2023ರ ಐಪಿಎಲ್‌ ಪ್ಲೇ ಆಫ್ ಪ್ರವೇಶಿಸಿದ ಗುಜರಾತ್‌ ಟೈಟಾನ್ಸ್‌ 


Team Udayavani, May 16, 2023, 6:56 AM IST

2023ರ ಐಪಿಎಲ್‌ ಪ್ಲೇ ಆಫ್ ಪ್ರವೇಶಿಸಿದ ಗುಜರಾತ್‌ ಟೈಟಾನ್ಸ್‌ 

ಅಹ್ಮದಾಬಾದ್‌: ಹಾಲಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ 2023ರ ಐಪಿಎಲ್‌ನಲ್ಲಿ ಪ್ಲೇ ಆಫ್ ತಲುಪಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸೋಮವಾರದ ಮುಖಾಮುಖಿಯಲ್ಲಿ ಪಾಂಡ್ಯ ಪಡೆ ಸನ್‌ರೈಸರ್ ಹೈದರಾಬಾದ್‌ಗೆ 34 ರನ್ನುಗಳ ಸೋಲುಣಿಸಿ ಮುನ್ನಡೆಯಿತು. ಇದು ಗುಜರಾತ್‌ ಸಾಧಿಸಿದ 9ನೇ ಜಯ. 12 ಪಂದ್ಯಗಳಲ್ಲಿ 8ನೇ ಸೋಲುಂಡ ಹೈದರಾಬಾದ್‌ ಕೂಟದಿಂದ ಹೊರಬಿತ್ತು.

ಮೊಹಮ್ಮದ್‌ ಶಮಿ ಮತ್ತು ಮೋಹಿತ್‌ ಶರ್ಮ ತಲಾ 4 ವಿಕೆಟ್‌ ಕಿತ್ತು ಹೈದರಾಬಾದ್‌ ಪಾಲಿಗೆ ಘಾತಕವಾಗಿ ಪರಿಣಮಿಸಿದರು. ಹೆನ್ರಿಚ್‌ ಕ್ಲಾಸೆನ್‌ ಸರ್ವಾಧಿಕ 64 ರನ್‌ ಮಾಡಿದರು.

ಆರಂಭಕಾರ ಶುಭಮನ್‌ ಗಿಲ್‌ ಅವರ ಮೊದಲ ಐಪಿಎಲ್‌ ಶತಕ ಸಾಹಸದಿಂದ ಗುಜರಾತ್‌ 9 ವಿಕೆಟಿಗೆ 188 ರನ್‌ ಗಳಿಸಿದರೆ, ಹೈದರಾಬಾದ್‌ 9 ವಿಕೆಟಿಗೆ 154 ರನ್‌ ಗಳಿಸಿತು.

ಶುಭಮನ್‌ ಗಿಲ್‌ ಕೊಡುಗೆ 101 ರನ್‌. ಅಂತಿಮ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಗಿಲ್‌ 56 ಎಸೆತಗಳಲ್ಲಿ ಶತಕ ಪೂರೈಸಿದರು. ಒಟ್ಟು 58 ಎಸೆತ ಎದುರಿಸಿದ ಅವರು 13 ಬೌಂಡರಿ ಹಾಗೂ ಒಂದು ಸಿಕ್ಸರ್‌ ಹೊಡೆದರು. ಇದು ಐಪಿಎಲ್‌ನಲ್ಲಿ ಗುಜರಾತ್‌ ಪರ ದಾಖಲಾದ ಪ್ರಥಮ ಶತಕ ಎಂಬುದು ಉಲ್ಲೇಖನೀಯ. ಹಿಂದಿನ ಸರ್ವಾಧಿಕ ರನ್‌ ದಾಖಲೆ ಕೂಡ ಗಿಲ್‌ ಹೆಸರಲ್ಲೇ ಇತ್ತು. ಕಳೆದ ವರ್ಷ ಪಂಜಾಬ್‌ ಕಿಂಗ್ಸ್‌ ವಿರುದ್ಧ ಮುಂಬಯಿಯಲ್ಲಿ ಆಡಲಾದ ಪಂದ್ಯದಲ್ಲಿ ಗಿಲ್‌ 96 ರನ್‌ ಹೊಡೆದಿದ್ದರು.

ಹೈದರಾಬಾದ್‌ ಪರ ಭುವನೇಶ್ವರ್‌ ಕುಮಾರ್‌ ಅಮೋಘ ಬೌಲಿಂಗ್‌ ದಾಳಿ ಸಂಘಟಿಸಿದರು. ಅವರ ಸಾಧನೆ 30ಕ್ಕೆ 5 ವಿಕೆಟ್‌. ಇದರಲ್ಲಿ 3 ವಿಕೆಟ್‌ಗಳನ್ನು ಅವರು ಅಂತಿಮ ಓವರ್‌ನಲ್ಲಿ ಕೆಡವಿದರು. ಗುಜರಾತ್‌ ಕೊನೆಯ ಓವರ್‌ನಲ್ಲಿ 4 ವಿಕೆಟ್‌ ಕಳೆದುಕೊಂಡಿತು. ಇದರಲ್ಲೊಂದು ರನೌಟ್‌ ಆಗಿತ್ತು.

