ನಾಡಿನ ಅಸ್ಮಿತೆಯಾಗಿ ಬೆಳೆದಿದೆ ಕಸಾಪ; ಡಾ| ನಾಗರಾಜ ನಾಡಗೌಡ
ಕಸಾಪ ಮುನ್ನಡೆಸಬೇಕು ಎಂಬುದು ಜನರ ಅಭಿಲಾಸೆಯಾಗಿದೆ
Team Udayavani, May 15, 2023, 5:15 PM IST
ಇಳಕಲ್ಲ: ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಹಾಗೂ ಕನ್ನಡ ನಾಡಿನ ಅಸ್ಮಿತೆಯಾಗಿ ಬೆಳೆದಿದೆ. ಆದರೆ, ನಾಡು-ನುಡಿಗೆ ದಕ್ಕೆಯಾದಾಗ ಪ್ರತಿರೋಧದ ಶಕ್ತಿಯಾಗಬೇಕು ಎಂಬ ಕನ್ನಡಿಗರ ನಿರೀಕ್ಷೆ ಹುಸಿಗೊಳಿಸಿದೆ ಎಂದು ಮುಧೋಳದ ಆರ್‌ಎಂಜಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಡಾ| ನಾಗರಾಜ ನಾಡಗೌಡ ಹೇಳಿದರು.
ನಗರದ ಸ್ನೇಹರಂಗದ ಸಾಂಸ್ಕೃತಿಕ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಇಳಕಲ್ಲ ತಾಲೂಕು ಘಟಕವು ಆಯೋಜಿಸಿದ್ದ
ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಕನ್ನಡ ಅಸ್ಮಿತೆ- ಕನ್ನಡ ಸಾಹಿತ್ ಪರಿಷತ್ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ
ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ವಿಭಿನ್ನ ಪ್ರಾಂತಗಳಲ್ಲಿ ಅನ್ಯ ಭಾಷಿಕ ಆಡಳಿತದಲ್ಲಿ ಹಂಚಿ ಹೋಗಿದ್ದ ಕನ್ನಡಿಗರಲ್ಲಿ ಏಕತೆಯ ಭಾವ ಮೂಡಿಸಿದ್ದು ಕನ್ನಡ ಸಾಹಿತ್ಯ ಪರಿಷತ್ತು. ಸ್ವಾತಂತ್ರೋತ್ತರ ಘಟದಲ್ಲಿ ಸಾಹಿತ್ಯ ಸಂಶೋಧನೆ, ನಿಘಂಟು ಹೀಗೆ ಕನ್ನಡ ಕಟ್ಟುವ ಅನೇಕ ಸೃಜನಶೀಲ ಹಾಗೂ ಸಂಶೋಧನಾತ್ಮಕ ಚಟುವಟಿಕೆ ಕೈಗೊಂಡು ಯಶಸ್ವಿಯಾಗಿದೆ. ವಾರ್ಷಿಕ ಸಮ್ಮೇಳನಗಳ
ಮೂಲಕ ದೊಡ್ಡ ಸಂಖ್ಯೆಯ ಕನ್ನಡಿಗರನ್ನು ಒಳಗೊಳ್ಳುವ ಕೆಲಸ ಮಾಡಿದ್ದು, ಕಸಾಪ ಕನ್ನಡಿಗರ ಪ್ರಾತಿನಿ ಧಿಕ ಸಂಸ್ಥೆಯಾಗಿ ಬೆಳದಿದೆ.
ಆದರೆ, ಕನ್ನಡ ಅಸ್ಮಿತೆಗೆ ಕನ್ನಡಿಗರ ಅಸ್ತಿತ್ವಕ್ಕೆ ದಕ್ಕೆಯಾದಾಗ ನಾಯಕತ್ವ ವಹಿಸಿಕೊಳ್ಳದೇ ಹಿಂಜರಿಯುತ್ತಿದೆ. ಹಿಂದೆ ಸೇರಿದಂತೆ
ಅನ್ಯ ಭಾಷೆಗಳ ಹೇರಿಕೆಗೆ ನಿರೀಕ್ಷಿತ ಪ್ರತಿರೋಧ ಒಡ್ಡುತ್ತಿಲ್ಲ. ಕನ್ನಡ ಕಟ್ಟುವ ಬೆಳೆಸುವ ವಿಷಯವಾಗಿ ಆಂದೋಲನ
ನಡೆಯಬೇಕಿದ್ದು, ಈ ಆಂದೋಲನವನ್ನು ಕಸಾಪ ಮುನ್ನಡೆಸಬೇಕು ಎಂಬುದು ಜನರ ಅಭಿಲಾಸೆಯಾಗಿದೆ ಎಂದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಮಹಾದೇವ ಕಂಬಾಗಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಕೆ.ಎ. ಬನ್ನಟ್ಟಿ ಹಾಗೂ
ಸ್ನೇಹರಂಗದ ಅಧ್ಯಕ್ಷ ಬಸವರಾಜ ಮಠದ ಉಪಸ್ಥಿತರಿದ್ದರು.
ಕಸಾಪ ನಿಕಟಪೂರ್ವ ಅಧ್ಯಕ್ಷ ಸಂಗಣ್ಣ ಗದ್ದಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ ಗಜೇಂದ್ರಗಡ ನಿರೂಪಿಸಿದರು. ಉಮೇಶ ಶಿರೂರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Mudhol: ಟ್ರ್ಯಾಕ್ಟರ್ ಹಾಗೂ ಬೊಲೆರೋ ಮುಖಾಮುಖಿ ಡಿಕ್ಕಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು
Hindutva; ಧರ್ಮದ ವಿರುದ್ಧ ಬಂದರೆ ಸುಮ್ಮನಿರೆವು: ಯದುವೀರ ಕೃಷ್ಣದತ್ತ ಒಡೆಯರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.