Karnataka Poll: ಉಡುಪಿ ಜಿಲ್ಲೆಯಲ್ಲಿ 5,391 ನೋಟಾ ಚಲಾವಣೆ
Team Udayavani, May 14, 2023, 7:00 AM IST
ಉಡುಪಿ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 5,391 ಮತಗಳು ನೋಟಾ ಮತಗಳಾಗಿವೆ. ಇವಿಎಂ ಯಂತ್ರದ ಮೂಲಕ 5,342 ಮತಗಳು ಚಲಾವಣೆಯಾದರೆ 49 ಮತಗಳು ಪೋಸ್ಟಲ್ ಮೂಲಕ ಚಲಾವಣೆಗೊಂಡಿವೆ.
ಉಡುಪಿಯಲ್ಲಿ ಹೆಚ್ಚು
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 1,298 ಮಂದಿ ಇವಿಎಂ ಮೂಲಕ ಹಾಗೂ 18 ಮಂದಿ ಪೋಸ್ಟಲ್ ಮೂಲಕ ನೋಟಾ ಚಲಾಯಿಸಿದ್ದಾರೆ. ಕುಂದಾಪುರದಲ್ಲಿ 1,199 ಮಂದಿ ಇವಿಎಂ ಮೂಲಕ ಹಾಗೂ 9 ಮಂದಿ ಪೋಸ್ಟಲ್ ಮೂಲಕ ಚಲಾಯಿಸಿದ್ದಾರೆ. ಕುಂದಾಪುರದಲ್ಲಿ 1,132 ಮಂದಿ ಇವಿಎಂ ಮೂಲಕ ಹಾಗೂ 9 ಮಂದಿ ಪೋಸ್ಟಲ್ ಮೂಲಕ ಮತ ಚಲಾಯಿಸಿದ್ದಾರೆ. ಕಾರ್ಕಳದಲ್ಲಿ 915 ಮಂದಿ ಇವಿಎಂ ಮೂಲಕ ಹಾಗೂ 6 ಮಂದಿ ಪೋಸ್ಟಲ್ ಮೂಲಕ, ಕಾಪುವಿನಲ್ಲಿ 798 ಮಂದಿ ಇವಿಎಂ ಮೂಲಕ ಹಾಗೂ 7 ಮಂದಿ ಪೋಸ್ಟಲ್ ಮೂಲಕ ಮತ ಚಲಾಯಿಸಿದ್ದಾರೆ.
ನೋಟಾಕ್ಕಿಂತಲೂ ಕಡಿಮೆ ಮತ ಪಡೆದವರು
ಕಾಪುವಿಧಾನಸಭಾ ಕ್ಷೇತ್ರದಲ್ಲಿ 921 ನೋಟಾ ಚಲಾವಣೆಯಾಗಿದೆ. ಆಮ್‌ಆದ್ಮಿ ಪಕ್ಷದ ಅಭ್ಯರ್ಥಿ, ಜನತಾದಳ, ಉತ್ತಮ ಪ್ರಜಾಕೀಯ ಪಕ್ಷ ಹಾಗೂ ಮೂವರು ಸ್ವತಂತ್ರ ಅಭ್ಯರ್ಥಿಗಳು ನೋಟಾಕ್ಕಿಂತಲೂ ಕಡಿಮೆ ಮತ ಗಳಿಸಿದ್ದಾರೆ. ಕಾಪುವಿನಲ್ಲಿ 805 ನೋಟಾ ಚಲಾವಣೆಯಾಗಿದೆ. ಜೆಡಿಎಸ್, ಆಮ್ ಆದ್ಮಿ ನೋಟಾಕ್ಕಿಂತಲೂ ಕಡಿಮೆಮತ ಗಳಿಸಿದೆ. ಉಡುಪಿಯಲ್ಲಿ 1,316 ನೋಟಾ ಚಲಾವಣೆ ಗೊಂಡಿದ್ದು, ಜೆಡಿಎಸ್, ಆಮ್‌ಆದ್ಮಿ, ಉತ್ತಮ ಪ್ರಜಾಕೀಯ ಪಕ್ಷ, ಕರ್ನಾಟಕ ರಾಷ್ಟ್ರ ಸಮಿತಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷಗಳು ನೋಟಾಕ್ಕಿಂತ ಕಡಿಮೆ ಮತ ಗಳಿಸಿವೆ. ಕುಂದಾಪುರದಲ್ಲಿ 1,141 ನೋಟಾ ಚಲಾವಣೆಯಾಗಿದ್ದು, ಜೆಡಿಎಸ್, ಸ್ವತಂತ್ರ ಅಭ್ಯರ್ಥಿಗಳು ಅದಕ್ಕಿಂತ ಕಡಿಮೆ ಮತ ಗಳಿಸಿ ದ್ದಾರೆ. ಬೈಂದೂರಿನಲ್ಲಿ 1,208 ನೋಟಾ ಚಲಾವಣೆ ಯಾಗಿದ್ದು, ಜೆಡಿಎಸ್, ಆಮ್‌ಆದ್ಮಿ, ಉತ್ತಮ ಪ್ರಜಾಕೀಯ ಪಕ್ಷ, ರಾಷ್ಟ್ರೀಯ ಸಮಾಜ ದಳ, ಮೂರು ಮಂದಿ ಸ್ವತಂತ್ರ ಅಭ್ಯರ್ಥಿಗಳು ಅದಕ್ಕಿಂತಲೂ ಕಡಿಮೆ ಮತ ಗಳಿಸಿದ್ದಾರೆ.
ದ.ಕ.: ನೋಟಾ ಅಷ್ಟಕ್ಕಷ್ಟೇ
ಮಂಗಳೂರು, ಮೇ 13: ಜಿಲ್ಲೆಯಲ್ಲಿ ಇದುವರೆಗೆ ಅಷ್ಟಾಗಿ ಪ್ರಭಾವ ಬೀರದ ನೋಟಾ ಈ ಬಾರಿಯೂ ಅಷ್ಟಕ್ಕಷ್ಟೇ. ಒಟ್ಟಾರೆ ನೋಟಾಕ್ಕೆ ಬಿದ್ದ ಮತಗಳು 9095. ಸುಳ್ಯ ಕ್ಷೇತ್ರದಲ್ಲಿ ಗರಿಷ್ಠ 2562 ನೋಟಾ ಬಿದ್ದರೆ ಕನಿಷ್ಠ ಮಂಗಳೂರು ಕ್ಷೇತ್ರದಲ್ಲಿ 720. ಬೆಳ್ತಂಗಡಿಯಲ್ಲಿ 892, ಮೂಡುಬಿದಿರೆ 837, ಪುತ್ತೂರು 866, ಬಂಟ್ವಾಳ 821, ಮಂಗಳೂರು ಉತ್ತರ 1194 ಹಾಗೂ ಮಂಗಳೂರು ದಕ್ಷಿಣದಲ್ಲಿ 1203 ಮತಗಳಷ್ಟೇ ಬಿದ್ದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.