ಕೊಹಿನೂರ್ ವಜ್ರವನ್ನು ಮರಳಿ ತರಲು ಮೋದಿ ಯತ್ನ
ಯುಕೆಯಲ್ಲಿರುವ ಸಾವಿರಾರು ಇತರೆ ಕಲಾಕೃತಿಗಳೂ ಸ್ವದೇಶಕ್ಕೆ? -ಶೀಘ್ರದಲ್ಲೇ ಪ್ರಕ್ರಿಯೆ ಆರಂಭಿಸಲು ಪ್ರಧಾನಿ ಮೋದಿ ಸಲಹೆ
Team Udayavani, May 15, 2023, 7:09 AM IST
ನವದೆಹಲಿ: “ಬೆಳಕಿನ ಶಿಖರ” ಎಂದೇ ಕರೆಯಲ್ಪಡುವ ಕೊಹಿನೂರು ವಜ್ರವನ್ನು ಮರಳಿ ಭಾರತಕ್ಕೆ ತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಹೆಜ್ಜೆಯಿಟ್ಟಿದೆ. ಕೊಹಿನೂರು ಮಾತ್ರವಲ್ಲದೇ ಬ್ರಿಟಿಷರ ಆಡಳಿತಾವಧಿಯಲ್ಲಿ ಭಾರತದಿಂದ ಹೊತ್ತೂಯ್ದಿದ್ದ ಇತರೆ ಅನೇಕ ಅಮೂಲ್ಯ ವಸ್ತುಗಳನ್ನು ವಾಪಸ್ ತರುವ ಉದ್ದೇಶದಿಂದ ಶೀಘ್ರದಲ್ಲೇ ರಾಜತಾಂತ್ರಿಕ ಅಭಿಯಾನವೊಂದನ್ನು ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಮೋದಿ ಆಸ್ಥೆ:
ಈ ರಾಜತಾಂತ್ರಿಕ ಅಭಿಯಾನವನ್ನು “ಗತಕಾಲದ ಪರಿಗಣನೆ’ ಎಂದು ವ್ಯಾಖ್ಯಾನಿಸಲಾಗಿದ್ದು, ಯುನೈಟೆಡ್ ಕಿಂಗ್‌ಡಮ್ ಎದುರಿಸಲಿರುವ ಅತಿದೊಡ್ಡ “ವಾಪಸಾತಿ ಬೇಡಿಕೆ’ ಇದಾಗಿರಲಿದೆ. ಕೊಹಿನೂರು ವಜ್ರ ಮತ್ತು ಭಾರತದ ಕಲಾಕೃತಿಗಳನ್ನು ಮರಳಿ ತರುವುದಕ್ಕೆ ಖುದ್ದು ಪ್ರಧಾನಿ ಮೋದಿಯವರೇ ಆಸ್ಥೆ ವಹಿಸಿದ್ದು, ಆದ್ಯತೆಯ ಮೇರೆಗೆ ಈ ಕೆಲಸ ನಡೆಯಬೇಕೆಂದು ಸೂಚಿಸಿದ್ದಾರೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಗೋವಿಂದ್ ಮೋಹನ್ ಹೇಳಿದ್ದಾರೆ.
