವಡಿಸ ಲಾಗುತ್ತಿದ್ದು, ರಾಜ್ಯ ಮೀಸಲು ಅರಣ್ಯ ವಲಯದಲ್ಲಿ 50 ಕಿ.ಮೀ. ದೂರ ಸೋಲಾರ್‌ ಬೇಲಿಯನ್ನು ಅಳವಡಿಸಿದ್ದೇ ಆದಲ್ಲಿ ಕಾಡಾನೆ ಹಾವಳಿ ಶೇ.90 ರಷ್ಟು ನಿಯಂತ್ರಣಗೊಳ್ಳಲಿದೆ ಎಂಬ ವಿಶ್ವಾಸ ಅರಣ್ಯ ಇಲಾಖೆಯದ್ದಾಗಿದೆ. ಕಾಡಾನೆ ಹಾವಳಿನಿಯಂತ್ರಣ: ಈಗಾಗಲೇ ಚಿಕ್ಕ ಮಣ್ಣು ಗುಡ್ಡೆ ಅರಣ್ಯ ಪ್ರದೇಶಕ್ಕೆ 12.250 ಕಿ. ಮೀ.ನಷ್ಟು ಸೋಲಾರ್‌ ಬೇಲಿ ಅಳವಡಿಕೆ ಮಾಡಿದ್ದು, ಬೇಲಿ ಅಳವಡಿಕೆಯಾದ ಬಳಿಕ ಈಭಾಗಕ್ಕೆ ಕಾಡಾನೆಗಳು ಬರುವುದು ಕಡಿಮೆ ಯಾಗಿದ್ದು, ಕಾಡಾನೆ ಹಾವಳಿ ಸಂಪೂರ್ಣ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಇಡೀ ಅರಣ್ಯ ಪ್ರದೇಶಕ್ಕೆ ಸೋಲಾರ್‌ ಬೇಲಿ ಅಳವಡಿಸಲು ಉದ್ದೇಶಿಸಿದ್ದಾರೆ.

ಏನಿದು ಸೌರ ಬೇಲಿ: ಕಾಡಂಚಿನಲ್ಲಿ ಕಂಬಗಳನ್ನು ನೆಟ್ಟು ಸಣ್ಣದಾಗಿ ತಂತಿಗಳನ್ನು ಅಳವಡಿಸ ಲಾಗು ವುದು. ಹೀಗೆ ಅಳವಡಿಸುವ ತಂತಿಗಳಿಗೆ ಸೌರ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಲಾಗುವುದು. ಈ ಬೇಲಿಯನ್ನು ದಾಟಲು ಆನೆಗಳು ಮುಂದಾಗ ಅವುಗಳಿಗೆ ವಿದ್ಯುತ್‌ ಶಾಕ್‌ ತಗುಲುತ್ತದೆ. ಇದರಿಂದ ಭಯಗೊಳ್ಳುವ ಆನೆಗಳು ಮತ್ತೆ ವನ್ಯಜೀವಿ ವಲಯದತ್ತ ಹಿಂದಿರುಗುತ್ತವೆ. ಇನ್ನು ಸೋಲಾರ್‌ ಬೇಲಿಯಲ್ಲಿ ಪ್ರವಹಿಸುವ ವಿದ್ಯುತ್‌ ಬಿಟ್ಟು ಬಿಟ್ಟು ಪ್ರಸರಣವಾಗುವ ಆನೆ ಸೇರಿದಂತೆ ಇತರೆ ಯಾವುದೇ ವನ್ಯಜೀವಿಗಳ ಜೀವಕ್ಕೆ ಅಪಾಯಕಾರಿಯಲ್ಲ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಮಾಹಿತಿ.