ಭುವನೇಶ್ವರ್‌ ಕುಮಾರ್‌ ಐಪಿಎಲ್‌ನಲ್ಲಿ 2 ಸಲ 5 ವಿಕೆಟ್‌ ಕೆಡವಿದ 3ನೇ ಬೌಲರ್‌. ಉಳಿದಿಬ್ಬರೆಂದರೆ ಜೇಮ್ಸ್‌ ಫಾಕ್ನರ್‌ ಮತ್ತು ಜೈದೇವ್‌ ಉನಾದ್ಕತ್‌.

ಬೌಲಿಂಗ್‌ ಆಯ್ದುಕೊಂಡ ಹೈದರಾಬಾದ್‌ ಮೊದಲ ಓವರ್‌ನಲ್ಲೇ ವೃದ್ಧಿಮಾನ್‌ ಸಾಹಾ ಅವರನ್ನು ಶೂನ್ಯಕ್ಕೆ ಉರುಳಿಸಿತು. ಬೌಲರ್‌ ಭುವನೇಶ್ವರ್‌ ಕುಮಾರ್‌. ಅವರು ಈ ಸೀಸನ್‌ನಲ್ಲಿ ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲೇ ಎದುರಾಳಿ ಆಟಗಾರನನ್ನು ಸೊನ್ನೆಗೆ ಕೆಡವಿದ 4ನೇ ನಿದರ್ಶನ ಇದಾಗಿದೆ. ಇದಕ್ಕೂ ಮೊದಲು ಪ್ರಭ್‌ಸಿಮ್ರಾನ್‌ ಸಿಂಗ್‌, ರೆಹಮಾನುಲ್ಲ ಗುರ್ಬಜ್‌ ಮತ್ತು ಡೇವಿಡ್‌ ವಾರ್ನರ್‌ ಅವರನ್ನೂ ಇದೇ ರೀತಿ ಔಟ್‌ ಮಾಡಿದ್ದರು.

ಸಾಹಾ ನಿರ್ಗಮನದಿಂದ ಗುಜರಾತ್‌ ಒತ್ತಡಕ್ಕೇನೂ ಒಳಗಾಗಲಿಲ್ಲ. ದ್ವಿತೀಯ ವಿಕೆಟಿಗೆ ಜತೆಗೂಡಿದ ಶುಭಮನ್‌ ಗಿಲ್‌-ಸಾಯಿ ಸುದರ್ಶನ್‌ ಭರ್ಜರಿ ಆಟಕ್ಕೆ ಮುಂದಾದರು. ಹತ್ತರ ಸರಾಸರಿಯಲ್ಲಿ ರನ್‌ ಹರಿದು ಬರತೊಡಗಿತು. ದ್ವಿತೀಯ ವಿಕೆಟಿಗೆ 147 ರನ್‌ ಜತೆಯಾಟ ನಿಭಾಯಿಸಿದರು. ಇದು ಗುಜರಾತ್‌ ಪರ ಎಲ್ಲ ವಿಕೆಟ್‌ಗಳಿಗೆ ಅನ್ವಯವಾಗುವಂತೆ ದಾಖಲಾದ ಅತೀ ದೊಡ್ಡ ಜತೆಯಾಟವಾಗಿದೆ. ಇದಕ್ಕೂ ಮೊದಲು ಇದೇ ಋತುವಿನ ಲಕ್ನೋ ವಿರುದ್ಧದ ಪಂದ್ಯದಲ್ಲಿ ಗಿಲ್‌-ಸಾಹಾ ಮೊದಲ ವಿಕೆಟಿಗೆ 142 ರನ್‌ ಒಟ್ಟುಗೂಡಿಸಿದ್ದು ದಾಖಲೆ ಆಗಿತ್ತು.

