ಪ್ಲೇ ಆಫ್ ನಿರೀಕ್ಷೆಯಲ್ಲಿ ಗುಜರಾತ್ ಟೈಟಾನ್ಸ್
Team Udayavani, May 15, 2023, 7:48 AM IST
ಅಹ್ಮದಾಬಾದ್: ಸ್ಥಿರ ನಿರ್ವಹಣೆ ನೀಡುತ್ತ ಬಂದಿರುವ ಅಗ್ರ ಸ್ಥಾನಿ ಗುಜರಾತ್ ಟೈಟಾನ್ಸ್ ತಂಡವು ಸೋಮವಾರದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಗುಜರಾತ್ ತಂಡವು ಪ್ಲೇ ಆಫ್ ಹಂತಕ್ಕೇರಲಿದೆ. ಇದೇ ಉತ್ಸಾಹದಲ್ಲಿ ಗುಜರಾತ್ ಆಡಲು ಸಿದ್ಧತೆ ನಡೆಸಿದೆ.
ಗುಜರಾತ್ ತಂಡಕ್ಕೆ ಹೋಲಿಸಿದರೆ ಹೈದರಾಬಾದ್ ಅಷ್ಟೊಂದು ಬಲಿಷ್ಠ ವಾಗಿದೆ. ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರುವ ಅದು ಇಷ್ಟರವರೆಗೆ ನಾಲ್ಕರಲ್ಲಿ ಮಾತ್ರ ಗೆದ್ದಿದೆ. ಆದರೆ ಗುಜರಾತ್ ಈ ಹಿಂದಿನ ಪಂದ್ಯದಲ್ಲಿ ಮುಂಬೈ ವಿರುದ್ಧ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಸೋಲನ್ನು ಕಂಡಿತ್ತು. ರಶೀದ್ ಖಾನ್ ಮಾತ್ರ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಈ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ಗಮನಿಸಿರುವ ಹಾರ್ದಿಕ್ ಪಾಂಡ್ಯ ಪಡೆ ಹೈದರಾಬಾದ್ ವಿರುದ್ಧ ಗೆಲುವಿಗಾಗಿ ಹೋರಾಡಲಿದೆ.
ನಾವು ಆ ಪಂದ್ಯದಲ್ಲಿ ಸಂಘಟಿತ ಹೋರಾಟ ನೀಡಿರಲಿಲ್ಲ. ಬೌಲಿಂಗ್‌ನ ಲ್ಲಿಯೂ ನಾವು ನಿಯಂತ್ರಿತ ದಾಳಿ ಸಂಘಟಿಸಿಲ್ಲ. ನಾವು ಹಾಕಿಕೊಂಡ ಯೋಜನೆಯನ್ನು ಕಾರ್ಯಗತಗೊಳಿ ಸಲು ಯಶಸ್ವಿಯಾಗಲಿಲ್ಲ ಎಂದು 4ನೇ ಸೋಲಿನ ಬಳಿಕ ಪಾಂಡ್ಯ ಹೇಳಿದ್ದರು.
ಹೈದರಾಬಾದ್‌ನ ನಿರ್ವಹಣೆ ತೃಪ್ತಿದಾಯಕವಾಗಿಲ್ಲ. ಲಕ್ನೋ ವಿರುದ್ಧ ಹೈದರಾಬಾದ್ ಗೆಲುವಿನ ಹೊಸ್ತಿ ಲಲ್ಲಿ ಇದ್ದರೂ ಪೂರಣ್ ಅವರ ಆಟ ದಿಂದಾಗಿ ಪಂದ್ಯ ಲಕ್ನೋ ಕಡೆ ತಿರು ಗಿತ್ತು. ಪೂರಣ್ ಕೇವಲ 13 ಎಸೆತಗ ಳಿಂದ 44 ರನ್ ಗಳಿಸಿ ಲಕ್ನೋ ತಂಡಕ್ಕೆ ಅಮೋಘ ಜಯ ತಂದುಕೊಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.