ಪೂರ್ಣಗೊಳ್ಳದ ರೈಲ್ವೆ ಬ್ಯಾರಿಕೇಡ್‌: ಕಾವೇರಿ ವನ್ಯಜೀವಿ ವಲಯದಿಂದ ಆನೆಗಳು ಹೊರ ಬರುವುದನ್ನು ತಡೆಯುವುದಕ್ಕಾಗಿ ರೈಲ್ವೆ ಕಂಬಿ ಯನ್ನು ಬಳಸಿ ಆನೆ ಬ್ಯಾರಿಕೇಡ್‌ ನಿರ್ಮಿಸುವ ಕಾಮಗಾರಿ ಕನಕಪುರ ತಾಲೂಕಿನ ದುಂತೂರು ಹಾಗೂ ಸುತ್ತಮುತ್ತಲಿನ ಗ್ರಾಮ ಗಳಲ್ಲಿ ಸುಮಾರು 4 ಕಿ.ಮೀ. ನಷ್ಟು ಬಾಕಿ ಉಳಿದಿದೆ. ಕಾಡಾನೆಗಳು ಇತ್ತ ಆಗಮಿಸಲು ಇಲ್ಲಿ ಬ್ಯಾರಿಕೇಡ್‌ ಇಲ್ಲದಿ ರುವುದೇ ಕಾರಣವಾಗಿದ್ದು, ಈ ಭಾಗದಿಂದ ಕಾಡಾನೆಗಲು ಹೊರಗೆ ಬರುತ್ತಿವೆ. ಈ ಸಮಸ್ಯೆ ಕಗ್ಗಂಟಾಗೇ ಉಳಿದಿರುವ ಹಿನ್ನೆಲೆಯಲ್ಲಿ ರಾಜ್ಯ ವಲಯದ ಸಾಮಾನ್ಯ ಅರಣ್ಯಕ್ಕೆ ಸೋಲಾರ್‌ ಬೇಲಿ ಅಳವಡಿಕೆಗೆ ಅಧಿಕಾರಿಗಳು ಮುಂದಾಗಿದ್ದಾರೆ.

ರಾಜ್ಯವಲಯದ ಅರಣ್ಯ ಪ್ರದೇಶಕ್ಕೆ ಸೇರಿದ ತೆಂಗಿನಕಲ್ಲು ಹಾಗೂ ಚಿಕ್ಕಮಣ್ಣುಗುಡ್ಡೆ ಅರಣ್ಯ ಪ್ರದೇಶದಲ್ಲಿ 20 ಕಿ.ಮೀ. ನಷ್ಟು ಅರಣ್ಯ ಪ್ರದೇಶಕ್ಕೆ ಸೌರ ಬೇಲಿ ಅಳವಡಿಸ ಲಾಗಿದ್ದು, ಈ ಭಾಗದಲ್ಲಿ ಕಾಡಾನೆ ಹಾವಳಿ ಕಡಿಮೆ ಯಾಗಿದೆ. ಬಾಕಿ ಇರುವ 30 ಕಿ.ಮೀ. ಅಳವಡಿಸಿದ್ದೇ ಆದಲ್ಲಿ ಕಾಡಾನೆ ಹಾವಳಿಯನ್ನು ಶೇ.90ರಷ್ಟು ನಿಯಂತ್ರಿಸಬಹುದು. – ಕಿರಣ್‌ಕುಮಾರ್‌, ವಲಯ ಅರಣ್ಯಾಧಿಕಾರಿ, ಚನ್ನಪಟ್ಟಣ

ಟಾಪ್ ನ್ಯೂಸ್

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

156

Nikhil Kumarswamy: ಸೋತ ನಿಖಿಲ್‌ಗೆ ಜಿಲ್ಲೆಯ ಪಕ್ಷ ಸಂಘಟನೆ ಹೊಣೆ

Newborn baby’s body found in toilet pit!

Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!

Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ

Channapatna: ಸ್ಮಶಾನಕ್ಕೆ ಜಾಗ ಬೇಕೆಂದು ತಾಲೂಕು ಕಚೇರಿಯೆದುರು ಶವವಿಟ್ಟು ಪ್ರತಿಭಟನೆ

Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

Road Mishap: ಬಸ್‌-ಕಾರು ನಡುವೆ ಡಿಕ್ಕಿ; ಮೂವರ ಸಾವು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

1-IFFI

IFFI 2024; ಟಾಕ್ಸಿಕ್‌ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್‌ ಮಸ್ಸೆಗೆ ವಾರ್ಷಿಕ ಪುರಸ್ಕಾರ

4

Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ

Untitled-5

Kasaragod: ನಗ-ನಗದು ಕಳವು; ಆರೋಪಿ ಬಂಧನ

4

Punjalkatte: ರಾಯಿ; ಯುವಕ ನೇಣು ಬಿಗಿದು ಆತ್ಮಹತ್ಯೆ

Untitled-5

Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.