ಸಾಯಿ ಸುದರ್ಶನ್‌ 36 ಎಸೆತ ಎದುರಿಸಿ 47 ರನ್‌ ಹೊಡೆದರು (6 ಬೌಂಡರಿ, 1 ಸಿಕ್ಸರ್‌). ಆದರೆ ಗಿಲ್‌, ಸಾಯಿ ಸುದರ್ಶನ್‌ ಹೊರತುಪಡಿಸಿ ಉಳಿದವರ್ಯಾರಿಂದಲೂ ಎರಡಂಕೆಯ ಮೊತ್ತ ದಾಖಲಾಗಲಿಲ್ಲ. ಸಾಹಾ ಜತೆಗೆ ರಶೀದ್‌ ಖಾನ್‌, ನೂರ್‌ ಅಹ್ಮದ್‌, ಮೊಹಮ್ಮದ್‌ ಶಮಿ ಕೂಡ ಸೊನ್ನೆ ಸುತ್ತಿ ವಾಪಸಾದರು. ಹೀಗಾಗಿ 200 ರನ್‌ ದಾಟುವ ಪ್ರಯತ್ನದಲ್ಲಿ ಗುಜರಾತ್‌ ಯಶಸ್ವಿಯಾಗಲಿಲ್ಲ.

ಮೊದಲ 12 ಓವರ್‌ಗಳಲ್ಲಿ ಒಂದಕ್ಕೆ 131 ರನ್‌ ಬಾರಿಸಿದ ಗುಜರಾತ್‌, ಕೊನೆಯ 8 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಂಡಿತು. ಗಳಿಸಿದ್ದು 57 ರನ್‌ ಮಾತ್ರ.

ಕ್ಯಾನ್ಸರ್‌ ಜಾಗೃತಿ
ಈ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ಆಟಗಾರರು ಮಾಮೂಲು ಬೂದು ಬಣ್ಣದ ಜೆರ್ಸಿಯನ್ನು ಬಿಟ್ಟು ತಿಳಿ ಗುಲಾಲಿ-ನೇರಳೆ ಮಿಶ್ರಿತ (ಲ್ಯಾವೆಂಡರ್‌) ಜೆರ್ಸಿ ಧರಿಸಿ ಆಡಲಿಳಿದರು. ಕ್ಯಾನ್ಸರ್‌ ವಿರುದ್ಧ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ.

ಆರ್‌ಸಿಬಿ ಕ್ರಿಕೆಟಿಗರು ಪರಿಸರ ಜಾಗೃತಿ ಮೂಡಿಸುವ ಸಲುವಾಗಿ 2011ರಿಂದ ಐಪಿಎಲ್‌ ಋತುವಿನ ಒಂದು ಪಂದ್ಯದಲ್ಲಿ ಹಸಿರು ಉಡುಗೆ ಧರಿಸಿ ಆಡುವುದು ವಾಡಿಕೆ. ಗುಜರಾತ್‌ ಮೊದಲ ಸಲ ಇಂಥದೊಂದು ಪ್ರಯೋಗಕ್ಕಿಳಿದಿತ್ತು.

ಸ್ಕೋರ್‌ ಪಟ್ಟಿ
ಗುಜರಾತ್‌ ಟೈಟಾನ್ಸ್‌
ವೃದ್ಧಿಮಾನ್‌ ಸಾಹಾ ಸಿ ಅಭಿಷೇಕ್‌ ಬಿ ಭುವನೇಶ್ವರ್‌ 0
ಶುಭಮನ್‌ ಗಿಲ್‌ ಸಿ ಸಮದ್‌ ಬಿ ಭುವನೇಶ್ವರ್‌ 101
ಸಾಯಿ ಸುದರ್ಶನ್‌ ಸಿ ನಟರಾಜನ್‌ ಬಿ ಜಾನ್ಸೆನ್‌ 47
ಹಾರ್ದಿಕ್‌ ಪಾಂಡ್ಯ ಸಿ ತ್ರಿಪಾಠಿ ಬಿ ಭುವನೇಶ್ವರ್‌ 8
ಡೇವಿಡ್‌ ಮಿಲ್ಲರ್‌ ಸಿ ಮಾರ್ಕ್‌ರಮ್‌ ಬಿ ನಟರಾಜನ್‌ 7
ರಾಹುಲ್‌ ತೆವಾಟಿಯಾ ಸಿ ಜಾನ್ಸೆನ್‌ ಬಿ ಫಾರೂಖೀ 3
ದಸುನ್‌ ಶಣಕ ಔಟಾಗದೆ 9
ರಶೀದ್‌ ಖಾನ್‌ ಸಿ ಕ್ಲಾಸೆನ್‌ ಬಿ ಭುವನೇಶ್ವರ್‌ 0
ನೂರ್‌ ಅಹ್ಮದ್‌ ರನೌಟ್‌ 0
ಮೊಹಮ್ಮದ್‌ ಶಮಿ ಸಿ ಜಾನ್ಸೆನ್‌ ಬಿ ಭುವನೇಶ್ವರ್‌ 0
ಮೋಹಿತ್‌ ಶರ್ಮ ಔಟಾಗದೆ 0
ಇತರ 13
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ) 188
ವಿಕೆಟ್‌ ಪತನ: 1-0, 2-147, 3-156, 4-169, 5-175, 6-186, 7-186, 8-186, 9-187.
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ 4-0-30-5
ಮಾರ್ಕೊ ಜಾನ್ಸೆನ್‌ 4-0-39-1
ಫ‌ಜಲ್‌ಹಕ್‌ ಫಾರೂಖೀ 3-0-31-1
ಟಿ. ನಟರಾಜನ್‌ 4-0-34-1
ಐಡನ್‌ ಮಾರ್ಕ್‌ರಮ್‌ 1-0-13-0
ಮಾಯಾಂಕ್‌ ಮಾರ್ಕಂಡೆ 3-0-27-0
ಅಭಿಷೇಕ್‌ ಶರ್ಮ 1-0-13-0

