ಖಾನಾಪೂರ: ಡ್ಯಾಂ ಕ್ರಾಸ್ ಬಳಿ ಒಂಟಿ ಸಲಗ ಪ್ರತ್ಯಕ್ಷ
Team Udayavani, May 15, 2023, 5:35 PM IST
ಉಳ್ಳಾಗಡ್ಡಿ-ಖಾನಾಪೂರ: ಸಮೀಪದ ಹಿಡಕಲ್ ಡ್ಯಾಂ ಕ್ರಾಸ್ ಬಳಿಯ ಬಾಲಾಜಿ ವೇ ಬ್ರಿಡ್ಜ್, ಉಳ್ಳಾಗಡ್ಡಿ-ಖಾನಾಪೂರ
ಗ್ರಾಮದ ಅವಟೆ ಹೊಲ-ಗದ್ದೆಗಳಲ್ಲಿ ರವಿವಾರ ಒಂಟಿ ಸಲಗ ಕಾಣಿಸಿದ್ದು, 7-8 ಗಂಟೆ ಕಾಲ ಅತ್ತಿತ್ತ ಅಡ್ಡಾಡಿ ಮತ್ತೆ ಕಾಡಿನತ್ತ ಮುಖ ಮಾಡಿದ ಘಟನೆ ನಡೆದಿದೆ,
ರಾತ್ರಿ ಬಂದ ಗಂಡಾನೆ:-ಬಹುತೇಕ ಮಹಾರಾಷ್ಟ್ರದ ಅರಣ್ಯ ಪ್ರದೇಶದಿಂದ ಕರ್ನಾಟಕದ ಘಟಪ್ರಭಾ ನದಿ ದಡಗುಂಟ ಹತ್ತರಗಿ ಹಾಗೂ ಉಳ್ಳಾಗಡ್ಡಿ-ಖಾನಾಪೂರ ಗುಡ್ಡಗಾಡು ಪ್ರದೇಶಕ್ಕೆ ಬಂದ ಗಂಡಾನೆ ರಾಷ್ಟ್ರೀಯ ಹೆದ್ದಾರಿ ಬಳಿ ವಾಹನಗಳು ಹಾಗೂ
ಜನ ಸಂಚಾರ ಕಂಡು ನಿಂತಿದೆ.
ಆನೆ ನೋಡಲು ಜನ ಎಲ್ಲೆಡೆಯಿಂದ ಬರುತ್ತಿದ್ದರಿಂದ ಏನೂ ಮಾಡಲು ತೋಚದ ಆನೆ ಒಂದೇ ಸ್ಥಳದಲ್ಲಿ ಸುತ್ತಾಡುತ್ತಿತ್ತು. ಜನಜಾತ್ರೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ಕೆಲಕಾಲ ತಲೆನೋವಾಗಿ ಪರಿಣಮಿಸಿತ್ತು. ಹೆದ್ದಾರಿ ಮೇಲೆ ಹೋಗುತ್ತಿದ್ದವರು ಕೂಡ ವಾಹನ ನಿಲ್ಲಿಸಿ ಆನೆ ನೋಡುವುದು ವಿಪರೀತವಾಗಿತ್ತು,
ನಂತರ ಅರಣ್ಯ ಇಲಾಖೆ ಸಿಬ್ಬಮದಿ ಪ್ರಯತ್ನದಿಂದ ಬಂದ ದಾರಿಯಲ್ಲೇ ಆನೆ ಬೆಳಗ್ಗೆ 11 ನಂತರ ಮಹಾರಾಷ್ಟ್ರದ ತೆರಣಿ
ಮಾರ್ಗವಾಗಿ ಕಾಡಿನತ್ತ ಹೆಜ್ಜೆ ಹಾಕಿತು. ಆರ್‌ಎಫ್‌ಒ ಪ್ರಶಾಂತ ಬೆಲ್ಲದ, ಡಿಆರ್‌ಎಫ್‌ಒ ವಿರೇಶ ಆಂದೋಲಿ, ಅರಣ್ಯ ರಕ್ಷಕರಾದ
ರಮೇಶ ಕಮತೆ, ಈರಣ್ಣಾ ಜಿಂಡ್ರಾಳಿ, ಅನಿಲ ತಳವಾರ, ನೀಲೇಶ ಕಾಂಬಳೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ರಾಜ್ಯೋತ್ಸವ ಮೆರವಣಿಗೆ ವೇಳೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
Belagavi: ಎಂಇಎಸ್ ಕಾರ್ಯಕರ್ತರ ಪುಂಡಾಟ
Rajyotsava Celebration: ಬೆಳಗಾವಿಯಲ್ಲಿ ವೈಭವದ ಕರ್ನಾಟಕ ರಾಜ್ಯೋತ್ಸವ
Belagavi; ಎಂಇಎಸ್ ನಿಷೇಧಕ್ಕಿಂತ ನಿರ್ಲಕ್ಷ್ಯ ಮಾಡುವುದು ಉತ್ತಮ: ಸತೀಶ್ ಜಾರಕಿಹೊಳಿ
ಬೆಳಗಾವಿ: ಆರ್ಥಿಕ ಮುಗ್ಗಟ್ಟು ಮಧ್ಯೆಯೇ ದುಂದುವೆಚ್ಚ: ಪಾಲಿಕೆಯಿಂದ ಲಕ್ಷ, ಲಕ್ಷ ವೆಚ್ಚ!
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.