ಈ ವರ್ಷವೇ ಆರಂಭ:
ಭಾರತ ಮೂಲದ ಅಮೂಲ್ಯ ಕಲಾಕೃತಿಗಳನ್ನು ಹೊಂದಿರುವ, ಖರೀದಿಸಿರುವಂಥ ಯುಕೆಯಲ್ಲಿನ ವಿವಿಧ ಸಂಸ್ಥೆಗಳನ್ನು ಮೊದಲಿಗೆ ಲಂಡನ್‌ನಲ್ಲಿರುವ ರಾಜತಾಂತ್ರಿಕ ಅಧಿಕಾರಿಗಳು ಸಂಪರ್ಕಿಸಿ, ಔಪಚಾರಿಕ ಕೋರಿಕೆ ಸಲ್ಲಿಸಲಿದ್ದಾರೆ. ಈ ಪ್ರಕ್ರಿಯೆಯು ಪ್ರಸಕ್ತ ವರ್ಷವೇ ಆರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
1849ರಿಂದಲೂ ಕೊಹಿನೂರು ವಜ್ರವು ಬ್ರಿಟಿಷ್ ರಾಜಮನೆತನದ ವಶದಲ್ಲಿದೆ. 1849ರಲ್ಲಿ 10 ವರ್ಷದವರಾಗಿದ್ದ ಭಾರತದ ಮಹಾರಾಜ ದುಲೀಪ್ ಸಿಂಗ್ ಅವರಿಂದ ಬಲವಂತವಾಗಿ ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿಸಿ, ಕೊಹಿನೂರು ವಜ್ರವನ್ನು ಬ್ರಿಟಿಷರು ಒಯ್ದರು ಎನ್ನಲಾಗಿದೆ. ಆದರೆ, “ಕೊಹಿನೂರು ವಜ್ರವು ಭಾರತದಿಂದ ಈಸ್ಟ್ ಇಂಡಿಯಾ ಕಂಪನಿಗೆ ನೀಡಲ್ಪಟ್ಟ ಉಡುಗೊರೆಯಾಗಿದೆ’ ಎನ್ನುವುದು ಬ್ರಿಟಿಷರ ವಾದ. ನಂತರದಲ್ಲಿ, ಕೊಹಿನೂರ್ ವಜ್ರವು ಬ್ರಿಟನ್ ರಾಣಿಯ ಕಿರೀಟದಲ್ಲಿ 2 ಸಾವಿರದಷ್ಟು ಇತರೆ ವಜ್ರಗಳೊಂದಿಗೆ ಸ್ಥಾನ ಪಡೆದುಕೊಂಡಿತು. ಈ ವಜ್ರವು ಭಾರತದಿಂದ ಕೊಂಡೊಯ್ಯುವ ವೇಳೆ 186 ಕ್ಯಾರೆಟ್ ಇತ್ತು.
ಬೇರೆ ಇನ್ನೇನಿವೆ?
ತೈಮೂರನ ಮಾಣಿಕ್ಯ, ಟಿಪ್ಪು ಸುಲ್ತಾನ್ ಒಡೆತನದ ರತ್ನಖಚಿತ ಹುಲಿಯ ತಲೆಯ ಕಲಾಕೃತಿ, ಟಿಪ್ಪು ಸುಲ್ತಾನನ ಹುಲಿಯ ಪ್ರತಿಕೃತಿ, ಅಮರಾವತಿ ಮಾರ್ಬಲ್, ಹರಿಹರ ವಿಗ್ರಹ, ಶಹಜಹಾನನ ವೈನ್ ಕಪ್‌ಗಳು, ಮಹಾರಾಜ ರಣಜಿತ್ ಸಿಂಗ್‌ನ ಸಿಂಹಾಸನ ಮತ್ತು ಹಿಂದೂ ದೇವದೇವತೆಗಳ ವಿಗ್ರಹಗಳು, ಕಲಾಕೃತಿಗಳು.
ಸಂಪತ್ತಿನ ಮೌಲ್ಯ
1765ರಿಂದ 1938ರ ಅವಧಿಯಲ್ಲಿ ಬ್ರಿಟಿಷರು ಭಾರತದಿಂದ ಹೊತ್ತೂಯ್ದ ಸಂಪತ್ತಿನ ಮೌಲ್ಯ 45 ಲಕ್ಷಕೋಟಿ ಡಾಲರ್ ಎಂದು 2018ರಲ್ಲಿ ಅರ್ಥಶಾಸ್ತ್ರಜ್ಞರಾದ ಉತ್ಸಾ ಪಟ್ನಾಯಕ್ ಅವರ ಸಂಶೋಧನಾ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.