ಸನ್‌ರೈಸರ್ ಹೈದರಾಬಾದ್‌
ಅನ್ಮೋಲ್‌ಪ್ರೀತ್‌ ಸಿಂಗ್‌ ಸಿ ರಶೀದ್‌ ಬಿ ಶಮಿ 5
ಅಭಿಷೇಕ್‌ ಶರ್ಮ ಸಿ ಸಾಹಾ ಬಿ ದಯಾಳ್‌ 4
ಐಡನ್‌ ಮಾರ್ಕ್‌ರಮ್‌ ಸಿ ಶಣಕ ಬಿ ಶಮಿ 10
ರಾಹುಲ್‌ ತ್ರಿಪಾಠಿ ಸಿ ತೆವಾಟಿಯಾ ಬಿ ಶಮಿ 1
ಹೆನ್ರಿಚ್‌ ಕ್ಲಾಸೆನ್‌ ಸಿ ಮಿಲ್ಲರ್‌ ಬಿ ಶಮಿ 64
ಸನ್ವೀರ್‌ ಸಿಂಗ್‌ ಸಿ ಸುದರ್ಶನ್‌ ಬಿ ಮೋಹಿತ್‌ 7
ಅಬ್ದುಲ್‌ ಸಮದ್‌ ಸಿ ಮಾವಿ ಬಿ ಮೋಹಿತ್‌ 4
ಮಾರ್ಕೊ ಜಾನ್ಸೆನ್‌ ಸಿ ಪಾಂಡ್ಯ ಬಿ ಮೋಹಿತ್‌ 3
ಭುವನೇಶ್ವರ್‌ ಕುಮಾರ್‌ ಸಿ ರಶೀದ್‌ ಬಿ ಮೋಹಿತ್‌ 27
ಮಾಯಾಂಕ್‌ ಮಾರ್ಕಂಡೆ ಔಟಾಗದೆ 18
ಫ‌ಜಲ್‌ಹಕ್‌ ಫಾರೂಖೀ ಔಟಾಗದೆ 1
ಇತರ 10
ಒಟ್ಟು (20 ಓವರ್‌ಗಳಲ್ಲಿ 9 ವಿಕೆಟಿಗೆ ) 154
ವಿಕೆಟ್‌ ಪತನ: 1-6, 2-11, 3-12, 4-28, 5-45, 6-49, 7-59, 8-127, 9-147.
ಬೌಲಿಂಗ್‌: ಮೊಹಮ್ಮದ್‌ ಶಮಿ 4-0-21-4
ಯಶ್‌ ದಯಾಳ್‌ 4-0-31-1
ರಶೀದ್‌ ಖಾನ್‌ 4-0-28-0
ಮೋಹಿತ್‌ ಶರ್ಮ 4-0-28-4
ನೂರ್‌ ಅಹ್ಮದ್‌ 2.5-0-35-0
ರಾಹುಲ್‌ ತೆವಾಟಿಯಾ 1.1-0-7-0
ಪಂದ್ಯಶ್ರೇಷ್ಠ: ಶುಭಮನ್‌ ಗಿಲ್‌

ಟಾಪ್ ನ್ಯೂಸ್

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

INDvAUS: Is captain Rohit Sharma standing against to Shami?; Aussie tour difficult for pacer!

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?;‌ ವೇಗಿಗೆ ಆಸೀಸ್‌ ಪ್ರವಾಸ ಕಷ್ಟ!

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvAUS: Is captain Rohit Sharma standing against to Shami?; Aussie tour difficult for pacer!

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?;‌ ವೇಗಿಗೆ ಆಸೀಸ್‌ ಪ್ರವಾಸ ಕಷ್ಟ!

WTC 25; India’s Test Championship finals road gets tough; Here’s the calculation

WTC 25; ಕಠಿಣವಾಯ್ತು ಭಾರತದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಹಾದಿ; ಹೀಗಿದೆ ಲೆಕ್ಕಾಚಾರ

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

R.Ashwin retirement: ಅಶ್ವಿ‌ನ್‌ ವಿದಾಯದ ಸುತ್ತಮುತ್ತ…

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.